Tag: Kodagu

ಕೊಡಗು ಸಮಗ್ರ ಅಭಿವೃದ್ಧಿಗೆ ಕಟಿಬದ್ಧ
ಕೊಡಗು

ಕೊಡಗು ಸಮಗ್ರ ಅಭಿವೃದ್ಧಿಗೆ ಕಟಿಬದ್ಧ

July 31, 2018

ಸೋಮವಾರಪೇಟೆ: ಕ್ಷೇತ್ರದ ಜನತೆ ತಮಗೆ ರಾಜಕೀಯ ಶಕ್ತಿ ನೀಡದಿದ್ದರೂ, ರಾಜ್ಯದಲ್ಲಿ ಜೆಡಿಎಸ್ ಸರ್ಕಾರವಿರುವುದರಿಂದ ಕೊಡಗು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕಟಿಬದ್ಧನಾಗಿದ್ದೇನೆ. ಈ ನಿಟ್ಟಿನಲ್ಲಿ ಜನತೆ ಆತ್ಮಸ್ಥೈರ್ಯ ತುಂಬಬೇಕೆಂದು ಮಾಜಿ ಸಚಿವ ಬಿ.ಎ. ಜೀವಿಜಯ ಹೇಳಿದರು. ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಜೆಡಿಎಸ್ ಆಯೋಜಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಹಲವಾರು ರಸ್ತೆ, ಸೇತುವೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸಂಕೇತ್‍ಪೂವಯ್ಯ ರಾಜೀನಾಮೆ ನೀಡಿರುವುದು ಸಮಂಜಸವಲ್ಲ. ಹೀಗಾಗಿ…

ಪಾರಂಪರಿಕ ತಿನಿಸು ನೆನಪಿಸಿದ ಕೊಡವ ತೀನಿ ನಮ್ಮೆ
ಕೊಡಗು

ಪಾರಂಪರಿಕ ತಿನಿಸು ನೆನಪಿಸಿದ ಕೊಡವ ತೀನಿ ನಮ್ಮೆ

July 30, 2018

ಮಡಿಕೇರಿ:  ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನೆನಪು ಮಾಡುವ ಕೊಡವ ತೀನಿ ನಮ್ಮೆ ಕಾರ್ಯಕ್ರಮ ನಗರದ ಕೊಡವ ಸಮಾಜದಲ್ಲಿ ನಡೆಯಿತು. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ವತಿಯಿಂದ ನಡೆದ ಕೊಡವ ತೀನಿ ನಮ್ಮೆ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ತಿಂಡಿ ತಿನಿಸುಗಳು ಮೇಳೈಸಿದವು. ಕೊಡವ ಸಾಂಪ್ರದಾಯಿಕ ಆಹಾರ ಪದ್ಧತಿಯನ್ನು ನೆನಪು ಮಾಡುವ ಉದ್ದೇಶ ದಿಂದ ಹಾಗೂ ಯುವ ಪೀಳಿಗೆಗೆ ಪರಿಚಯಿಸುವ ಪ್ರಯತ್ನದ ಸಲುವಾಗಿ ಪೈಪೋಟಿ ಹಾಗೂ ಪ್ರದರ್ಶನ ಎಂಬ ಎರಡು…

ಗೌರಿ ಲಂಕೇಶ್ ಹತ್ಯೆ ಪ್ರಕರಣ ಮಡಿಕೇರಿಯಲ್ಲಿ ಎಸ್‍ಐಟಿ ತಂಡ ಮೊಕ್ಕಾಂ
ಕೊಡಗು

ಗೌರಿ ಲಂಕೇಶ್ ಹತ್ಯೆ ಪ್ರಕರಣ ಮಡಿಕೇರಿಯಲ್ಲಿ ಎಸ್‍ಐಟಿ ತಂಡ ಮೊಕ್ಕಾಂ

July 28, 2018

ಮಡಿಕೇರಿ:  ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕ ರಣದ ತನಿಖೆಯನ್ನು ಬಿರುಸುಗೊಳಿಸಿರುವ ವಿಶೇಷ ತನಿಖಾ ದಳ (ಎಸ್‍ಐಟಿ) ಮಡಿಕೇರಿಯಲ್ಲಿ ಮೊಕಾಂ ಹೂಡಿದೆ. ಜುಲೈ.22 ರಂದು ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ಆಪ್ತ ಸಹಾಯಕ ರಾಜೇಶ್ ಡಿ.ಬಂಗೇರ ನೀಡಿರುವ ಕೆಲವು ಸುಳಿವುಗಳನ್ನು ಆಧರಿಸಿ ತನಿಖೆಯ ಜಾಡು ಹಿಡಿದಿದ್ದು, ಮಡಿಕೇರಿಯ ಮುಖ್ಯ ಬೀದಿಯಲ್ಲಿರುವ ಬಂದೂಕು ಮಳಿಗೆಯೊಂದಕ್ಕೆ ತೆರಳಿ ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿರುವ ಮಾಹಿತಿ ಲಭಿಸಿದೆ. ನಾಟಿ ವೈದ್ಯ ಮೋಹನ್ ನಾಯಕ್‍ನ…

ಲೋಕಸಭೆಯಲ್ಲಿ ಕೊಡಗಿನ ಮಳೆ ಹಾನಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರಸ್ತಾಪ: ನೆರವಿಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ
ಕೊಡಗು

ಲೋಕಸಭೆಯಲ್ಲಿ ಕೊಡಗಿನ ಮಳೆ ಹಾನಿ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರಸ್ತಾಪ: ನೆರವಿಗೆ ಬಾರದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

July 26, 2018

ನವದೆಹಲಿ: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಸಂಸತ್‍ನಲ್ಲಿ ಇಂದು ಕೊಡಗಿನ ಮಳೆ ಹಾನಿಯನ್ನು ಎಳೆ-ಎಳೆಯಾಗಿ ಬಿಡಿಸಿಟ್ಟರು. ಸಂಕಷ್ಟದಲ್ಲಿರುವ ಕೊಡಗಿನ ನೆರವಿಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಚುಚ್ಚಿದರು. ಕೇಂದ್ರ ಸರ್ಕಾರವು ಕೊಡಗಿಗೆ ನೆರವಿನ ಹಸ್ತ ನೀಡಬೇಕೆಂದು ಮನವಿ ಮಾಡಿದರು. ಸಂಸತ್‍ನಲ್ಲಿ ಇಂದು ಸಭಾಧ್ಯಕ್ಷರ ಸ್ಥಾನದಲ್ಲಿ ಉಪ ಸಭಾಧ್ಯಕ್ಷ ತಮಿಳುನಾಡಿನ ತಂಬಿದುರೈ ಅವರು ಆಸೀನರಾಗಿದ್ದಾಗ ಪ್ರತಾಪ್ ಸಿಂಹ ಅವರಿಗೆ ಮಾತನಾಡಲು ಅವಕಾಶ ದೊರೆಯಿತು. ಕರ್ನಾಟಕದ ದಕ್ಷಿಣ ಭಾಗ ತೀವ್ರ ನೆರೆ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈ ವಿಚಾರವನ್ನು ಸದನದಲ್ಲಿ…

ಕೊಡಗಿಗೆ ಮತ್ತೇ ಮಳೆರಾಯನ ಆಗಮನ ಮಡಿಕೇರಿ-ಮಂಗಳೂರು ಹೆದ್ದಾರಿ ಹಲವೆಡೆ ಬಿರುಕು
ಕೊಡಗು

ಕೊಡಗಿಗೆ ಮತ್ತೇ ಮಳೆರಾಯನ ಆಗಮನ ಮಡಿಕೇರಿ-ಮಂಗಳೂರು ಹೆದ್ದಾರಿ ಹಲವೆಡೆ ಬಿರುಕು

July 26, 2018

ಮಡಿಕೇರಿ: ಪುನರ್ವಸು ಮಳೆಯನ್ನು ಹಿಂಬಾಲಿಸುವ ರೀತಿಯಲ್ಲಿ ಪುಷ್ಯ ಮಳೆಯ ಬಿರುಸು ಕೊಡಗು ಜಿಲ್ಲೆಯನ್ನು ವ್ಯಾಪಿಸಿದೆ. ಕಳೆದೊಂದು ದಿನದ ಅವಧಿ ಯಲ್ಲಿ ಭಾರೀ ಗಾಳಿ ಮಳೆಗೆ ಮತ್ತೊಮ್ಮೆ ‘ಕಾವೇರಿ’ಯ ಒಡಲು ಭರ್ತಿಯಾಗಿ ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರು ರಸ್ತೆಗಳನ್ನು ಆವರಿಸಿದೆ. ಕಾವೇರಿಯ ಕ್ಷೇತ್ರ ತಲಕಾವೇರಿ ಮತ್ತು ಭಾಗಮಂಡಲ ವ್ಯಾಪ್ತಿಯಲ್ಲಿ ನಿನ್ನೆ ಬೆಳಗ್ಗಿ ನಿಂದ ಇಂದು ಬೆಳಗ್ಗಿನವರೆಗೆ ಸಾಧಾರಣ ವಾಗಿ 3 ಇಂಚಿನಷ್ಟು ಮಳೆಯಾಗಿದ್ದು, ಮಳೆಯ ಪ್ರಮಾಣ ಹೆಚ್ಚುವುದರೊಂದಿಗೆ ಕಾವೇರಿ ನದಿ ನೀರಿನ ಮಟ್ಟ ಏರಲಾರಂಭಿಸಿದೆ. ಇದರಿಂದ ಭಾಗಮಂಡಲದ ಅಯ್ಯಂಗೇರಿ…

ಪ್ರವಾಸೋದ್ಯಮದ ಒತ್ತಡ ತಡೆದುಕೊಳ್ಳುವ ಶಕ್ತಿ ಕೊಡಗಿಗಿಲ್ಲ
ಕೊಡಗು

ಪ್ರವಾಸೋದ್ಯಮದ ಒತ್ತಡ ತಡೆದುಕೊಳ್ಳುವ ಶಕ್ತಿ ಕೊಡಗಿಗಿಲ್ಲ

July 26, 2018

ಮಡಿಕೇರಿ: ಕೊಡಗು ಅತ್ಯಂತ ಸೂಕ್ಷ್ಮ ಪರಿಸರ ವಲಯವಾ ಗಿದ್ದು, ಪ್ರವಾಸೋದ್ಯಮದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿ ಇಲ್ಲಿನ ಪರಿಸರಕ್ಕೆ ಇಲ್ಲವೆಂದು ಅಭಿಪ್ರಾಯಪಟ್ಟಿರುವ ಕೂರ್ಗ್ ವೈಲ್ಡ್ ಲೈಫ್ ಸೊಸೈಟಿಯ ಅಧ್ಯಕ್ಷ ಕರ್ನಲ್ ಸಿ.ಪಿ.ಮುತ್ತಣ್ಣ, ಪ್ರವಾಸೋ ದ್ಯಮವನ್ನು ಮತ್ತಷ್ಟು ಉತ್ತೇಜಿಸುವುದನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಎಂದಿಗೂ ಕೊಡಗಿನ ಅಭಿವೃದ್ಧಿಯ ವಿರೋಧಿಗಳಲ್ಲ. ಆದರೆ, ಪರಿಸರ ರಕ್ಷಣೆಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಪ್ರವಾ ಸೋದ್ಯಮದ ವೇಗವನ್ನು ತಡೆಯುವಷ್ಟು ಶಕ್ತಿ ಈ ಸೂಕ್ಷ್ಮ ಪ್ರದೇಶವಾದ ಕೊಡಗಿಗೆ ಇಲ್ಲ. ಜಿಲ್ಲೆಯ ಜನಸಂಖ್ಯೆ…

ಗೊಂದಲದ ಗೂಡಾದ ಜೆಡಿಎಸ್ ಸಭೆ
ಕೊಡಗು

ಗೊಂದಲದ ಗೂಡಾದ ಜೆಡಿಎಸ್ ಸಭೆ

July 24, 2018

ಗೋಣಿಕೊಪ್ಪಲು:  ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯು ವಿರಾಜಪೇಟೆಯ ಪುರಭವನದ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಮೇರಿಯಂಡ ಸಂಕೇತ್ ಪೂವಯ್ಯನವರ ರಾಜಿನಾಮೆ ವಿಷಯ ದಲ್ಲಿ ಚರ್ಚೆಗಳು ನಡೆದವು. ಈ ಸಂದರ್ಭ ಸಂಕೇತ್‍ಪೂವಯ್ಯನವರ ವಿರೋಧದ ಗುಂಪಿನ ಪ್ರಮುಖರಾದ ಕಾನೂರಿನ ಪಕ್ಷದ ಮುಖಂಡರಾದ ಸುರೇಶ್‍ರವರು ಸಂಕೇತ್ ಪೂವಯ್ಯನವರ ರಾಜೀನಾಮೆಯು ಅಂಗೀಕಾರವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದ್ಯದಲ್ಲೇ ವೀಕ್ಷಕರ ತಂಡ ಕೊಡಗಿಗೆ ಆಗಮಿಸಿ ನೂತನ ಅಧ್ಯಕ್ಷರ ನೇಮಕಾತಿ ಬಗ್ಗೆ ಚರ್ಚೆ ನಡೆಸಲಿದೆ ಎಂದು…

ಸ್ಥಳೀಯ ಸಮಸ್ಯೆ ಅರಿತು ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿ :ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ
ಕೊಡಗು

ಸ್ಥಳೀಯ ಸಮಸ್ಯೆ ಅರಿತು ಸೂಕ್ಷ್ಮವಾಗಿ ಕರ್ತವ್ಯ ನಿರ್ವಹಿಸಿ :ಅಧಿಕಾರಿಗಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ

July 21, 2018

ಮಡಿಕೇರಿ: ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳನ್ನು ಅರಿತು ಸೂಕ್ಷ್ಮವಾಗಿ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಲಹೆ ಮಾಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಳೆಹಾನಿ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ನಡೆದ ಸಭೆಯಲ್ಲಿ ಗುರುವಾರ ಮಾಹಿತಿ ಪಡೆದು ಮುಖ್ಯ ಮಂತ್ರಿಗಳು ಮಾತನಾಡಿದರು. ಅಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಿದ್ದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ನೀಡಲು ಸಾಧ್ಯ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಅವರು ನಿರ್ದೇಶನ ನೀಡಿದರು. ರಾಜ್ಯದ ಹಲವು ಭಾಗಗಳಲ್ಲಿ ಒಂದೊಂದು ರೀತಿಯ…

ಕೊಡಗಿನ ರೈತರೊಡನೆ ಮತ್ತೊಮ್ಮೆ ಸಭೆ ಮಾಡುವೆ: ರೈತ ಸಂಘಕ್ಕೆ ಸಿಎಂ ಕುಮಾರಸ್ವಾಮಿ ಭರವಸೆ
ಕೊಡಗು

ಕೊಡಗಿನ ರೈತರೊಡನೆ ಮತ್ತೊಮ್ಮೆ ಸಭೆ ಮಾಡುವೆ: ರೈತ ಸಂಘಕ್ಕೆ ಸಿಎಂ ಕುಮಾರಸ್ವಾಮಿ ಭರವಸೆ

July 21, 2018

ಗೋಣಿಕೊಪ್ಪಲು: ಕೊಡಗು ಜಿಲ್ಲೆಯ ರೈತರ ಸಮಸ್ಯೆಗಳನ್ನು ತಿಳಿದಿ ದ್ದೇನೆ. ಮುಂದೆ ಕೊಡಗು ಜಿಲ್ಲೆಯಲ್ಲಿ ರೈತರೊಡನೇ ಮತ್ತೊಂದು ಸುತ್ತಿನ ಸಭೆ ನಡೆಸುವ ಮೂಲಕ ಈ ಭಾಗದ ರೈತರ ಸಮಸ್ಯೆಗಳನ್ನು ಕೂಲಂಕುಷವಾಗಿ ಚರ್ಚಿಸೋಣವೆಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು. ಕೊಡಗು ಜಿಲ್ಲೆಗೆ ನೆರೆ ಹಾವಳಿ ವೀಕ್ಷಿ ಸಲು ಖುದ್ದು ಆಗಮಿಸಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಜಿಲ್ಲಾ ಡಳಿತ ಕಛೇರಿಯ ಸಭಾಂಗಣದಲ್ಲಿ ಭೇಟಿ…

ಕೊಡಗಲ್ಲಿ ಮಳೆ ಕ್ಷೀಣಿಸಿದರೂ ಹಾನಿ ಅಪಾರ
ಕೊಡಗು

ಕೊಡಗಲ್ಲಿ ಮಳೆ ಕ್ಷೀಣಿಸಿದರೂ ಹಾನಿ ಅಪಾರ

July 19, 2018

ಮಡಿಕೇರಿ: ಅತಿವೃಷ್ಟಿಯಿಂದ ತತ್ತರಿಸಿದ್ದ ಕೊಡಗು ಜಿಲ್ಲೆ 2 ದಿನಗಳಿಂದ ಸಹಜ ಸ್ಥಿತಿಯತ್ತ ಹೊರಳುತ್ತಿದೆಯಾ ದರೂ, ಬಿರುಗಾಳಿಗೆ ಹಾನಿಯ ಪ್ರಮಾಣ ಮುಂದುವರಿದಿದೆ. ಜಿಲ್ಲೆಯ ಹಲವೆಡೆ ಮರಗಳು ಮುರಿದು ಬಿದ್ದಿದ್ದು, ಕಾಫಿ ತೋಟಗಳು ಮತ್ತು ವಾಸದ ಮನೆಗಳಿಗೆ ಹಾನಿಯಾದ ಬಗ್ಗೆ ವರದಿಯಾಗಿದೆ. ಮಡಿಕೇರಿಯ ಡೈರಿ ಫಾರಂ ಬಳಿ ಮನೆ ಯೊಂದರ ಮೇಲ್ಛಾವಣಿ ಸಹಿತ ಗೋಡೆ ಕುಸಿದು ಬಿದ್ದಿದು, ಮನೆ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬುಧವಾರ ಬೆಳಗ್ಗೆ 7.30ಗಂಟೆಗೆ ಬೀಸಿದ ಬಿರುಗಾಳಿ ಸಹಿತ ಮಳೆಗೆ ಮಕ್ಬುಲ್ ಎಂಬವರ ಮನೆಗೆ ಹಾನಿ ಸಂಭವಿಸಿದ್ದು,…

1 75 76 77 78 79 84
Translate »