Tag: Kodagu

ಕೊಡಗಲ್ಲಿ ಮುಂದುವರೆದ ಮಳೆ ಆರ್ಭಟ
ಕೊಡಗು

ಕೊಡಗಲ್ಲಿ ಮುಂದುವರೆದ ಮಳೆ ಆರ್ಭಟ

July 11, 2018

ಐದನೇ ಬಾರಿಗೆ ತ್ರಿವೇಣಿ ಸಂಗಮ ಜಲಾವೃತ್ತ ಅಲ್ಲಲ್ಲಿ ಭೂ ಕುಸಿತ ಇಂದು ಶಾಲಾ-ಕಾಲೇಜಿಗೆ ರಜೆ ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಸ್ಥಿತಿಗೆ ತಲುಪಿದೆ. ಕಾವೇರಿ, ಲಕ್ಷ್ಮಣ ತೀರ್ಥ ರಾಮ ನದಿಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಭೂ ಕುಸಿತ ಉಂಟಾಗಿದೆ. ಕಾಲೇಜು ಕಟ್ಟಡಕ್ಕೆ ಹೊಂದಿ ಕೊಂಡಂತೆ ಬರೆ ಕುಸಿದ ಪರಿಣಾಮ, ಕಾಲೇಜು ಕಟ್ಟಡ ಅಪಾಯಕ್ಕೆ ಸಿಲುಕಿದೆ….

ಕೊಡಗು ಜಿಲ್ಲೆಯ ಮಳೆ ವಿವರ
ಕೊಡಗು

ಕೊಡಗು ಜಿಲ್ಲೆಯ ಮಳೆ ವಿವರ

July 11, 2018

ಮಡಿಕೇರಿ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ ಮಳೆ 78.96 ಮಿ.ಮೀ. ಕಳೆದ ವರ್ಷ ಇದೇ ದಿನ 3.74 ಮಿ.ಮೀ., ಜನವರಿಯಿಂದ ಇಲ್ಲಿಯವರೆಗಿನ ಮಳೆ 1681.38 ಮಿ.ಮೀ, ಕಳೆದ ವರ್ಷ ಇದೇ ಅವಧಿಯಲ್ಲಿ 815.65 ಮಿ.ಮೀ ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಇಂದಿನ ಸರಾಸರಿ ಮಳೆ 104.40 ಮಿ.ಮೀ. ಕಳೆದ ವರ್ಷ ಇದೇ ದಿನ 5.85 ಮಿ.ಮೀ. ಜನವರಿಯಿಂದ ಇಲ್ಲಿಯವರೆಗಿನ ಮಳೆ 2338.55 ಮಿ.ಮೀ,…

ವರುಣನ ಆರ್ಭಟಕ್ಕೆ ತತ್ತರಿಸಿದ ಕೊಡಗು
ಕೊಡಗು

ವರುಣನ ಆರ್ಭಟಕ್ಕೆ ತತ್ತರಿಸಿದ ಕೊಡಗು

July 10, 2018

ಮಡಿಕೇರಿ: ಪುನರ್ವಸು ಮಳೆಯ ಆರ್ಭಟಕ್ಕೆ ಮಡಿಕೇರಿ ನಗರ ತತ್ತರಿಸಿದ್ದು, ನಗರ ವ್ಯಾಪ್ತಿಯಲ್ಲಿ ಮೂರು ಮನೆಗಳು ಕುಸಿದು ಬಿದ್ದಿವೆ. ಮಡಿಕೇರಿಯ ತ್ಯಾಗರಾಜ ಕಾಲೋನಿ, ಗದ್ದುಗೆ ಹಿಂಭಾಗ ಸೋಮವಾರ ಬೆಳಗಿನ ಜಾವ ಸುಮಾರು 1.30 ರ ಸಮಯದಲ್ಲಿ ಮನೆಗಳ ಗೋಡೆ ಕುಸಿದು ಬಿದ್ದಿದ್ದು, ಮನೆಯೊಳಗಿದ್ದವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗದ್ದುಗೆಯ ನಿವಾಸಿಗಳಾದ ಸುನೀತಾ, ಅಬೂಬ ಕ್ಕರ್ ಎಂಬುವರಿಗೆ ಸೇರಿದ ಮನೆಗಳು ಕುಸಿದು ಬಿದ್ದಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಹೊಲಿಗೆ ಯಂತ್ರಗಳನ್ನೇ ನಂಬಿಕೊಂಡು ಬದುಕು ತ್ತಿದ್ದ ಸುನೀತಾ…

ಕೊಡಗಿನಲ್ಲಿ ಮುಂದುವರೆದ ಮಳೆಯ ಆರ್ಭಟ
ಕೊಡಗು

ಕೊಡಗಿನಲ್ಲಿ ಮುಂದುವರೆದ ಮಳೆಯ ಆರ್ಭಟ

July 9, 2018

ಇಂದು ಶಾಲಾ ಕಾಲೇಜಿಗೆ ರಜೆ ಕರಿಕೆ ಬಳಿ ಕೊಚ್ಚಿ ಹೋದ ತೂಗು ಸೇತುವೆ ಮಡಿಕೇರಿ:  ಕೊಡಗು ಜಿಲ್ಲೆಯಾದ್ಯಂತ ಪುನರ್ವಸು ಮಳೆಯ ಆರ್ಭಟ ಮುಂದುವರೆದಿದ್ದು, ಮಳೆ ಯಿಂದ ಕೊಡಗು ಜಿಲ್ಲೆ ತತ್ತರಿಸಿದೆ. ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಪ್ರತಿ ಕೂಲ ಪರಿಣಾಮ ಉಂಟಾಗಿದ್ದು, ವಿದ್ಯುತ್ ಪೂರೈಕೆ ಸ್ಥಗಿತದಿಂದ ಗ್ರಾಮೀಣ ಭಾಗದ ನಿವಾಸಿಗಳು ತೊಂದರೆ ಅನುಭವಿಸು ವಂತಾಗಿದೆ. ಜಿಲ್ಲೆಯಾದ್ಯಂತ ಮಳೆ ಜೋರಾಗಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜಿಗೆ ನಾಳೆ (ಜು.9) ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. ಕರಿಕೆ ಬಳಿ ಹೊಳೆಯೊಂದಕ್ಕೆ ಗ್ರಾಮಸ್ಥರು ನಿರ್ಮಿಸಿದ್ದ ತೂಗು ಸೇತುವೆ…

ಸಾಲ ಮನ್ನಾ ಕಾಫಿ ಬೆಳೆಗಾರರಿಗೆ ಕಹಿ!
ಕೊಡಗು

ಸಾಲ ಮನ್ನಾ ಕಾಫಿ ಬೆಳೆಗಾರರಿಗೆ ಕಹಿ!

July 8, 2018

ಕೊಡಗಿನ ಡಿಸಿಸಿ ಬ್ಯಾಂಕ್ ವ್ಯಾಪ್ತಿಯ ಕೇವಲ 168 ಬೆಳೆಗಾರರಿಗೆ ಮಾತ್ರ ಸಾಲ ಮನ್ನಾ ಸೌಲಭ್ಯ ಸಹಕಾರ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುವ 35 ಸಾವಿರ ಬೆಳೆಗಾರರು ಸೌಲಭ್ಯ ವಂಚಿತರು ಅವಿಭಕ್ತ ಕುಟುಂಬದ ರೈತರಿಗೆ ಸೌಲಭ್ಯ ಗಗನ ಕುಸುಮ ಮಡಿಕೇರಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್ ನಲ್ಲಿ ರಾಜ್ಯದ ರೈತರಿಗೆ 34 ಸಾವಿರ ಕೋಟಿ ರೂ. ಸುಸ್ತಿ ಸಾಲ ಮನ್ನಾ ಮಾಡು ವುದಾಗಿ ಘೋಷಿಸಿದ್ದಾರೆ. ಈ ಸಾಲ ಮನ್ನಾ ಕಾಫಿ ಬೆಳೆಗಾರರಿಗೂ ಅನ್ವಯಿಸು ತ್ತದೆಯಾದರೂ, ಸಹಕಾರಿ ಬ್ಯಾಂಕ್‍ಗಳಲ್ಲಿ ಸಾಲ…

ಕಾರು-ಬಸ್ ಮುಖಾಮುಖಿ ಡಿಕ್ಕಿ: ಕೊಡಗಿನ ನಾಲ್ವರು ಗಂಭೀರ
ಕೊಡಗು

ಕಾರು-ಬಸ್ ಮುಖಾಮುಖಿ ಡಿಕ್ಕಿ: ಕೊಡಗಿನ ನಾಲ್ವರು ಗಂಭೀರ

July 7, 2018

ನಾಪೋಕ್ಲು: ಸಕಲೇಶಪುರ ಸಮೀಪ ಅಳಂದೂರು ಎಂಬಲ್ಲಿ ಕಾರು ಮತ್ತು ಬಸ್ಸು ಮುಖಾಮುಖಿ ಡಿಕ್ಕಿಯಾಗಿ ಕೊಡಗಿನ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಚೆಯ್ಯಂಡಾಣೆ ನರಿಯಂದಡ ಗ್ರಾಮದ ತೋಟಂಬೈಲು ಕುಮಾರ್ ಅವರ ಸಂಬಂಧಿಕರು ಚಿಕ್ಕಮಗಳೂರಿನಲ್ಲಿ ನೆಲೆಸಿದ್ದು ಇತ್ತೀಚೆಗೆ ಅಪಘಾತವೊಂದರಲ್ಲಿ ಅವಘಡಕ್ಕೀಡಾಗಿ ವಿಶ್ರಾಂತಿ ಪಡೆಯುತ್ತಿದ್ದರು. ಅವರ ಯೋಗಕ್ಷೇಮ ವಿಚಾರಿಸಲು ಕುಮಾರ್ ತಮ್ಮ ಕಾರಿನಲ್ಲಿ ಪತ್ನಿ ,ತಂಗಿ ಹಾಗೂ ಪತ್ನಿಯ ಅಕ್ಕ ಅವರೊಂದಿಗೆ ತೆರಳುವ ಸಂದರ್ಭ ಈ ಘಟನೆ ನಡೆದಿದೆ. ಅಳಂದೂರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಡೆಸಿದ…

ಬಜೆಟ್‍ನಲ್ಲಿ ಕೊಡಗಿಗೆ ಶೂನ್ಯ ಕೊಡುಗೆ
ಕೊಡಗು

ಬಜೆಟ್‍ನಲ್ಲಿ ಕೊಡಗಿಗೆ ಶೂನ್ಯ ಕೊಡುಗೆ

July 6, 2018

ಮಡಿಕೇರಿ:  ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಚೊಚ್ಚಲ ಬಜೆಟ್ ಮಂಡನೆ ಯಾಗಿದೆ. ಈ ಬಾರಿಯ ಬಜೆಟ್‍ನಲ್ಲಿ ಕಾಫಿ, ಕರಿಮೆಣಸು ಸೇರಿದಂತೆ ಆರ್ಥಿಕ ಬೆಳೆಗಳನ್ನು ನಂಬಿಕೊಂಡಿರುವ ಜಿಲ್ಲೆಯ ಕೃಷಿಕರು, ಸಾಲಮನ್ನಾ, ಕೃಷಿಭಾಗ್ಯ, ಕಾಡಾನೆ ಹಾವಳಿ ಸಮಸ್ಯೆ ಪರಿಹಾರ, ಬೆಳೆಹಾನಿ ಪರಿಹಾರ ಹೆಚ್ಚಳ ಸೇರಿದಂತೆ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಬಜೆಟ್ ನಲ್ಲಿ ಅನುದಾನ ಮೀಸಲಿಡುವ ಕುರಿತು ಆಶಾಭಾವನೆ ಹೊಂದಿದ್ದರು. ವಿಶೇಷವಾಗಿ ಈ ಹಿಂದಿನ ಸರ್ಕಾರ ದಂತೆ ಜಿಲ್ಲೆಯ ರಸ್ತೆಗಳ ಅಭಿವೃದ್ದಿಗೆ ವಿಶೇಷ ಪ್ಯಾಕೇಜ್ ಘೋಷಿಸುವ ಸಾಧ್ಯತೆ ಇದೆ…

ಕಾಫಿ ಬೆಳೆಗಾರರ ಸಾಲಮನ್ನಾ ಮಾಡದಿದ್ದರೆ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ
ಕೊಡಗು

ಕಾಫಿ ಬೆಳೆಗಾರರ ಸಾಲಮನ್ನಾ ಮಾಡದಿದ್ದರೆ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ

July 4, 2018

ನಾಪೋಕ್ಲು:  ಕೊಡಗು ಜಿಲ್ಲೆಯ ಕಾಫಿ ಬೆಳೆಗಾರರ ಸಾಲ ಮನ್ನಾ ಮಾಡ ದಿದ್ದರೆ ಕೊಡಗು ಜಿಲ್ಲೆಯ ಎಲ್ಲಾ ಸಂಘ-ಸಂಸ್ಥೆಗಳ ಬೆಳೆಗಾರರ ಸಹಕಾರದಿಂದ ಪಕ್ಷಬೇಧವಿಲ್ಲದೆ ಕೊಡಗು ಪ್ರತ್ಯೇಕ ರಾಜ್ಯಕ್ಕಾಗಿ ಉಗ್ರ ಹೋರಾಟ ನಡೆಸಬೇಕಾದೀತು ಎಂದು ನಾಪೋಕ್ಲು ವಿಭಾಗದ ಕಾಫಿ ಬೆಳೆಗಾರರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎನ್.ಎಸ್. ಉದಯ ಶಂಕರ್, ಕೆ.ಪಿ.ರಮೇಶ್ ಮುದ್ದಯ್ಯ, ಬಿ.ಸಿ. ಜಿನ್ನು ನಾಣಯ್ಯ. ಎಂ.ಎ. ಮನ್ಸೂರ್ ಆಲಿ ಅವರು ಕೊಡಗು ಜಿಲ್ಲೆಯಲ್ಲಿ ಕಾಫಿ ಬೆಳೆಯು ಪ್ರಮುಖ ಬೆಳೆಯಾಗಿದ್ದು ಜಿಲ್ಲೆಯ ರೈತರು…

ಕೊಡಗಿನ ಯುವ ಜನತೆಗೆ ವೈದ್ಯಕೀಯ ಶಿಕ್ಷಣ ಪಡೆಯಲು ಸಲಹೆ
ಕೊಡಗು

ಕೊಡಗಿನ ಯುವ ಜನತೆಗೆ ವೈದ್ಯಕೀಯ ಶಿಕ್ಷಣ ಪಡೆಯಲು ಸಲಹೆ

July 3, 2018

ಮಡಿಕೇರಿ:  ಕೊಡಗಿನ ಯುವ ಪೀಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ವಹಿಸುವಂತೆ ಇಲ್ಲಿನ ಸರ್ಕಾರಿ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಲಹೆ ಮಾಡಿದೆ. ಮಡಿಕೇರಿಯ ಹೊರ ವಲಯದಲ್ಲಿ ರುವ ವಿಶಾಲ ಬೆಟ್ಟ ಶ್ರೇಣಿಯ ನಡುವೆ ಕರ್ಣಂಗೇರಿ ಗ್ರಾಮದ ಪ್ರಕೃತಿ ರಮಣೀಯ ಸೊಬಗಿನ ಪ್ರದೇಶದಲ್ಲಿ ನಾಲ್ಕು ವರ್ಷದ ಹಿಂದೆ ನಿರ್ಮಾಣಗೊಂಡಿರುವ ಸರ್ಕಾರಿ ವೈದ್ಯಕೀಯ ವಿಜ್ಞಾನ ಶಿಕ್ಷಣ ಸಂಸ್ಥೆಯು ತನ್ನ ಎರಡು ಶೈಕ್ಷಣಿಕ ವರ್ಷಗಳನ್ನು ಪೂರೈಸಿರುವ ಸಂದರ್ಭ ದಲ್ಲಿ ಈ ಸಲಹೆ ಮಾಡಿದೆ. ಕರ್ಣಂಗೇರಿ ಗ್ರಾಮದ ಈ…

ಕೊಡಗು ಮಾರ್ಗ ತಲಚೇರಿ-ಮೈಸೂರು ರೈಲ್ವೆ ಮಾರ್ಗ ವಿರೋಧ ಲೆಕ್ಕಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದ ಕೇರಳ
ಮೈಸೂರು

ಕೊಡಗು ಮಾರ್ಗ ತಲಚೇರಿ-ಮೈಸೂರು ರೈಲ್ವೆ ಮಾರ್ಗ ವಿರೋಧ ಲೆಕ್ಕಿಸದೆ ಯೋಜನೆ ಅನುಷ್ಠಾನಕ್ಕೆ ಮುಂದಾದ ಕೇರಳ

June 30, 2018

ನಾಳೆ ತಿರುವನಂತಪುರಂನಲ್ಲಿ ಟೆಕ್ನಿಕಲ್ ಬಿಡ್ ಓಪನ್ ಡಿಪಿಆರ್ ತಯಾರಿಸಲು ವಿದೇಶಿ ಕಂಪನಿಗಳ ಆಸಕ್ತಿ ಮೈಸೂರು: ಕೊಡಗು ಮತ್ತು ಮೈಸೂರು ಜನತೆ, ಜನಪ್ರತಿನಿಧಿಗಳು, ಪರಿಸರವಾದಿಗಳ ತೀವ್ರ ವಿರೋಧದ ನಡುವೆಯೂ ಕೇರಳ ಸರ್ಕಾರವು ದಕ್ಷಿಣ ಕೊಡಗಿನ ವನಸಿರಿ ನಾಶಪಡಿಸಿ ಮೈಸೂರು-ತಲಚೇರಿ ರೈಲು ಮಾರ್ಗ ಯೋಜನೆಗೆ ಡಿಪಿಆರ್ ತಯಾರಿಸಲು ಮುಂದಾಗಿದೆ. ಕೇವಲ ಕೇರಳ ರಾಜ್ಯಕ್ಕೆ ಮಾತ್ರ ಅನುಕೂಲವಾಗುವ ಈ ಯೋಜನೆಗೆ ಸಮಗ್ರ ಯೋಜನಾ ವರದಿ (DPR) ತಯಾರಿಸಲು ಹಲವು ವಿದೇಶಿ ಕಂಪನಿಗಳು ಆಸಕ್ತಿ ತೋರಿಸಿವೆ. ತಿರುವನಂತಪುರಂನಲ್ಲಿ ನಾಳೆ (ಜೂ.29) ತಾಂತ್ರಿಕ ಬಿಡ್…

1 77 78 79 80 81 84
Translate »