ಜೂನಿಯರ್ ಕಾಲೇಜಿನಲ್ಲಿ ಕಳ್ಳತನಕ್ಕೆ ಯತ್ನ
ಕೊಡಗು

ಜೂನಿಯರ್ ಕಾಲೇಜಿನಲ್ಲಿ ಕಳ್ಳತನಕ್ಕೆ ಯತ್ನ

August 6, 2018

ಮಡಿಕೇರಿ:  ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಬೀಗ ಮುರಿದು ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ನಡೆದಿದೆ.
ಶನಿವಾರ ರಾತ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂರು ಕೊಠಡಿಗಳ ಬೀಗ ತುಂಡರಿಸಿ ಒಳನುಗ್ಗಿರುವ ಕಳ್ಳರು ಹಣಕ್ಕಾಗಿ ಶೋಧ ನಡೆಸಿರುವುದು ಕಂಡು ಬಂದಿದೆ. ಪ್ರಾಚಾರ್ಯರ ಕೊಠಡಿ, ಅಧ್ಯಾಪಕರ ಕೊಠಡಿ ಮತ್ತು ಕಾರ್ಯಾಗಾರ ಕೊಠಡಿಯ ಬೀಗವನ್ನು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ.

ಭಾನುವಾರ ಬೆಳಗ್ಗೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಕೊಠಡಿಗಳಲ್ಲಿ ಪೊಲೀಸ್ ಇಲಾಖೆಯ ಪರೀಕ್ಷೆ ನಡೆಯುವ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಡಿವೈಎಸ್‍ಪಿ ಸುಂದರ್‍ರಾಜ್, ವೃತ್ತ ನಿರೀಕ್ಷಕ ಮೇದಪ್ಪ, ಠಾಣಾಧಿಕಾರಿ ಷಣ್ಮುಗ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.

Translate »