ಕುಶಾಲನಗರ: ಹೆಬ್ಬಾಲೆ ಶ್ರೀ ಬಸವೇಶ್ವರ ದೇವಾಲಯ ಸಮಿತಿ ಮತ್ತು ಮರೂರು ಶ್ರೀಗಳ ಭಕ್ತ ಮಂಡಳಿ ಹಾಗೂ ಗ್ರಾಮಸ್ಥರ ವತಿಯಿಂದ ತುಮಕೂರು ಸಿದ್ಧ ಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು ಶಿವೈಕ್ಯ ರಾದ ಹಿನ್ನೆಲೆಯಲ್ಲಿ ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರವನ್ನು ಮೆರವಣಿಗೆ ನಡೆಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ವಿವಿಧ ಪುಷ್ಪಗಳಿಂದ ಅಲಂಕಾರ ಗೊಂಡಿದ್ದ ಏಳು ಕುದುರೆಗಳನ್ನು ಹೊಂದಿ ರುವ ಬೆಳ್ಳಿರಥದಲ್ಲಿ ಶ್ರೀಗಳ ಭಾವಚಿತ್ರವನ್ನು ಇರಿಸಿ ಪುಷ್ಪ್ಪಾಹಾರ ಹಾಕಿ ಪೂಜೆ ಸಲ್ಲಿ ಸುವ ಮೂಲಕ ಗ್ರಾಮದ ಬಸ್ ನಿಲ್ದಾಣ ದಿಂದ ಮೆರವಣಿಗೆ ಆರಂಭಿಸಲಾಯಿತು. ಮೆರವಣಿಗೆಯು ಗ್ರಾಮದ ಮುಖ್ಯಬೀದಿ ಯಲ್ಲಿ ಸಾಗಿ ನಂತರ ಕೊಪ್ಪಲು, ಹೊಸ ಬೀದಿ ಹಾಗೂ ಕಾರಸಗೋಡು ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆ ಸಂದರ್ಭ ನೂರಾರು ಭಕ್ತರು, ಅಭಿಮಾನಿಗಳು ಹಾಗೂ ಗ್ರಾಮ ಸ್ಥರು ಸಾಗಿದರು. ಈ ಸಂದರ್ಭ ಶಿವ ಕುಮಾರ ಸ್ವಾಮೀಜಿಗಳ ಪರವಾಗಿ ಘೋಷ ಣೆಗಳನ್ನು ಕೂಗಿದರು. ಮೆರವಣಿಗೆ ಸಂದರ್ಭ ಮಹಿಳೆಯರು ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಗೌರವ ಸಲ್ಲಿಸಿದರು. ನಂತರ ಮೆರ ವಣಿಗೆಯು ಗ್ರಾಮದ ಕೆನರಾ ಬ್ಯಾಂಕ್ ಬಳಿ ಮುಕ್ತಾಯಗೊಂಡಿತು.
ಈ ಸಂದರ್ಭ ಊರಿನ ಮುಖಂಡ ಎಚ್.ಕೆ.ನಾರಾಯಣ (ಬುಲೆಟ್) ಮಾತ ನಾಡಿ, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳು ಲಿಂಗೈಕ್ಯರಾಗಿದ್ದು, ಇದರಿಂದ ನಾಡಿಗೆ ತುಂಬಲಾರದ ನಷ್ಟ ಉಂಟಾ ಗಿದೆ. ಶ್ರೀಗಳು ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಲಕ್ಷಾಂ ತರ ಬಡ ಮಕ್ಕಳಿಗೆ ವಿದ್ಯಾದಾನ ಮಾಡಿ ಅವರ ಭವಿಷ್ಯವನ್ನು ರೂಪಿಸಿದ್ದಾರೆ. ಸಿದ್ಧ ಗಂಗಾ ಶ್ರೀಗಳು ಆಧುನಿಕ ಬಸವಣ್ಣ ಎಂದು ಬಣ್ಣಿಸಿದರು.
ಈ ಸಂದರ್ಭ ಊರಿನ ಮುಖಂಡ ರಾದ ಯಜಮಾನ್ ಎಚ್.ಎಲ್.ಕಾಂತ ರಾಜ್, ಎಚ್.ಎಸ್.ಪರಮೇಶ್, ವಿನೋದ್, ಪಾಟೇಲ್ ಪ್ರಕಾಶ್, ರೇಣುಕಾಸ್ವಾಮಿ, ವೆಂಕಟೇಶ್, ಅಭಿ, ಮೋಕ್ಷಿತ್, ಎಚ್.ಎನ್. ದೇವರಾಜ್ ಮತ್ತಿತರರು ಇದ್ದರು. ಇದೇ ಸಂದರ್ಭ ಎಲ್ಲರಿಗೂ ಪ್ರಸಾದ ವಿನಿಯೋಗಿಸಲಾಯಿತು.