Tag: Kodagu

ಲೋಕಸಭಾ ಚುನಾವಣೆಗೆ ನಾನೂ ಆಕಾಂಕ್ಷಿ
ಕೊಡಗು

ಲೋಕಸಭಾ ಚುನಾವಣೆಗೆ ನಾನೂ ಆಕಾಂಕ್ಷಿ

January 26, 2019

ಮಡಿಕೇರಿ: ಮುಂದಿನ ಲೋಕಸಭಾ ಚುನಾವಣೆ ಸಂದರ್ಭ ಕೊಡಗು-ಮೈಸೂರು ಕ್ಷೇತ್ರದಿಂದ ತಾನು ಕೂಡ ಬಿಜೆಪಿಯಿಂದ ಅಭ್ಯರ್ಥಿ ಆಕಾಂಕ್ಷಿ ಯಾಗಿರುವೆ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಶಾಸಕ ರಂಜನ್, ಈವರೆಗೂ ಅನೇಕ ಬಾರಿ ಮೈಸೂರಿನವರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. ಹೀಗಿರುವಾಗ ಈ ಬಾರಿ ಕೊಡಗಿ ನವರಿಗೆ ಸ್ಪರ್ಧೆಗೆ ಅವಕಾಶ ನೀಡುವಂತೆ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿರುವೆ. ಸ್ಪರ್ಧೆಗೆ ನಾನೂ ಕೂಡ ಆಕಾಂಕ್ಷಿಯಾ ಗಿರುವೆ ಎಂದು ಹೇಳಿದರು. ಹರ್ಯಾಣ…

ಖಾಸಗಿ ಬಸ್-ಇನ್ನೊವಾ ಕಾರ್ ಡಿಕ್ಕಿ: ಐವರಿಗೆ ಗಾಯ
ಕೊಡಗು

ಖಾಸಗಿ ಬಸ್-ಇನ್ನೊವಾ ಕಾರ್ ಡಿಕ್ಕಿ: ಐವರಿಗೆ ಗಾಯ

January 26, 2019

ಸೋಮವಾರಪೇಟೆ: ಖಾಸಗಿ ಬಸ್ ಹಾಗು ಇನ್ನೋವಾ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಐವರು ಗಾಯಗೊಂಡಿರುವ ಘಟನೆ ಐಗೂರು ಸಮೀಪದ ಸಂಪಿಗೆಕೊಲ್ಲಿ ತಿರುವಿ ನಲ್ಲಿ ಶುಕ್ರವಾರ ಸಂಜೆ ನಡೆದಿದೆ. ಗರ್ವಾಲೆ ಗ್ರಾಮದ ಐಮುಡಿ ಯಂಡ ಭೀಮಯ್ಯ ಹಾಗು ಅವರ ಸಂಬಂಧಿಕರು ಗಾಯಗೊಂಡ ವರು. ಗಾಯಾಳುಗಳಿಗೆ ಮಡಿ ಕೇರಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಗಾಯಗೊಂಡವರಲ್ಲಿ ಮೂವರು ಪುರುಷರು ಹಾಗು ಇಬ್ಬರು ಮಹಿಳೆಯರು ಸೇರಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗರ್ವಾಲೆ ಗ್ರಾಮದಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದ ಸಂದರ್ಭ…

ಮೇಜರ್ ಎಸ್.ವಿ.ವಿವೇಕ್‍ಗೆ ಪದೋನ್ನತಿ
ಕೊಡಗು

ಮೇಜರ್ ಎಸ್.ವಿ.ವಿವೇಕ್‍ಗೆ ಪದೋನ್ನತಿ

January 26, 2019

ಮಡಿಕೇರಿ: ಕೊಡಗು ಮೂಲದ ಮೇಜರ್ ಎಸ್.ವಿ. ವಿವೇಕ್ ಅವರು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಪದೋನ್ನತಿ ಪಡೆದಿದ್ದಾರೆ. ವಿರಾಜಪೇಟೆ ಬಳಿಯ ಕುಕ್ಲೂರು ಗ್ರಾಮ ನಿವಾಸಿ, ಮಡಿ ಕೇರಿಯ ಆರ್ಮಿ ಕ್ಯಾಂಟೀನ್‍ನ ವ್ಯವಸ್ಥಾಪಕರಾಗಿದ್ದ ಮೇಜರ್ ಎಸ್.ಕೆ. ವೆಂಕಟಗಿರಿ ಮತ್ತು ವನಜಾಕ್ಷಿ ದಂಪತಿ ಪುತ್ರರಾಗಿರುವ ವಿವೇಕ್ ಭಾರತೀಯ ಸೇನಾ ಪಡೆಯ ವೈಮಾನಿಕ ದಳದಲ್ಲಿ 13 ವರ್ಷಗಳಿಂದ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ಸೇನಾ ಕಾರ್ಯಕ್ರಮದಲ್ಲಿ ವಿವೇಕ್ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಪದೋನ್ನತಿಯ ರ್ಯಾಂಕ್ ಪ್ರದಾನ ಮಾಡಲಾಯಿತು. ಲೆಫ್ಟಿನೆಂಟ್ ಕರ್ನಲ್…

ಮೈಸೂರು-ವಿರಾಜಪೇಟೆ ಮಾರ್ಗದಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ
ಕೊಡಗು

ಮೈಸೂರು-ವಿರಾಜಪೇಟೆ ಮಾರ್ಗದಲ್ಲಿ ರಾತ್ರಿ ಸಂಚಾರ ನಿಷೇಧಕ್ಕೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ

January 24, 2019

ಬೆಂಗಳೂರು: ಮೈಸೂರು-ವಿರಾಜಪೇಟೆ ಮಾರ್ಗದಲ್ಲಿ ರಾತ್ರಿ ಸಂಚಾರವನ್ನು ನಿಷೇಧಿಸುವಂತೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಬೆಂಗಳೂರಿನ ಹೆಚ್.ಸಿ.ಪ್ರಕಾಶ್ ಮತ್ತು ಎ.ಎಂ.ಮಹೇಶ್ ಅವರುಗಳು ಈ ಕುರಿ ತಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ರಾಜ್ಯ ಉಚ್ಛನ್ಯಾಯಾಲಯಕ್ಕೆ ಸಲ್ಲಿಸಿ, ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಬಳಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಲು ಸರ್ಕಾರಕ್ಕೆ ನಿರ್ದೇ ಶಿಸಬೇಕು ಎಂದು ಕೋರಿದ್ದರು. ಈ ಅರ್ಜಿ ಕುರಿತಂತೆ…

ಮಾಕುಟ್ಟ ರಸ್ತೆ ಕಾಮಗಾರಿ ಪರಿಶೀಲನೆ
ಕೊಡಗು

ಮಾಕುಟ್ಟ ರಸ್ತೆ ಕಾಮಗಾರಿ ಪರಿಶೀಲನೆ

January 24, 2019

ವಿರಾಜಪೇಟೆ: ಕೊಡಗು-ಕೇರಳ ಸಂಪರ್ಕ ರಾಜ್ಯ ಹೆದ್ದಾರಿಯಲ್ಲಿ ಭಾರಿ ಮಳೆಯಿಂದಾಗಿ ಕುಸಿದು ಹಾನಿಗೊಳಗಾಗಿದ್ದ ಮಾಕುಟ್ಟ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಮುಗಿಯುವ ಹಂತದಲ್ಲಿದ್ದು, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಲೋಕೊಪಯೋಗಿ ಇಲಾಖೆ ಅಧಿಕಾರಿಗಳೋಂದಿಗೆ ಮಾಕುಟ್ಟಕ್ಕೆ ಭೇಟಿ ನೀಡಿ ಕಾಮಗಾರಿಯನ್ನು ವೀಕ್ಷಣೆ ನಡೆಸಿದರು. ಈ ಸಂದರ್ಭ ಮಾತನಾಡಿದ ಶಾಸಕ ಬೋಪಯ್ಯ, ಮಹಾ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿತ್ತು. ಈಗ ತುರ್ತು ಕಾಮಗಾರಿ ಮುಗಿದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಇನ್ನು ಬಾಕಿ ಉಳಿದಿರುವ ತಡೆಗೋಡೆ, ಸೇತುವೆ, ಮೋರಿಗಳ ಕಾಮಗಾರಿಯನ್ನು ಆದಷ್ಟು…

ಕೊಡಗಿನಾದ್ಯಂತ ಸಿದ್ಧಗಂಗಾಶ್ರೀಗಳಿಗೆ ನುಡಿನಮನ ಸಿದ್ಧಗಂಗಾಶ್ರೀ ಕಾಯಕ ನಿಷ್ಠೆಯ ಮಹಾಯೋಗಿ
ಕೊಡಗು

ಕೊಡಗಿನಾದ್ಯಂತ ಸಿದ್ಧಗಂಗಾಶ್ರೀಗಳಿಗೆ ನುಡಿನಮನ ಸಿದ್ಧಗಂಗಾಶ್ರೀ ಕಾಯಕ ನಿಷ್ಠೆಯ ಮಹಾಯೋಗಿ

January 23, 2019

ಮಡಿಕೇರಿ: ಶ್ರೀ ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹದ ಕಾಯಕ ನಿಷ್ಠೆಯ ಮೂಲಕ ತಮ್ಮ ಜೀವಿತಾವಧಿಯಲ್ಲಿ ಇಡೀ ಜನಸಮು ದಾಯವನ್ನು ಪ್ರಭಾವಿಸಿದ ಸಿದ್ಧಿ ಪುರುಷ ರಾಗಿದ್ದಾರೆ ಎಂದು ಕಾಯಕ ಯೋಗಿ ಬಗ್ಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾ ವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ನಗರದ ಪತ್ರಿಕಾ ಭವನದ ಸಭಾಂಗಣ ದಲ್ಲಿ ನಡೆದ `ಶ್ರದ್ಧಾಂಜಲಿ’ ಸಭೆಯಲ್ಲಿ ನಡೆದಾಡುವ ದೇವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ…

ಸೋಮವಾರಪೇಟೆಯಲ್ಲಿ ವಿವಿಧ ಧರ್ಮಗುರುಗಳ ನುಡಿನಮನ
ಕೊಡಗು

ಸೋಮವಾರಪೇಟೆಯಲ್ಲಿ ವಿವಿಧ ಧರ್ಮಗುರುಗಳ ನುಡಿನಮನ

January 23, 2019

ಸೋಮವಾರಪೇಟೆ: ಮಹಾ ಯೋಗಿ, ನಡೆದಾಡುವ ದೇವರು, ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಮಹಾ ಸ್ವಾಮೀಜಿಗೆ ಪಟ್ಟಣದಲ್ಲಿ ವಿವಿಧ ಧರ್ಮ ಗುರುಗಳ ಸಮ್ಮುಖದಲ್ಲಿ ಜೇಸಿ ವೇದಿಕೆ ಯಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು. ಬೆಳಿಗ್ಗೆಯಿಂದಲೇ ಪಟ್ಟಣದ ವಿವಿಧ ಸಂಘ ಸಂಸ್ಥೆಗಳ ಮಹಿಳೆಯರಿಂದ ಭಜನೆ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು. ಪಟ್ಟಣದ ವರ್ತಕರು ಸಂಜೆ 3ಗಂಟೆಯಿಂದ 5ಗಂಟೆ ಯವರೆಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಸಂತಾಪ ಸಲ್ಲಿಸಿದರು. ಸಂಜೆ 4 ಗಂಟೆಗೆ ಜೇಸಿ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಧರ್ಮಗುರು ಗಳಾದ ಅಬ್ದುಲ್ ಅಝೀಜ್, ಟೆನ್ನಿ…

ಹೆಬ್ಬಾಲೆಯಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ
ಕೊಡಗು

ಹೆಬ್ಬಾಲೆಯಲ್ಲಿ ಶ್ರೀಗಳ ಭಾವಚಿತ್ರ ಮೆರವಣಿಗೆ

January 23, 2019

ಕುಶಾಲನಗರ: ಹೆಬ್ಬಾಲೆ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಮತ್ತು ಮರೂರು ಶ್ರೀಗಳ ಭಕ್ತ ಮಂಡಳಿ ಹಾಗೂ ಗ್ರಾಮಸ್ಥರ ವತಿಯಿಂದ ತುಮಕೂರು ಸಿದ್ಧ ಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು ಶಿವೈಕ್ಯ ರಾದ ಹಿನ್ನೆಲೆಯಲ್ಲಿ ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರವನ್ನು ಮೆರವಣಿಗೆ ನಡೆಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು. ವಿವಿಧ ಪುಷ್ಪಗಳಿಂದ ಅಲಂಕಾರ ಗೊಂಡಿದ್ದ ಏಳು ಕುದುರೆಗಳನ್ನು ಹೊಂದಿ ರುವ ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರವನ್ನು ಇರಿಸಿ ಪುಷ್ಪ್ಪಾಹಾರ ಹಾಕಿ ಪೂಜೆ ಸಲ್ಲಿ ಸುವ ಮೂಲಕ ಗ್ರಾಮದ ಬಸ್ ನಿಲ್ದಾಣ ದಿಂದ ಮೆರವಣಿಗೆ…

ಡಾ.ಶಿವಕುಮಾರಸ್ವಾಮೀಜಿ ಜೀವನಾದರ್ಶ ಮೈಗೂಡಿಸಿಕೊಳ್ಳಲು ಕರೆ
ಕೊಡಗು

ಡಾ.ಶಿವಕುಮಾರಸ್ವಾಮೀಜಿ ಜೀವನಾದರ್ಶ ಮೈಗೂಡಿಸಿಕೊಳ್ಳಲು ಕರೆ

January 23, 2019

ಸಿದ್ದಾಪುರ: ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕೆಂದು ಗ್ರಾಮ ಪಂಚಾ ಯಿತಿ ಅಧ್ಯಕ್ಷ ಎಂ.ಕೆ ಮಣಿ ಕರೆ ನೀಡಿದರು. ಸಿದ್ದಾಪುರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಮಾನ ಮನಸ್ಕರ ವೇದಿಕೆ ವತಿಯಿಂದ ನಡೆದ ಶ್ರದ್ಧಾಂಜಲಿ ಸಭೆಯನ್ನುದ್ದೇಶಿಸಿ ಮಾತನಾಡಿ, ಸಾಮಾಜಿಕ ಬದಲಾವಣೆಗಾಗಿ ಅವಿ ರತವಾಗಿ ಶ್ರಮಿಸಿದ್ದ ಮಹಾನ್ ಚೇತನ ಇಂದು ನಮ್ಮನ್ನೆಲ್ಲಾ ಅಗಲಿರುವುದು ವಿಷಯವಾಗಿದೆ. ಬಡ ವಿದ್ಯಾರ್ಥಿಗಳಗೆ ಅನ್ನ ದಾಸೋಹದೊಂದಿಗೆ ಅಕ್ಷರ ಜ್ಞಾನವನ್ನು ನೀಡಿದಂತಹ ಶ್ರೀಗಳ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದೇ ಆದಲ್ಲಿ ಅದುವೆ ನಾವು…

ಕೊಡಗು ಜಿಲ್ಲೆಯಲ್ಲಿ ಉದ್ದೇಶಿತ ಹೆದ್ದಾರಿ, ರೈಲ್ವೆ ಯೋಜನೆ ಯಥಾಸ್ಥಿತಿ ಕಾಪಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಕೊಡಗು

ಕೊಡಗು ಜಿಲ್ಲೆಯಲ್ಲಿ ಉದ್ದೇಶಿತ ಹೆದ್ದಾರಿ, ರೈಲ್ವೆ ಯೋಜನೆ ಯಥಾಸ್ಥಿತಿ ಕಾಪಾಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಆದೇಶ

January 22, 2019

ಈ ಯೋಜನೆಯಿಂದ ಜಿಲ್ಲೆಯಲ್ಲಿ ಅಪಾರ ಹಾನಿ; ಐಐಎಸ್‍ಸಿ ವರದಿ ಎಚ್ಚರಿಕೆ ಮೈಸೂರು: ಕೊಡಗಿನ ಮೂಲಕ ಹಾದು ಹೋಗುವ ಉದ್ದೇಶಿತ ರೈಲ್ವೆ ಮಾರ್ಗ ಮತ್ತು ಹೆದ್ದಾರಿ ಯೋಜನೆಯನ್ನು ಯಥಾಸ್ಥಿತಿ ಕಾಪಾಡುವಂತೆ ಕರ್ನಾಟಕ ಹೈಕೋರ್ಟ್ ರಾಜ್ಯ ಹೆಚ್ಚುವರಿ ಅಡ್ವೊಕೇಟ್ ಜನರಲ್ ಮತ್ತು ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂ ಟರ್‍ಗೆ ನಿರ್ದೇಶನ ನೀಡಿದೆ. ಈ ಯೋಜನೆಯಿಂದ ಕೊಡಗಿನ ಅರಣ್ಯ ಸಂಪತ್ತು ಹಾಳಾಗುವುದಲ್ಲದೆ, ದಕ್ಷಿಣ ಭಾರತದ ಜೀವನಾಡಿ ಕಾವೇರಿ ನದಿಗೆ ಹಾನಿಯಾಗುವುದ ರಿಂದ, ಉದ್ದೇಶಿತ ರೈಲ್ವೆ ಮತ್ತು ಹೆದ್ದಾರಿ ಯೋಜನೆ ವಿರುದ್ಧ ಕೂರ್ಗ್ ವೈಲ್ಡ್‍ಲೈಫ್…

1 38 39 40 41 42 84
Translate »