ಶಿಕ್ಷಣಕ್ಕೆ ಆದ್ಯತೆಯಿಂದ ಸಮುದಾಯದ ಪ್ರಗತಿ ಸಾಧ್ಯ
ಕೊಡಗು

ಶಿಕ್ಷಣಕ್ಕೆ ಆದ್ಯತೆಯಿಂದ ಸಮುದಾಯದ ಪ್ರಗತಿ ಸಾಧ್ಯ

August 6, 2018

ವಿರಾಜಪೇಟೆ: ಕೊಡಗು ಮುಸ್ಲಿಂ ಸಂಘಟನೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ನಿಟ್ಟಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿ ವೇತನ ವಿತರಣೆ ಯೊಂದಿಗೆ ಗೌರವ ಸಲ್ಲಿಸುತ್ತಿರುವುದ ರಿಂದ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದು ವರೆಯಲು ಸಾಧ್ಯವಗಲಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಪಟ್ಟಣದ ಕಾವೇರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ, ಕೆಎಂಎ ವಿದ್ಯಾರ್ಥಿ ವೇತನ ಮತ್ತು ಪ್ರತಿಭಾ ಪುರಸ್ಕಾರ ಪ್ರಶಸ್ತಿ ವಿತ ರಣಾ ಸಮಾರಂಭದಲ್ಲಿ ಮಾತನಾಡಿದ ಕೆ.ಜಿ.ಬೋಪಯ್ಯ, ಕೊಡಗಿನ ಮುಸ್ಲಿಂ ಬಾಂಧವರು ಹಿಂದಿನಿಂದಲೂ ತನ್ನದೇ ಆದ ನೆಲೆಗಟ್ಟಿನಲ್ಲಿ ಕೃಷಿಯ ಜೊತೆಯಲ್ಲಿ ಹಿರಿಯ ಪೂರ್ವಜರ ಆಚಾರ ವಿಚಾರ ವನ್ನು ಉಳಿಸಿಕೊಂಡು ಬಂದಿದ್ದಾರೆ. ಯಾವುದೇ ಸಮುದಾಯ ಬೆಳವಣಿಗೆಯ ಪ್ರಗತಿಯನ್ನು ಕಾಣಬೇಕಾದರೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಇದರಿಂದ ಸಮುದಾಯದ ಮುನ್ನಡೆ ಸಾಧ್ಯ. ಸಂಘಟನೆ ಸೇವಾ ಮನೋಭಾವದಿಂದ ಶಿಕ್ಷಣಕ್ಕೆ ಸಹಾಯ ಹಸ್ತ ನೀಡಿ ಮಾದರಿಯಾಗಿರುವುದರಿಂದ ಮುಂದೆ ಈ ಸಂಘಟನೆ ಸರ್ವತೋ ಮುಖದ ಪ್ರಗತಿ ಬೆಳವಣಿಗೆಯಿಂದ ರಾಜ್ಯಕ್ಕೆ ಮಾದರಿಯಾಗಲಿದೆ ಎಂದರು.

ಮಾಜಿ ಸಚಿವ, ಹಿರಿಯ ರಾಜಕೀಯ ಮುತ್ಸದ್ಧಿ ಎಂ.ಸಿ.ನಾಣಯ್ಯ ಮಾತನಾಡಿ, ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ವಿದ್ಯೆಯಲ್ಲಿ ಸಾಧನೆ ಮಾಡಿರುವುದನ್ನು ಅವಲೋಕಿಸಿದಾಗ ವಿದ್ಯೆಯಲ್ಲಿ ಗಂಡು ಮಕ್ಕಳನ್ನು ಮೀರಿಸಿದಂತಿದೆ. ಮುಸ್ಲಿಂ ಅಸೋಸಿಯೇಶನ್ ಹೆಣ್ಣು ಮಕ್ಕಳಿಗೆ ಪ್ರೋತ್ಸಹ ನೀಡುತ್ತಿರುವುದು ಪ್ರಶಂಸನೀಯ. ಜಾತೀಯ ಕಂದಕದಿಂದ ಮನುಷ್ಯ ಹೊರಬಂದರೆ ಸುಖಿ ಬಾಳ್ವೇ ನಡೆಸಲು ಸಾಧ್ಯ. ದೇವರ ನಾಮ ಬೇರೇ ಬೇರೆ ಯಾದರೂ ಧರ್ಮ ಎಂಬುದು ಎಲ್ಲರಿಗೂ ಒಂದೇ. ಇದರಲ್ಲಿ ಅವರವರ ಪದ್ಧತಿ ಆಚಾರ ವಿಚಾರವೂ ಬೇರೆಯಾಗಿದೆ.

ಸಮಾಜದಲ್ಲಿ ಜಾತ್ಯಾತೀತ ಮನೋಭಾ ವನೆ ಬೆಳೆದರೆ ಮಾತ್ರ ವಿಶ್ವ ಮಾನವ ನಾಗಲು ಸಾಧ್ಯ ಎಂದರು. ಲೇಖಕರು, ಕೊಡಗಿನ ಸಾಹಿತಿ ಹಾಗೂ ಕೊಡಗು ಬ್ಯಾರೀಸ್ ವೆಲ್ಪೇರ್ ಟ್ರಸ್ಟ್‍ನ ಅಧ್ಯಕ್ಷ ಜ.ಬಿ.ಎ.ಷಂಶುದ್ದೀನ್ ದಿಕ್ಸೂಚಿ ಭಾಷಣ ಮಾಡಿ, ನಾವುಗಳು ಹೆಚ್ಚು ಸುಶಿಕ್ಷಿತರಾದಂತೆ ಧರ್ಮದ ಹೆಸರಿನಲ್ಲಿ ಜನಾಂಗದ ಹೆಸರಿನಲ್ಲಿ ಹೊಡೆದಾಡುವುದು ಬಡಿದಾಡು ವುದು ಸಾಮಾನ್ಯವಾಗಿದೆ. ದಶಕದ ಹಿಂದಿನ ಶಿಕ್ಷಣ ಮಾನವೀಯವಾಗಿ ಬೆಳ ಕನ್ನು ತೋರಿಸಿದರೂ, ಇಂದಿನ ಹೆಚ್ಚಿನ ಶಿಕ್ಷಣದಿಂದ ಸಮಾಜ ಜಾತೀಯ ದ್ವೇಷ ದಿಂದ ಪರಸ್ಪರ ಪ್ರೀತಿ ಸಹಕಾರವನ್ನು ಕಳೆದುಕೊಳ್ಳುತ್ತಿದೆ. ಇಂದಿನ ಯಾವ ಸಂಸ್ಥೆಯಲ್ಲಿಯೂ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಿಕ್ಷಣ ದೊರೆಯುತ್ತಿಲ್ಲ. ಶಿಕ್ಷಣ ಎಂದರೆ ಒಬ್ಬ ಮನುಷ್ಯನನ್ನು ಮಾನ ವೀಯವಾಗಿ ಬದುಕು ರೂಪಿಸುವ ವಸ್ತುವಾಗಬೇಕು. ತನ್ನ ಬದುಕನ್ನು ಶಾಂತಿಯ ಸಮಾಜಕ್ಕಾಗಿ ಮೀಸಲಿರಿಸುವ ಶಿಕ್ಷಣ ದೊರೆತರೆ ಮಾತ್ರ ಸಮಾಜದ ಪ್ರತಿಯೊಬ್ಬರು ಪರಸ್ಪರ ಶಾಂತಿಯಿಂದ ಬದುಕನ್ನು ಸಾಗಿಸಬಹುದು ಎಂದರು.

ಮುಸ್ಲಿಂ ಸಮುದಾಯದ ಪದ್ಧತಿಯ ದಫ್ ಬಾರಿಸಿ ಸಮಾರಂಭವನ್ನು ಉದ್ಘಾಟಿಸಿದ ರಾಜ್ಯ ಪ್ರಶಸ್ತಿ ವಿಜೇತ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯ ಕಿಕ್ಕರೆರ ಎ. ಉಮ್ಮರ್ ಮಾತನಾಡಿ, ಶಿಕ್ಷಣ ಎಂದರೆ ಮಾನವ ನನ್ನು ಕತ್ತಲೆಯಿಂದ ಬೆಳಕಿನೆಡೆಗೊಯ್ಯುವ ವಸ್ತುವಾಗಿದ್ದು, ಶಿಕ್ಷಣ ಮಗುವಿನಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹೊಮ್ಮಿ ಸುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೊಡವ ಮುಸ್ಲಿಂ ಅಸೋಸಿಯೇಶನ್ ಅಧ್ಯಕ್ಷ ಜ.ದುದ್ದಿಯಂಡ ಎಚ್.ಸೂಫಿ ಹಾಜಿ ಪ್ರಾಸ್ತಾವಿಕವಾಗಿ ಮಾತ ನಾಡಿ, ಸಂಘಟನೆ ಸಮಾಜ ಸೇವೆಯಾಗಿ ಪ್ರತಿ ವರ್ಷ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ವಿದ್ಯಾರ್ಥಿ ವೇತನದೊಂದಿಗೆ ಗೌರವಿಸುತ್ತದೆ. ಸಮುದಾಯದ ಬಡ ಮಕ್ಕಳು ವಿದ್ಯೆಯಲ್ಲಿ ಮುಂದುವರೆಯ ಬೇಕೆಂದು ಸಂಘಟನೆ ಸಹಾಯಹಸ್ತ ನೀಡುತ್ತಿದೆ. ಇದಕ್ಕೆ ಸಮುದಾಯದ ಪ್ರಮು ಖರು ಸಹಾಯ ನೀಡುತ್ತಿದ್ದಾರೆ. ದಾನಿಗಳ ಸಹಕಾರವನ್ನು ಈ ಸಂದರ್ಭದಲ್ಲಿ ಸಂಘ ಟನೆ ಸ್ಮರಿಸುವುದಾಗಿ ಹೇಳಿದರು. ಕೊಡವ ಮುಸ್ಲಿಂ ಅಸೋಸಿಯೇಶನ್‍ನ ಸ್ಥಾಪಕ ಅಧ್ಯಕ್ಷ ಕುವೇಂಡ ವೈ ಹಂಝುತುಲ್ಲಾ ಮಾತ ನಾಡಿ, 40 ವರ್ಷಗಳಿಂದಲೂ ಸಂಘಟನೆ ಮುಸ್ಲಿಂ ಸಮುದಾಯಕ್ಕೆ ಸಲ್ಲಿಸುತ್ತಿರುವ ಸೇವೆ ಕುರಿತು ವಿವರಿಸಿದರು.

ಸಮಾರಂಭದಲ್ಲಿ ಶಾಸಕ ಕೆ.ಜಿ.ಬೋಪಯ್ಯ, ಮಾಜಿ ಸಚಿವ ಎಂ.ಸಿ.ನಾಣಯ್ಯ, ಕೇಂದ್ರ ಪೊಲೀಸ್ ಮೀಸಲು ಪಡೆಯ ಡೆಪ್ಯುಟಿ ಕಮಾಡೆಂಟ್ ಕೂತಪಟ್ಟೀರ ಎಂ. ಹಸೈನಾರ್ ಇವರುಗಳನ್ನು ಶಾಲು ಹೊದಿಸಿ ಸನ್ಮಾನಿಸ ಲಾಯಿತು. ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾ ರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಇ.ಸಿ.ಜೀವನ್ ಉಪಸ್ಥಿತರಿದ್ದರು. ಇದೇ ವೇಳೆ ಪ್ರತಿಭಾವಂತ ಸುಮಾರು 30 ವಿದ್ಯಾರ್ಥಿಗಳಿಗೆ ತಲಾ ರೂ 10,000 ದಂತೆ ವಿದ್ಯಾರ್ಥಿ ವೇತನ ವಿತರಿಸಲಾ ಯಿತು. ಸಂಘಟನೆಯ ಉಪಾಧ್ಯಕ್ಷ ಡಾ: ಜೆ.ಪಿ.ಕುಂಞ ಅಬ್ದುಲ್ಲಾ ಸ್ವಾಗತಿಸಿದರು. ಸಂಘಟನೆಯ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ನಿರೂಪಿಸಿದರು. ಸಂಘಟನೆಯ ಮಿತಲ ತಂಡ ಇಸ್ಮಾಯಿಲ್ ವಂದಿಸಿದರು.

Translate »