ಕೊಳೆತ ಸ್ಥಿತಿಯಲ್ಲಿ ಆನೆ ಶವ ಪತ್ತೆ
ಕೊಡಗು

ಕೊಳೆತ ಸ್ಥಿತಿಯಲ್ಲಿ ಆನೆ ಶವ ಪತ್ತೆ

August 6, 2018

ಮಡಿಕೇರಿ: ಚೆಟ್ಟಳ್ಳಿ ಸಮೀಪದ ನಂಜರಾಯ ಪಟ್ಟಣ ಮೀಸಲು ಅರಣ್ಯದೊಳಗೆ ಕೊಳೆತ ಸ್ಥಿತಿಯಲ್ಲಿ ಕಾಡಾನೆ ಕಳೇ ಬರ ಪತ್ತೆಯಾಗಿದೆ. ಅರಣ್ಯ ಸಿಬ್ಬಂದಿಗಳು ಅರಣ್ಯದೊಳಗೆ ಗಸ್ತು ತಿರುಗುತ್ತಿದ್ದ ಸಂದರ್ಭ ಸುಮಾರು 55 ವರ್ಷ ಪ್ರಾಯದ ಒಂಟಿ ದಂತದ ಕಾಡಾನೆಯೊಂದರ ಕಳೇ ಬರ ಪತ್ತೆಯಾಗಿದೆ. ಕಾಡಾನೆಯ ಕಳೇ ಬರ ಸಂಪೂರ್ಣ ಕೊಳೆತುಹೋಗಿದ್ದು, ಸುಮಾರು ಹತ್ತು ದಿನಗಳ ಹಿಂದೆ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಉಪವಲಯ ಅರಣ್ಯಾಧಿಕಾರಿ ವಿಲಾಸ್‍ಗೌಡ ಹಾಗೂ ವೈದ್ಯಾಧಿಕಾರಿ ಡಾ.ಮುಜೀಬ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಹತ್ತುದಿನಗಳ ಹಿಂದೆ ಕಾಡಾನೆಗಳ ನಡುವಿನ ಕಾದಾಟದಲ್ಲಿ ಗಾಯಗೊಂಡು ಆನೆ ಸಾವನ್ನಪ್ಪಿರಬಹುದೆಂದು ಅರಣ್ಯಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

Translate »