ಮೂರ್ನಾಡಿನಲ್ಲಿ ಆಟಿ ತಿನಿ: ಕೊಡಗಿನ ಖಾದ್ಯ ಸಂಸ್ಕೃತಿ ಅನಾವರಣ
ಕೊಡಗು

ಮೂರ್ನಾಡಿನಲ್ಲಿ ಆಟಿ ತಿನಿ: ಕೊಡಗಿನ ಖಾದ್ಯ ಸಂಸ್ಕೃತಿ ಅನಾವರಣ

August 6, 2018

ಮೂರ್ನಾಡು:  ಮೂರ್ನಾಡು ವಿದ್ಯಾಸಂಸ್ಥೆ, ಜಾನಪದ ಪರಿಷತ್‍ನ ಮೂರ್ನಾಡು ಹೋಬಳಿ ಘಟಕದ ವತಿಯಿಂದ ಮೂರ್ನಾಡು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಜಾನಪದ ಆಟಿ ತಿನಿ (ಆಟಿ ಊಟ) ಆಯೋಜಿಸಲಾಗಿತ್ತು.

ಆಟಿ ಮಾಸದಲ್ಲಿ ಕೊಡಗಿನಲ್ಲಿ ಹೆಚ್ಚು ಬಳಸಲ್ಪಡುವ ಪತ್ರೋಡೆ, ಆಟಿ ಪಾಯಸ, ಆಟಿ ಹಲ್ವ, ಕೋಳಿ ಕರಿ, ಕಡುಂಬುಟ್ಟ್, ಪಾಪುಟ್ಟು, ಸೊಪ್ಪಿನ ಪಲ್ಯಗಳು ಸೇರಿದಂತೆ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳನ್ನು ಮೂರ್ನಾಡು ವಿದ್ಯಾಸಂಸ್ಥೆಯ ಶಿಕ್ಷಕಿಯರು ತಯಾರಿಸಿ ಪ್ರದರ್ಶನಕ್ಕಿಟ್ಟಿದ್ದರು. ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟೀರ ಜಿ.ಮಾದಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಸಂಸ್ಕೃತಿಯೇ ಕೊಡಗಿನ ಶ್ರೀಮಂತ ಸಂಸ್ಕೃತಿಯಾಗಿದ್ದು ಇದನ್ನು ರಕ್ಷಿಸುವ ನಿಟ್ಟಿನಲ್ಲಿ ಜಾನಪದ ಪರಿಷತ್ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ವಿದ್ಯಾಸಂಸ್ಥೆಯ ವತಿಯಿಂದ ಕೊಡಗಿನ ಸಂಸ್ಕೃತಿ ಉಳಿಸುವ ಎಲ್ಲಾ ಕಾರ್ಯಕ್ರಮ ಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷ ಎಸ್.ಡಿ. ಪ್ರಶಾಂತ್ ಮಾತನಾಡಿ, ಮಳೆ ಗಾಲದಲ್ಲಿ ಕೊಡಗಿನ ನಿಜವಾದ ಜಾನಪದ ಸಂಸ್ಕøತಿ ಹೆಚ್ಚು ಅನಾವರಣಗೊಳ್ಳುತ್ತದೆ. ಜಾನಪದವೇ ನಮ್ಮ ಮೂಲಕ ಸಂಸ್ಕೃತಿಯಾಗಿದೆ. ಈ ಪೈಕಿ ಮಳೆಗಾಲದಲ್ಲಿ ತಯಾರಿ ಸಲ್ಪಡುವ ವಿಶಿಷ್ಟ ತಿನಿಸುಗಳೂ ಮುಖ್ಯವಾಗಿದೆ. ಇದನ್ನು ಪರಿಚಯಿಸಬೇಕೆಂಬ ಉದ್ದೇಶ ದಿಂದ ಮೊದಲ ಬಾರಿಗೆ ಹೋಬಳಿ ಘಟಕದಿಂದ ಆಟಿ ಊಟ ಆಯೋಜಿಸಲ್ಪಟ್ಟಿದೆ ಎಂದು ತಿಳಿಸಿದರು.

ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪಟ್ಟಡ ಪೂವಣ್ಣ, ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಹ್ಮಣಿ, ಆಡಳಿತ ಮಂಡಳಿ ನಿರ್ದೇಶಕರಾದ ಎ.ಎಂ.ಶೈಲಾ, ನಂದೇಟಿರ ರಾಜಾ ಮಾದಪ್ಪ, ಸುಶೀಲ ಸುಬ್ರಹ್ಮಣಿ, ಪ್ರೌಡಶಾಲೆ ಮುಖ್ಯ ಶಿಕ್ಷಕಿ ಎ.ಎಸ್.ರಶ್ಮಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ.ದೇವಕಿ, ಜಿಲ್ಲಾ ಜಾನಪದ ಪರಿಷತ್ ಖಜಾಂಜಿ ಎಸ್.ಎಸ್.ಸಂಪತ್ ಕುಮಾರ್, ಉಪಾಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಮೂರ್ನಾಡು ಹೋಬಳಿ ಘಟಕದ ಗೌರವಾಧ್ಯಕ್ಷ ಕಿಗ್ಗಾಲು ಗಿರೀಶ್, ವಿದ್ಯಾಸಂಸ್ಥೆಯ ಶಿಕ್ಷಕ, ಶಿಕ್ಷಕಿಯರು, ಜಾನಪದ ಪರಿಷತ್ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Translate »