Tag: Mandya

ಕೆವಿಎಸ್ ಸಾಧನೆ ಅವಿಸ್ಮರಣೀಯ: ಜಿಟಿಡಿ
ಮಂಡ್ಯ

ಕೆವಿಎಸ್ ಸಾಧನೆ ಅವಿಸ್ಮರಣೀಯ: ಜಿಟಿಡಿ

July 22, 2018

ಮಂಡ್ಯ: ನಿತ್ಯ ಸಚಿವರೆಂದು ಬಿರುದು ಪಡೆದುಕೊಂಡಿರುವ ಕೆ.ವಿ. ಶಂಕರೇಗೌಡರ ಸಾಧನೆ ಅವಿಸ್ಮರಣೀಯ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು. ನಗರದ ಕರ್ನಾಟಕ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ವಿ.ಶಂಕರೇಗೌಡ ಶತಮಾನೋತ್ಸವ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೆ.ವಿ.ಶಂಕರ ಗೌಡರ ಆದರ್ಶ, ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಕೆಲಸ ಮಾಡ ಲಿದೆ ಎಂಬ ನಂಬಿಕೆ ನನಗಿದೆ. ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿ ರುವುದು ಶ್ಲಾಘನೀಯ. ಕರ್ನಾಟಕ ಸಂಘದ ವತಿಯಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ಇಡಲಾಗಿರುವ…

ಮೂವರು ಜೆಸಿಬಿ ಬಿಡಿ ಭಾಗಗಳ ಕಳ್ಳರ ಬಂಧನ 36 ಲಕ್ಷ ರೂ. ಮೌಲ್ಯದ ಪರಿಕರಗಳ ವಶ
ಮಂಡ್ಯ

ಮೂವರು ಜೆಸಿಬಿ ಬಿಡಿ ಭಾಗಗಳ ಕಳ್ಳರ ಬಂಧನ 36 ಲಕ್ಷ ರೂ. ಮೌಲ್ಯದ ಪರಿಕರಗಳ ವಶ

July 22, 2018

ಮಂಡ್ಯ:  ಜೆಸಿಬಿ ಬಿಡಿ ಭಾಗಗಳನ್ನು ಕಳವು ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸುವಲ್ಲಿ ಅರಕೆರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಎಸಿ ಹೈಡ್ರಾಲಿಕ್ ರಾಕ್ ಬ್ರೇಕರ್ ಮತ್ತು ಬ್ಯಾಟರಿ ಸೇರಿದಂತೆ ಸುಮಾರು 36 ಲಕ್ಷದ 80 ಸಾವಿರ ಬೆಲೆ ಬಾಳುವ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ರಾಮನಗರ ಜಿಲ್ಲೆಯ ಕಾವೇರಿ ದೊಡ್ಡಿ ಗ್ರಾಮದ ನಿವಾಸಿ ಸಿ.ರಾಜು(29), ತಮಿಳುನಾಡು ಮೂಲದ ಪೆರುಮಾಳ್(32), ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿ ಮೊಳ್ಳೇನಹಳ್ಳಿ ಗ್ರಾಮದ ಎಂ.ಕೆ ಪ್ರದೀಪ್ ಬಂಧಿತ ಆರೋಪಿಗಳು. ಘಟನೆ ವಿವರ: ಅರಕರೆ ಸಮೀಪದ ಹಂಗರಹಳ್ಳಿ ಗ್ರಾಮದ…

ಅಂಚೆ ಬೂವನಹಳ್ಳಿಯಲ್ಲಿ 4 ಹಸುಗಳ ಕಳವು
ಮಂಡ್ಯ

ಅಂಚೆ ಬೂವನಹಳ್ಳಿಯಲ್ಲಿ 4 ಹಸುಗಳ ಕಳವು

July 22, 2018

ಮಂಡ್ಯ: ಕಳ್ಳರು ರಾತ್ರೋರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ 4 ಹಸುಗಳನ್ನು ಕಳವು ಮಾಡಿರುವ ಘಟನೆ ನಾಗಮಂಗಲ ತಾಲೂಕಿನ ಅಂಚೆ ಭೂವನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಗ್ರಾಮದ ಕೆಂಪೇಗೌಡರ ಮಗ ರಾಜಣ್ಣ ಅವರಿಗೆ ಸೇರಿದ 3 ಮತ್ತು ಚಿಕ್ಕೇಗೌಡರ ಪುತ್ರ ರಮೇಶ ಎಂಬುವರ 1 ಹಸುವನ್ನು ಕಳವು ಮಾಡಲಾಗಿದೆ. ಒಂದೊಂದು ಹಸು ತಲಾ 40 ಸಾವಿರ ಬೆಲೆ ಬಾಳಲಿದ್ದು, ಅಂದಾಜು ಒಂದೂವರೆ ಲಕ್ಷ ಮೌಲ್ಯದ ಹಸುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಶುಕ್ರವಾರ ಮಧ್ಯರಾತ್ರಿ ಮೊದಲಿಗೆ ರಾಜಣ್ಣ ಎಂಬುವವರ ಕೊಟ್ಟಿಗೆ ಬೀಗ ಮುರಿದು…

ಮುಖ್ಯಮಂತ್ರಿಗಾಗಿ 7 ಗಂಟೆಗಳ ಕಾಲ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್
ಮೈಸೂರು

ಮುಖ್ಯಮಂತ್ರಿಗಾಗಿ 7 ಗಂಟೆಗಳ ಕಾಲ ಮೈಸೂರು-ಬೆಂಗಳೂರು ಹೆದ್ದಾರಿ ಬಂದ್

July 21, 2018

ಮಂಡ್ಯ: ಮಂಡ್ಯ ನಗರ ದಲ್ಲಿ ಇಂದು ಆಯೋಜಿಸಿದ್ದ ಜೆಡಿಎಸ್ ಕೃತಜ್ಞತಾ ಸಮಾವೇಶದಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಪಾಲ್ಗೊಂಡ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯನ್ನು ಬರೋಬ್ಬರಿ 7 ಗಂಟೆಗಳ ಕಾಲ ಬಂದ್ ಮಾಡಿದ ಪರಿಣಾಮ ಲಕ್ಷಾಂತರ ಮಂದಿ ಪರ ದಾಡಬೇಕಾಯಿತು. ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಸಾಂಸ್ಕೃತಿಕ ನಗರಿ ಮೈಸೂರು ನಡುವೆ ಸಾವಿರಾರು ವಾಹನಗಳು ಪ್ರತಿ ನಿತ್ಯ ಸಂಚರಿಸುತ್ತಿದ್ದು, ಲಕ್ಷಾಂತರ ಮಂದಿ ಪ್ರಯಾಣಿಸುತ್ತಾರೆ. ಇಂದಿನ ಹೆದ್ದಾರಿ ಬಂದ್‍ನಿಂದಾಗಿ ಬೆಂಗಳೂರು ಮತ್ತು ಮೈಸೂರು ನಡುವಿನ ಸಂಚಾರ ಅಸ್ತವ್ಯಸ್ಥ ಗೊಂಡು ಒಂದು ರೀತಿಯಲ್ಲಿ…

ಸಾಲಮನ್ನಾ ಯೋಜನೆ ಒಕ್ಕಲಿಗರಿಗೆ ಮಾತ್ರ ಅನ್ವಯಿಸಲ್ಲ
ಮಂಡ್ಯ

ಸಾಲಮನ್ನಾ ಯೋಜನೆ ಒಕ್ಕಲಿಗರಿಗೆ ಮಾತ್ರ ಅನ್ವಯಿಸಲ್ಲ

July 21, 2018

ರಾಜ್ಯದ ಎಲ್ಲಾ ವರ್ಗದ ರೈತರನ್ನು ಸಾಲ ಮುಕ್ತರನ್ನಾಗಿಸಲು ಬದ್ಧ ಆತ್ಮಹತ್ಯೆಗೆ ಶರಣಾಗದಿರಲು ಸಿಎಂ ಮನವಿ ಮಂಡ್ಯ: ಸಾಲ ಮನ್ನಾ ಯೋಜನೆ ಒಕ್ಕಲಿಗ ಜನಾಂಗಕ್ಕೆ ಮಾತ್ರ ಅನ್ವಯಿ ಸುವುದಿಲ್ಲ. ಎಲ್ಲಾ ವರ್ಗದ ರೈತ ರಿಗೂ ಸಲ್ಲುತ್ತದೆ. ಆದರೆ ಮಾಧ್ಯಮಗಳು ಮತ್ತು ವಿರೋಧಿಗಳು ಜನರ ದಿಕ್ಕು ತಪ್ಪಿಸುತ್ತಿ ದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜೆಡಿಎಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶ ದಲ್ಲಿ ಮಾತನಾಡಿದ ಅವರು, ಕೇವಲ ಒಕ್ಕಲಿಗರ ಸಾಲ ಮನ್ನಾ ಮಾಡಲಾಗಿದೆ ಎಂಬ…

ಗಾಳಿಗೆ ಉರುಳಿಬಿದ್ದ ಸ್ವಾಗತ ಕಮಾನು
ಮಂಡ್ಯ

ಗಾಳಿಗೆ ಉರುಳಿಬಿದ್ದ ಸ್ವಾಗತ ಕಮಾನು

July 21, 2018

ಮಂಡ್ಯ:  ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆಗಮನದ ಹಿನ್ನೆಲೆಯಲ್ಲಿ ನಗರದ ಸಂಜಯ ವೃತ್ತದ ಬಳಿಯ ಆರ್.ಪಿ ರಸ್ತೆಯಲ್ಲಿ ಸ್ವಾಗತ ಕೋರಿ ಹಾಕಲಾಗಿದ್ದ ಕಮಾನು ಗಾಳಿಗೆ ಉರುಳಿ ಬಿದ್ದ ಘಟನೆ ನಗರದಲ್ಲಿಂದು ನಡೆಯಿತು.ಇಂದು ಬೆಳಿಗ್ಗೆ 11ರ ಸುಮಾರಿನಲ್ಲಿ ಗಾಳಿಗೆ ಸ್ವಾಗತ ಕಮಾನು ಉರುಳಿ ಬಿತ್ತಾದರೂ ಸ್ಥಳದಲ್ಲಿ ಹೆಚ್ಚಿನ ಜನ ಸಂಚಾರವಿಲ್ಲ ದಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಸ್ವಾಗತ ಕಮಾನು ಉರುಳಿ ಬಿದ್ದುದನ್ನು ಕಂಡ ಸ್ಥಳದಲ್ಲಿದ್ದ ಪೊಲೀಸರು ಕುಸಿದ ಕಮಾನನ್ನು ತಕ್ಷಣವೇ ತೆರವು ಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸಿಎಂ…

ಹೆಣ್ಣು ಚಿರತೆ ಅನುಮಾನಾಸ್ಪದ ಸಾವು
ಮಂಡ್ಯ

ಹೆಣ್ಣು ಚಿರತೆ ಅನುಮಾನಾಸ್ಪದ ಸಾವು

July 21, 2018

ಮಂಡ್ಯ: ಎರಡು ವರ್ಷದ ಹೆಣ್ಣು ಚಿರತೆ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು, ವಿಷ ಪ್ರಾಸನ ಶಂಕೆ ವ್ಯಕ್ತವಾಗಿದೆ. ಮಂಡ್ಯ ತಾಲೂಕಿನ ಹೆಬ್ಬಾಕವಾಡಿ ಬಳಿ ಚಿರತೆ ಶವ ಕಬ್ಬಿನ ಗದ್ದೆ ಸಮೀಪ ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಈ ಭಾಗದಲ್ಲಿ ಇದುವರೆಗೂ ಚಿರತೆ ಹಾವಳಿಯ ಪ್ರಕರಣ ದಾಖಲಾಗಿರಲಿಲ್ಲ. ಆದರೂ ಚಿರತೆ ಶವ ಪತ್ತೆ ಆಗಿರುವುದು ಜನರ ಅನುಮಾನಕ್ಕೆ ಕಾರಣವಾಗಿದೆ. ವಿಷ ಪ್ರಾಶನ ಅನುಮಾನದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಷಾಢ ಶುಕ್ರವಾರದ ಪ್ರಯುಕ್ತ ಮದ್ದೂರಮ್ಮನಿಗೆ ವಿಶೇಷ ಪೂಜೆ
ಮಂಡ್ಯ

ಆಷಾಢ ಶುಕ್ರವಾರದ ಪ್ರಯುಕ್ತ ಮದ್ದೂರಮ್ಮನಿಗೆ ವಿಶೇಷ ಪೂಜೆ

July 21, 2018

ಮದ್ದೂರು:  ಪಟ್ಟಣದ ಶಕ್ತಿದೇವತೆ ಶ್ರೀ ಮದ್ದೂರಮ್ಮ ದೇವಾಲಯಲ್ಲಿ ಮೊದಲ ಆಷಾಢ ಶುಕ್ರವಾರದ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯ ಗಳನ್ನು ಹಮ್ಮಿಕೊಳ್ಳಲಾಗಿತ್ತು. ಮುಂಜಾನೆಯಿಂದಲೇ ದೇವಾಲಯದಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ಹೆಂಗಳೆಯರು ದೇವರಿಗೆ ಮಡಲಕ್ಕಿ ನೀಡಿ, ವಿಶೇಷ ಪೂಜೆ ಮಾಡಿಸಿ ದೇವರ ಕೃಪೆಗೆ ಪಾತ್ರರಾದರು. ಆಗಮಿಸಿದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.

ಮೈಷುಗರ್ ಆರಂಭಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ
ಮಂಡ್ಯ

ಮೈಷುಗರ್ ಆರಂಭಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

July 20, 2018

ಮಂಡ್ಯ:  ರೈತರ ಜೀವನಾಡಿ ಮೈಷುಗರ್ ಕಾರ್ಖಾನೆ ಶೀಘ್ರ ಪ್ರಾರಂಭಿ ಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯ ಕರ್ತರು ನಗರದಲ್ಲಿಂದು ಪ್ರತಿಭಟನಾ ಧರಣಿ ನಡೆಸಿದರು. ಸರ್‍ಎಂವಿ ಪ್ರತಿಮೆ ಬಳಿ ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರ್ಕಾರ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮೈಷುಗರ್ ಕಾರ್ಖಾನೆ ಶೀಘ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಬೇಕು. ಈಗಾಗಲೇ ಜಿಲ್ಲೆಯಲ್ಲಿ ಬೆಳೆ ನಷ್ಟದಿಂದ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಹೆಚ್ಚು…

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ
ಮಂಡ್ಯ

ಉಚಿತ ಬಸ್‍ಪಾಸ್‍ಗಾಗಿ ಪ್ರತಿಭಟನೆ

July 19, 2018

ಮಂಡ್ಯ: ಎಲ್ಲಾ ವಿದ್ಯಾರ್ಥಿ ಗಳಿಗೂ ಉಚಿತ ಬಸ್‍ಪಾಸ್ ಹಾಗೂ ವಿದ್ಯಾರ್ಥಿಗಳ ವಿವಿಧ ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬುಧವಾರ ಎಬಿವಿಪಿಯಿಂದ ಪ್ರತಿಭಟನೆ ನಡೆಯಿತು. ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು ಆವರಣದಿಂದ ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು ಬೆಂಗಳೂರು- ಮೈಸೂರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು. ವಿದ್ಯಾರ್ಥಿ ಮುಖಂಡ ಆರ್.ಸಂತೋಷ್ ಮಾತ ನಾಡಿ, ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರದ 2018-19ನೇ ಸಾಲಿನ ವಾರ್ಷಿಕ ಬಜೆಟ್‍ನಲ್ಲಿ ಎಸ್‍ಸಿ/ ಎಸ್‍ಟಿ ಸೇರಿದಂತೆ ರಾಜ್ಯದ…

1 40 41 42 43 44 56
Translate »