Tag: Kodagu

ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿ
ಕೊಡಗು

ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿ

August 12, 2018

ಮಡಿಕೇರಿ: ತೋಟದ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ಕಾಡಾನೆ ದಾಳಿ ನಡೆಸಿದ ಘಟನೆ ಸುಂಟಿಕೊಪ್ಪದ ಕೊಡಗರ ಹಳ್ಳಿ ಬಳಿ ನಡೆದಿದೆ. ಸ್ಥಳೀಯ ನಿವಾಸಿ ರಾಧಾ (55) ಎಂಬಾಕೆ ಎಂದಿ ನಂತೆ ತೋಟದ ಕೆಲಸಕ್ಕೆ ತೆರಳಿದ ಸಂದರ್ಭ ಕಾಫಿ ತೋಟದ ಒಳಗಾಗಿದ್ದ ಕಾಡಾನೆ ಏಕಾಏಕಿ ದಾಳಿ ನಡೆದಿದೆ. ಕಾಡಾನೆ ಧಾಳಿಯಿಂದ ರಾಧಾ ಅವರ ಬಲಗೈ ಮುರಿಯಲ್ಪಟ್ಟಿದ್ದು ಕೂದೆಲೆಳೆಯ ಅಂತರ ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ಗಾಯಾಳುವನ್ನು ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಅರಣ್ಯಾಧಿಕಾರಿಗಳು ಆಸ್ಪತ್ರೆಗೆ ತೆರಳಿದ ಗಾಯಾಳುವಿನ ಯೋಗಕ್ಷೇಮ…

ಡೆತ್‍ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
ಕೊಡಗು

ಡೆತ್‍ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

August 12, 2018

ಮಡಿಕೇರಿ:  ಡೆತ್‍ನೋಟ್ ಬರೆದಿಟ್ಟು ಕಾಲೇಜು ವಿದ್ಯಾರ್ಥಿನಿ ಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಅಮ್ಮತ್ತಿ ಸಮೀಪದ ಒಂಟಿಯಂಗಡಿಯಲ್ಲಿ ನಡೆದಿದೆ. ಒಂಟಿಯಂಗಡಿ ನಿವಾಸಿ ಶಿವಲಿಂಗಪ್ಪ ಎಂಬುವರ ಪುತ್ರಿ, ವೀರಾಜ ಪೇಟೆಯ ಸರ್ಕಾರಿ ಕಾಲೇಜೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಪುಷ್ಪಾ (17) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಸಾಯುವ ಮುನ್ನ ಡೆತ್‍ನೋಟ್ ಬರೆದಿಟ್ಟಿರುವ ಪುಷ್ಪಾ, ‘ನನ್ನ ಸಾವಿಗೆ ಯಾರೂ ಕಾರಣ ಅಂತಾ ಹೇಳೋದಿಲ್ಲ. ಅದು ಅವರಿಗೆ ಗೊತ್ತಿದೆ. 17 ವರ್ಷದ ಜೀವನ 17 ಜನ್ಮದಂತಾಗಿದೆ. ಪ್ರತಿದಿನ ಸಾಯಿ, ಸಾಯಿ ಅಂತಾ…

ವಿಷ ಪ್ರಾಶನದಿಂದ ಹಸು, ಕರು ಸಾವು
ಕೊಡಗು

ವಿಷ ಪ್ರಾಶನದಿಂದ ಹಸು, ಕರು ಸಾವು

August 11, 2018

ನಾಪೋಕ್ಲು:  ಬೇತು ಗ್ರಾಮದ ನಿವಾಸಿ ಚೋಕಿರ ಪ್ರಭು ಪೂವಪ್ಪ ಮತ್ತು ಗಣೇಶ್‍ರವರಿಗೆ ಸೇರಿದ 3 ಹಸು, ಕರುಗಳು ಇಂದು ಆಕಸ್ಮಿಕವಾಗಿ ನಗರಕ್ಕೆ ದಾರಿ ತಪ್ಪಿ ಬಂದು ನಗರದಲ್ಲಿ ವಿಷ ಪ್ರಾಶನದಿಂದ ಸತ್ತು ಬಿದ್ದಿರುವ ದೃಶ್ಯ ಜನರ ಮನ ಕಲುಕುವಂತಿತ್ತು. ಇಂದು ಬೆಳಗ್ಗೆ ಕೊಟ್ಟಿಗೆಯಿಂದ ತಪ್ಪಿಸಿ ಕೊಂಡ ಹಸು, ಕರುಗಳು ಸುಮಾರು ಅರ್ಧ ಕಿ.ಮೀ. ದೂರದ ನಾಪೋಕ್ಲು ನಗರಕ್ಕೆ ಬಂದಿದ್ದು, ಮದ್ಯಾಹ್ನದವರೆಗೂ ಗಾಬರಿ ಯಿಂದ ಅಲ್ಲಿ ಇಲ್ಲಿ ತಿರುಗಿಕೊಂಡಿದ್ದ ಹಸು ಕರುಗಳು ನಂತರ ನಗರದ ಬಾರ್ ಒಂದರ ಬಳಿಯಲ್ಲಿ…

ಲಕ್ಷಾಂತರ ಮೌಲ್ಯದ ಬೀಟೆ ನಾಟ ಸಹಿತ ವಾಹನ ವಶ, ಆರೋಪಿಗಳು ಪರಾರಿ
ಕೊಡಗು

ಲಕ್ಷಾಂತರ ಮೌಲ್ಯದ ಬೀಟೆ ನಾಟ ಸಹಿತ ವಾಹನ ವಶ, ಆರೋಪಿಗಳು ಪರಾರಿ

August 10, 2018

ಕುಶಾಲನಗರ:  ಸಮೀಪದ ಗುಡ್ಡೆ ಹೊಸೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾನೂನು ಬಾಹಿರವಾಗಿ ಬೀಟೆ ನಾಟಗಳನ್ನು ಸಾಗಿ ಸುತ್ತಿದ್ದ ವೇಳೆ ಆನೆಕಾಡು ಅರಣ್ಯ ಸಿಬ್ಬಂದಿ ದಾಳಿ ಮಾಡಿ, ಲಕ್ಷಾಂತರ ಮೌಲ್ಯದ ಬೀಟೆ ನಾಟ ಸೇರಿದಂತೆ ವಾಹನವನ್ನು ವಶ ಪಡಿಸಿಕೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ಮಡಿಕೇರಿ-ಮೈಸೂರು ರಾಜ್ಯ ಹೆದ್ದಾ ರಿಯ ಆನೆಕಾಡು ಕುಶಾಲನಗರ ವಲಯ ಅರಣ್ಯಾಧಿಕಾರಿ ಸಿ.ಆರ್.ಅರುಣ್ ಹಾಗೂ ಆನೆಕಾಡು ಉಪ ವಲಯ ಅರಣ್ಯಾಧಿಕಾರಿ ರಂಜನ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮಾಲು ಸಮೇತ ವಾಹನ ವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ…

ಮಳೆ ಹಾನಿಗೆ ಸರ್ಕಾರ ತುರ್ತಾಗಿ ಸ್ಪಂದಿಸುವಂತೆ ಎಂಎಲ್‍ಸಿ ಸುನೀಲ್ ಸುಬ್ರಮಣಿ ಆಗ್ರಹ
ಕೊಡಗು

ಮಳೆ ಹಾನಿಗೆ ಸರ್ಕಾರ ತುರ್ತಾಗಿ ಸ್ಪಂದಿಸುವಂತೆ ಎಂಎಲ್‍ಸಿ ಸುನೀಲ್ ಸುಬ್ರಮಣಿ ಆಗ್ರಹ

August 10, 2018

ಮಡಿಕೇರಿ: ತೀವ್ರ ಮಳೆ ಯಿಂದಾಗಿ ಕೊಡಗು ಜಿಲ್ಲೆಗೆ ಭಾರೀ ನಷ್ಟ ಸಂಭವಿಸಿದ್ದು, ರಾಜ್ಯ ಸರಕಾರ ಜಿಲ್ಲೆಯ ನೆರವಿಗೆ ಧಾವಿಸಬೇಕೆಂದು ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಆಗ್ರಹಿಸಿದ್ದಾರೆ. ಮಳೆಯಿಂದ ಹಾನಿಗೊಳಗಾದ ಮಂಗಳದೇವಿ ನಗರ, ಮಂಗಳೂರು ರಸ್ತೆ, ಮೇಕೇರಿ-ಮೂರ್ನಾಡು ಬೈ ಪಾಸ್ ರಸ್ತೆಯಲ್ಲಿ ವಾಹನ ಸಂಚಾರದ ಸ್ಥಿತಿಗತಿಗಳ ಕುರಿತು ಸುನೀಲ್ ಸುಬ್ರಮಣಿ ಪರಿಶೀಲನೆ ನಡೆಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಲೋಕೋಪಯೋಗಿ ಇಲಾಖೆ ಅಧಿ ಕಾರಿಗಳೊಂದಿಗೆ ಚರ್ಚಿಸಿದ ಸುನೀಲ್ ಸುಬ್ರಮಣಿ, ರಸ್ತೆಯ ಸ್ಥಿತಿಗತಿಗಳ ಕುರಿತು ಮಾಹಿತಿ ಪಡೆದರು. ಮಂಗಳೂರು…

ರಸ್ತೆಗೆ ಉರುಳಿದ ಮರ; ಸಂಚಾರ ಅಸ್ಥವ್ಯಸ್ತ
ಕೊಡಗು

ರಸ್ತೆಗೆ ಉರುಳಿದ ಮರ; ಸಂಚಾರ ಅಸ್ಥವ್ಯಸ್ತ

August 10, 2018

ಗೋಣಿಕೊಪ್ಪಲು: ಅಮ್ಮತ್ತಿ-ಸಿದ್ದಾಪುರ ಮುಖ್ಯರಸ್ತೆ ಅಡ್ಡವಾಗಿ ಮರ ಬಿದ್ದು ಒಂದು ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಮಧ್ಯಾಹ್ನ 12 ಗಂಟೆ ಸುಮಾರಿಗೆ ಅಮ್ಮತ್ತಿಯಿಂದ 1 ಕಿ. ಮೀ. ದೂರದಲ್ಲಿ ಮರವೊಂದು ಅಡ್ಡವಾಗಿ ಬಿದ್ದು, ವಾಹನ ಸಂಚರಿಸದೆ ತೊಂದರೆ ಉಂಟಾಯಿತು. ಸುಮಾರು 1 ಗಂಟೆಗಳ ಕಾಲ ರಸ್ತೆ ಉದ್ದಕ್ಕೂ ವಾಹನಗಳು ಸಾಲಾಗಿ ನಿಂತಿದ್ದವು. ನಂತರ ಸ್ಥಳೀಯರ ಸಹಕಾರದಲ್ಲಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

ಕೊಡಗಿನಲ್ಲಿ ಮತ್ತೇ ವರುಣನ ಆರ್ಭಟ: ಮಡಿಕೇರಿ-ಮಂಗಳೂರು ಹೆದ್ದಾರಿ ಸೇರಿ ಹಲವೆಡೆ ಭೂ ಕುಸಿತ
ಕೊಡಗು

ಕೊಡಗಿನಲ್ಲಿ ಮತ್ತೇ ವರುಣನ ಆರ್ಭಟ: ಮಡಿಕೇರಿ-ಮಂಗಳೂರು ಹೆದ್ದಾರಿ ಸೇರಿ ಹಲವೆಡೆ ಭೂ ಕುಸಿತ

August 9, 2018

ಮಡಿಕೇರಿ: ಕಳೆದ ಎರಡು ದಿನಗಳಿಂದ ಜಿಲ್ಲೆಯಾದ್ಯಂತ ಆಶ್ಲೇಷ ಮಳೆ ಅಬ್ಬರಿಸುತ್ತಿದ್ದು, ಕೊಡಗು ಜಿಲ್ಲೆ ಸಂಪೂರ್ಣವಾಗಿ ತತ್ತರಿಸಿದೆ. ಬಿರುಗಾಳಿ ಸಹಿತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂ ದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ನದಿ ತೊರೆಗಳು ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿವೆ. ಕಳೆದ ಒಂದು ವಾರದಿಂದ ಮಳೆ ಕೊಂಚ ಬಿಡುವ ನೀಡಿದ್ದರಿಂದ ಜನತೆ ಅಲ್ಪ ನಿರಾಳರಾಗಿ ನಿಟ್ಟುಸಿರು ಬಿಡುತ್ತಿದ್ದಂತೆಯೇ ಆಶ್ಲೇಷ ಮಳೆ ಆರ್ಭಟ ತೋರಿದ್ದು, ಪ್ರಕೃತಿ ವಿಕೋಪಗಳ ಸರ ಣಿಯೂ ಮುಂದುವರಿದಿದೆ. ಈ ಹಿಂದೆ ಸುರಿದ ಆರಿದ್ರ ಮಳೆಯ ರಭಸಕ್ಕೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ…

ಕೊಳೆತ ಸ್ಥಿತಿಯಲ್ಲಿ ಆನೆ ಶವ ಪತ್ತೆ
ಕೊಡಗು

ಕೊಳೆತ ಸ್ಥಿತಿಯಲ್ಲಿ ಆನೆ ಶವ ಪತ್ತೆ

August 6, 2018

ಮಡಿಕೇರಿ: ಚೆಟ್ಟಳ್ಳಿ ಸಮೀಪದ ನಂಜರಾಯ ಪಟ್ಟಣ ಮೀಸಲು ಅರಣ್ಯದೊಳಗೆ ಕೊಳೆತ ಸ್ಥಿತಿಯಲ್ಲಿ ಕಾಡಾನೆ ಕಳೇ ಬರ ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿಗಳು ಅರಣ್ಯದೊಳಗೆ ಗಸ್ತು ತಿರುಗುತ್ತಿದ್ದ ಸಂದರ್ಭ ಸುಮಾರು 55 ವರ್ಷ ಪ್ರಾಯದ ಒಂಟಿ ದಂತದ ಕಾಡಾನೆಯೊಂದರ ಕಳೇ ಬರ ಪತ್ತೆಯಾಗಿದೆ. ಕಾಡಾನೆಯ ಕಳೇ ಬರ ಸಂಪೂರ್ಣ ಕೊಳೆತುಹೋಗಿದ್ದು, ಸುಮಾರು ಹತ್ತು ದಿನಗಳ ಹಿಂದೆ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಉಪವಲಯ ಅರಣ್ಯಾಧಿಕಾರಿ ವಿಲಾಸ್‍ಗೌಡ ಹಾಗೂ ವೈದ್ಯಾಧಿಕಾರಿ ಡಾ.ಮುಜೀಬ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಹತ್ತುದಿನಗಳ ಹಿಂದೆ ಕಾಡಾನೆಗಳ ನಡುವಿನ…

ಮೂರ್ನಾಡಿನಲ್ಲಿ ಆಟಿ ತಿನಿ: ಕೊಡಗಿನ ಖಾದ್ಯ ಸಂಸ್ಕೃತಿ ಅನಾವರಣ
ಕೊಡಗು

ಮೂರ್ನಾಡಿನಲ್ಲಿ ಆಟಿ ತಿನಿ: ಕೊಡಗಿನ ಖಾದ್ಯ ಸಂಸ್ಕೃತಿ ಅನಾವರಣ

August 6, 2018

ಮೂರ್ನಾಡು:  ಮೂರ್ನಾಡು ವಿದ್ಯಾಸಂಸ್ಥೆ, ಜಾನಪದ ಪರಿಷತ್‍ನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜಾನಪದ ಆಟಿ ತಿನಿ (ಆಟಿ ಊಟ) ಆಯೋಜಿಸಲಾಗಿತ್ತು. ಆಟಿ ಮಾಸದಲ್ಲಿ ಕೊಡಗಿನಲ್ಲಿ ಹೆಚ್ಚು ಬಳಸಲ್ಪಡುವ ಪತ್ರೋಡೆ, ಆಟಿ ಪಾಯಸ, ಆಟಿ ಹಲ್ವ, ಕೋಳಿ ಕರಿ, ಕಡುಂಬುಟ್ಟ್, ಪಾಪುಟ್ಟು, ಸೊಪ್ಪಿನ ಪಲ್ಯಗಳು ಸೇರಿದಂತೆ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳನ್ನು ಮೂರ್ನಾಡು ವಿದ್ಯಾಸಂಸ್ಥೆಯ ಶಿಕ್ಷಕಿಯರು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು. ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟೀರ ಜಿ.ಮಾದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಸಂಸ್ಕೃತಿಯೇ ಕೊಡಗಿನ…

ನಾಳೆ ಕೊಡಗಿನಲ್ಲಿ ಕಕ್ಕಡ ಪದಿನೆಟ್ ಆಚರಣೆ
ಕೊಡಗು

ನಾಳೆ ಕೊಡಗಿನಲ್ಲಿ ಕಕ್ಕಡ ಪದಿನೆಟ್ ಆಚರಣೆ

August 2, 2018

ಮಡಿಕೇರಿ:  ಆಟಿ ಅಥವಾ ಕಕ್ಕಡ ಆಚರಣೆಯ 18ನೇ ದಿನ ಆಗಸ್ಟ್ 3 ಕಕ್ಕಡ ಆರಂಭವಾಗಿ 18 ದಿನ ತುಂಬುತ್ತಿದ್ದಂತೆ 18 ಔಷಧಿಯ ಗುಣಗಳನ್ನು ಹೊಂದಿರುವ ಮದ್ದು ಸೊಪ್ಪಿನ ಪಾಯಸ ಅಥವಾ ರುಚಿ ರುಚಿಯಾದ ವಿವಿಧ ಖಾದ್ಯಗಳನ್ನು ಮಾಡಿ ಸೇವಿಸುವುದು ವಿಶೇಷ. ಕೊಡಗಿನ ಮನೆ ಮನೆಗಳಲ್ಲಿ ಮದ್ದು ಸೊಪ್ಪಿನ ಪಾಯಸ ಘಮಘಮಿಸುತ್ತದೆ. ತುಳುನಾಡಿನಲ್ಲಿ ಆಟಿ 18 ಹೇಗೋ, ಹಾಗೇ ಕೊಡಗಿನಲ್ಲಿ ಕಕ್ಕಡ 18 ಕೂಡ ಒಂದು ವಿಶಿಷ್ಠ ಆಚರಣೆಯಾಗಿದೆ. ಕೊಡಗಿನಲ್ಲಿ ಔಷಧೀಯ ಗುಣಗಳನ್ನು ಹೊಂದಿರುವ ಹಸಿರ ಗಿಡಗಳಿಗೇನು ಕೊರತೆ…

1 74 75 76 77 78 84
Translate »