ಮಡಿಕೇರಿ: ಶ್ರೀ ಸಿದ್ಧಗಂಗಾ ಕ್ಷೇತ್ರದ ಡಾ.ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹದ ಕಾಯಕ ನಿಷ್ಠೆಯ ಮೂಲಕ ತಮ್ಮ ಜೀವಿತಾವಧಿಯಲ್ಲಿ ಇಡೀ ಜನಸಮು ದಾಯವನ್ನು ಪ್ರಭಾವಿಸಿದ ಸಿದ್ಧಿ ಪುರುಷ ರಾಗಿದ್ದಾರೆ ಎಂದು ಕಾಯಕ ಯೋಗಿ ಬಗ್ಗೆ ಗಣ್ಯರು ಕಂಬನಿ ಮಿಡಿದಿದ್ದಾರೆ.
ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ಮತ್ತು ಕೊಡಗು ಜಿಲ್ಲಾ ಲೇಖಕ ಮತ್ತು ಕಲಾ ವಿದರ ಬಳಗದ ಸಂಯುಕ್ತ ಆಶ್ರಯದಲ್ಲಿ ನಗರದ ಪತ್ರಿಕಾ ಭವನದ ಸಭಾಂಗಣ ದಲ್ಲಿ ನಡೆದ `ಶ್ರದ್ಧಾಂಜಲಿ’ ಸಭೆಯಲ್ಲಿ ನಡೆದಾಡುವ ದೇವರ ಭಾವಚಿತ್ರಕ್ಕೆ ಪುಷ್ಪಾ ರ್ಚನೆ ಮಾಡಿ, ಮೌನಾಚರಣೆಯ ಮೂಲಕ ಗೌರವ ನಮನವನ್ನು ಸಲ್ಲಿಸಲಾಯಿತು.
ಪತ್ರಿಕಾ ಭವನ ಟ್ರಸ್ಟ್‍ನ ಸ್ಥಾಪಕಾಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಜಾತಿ, ಮತ, ಧರ್ಮಗಳ ಎಲ್ಲೆಯನ್ನು ಮೀರಿ ವಿದ್ಯಾ ದಾನದ ಮೂಲಕ ಶ್ರೀ ಡಾ.ಶಿವಕುಮಾರ ಸ್ವಾಮೀಜಿಗಳು ಸಿದ್ಧಗಂಗೆಯನ್ನು ಜ್ಞಾನ ಗಂಗೆಯನ್ನಾಗಿಸಿ ಮಹಾಮಹಿಮರಾಗಿ ದ್ದಾರೆ. 12ನೇ ಶತಮಾನದ ಬಸವಣ್ಣ ನವರ ಬಳಿಕ ಕಾಯಕ ನಿಷ್ಠೆಯ ಮಹತ್ವ ವನ್ನು ಜನಸಮುದಾಯಕ್ಕೆ ತಲುಪಿಸಿದ ಮತ್ತೋರ್ವ ಮಹಾನ್ ವ್ಯಕ್ತಿಯಾಗಿ ಡಾ. ಶಿವಕುಮಾರ ಸ್ವಾಮೀಜಿಗಳು ಕಾಣಿಸಿ ಕೊಳ್ಳುತ್ತಾರೆಂದು ಅಭಿಪ್ರಾಯಿಸಿದರು.
ಶ್ರೀ ಸಿದ್ಧಗಂಗಾ ಕ್ಷೇತ್ರದ ಪೀಠಾಧಿಪತಿ ಗಳಾದ ಬಳಿಕ ಡಾ.ಶಿವಕುಮಾರ ಸ್ವಾಮೀ ಜಿಗಳು 26 ಸಂಸ್ಕøತ ಪಾಠ ಶಾಲೆ, 58 ಪ್ರಾಥ ಮಿಕ ಶಾಲೆ, 8 ಪದವಿ ಪೂರ್ವ ಕಾಲೇಜು, ಒಂದು ಇಂಜಿನಿಯರಿಂಗ್ ಕಾಲೇಜು, 2 ಅಂಧರ ಶಿಕ್ಷಣ ಸಂಸ್ಥೆ ಮತ್ತು ಒಂದು ವಿಕಲಾಂಗರ ಶಿಕ್ಷಣ ಸಂಸ್ಥೆ ಸೇರಿದಂತೆ ಒಟ್ಟು 126 ಶಿಕ್ಷಣ ಸಂಸ್ಥೆಗಳ ಮೂಲಕ ಸಹಸ್ರ ಸಹಸ್ರ ಮಂದಿಗೆ ಶಿಕ್ಷಣ ಧಾರೆ ಎರೆದ ಮಹಾ ಪುರುಷರಾಗಿದ್ದಾರೆ. ನಾವು ಗಳು ಯಾರೂ ದೇವರನ್ನು ಕಂಡಿಲ್ಲ ವಾದರು, ಡಾ.ಶಿವಕುಮಾರ ಸ್ವಾಮೀಜಿಗಳ ಮೂಲಕ ನಡೆದಾಡುವ ದೇವರನ್ನು ಕಾಣುವ ಭಾಗ್ಯವನ್ನು ಪಡೆದವರೆಂದು ನುಡಿದರು.
ಕೊಡಗು ಜಿಲ್ಲಾ ಲೇಖಕ ಮತ್ತು ಕಲಾ ವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ನುಡಿ ನಮನವನ್ನು ಸಲ್ಲಿಸುತ್ತಾ, ಡಾ. ಶಿವಕುಮಾರ ಸ್ವಾಮೀಜಿಗಳು ತಮ್ಮ ನಡೆ, ನುಡಿಗಳ ಮೂಲಕ ಲಕ್ಷಾಂತರ ಮಂದಿಯ ಬಾಳಿನ ಪಥಕ್ಕೆ ಬೆಳಕಾಗಿದ್ದರು. ಅಕ್ಷರ, ಆಶ್ರಯ ಮತ್ತು ಅನ್ನದಾಸೋಹದ ಮೂಲಕ ಕಾಯಕ ನಿಷ್ಠೆಯನ್ನು ಸಮಾ ಜಕ್ಕೆ ಪಸರಿಸಿದ್ದ ಸ್ವಾಮೀಜಿಗಳು, ತಾವು ಲಿಂಗೈಕ್ಯರಾದ ಸಂದರ್ಭ ಆ ಮಾಹಿತಿಯನ್ನು ಮಕ್ಕಳಿಗೆ ಅನ್ನದಾಸೋಹದ ಬಳಿಕವಷ್ಟೇ ತಿಳಿಸುವ ಮೂಲಕ ದೊಡ್ಡ ತನವನ್ನು ಮೆರೆದ ಮಹಾಮಹಿಮರೆಂದು ಬಣ್ಣಿಸಿದರು.
ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್.ಮನು ಶೆಣೈ ಮಾತನಾಡಿ, ಡಾ.ಶಿವಕುಮಾರ ಸ್ವಾಮೀಜಿಗಳ ಜೀವಿತಾ ವಧಿಯ ಕಾಯಕ ನಿಷ್ಠೆ ಸರ್ವರಿಗೂ ಸ್ಫೂರ್ತಿದಾಯಕವೆಂದರು.
ಸಮಾಜ ಸೇವಕ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ನಡೆದಾಡುವ ದೇವರೆಂದೇ ಪ್ರಖ್ಯಾತರಾದ ಡಾ. ಶಿವಕುಮಾರ ಸ್ವಾಮೀ ಜಿಗಳು ಯಾವುದೇ ಜಾತಿ ಮತಗಳ ಹಂಗಿ ಲ್ಲದೆ ಎಲ್ಲರೊಂದಿಗೂ ಆತ್ಮೀಯವಾಗಿ ನಡೆ ದುಕೊಳ್ಳುತ್ತಿದ್ದ ಮಹಾನ್ ವ್ಯಕ್ತಿಯಾಗಿ ದ್ದರು. ಅವರ ಆದರ್ಶಗಳನ್ನು ಪ್ರತಿಯೊ ಬ್ಬರು ತಮ್ಮ ಬದುಕಿನಲ್ಲಿ ಅಳವಡಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ಬಳಗದ ಪದಾಧಿಕಾರಿ ಬಿ.ಎ.ಷಂಶು ದ್ದೀನ್ ಮಾತನಾಡಿ, ಡಾ.ಶಿವಕುಮಾರ ಸ್ವಾಮಿ ಸರ್ವಧರ್ಮೀಯರಿಂದ ಗೌರವ ಪಡೆದಿದ್ದರು, ಮಹಾಪುರುಷನಿಗೆ `ಭಾರತ ರತ್ನ’ವನ್ನು ನೀಡುವಲ್ಲಿ ಕೇಂದ್ರ ಸರ್ಕಾರ ಎಡವಿದೆ ಎಂದು ವಿಷಾದಿಸಿದರು. ತ್ರಿವಿಧ ದಾಸೋಹಿಗಳಾಗಿದ್ದ ಸ್ವಾಮೀಜಿ ಅಸ್ಪøಶ್ಯ ತೆಯ ನಿವಾರಣೆಯತ್ತಲೂ ಹೆಚ್ಚಿನ ಒತ್ತು ನೀಡಿದ್ದರೆಂದು ಅಭಿಪ್ರಾಯಪಟ್ಟರು.
ಉಪನ್ಯಾಸಕಿ ಡಾ.ಅವನಿಜ ಸೋಮಯ್ಯ ಮಾತನಾಡಿ, ಸ್ವಾಮೀಜಿಗಳು ಅಗಾಧ ಚೈತ ನ್ಯದ ಚಿಲುಮೆಯೇ ಆಗಿದ್ದರು. ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳ ಅಳವಡಿಕೆಯ ಮೂಲಕ ಆಲಸ್ಯವನ್ನು ಕಳೆದು ಕೊಂಡು ಕಾಯಕ ನಿಷ್ಠೆಯತ್ತ ಒಲವನ್ನು ತೋರಬೇಕೆಂದರು.
ಅಲ್ಲಾರಂಡ ರಂಗ ಚಾವಡಿಯ ಪ್ರಮುಖ ಅಲ್ಲಾರಂಡ ವಿಠಲ ನಂಜಪ್ಪ ಮಾತನಾಡಿ, ಸ್ವಾಮೀಜಿಗಳು ಕಾಯಕ ನಿಷ್ಠೆಯ ಜೊತೆ ಯಲ್ಲೆ ಮಠದ ಚೌಕಟ್ಟಿನ ಒಳಗೇ ನ್ಯಾಯ ತೀರ್ಮಾನವನ್ನೂ ಮಾಡುವ ಮೂಲಕ ಸೌಹಾರ್ದದ ಬದುಕಿಗೆ ಒತ್ತು ನೀಡು ತ್ತಿದ್ದರು ಎಂದು ಶ್ಲಾಘಿಸಿದರು.
ಸಭೆಯಲ್ಲಿ ಬಳಗದ ಸದಸ್ಯ ಲಿಯಾ ಕತ್ ಆಲಿ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಿಕಾ ಭವನ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಎಸ್.ಜಿ.ಉಮೇಶ್, ಟ್ರಸ್ಟಿ ಕೆ.ತಿಮ್ಮಪ್ಪ, ಪತ್ರ ಕರ್ತರುಗಳಾದ ವಿಘ್ನೇಶ್ ಭೂತನಕಾಡು, ರಾಕೆÉೀಶ್, ಉದಯ್ ಮೊಣ್ಣಪ್ಪ, ರವಿ, ಪ್ರಸಾದ್ ಸಂಪಿಗೆಕಟ್ಟೆ, ಮೋಹನ್, ವಿಕಾಸ್, ಲೋಹಿತ್, ಜಯಂತಿ, ವಿಶ್ಮ ಮೊದ ಲಾದವರು ಪಾಲ್ಗೊಂಡಿದ್ದರು.