Tag: Kodagu

ಕೊಡಗಿನ ಜನರ ರಕ್ಷಣೆಗಾಗಿ ಸಚಿವರ ಮುಂದೆ ಕಣ್ಣೀರಿಟ್ಟ ವೀಣಾ ಅಚ್ಚಯ್ಯ
ಕೊಡಗು

ಕೊಡಗಿನ ಜನರ ರಕ್ಷಣೆಗಾಗಿ ಸಚಿವರ ಮುಂದೆ ಕಣ್ಣೀರಿಟ್ಟ ವೀಣಾ ಅಚ್ಚಯ್ಯ

August 18, 2018

ಮಡಿಕೇರಿ: ಸಂಕಷ್ಟದಲ್ಲಿ ಸಿಲುಕಿರುವ ಕೊಡಗಿನ ಜನರನ್ನು ರಕ್ಷಿಸಿ ಎಂದು ಸಚಿವರ ಮುಂದೆ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಕಣ್ಣೀರಿಟ್ಟರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ ದಲ್ಲಿ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಇಂದು ಅಧಿ ಕಾರಿಗಳು ಮತ್ತು ಜನಪ್ರತಿನಿಧಿಗಳ ಸಭೆ ನಡೆಸಿದ ಸಂದರ್ಭದಲ್ಲಿ ವೀಣಾ ಅಚ್ಚಯ್ಯ ಅವರು, ಮಳೆ ಅನಾಹುತದಿಂದ ಕೊಡಗಿನ ಜನರು ಪಡುತ್ತಿರುವ ಕಷ್ಟಗಳನ್ನು ವಿವರಿಸಿದರಲ್ಲದೇ, ರಕ್ಷಣಾ ಕಾರ್ಯ ಸಮರ್ಪಕವಾಗಿ ನಡೆಯದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ…

ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ:  ಜಲಪ್ರಳಯದಿಂದ ತತ್ತರಿಸಿದ ಕಾವೇರಿ ನಾಡು
ಕೊಡಗು

ಕೊಡಗಿನಲ್ಲಿ ಮುಂದುವರೆದ ಮಳೆ ಅಬ್ಬರ: ಜಲಪ್ರಳಯದಿಂದ ತತ್ತರಿಸಿದ ಕಾವೇರಿ ನಾಡು

August 15, 2018

ಸಂಚಾರಕ್ಕೆ ಮುಕ್ತವಾಗಿಲ್ಲ ಮಡಿಕೇರಿ-ಮಂಗಳೂರು ಹೆದ್ದಾರಿ ಮಡಿಕೇರಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಆಶ್ಲೇಷಾ ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆ ಸಂಪೂರ್ಣ ಸ್ಥಬ್ಧಗೊಂಡಿದೆ. ಕಳೆದ 24 ಗಂಟೆಗೆ ಅವಧಿಯಲ್ಲಿ ಜಿಲ್ಲೆಯಾದ್ಯಂತ 20 ಇಂಚಿಗೂ ಅಧಿಕ ಮಳೆ ಸುರಿದ ಹಿನ್ನಲೆ ಯಲ್ಲಿ ಕೊಡಗು ಜಿಲ್ಲೆಯ ಸ್ಥಿತಿ ವಿಷಮಕ್ಕೆ ತಿರುಗಿದೆ. ನಗರ, ಪಟ್ಟಣ ಸಹಿತ ಗ್ರಾಮೀಣ ಭಾಗಗಳು ಜಲ ಪ್ರಳಯಕ್ಕೆ ತುತ್ತಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಭಾರಿ ಮಳೆಯೊಂದಿಗೆ ಬಿರುಗಾಳಿಯೂ ಬೀಸುತ್ತಿದ್ದು, ಪ್ರಕೃತಿ ವಿಕೋಪಗಳಿಗೆ ಎಣೆಯಿಲ್ಲದಂತಾಗಿದೆ. ಕಾವೇರಿ, ಲಕ್ಷಣ ತೀರ್ಥ ನದಿಗಳು ಸೇರಿದಂತೆ ಉಪನದಿಗಳು,…

ಬಿರುಗಾಳಿ ಮಳೆಗೆ ಕಾವೇರಿ ತವರು ತತ್ತರ
ಕೊಡಗು

ಬಿರುಗಾಳಿ ಮಳೆಗೆ ಕಾವೇರಿ ತವರು ತತ್ತರ

August 14, 2018

ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಸಾವಿರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು, ಸಮರೋಪಾದಿಯಲ್ಲಿ ಮಣ್ಣು ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ. 6 ಜೆಸಿಬಿ ಯಂತ್ರಗಳು ಸುರಿಯುವ ಮಳೆಯ ನಡುವೆಯೇ ಹೆದ್ದಾರಿ ಸಂಚಾರ ಸುಗಮಗೊಳಿಸಲು ಕಾರ್ಯಾಚರಣೆ ನಡೆಸುತ್ತಿದ್ದರೆ, ಮಳೆ ಯಿಂದಾಗಿ ಮತ್ತಷ್ಟು ಮಣ್ಣು ಹೆದ್ದಾರಿಗೆ ಬಿದ್ದ ಬಗ್ಗೆ ವರದಿಯಾಗಿದೆ. ಇದರಿಂದಾಗಿ ಮಡಿಕೇರಿ-ಮಂಗಳೂರು ಕಡೆಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರು ದಿನವಿಡಿ ಹೆದ್ದಾರಿಯಲ್ಲೇ ಕಾಲ ಕಳೆಯುವಂತಾಗಿದೆ. ಮಡಿಕೇರಿ-ಮಂಗಳೂರು ಹೆದ್ದಾರಿಯ ಒಟ್ಟು 4 ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಅಂತರ್ಜಲ ಉಕ್ಕೇರಿದ್ದರಿಂದಾಗಿ ಹೆದ್ದಾರಿ ಯ ತಡೆಗೋಡೆ ಕುಸಿತಗೊಂಡಿದೆ….

ಬಿಲ್ಲವ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ
ಕೊಡಗು

ಬಿಲ್ಲವ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರ

August 14, 2018

ವಿರಾಜಪೇಟೆ: ಬಿಲ್ಲವ ಸೇವಾ ಸಂಘ ಇನ್ನಷ್ಟು ಅಭಿವೃದ್ಧಿಯತ್ತ ಸಾಗಲು ಸಂಘದ ಸದಸ್ಯರುಗಳ ಪರಸ್ಪರ ಸಹಕಾರ, ಉತ್ತೇಜನ ಸಂಘದ ಬೆಳವಣಿಗೆಯೊಂದಿಗೆ ಸಮುದಾಯದ ಮಕ್ಕಳು ಉನ್ನತ ಮಟ್ಟದ ಶಿಕ್ಷಣ ಪಡೆದು ಮುನ್ನಡೆಯಲು ಸಾಧ್ಯವಾಗು ತ್ತದೆ ಎಂದು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಸ್.ಚಂದ್ರಶೇಖರ್ ರಾಜ ಹೇಳಿದರು. ತಾಲೂಕು ಬಿಲ್ಲವ ಸೇವಾ ಸಂಘದ ವತಿಯಿಂದ ವಿರಾಜಪೇಟೆ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಬಿಲ್ಲವ ಸಂಘದ ವಾರ್ಷಿಕ ಮಹಾ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಂದ್ರಶೇಖರ್…

ಮಳೆ ಅಬ್ಬರ: ಕೊಡಗು ಜಿಲ್ಲಾಡಳಿತದಿಂದ  ಹೈ ಅಲರ್ಟ್ ಘೋಷಣೆ
ಕೊಡಗು

ಮಳೆ ಅಬ್ಬರ: ಕೊಡಗು ಜಿಲ್ಲಾಡಳಿತದಿಂದ  ಹೈ ಅಲರ್ಟ್ ಘೋಷಣೆ

August 13, 2018

ಮಡಿಕೇರಿ: ಕೊಡಗಿನಾದ್ಯಂತ ಇಂದು ಮಳೆಯ ಅಬ್ಬರ ಜೋರಾಗಿತ್ತು, ಅಲ್ಲದೇ ಮುಂದಿನ ಎರಡು ದಿನ ಕೊಡಗು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಕೊಡಗಿನಲ್ಲಿ ಹೈ ಅಲರ್ಟ್ ಘೋಷಿಸಿದೆ. ಜಿಲ್ಲೆಯಾದ್ಯಂತ ನಾಳೆ(ಆ.13) ಶಾಲಾ -ಕಾಲೇಜು ಹಾಗೂ ಅಂಗನವಾಡಿ ಕೇಂದ್ರ ಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಶ್ರೀವಿದ್ಯಾ ಆದೇಶ ಹೊರಡಿಸಿದ್ದಾರೆ. ಹಾರಂಗಿ ಜಲಾಶಯದ ಒಳಹರಿವು ಇಂದು 35 ಸಾವಿರ ಕ್ಯೂಸೆಕ್ ಆಗಿದ್ದು, ಜಲಾಶಯದಿಂದ ನದಿಗೆ 25 ಸಾವಿರ ಕ್ಯೂಸೆಕ್…

ಸುರಿಯುವ ಮಳೆಯಿಂದ ತುಂಬಿ ಹರಿಯುವ ನದಿ-ತೊರೆಗಳು :ಶವ ಸಾಗಿಸಲೂ ಗ್ರಾಮಸ್ಥರ ಹೆಣಗಾಟ
ಕೊಡಗು

ಸುರಿಯುವ ಮಳೆಯಿಂದ ತುಂಬಿ ಹರಿಯುವ ನದಿ-ತೊರೆಗಳು :ಶವ ಸಾಗಿಸಲೂ ಗ್ರಾಮಸ್ಥರ ಹೆಣಗಾಟ

August 13, 2018

ಮಡಿಕೇರಿ: ಎಡಬಿಡದೇ ಸುರಿಯುತ್ತಿರುವ ಮಳೆ… ತುಂಬಿ ಹರಿಯುತ್ತಿರುವ ಹೊಳೆ… ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿ…ನೀರಿಗೆ ಮುಳುಗಿದ ಸೇತುವೆ… ಈ ಸೇತುವೆ ಮೇಲೆ ಮೃತದೇಹದ ಅಂತಿಮ ಯಾತ್ರೆ! ಇಂತಹ ಭಯಾನಕ ಮತ್ತು ಹೃದಯ ವಿದ್ರಾವಕ ಚಿತ್ರಣ ಕಂಡುಬಂದಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಿಂದ ಕೇವಲ 6 ಕಿ.ಮೀ. ದೂರದಲ್ಲಿರುವ 1ನೇ ಮೊಣ್ಣಂಗೇರಿ ಗ್ರಾಮದಲ್ಲಿ..!! 1ನೇ ಮೊಣ್ಣಂಗೇರಿ ಗ್ರಾಮ ಕುಗ್ರಾಮ ವಲ್ಲ.. ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧವಾಗಿರುವ ಪಂಚತಾರಾ ರೆಸಾರ್ಟ್‍ಗಳಿರುವ ಗ್ರಾಮ..! ಆದರೆ ಮಳೆಗಾಲದಲ್ಲಿ 1ನೇ ಮೊಣ್ಣಂಗೇರಿ ಗ್ರಾಮಸ್ಥರ ನೆರವಿಗೆ ಆಡಳಿತ…

ಮಳೆ; ಮನೆ ಕುಸಿತ ಪ್ರದೇಶಕ್ಕೆ ಶಾಸಕರ ಭೇಟಿ
ಕೊಡಗು

ಮಳೆ; ಮನೆ ಕುಸಿತ ಪ್ರದೇಶಕ್ಕೆ ಶಾಸಕರ ಭೇಟಿ

August 13, 2018

ಗೋಣಿಕೊಪ್ಪಲು: ವಿಪರೀತ ಗಾಳಿ, ಮಳೆಗೆ ತುತ್ತಾಗಿ ಮನೆ ಕಳೆದು ಕೊಂಡಿದ್ದ ಕೊಡಗಿನ ಶ್ರೀಮಂಗಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕುರ್ಚಿ ಗ್ರಾಮದ ಕಾಫಿ ಬೆಳೆಗಾರ ಮಚ್ಚಮಾಡ ಕರುಂಬಯ್ಯನವರ ಮನೆಗೆ ಶಾಸಕ ಕೆ.ಜಿ.ಬೋಪಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳಾದ ದೇವಯ್ಯನವರನ್ನು ಬರ ಮಾಡಿಕೊಂಡ ಶಾಸಕರು ಸರ್ಕಾರದಿಂದ ಪರಿಹಾರವಾಗಿ 95 ಸಾವಿರವನ್ನು ನೀಡು ವಂತೆ ಸೂಚಿಸಿದರು. ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಆಶ್ರಯ ಮನೆ ಮಂಜೂರು ಮಾಡುವ ಮೂಲಕ ನಿರಾಶ್ರಿತಗೊಂಡ ಕರುಂಬಯ್ಯನವರಿಗೆ ಸಹಕರಿಸುವಂತೆ ನಿರ್ದೇಶನ ನೀಡಿದರು. ಕರ್ನಾಟಕ…

ಆನೆಕಾಡು ಬಳಿ ಟಿಟಿ ಪಲ್ಟಿ
ಕೊಡಗು

ಆನೆಕಾಡು ಬಳಿ ಟಿಟಿ ಪಲ್ಟಿ

August 13, 2018

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಆನೆಕಾಡು ಬಳಿ ಸಂಜೆ ಮಧ್ಯಪ್ರದೇಶ ದಿಂದ ಪ್ರವಾಸಕ್ಕೆ ಆಗಮಿಸಿದ್ದ ಟಿಟಿ ಕೆ.ಎ.01 3262 ವಾಹನ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿ ಉರುಳಿಬಿದ್ದಿತ್ತು. ವಾಹನದಲ್ಲಿ ಒಟ್ಟು 12 ಮಂದಿಯಿದ್ದು, ಇಬ್ಬರಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ವಾಹನದಲ್ಲಿದ್ದ ಉಳಿದವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಾಲೆಯಂಡ ಪೊನ್ನಪ್ಪ ಸುಪ್ರೀತಾಗೆ ಆಸ್ಟ್ರೇಲಿಯನ್ ಪ್ರಶಸ್ತಿ
ಕೊಡಗು

ಪಾಲೆಯಂಡ ಪೊನ್ನಪ್ಪ ಸುಪ್ರೀತಾಗೆ ಆಸ್ಟ್ರೇಲಿಯನ್ ಪ್ರಶಸ್ತಿ

August 12, 2018

ಮೈಸೂರು:  ಆಸ್ಟ್ರೇಲಿಯಾದಲ್ಲಿ ಪಿಹೆಚ್.ಡಿ ಮಾಡುತ್ತಿರುವ ಮೈಸೂರಿನ ಪಾಲೆಯಂಡ ಪೊನ್ನಪ್ಪ ಸುಪ್ರೀತಾ ಅವರು 2018ನೇ ಸಾಲಿನ ನ್ಯಾಷನಲ್ ಕೌನ್ಸಿಲ್ ಆಫ್ ವುಮೆನ್ ಕ್ವೀನ್ಸ್‍ಲ್ಯಾಂಡ್ (ಎನ್‍ಸಿಡಬ್ಲ್ಯೂಕ್ಯೂ) ಆಫೀಸ್ ಫಾರ್ ವುಮೆನ್ (ರಿಟರ್ನ್ ಟು ವರ್ಕ್) ಪ್ರಶಸ್ತಿ ಪಡೆದುಕೊಂಡಿದ್ದಾರೆ. ಎನ್‍ಸಿಡಬ್ಲ್ಯೂಕ್ಯೂ ಸಂಸ್ಥೆಯು ನ್ಯಾಷನಲ್ ಕೌನ್ಸಿಲ್ ಆಫ್ ವುಮೆನ್ ಆಫ್ ಆಸ್ಟ್ರೇಲಿಯಾ ಇಂಕ್ ಲಿಮಿಟೆಡ್ ಸಂಸ್ಥೆಯ ಮಾನ್ಯತೆ ಪಡೆದಿದೆ. ಈ ಸಂಸ್ಥೆಯು ಮಹಿಳಾ ಸಬಲೀಕರಣ ಮತ್ತು ಜೀವನದ ಎಲ್ಲಾ ಹಂತಗಳಲ್ಲೂ ಮಹಿಳೆಯರಿಗೆ ಸಮಾನ ಸ್ಥಾನಮಾನ ಕಲ್ಪಿಸುವಲ್ಲಿ ಕಾರ್ಯನಿರ್ವ ಹಿಸುತದೆ. ಅಲ್ಲದೆ, ರಾಜ್ಯ ಮತ್ತು…

ಕೊಡಗಿನಲ್ಲಿ ಮಳೆ ಕಡಿಮೆಯಾಗಲು ಪ್ರಾರ್ಥಿಸೋಣ: ಶಾಸಕ ಕೆ.ಜಿ.ಬೋಪಯ್ಯ
ಕೊಡಗು

ಕೊಡಗಿನಲ್ಲಿ ಮಳೆ ಕಡಿಮೆಯಾಗಲು ಪ್ರಾರ್ಥಿಸೋಣ: ಶಾಸಕ ಕೆ.ಜಿ.ಬೋಪಯ್ಯ

August 12, 2018

ಮಡಿಕೇರಿ:  ಜಿಲ್ಲೆಯಲ್ಲಿ ಯಾರೂ ನಿರೀಕ್ಷೆ ಮಾಡದಷ್ಟು ಮಳೆ ಯಾಗುತ್ತಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಜನರು ಕಷ್ಟ ನಷ್ಟಕ್ಕೆ ಸಿಲುಕಿದ್ದು, ಮಳೆ ಕಡಿಮೆಯಾಗಲು ಎಲ್ಲರೂ ಪ್ರಾರ್ಥಿಸೋಣ ಎಂದು ಬೋಪಯ್ಯ ಕರೆ ನೀಡಿದರು. ಕೊಡಗು ಜಿಲ್ಲಾ ಯುವ ಒಕ್ಕೂಟ, ಹಾಗೂ ತಾಲ್ಲೂಕು ಯುವ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ಕಗ್ಗೋಡ್ಲು ಗ್ರಾಮದ ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ ನಡೆದ 27ನೇ ವರ್ಷದ ರಾಜ್ಯ ಮಟ್ಟದ ಕೆಸರು ಗದ್ದೆ ಕ್ರೀಡೋತ್ಸವವನ್ನು ಶಾಸಕ ಕೆ.ಜಿ.ಬೋಪಯ್ಯ ಉದ್ಘಾಟಿಸಿ, ಮಾತನಾಡಿದರು. ಕೊಡಗಿ ನಲ್ಲಿ ಕೆಸರು ಗದ್ದೆ ಕ್ರೀಡಾಕೂಟ…

1 73 74 75 76 77 84
Translate »