Tag: Mandya

ಉತ್ಪಾದಕರಿಗೆ ಮೋಸ: ಹೆದ್ದಾರಿಯಲ್ಲಿ ಹಾಲು ಸುರಿದು ಪ್ರತಿಭಟನೆ
ಮಂಡ್ಯ

ಉತ್ಪಾದಕರಿಗೆ ಮೋಸ: ಹೆದ್ದಾರಿಯಲ್ಲಿ ಹಾಲು ಸುರಿದು ಪ್ರತಿಭಟನೆ

July 10, 2018

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‍ಮುಲ್) ಉತ್ಪಾದಕರಿಂದ ಖರೀದಿಸಿದ ಹಾಲಿಗೆ ಕಡಿಮೆ ದರ ನೀಡಿ ವಂಚಿಸುತ್ತಿರುವ ಕ್ರಮ ಖಂಡಿಸಿ ರಸ್ತೆಗೆ ಹಾಲು ಸುರಿದು ಹಾಲು ಉತ್ಪಾದಕರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು. ಜಿಲ್ಲಾ ಹಾಲು ಉತ್ಪಾದಕರ ಹೋರಾಟ ಸಮಿತಿ ನೇತೃತ್ವದಲ್ಲಿಂದು ಬೆಳಿಗ್ಗೆ ನಗರದ ಜಯಚಾಮರಾಜೇಂದ್ರ ಸರ್ಕಲ್‍ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು, ರಸ್ತೆಗೆ 150 ಲೀ. ಹಾಲು ಸುರಿದು ಮನ್‍ಮುಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದ ರೈತ ಸಭಾಂಗಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ನಂತರ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು…

ಉಪಚುನಾವಣೆ: ಮಂಡ್ಯ ನಗರಸಭೆ `ಕೈ’ ತೆಕ್ಕೆಗೆ
ಮಂಡ್ಯ

ಉಪಚುನಾವಣೆ: ಮಂಡ್ಯ ನಗರಸಭೆ `ಕೈ’ ತೆಕ್ಕೆಗೆ

July 10, 2018

ನೂತನ ಅಧ್ಯಕ್ಷೆಯಾಗಿ ಷಹಜಹಾನ್ ಆಯ್ಕೆ, ಕಾಂಗ್ರೆಸ್‍ಗೆ ಜಯ: ಜೆಡಿಎಸ್‍ಗೆ ಭಾರೀ ಮುಖಭಂಗ ಮಂಡ್ಯ:  ಮಂಡ್ಯ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ನಡೆದ ಉಪ ಚುನಾವಣೆ ಯಲ್ಲಿ ನೂತನ ಅಧ್ಯಕ್ಷರಾಗಿ 26ನೇ ವಾರ್ಡ್‍ನ ಕಾಂಗ್ರೆಸ್ ಸದಸ್ಯೆ ಷಹಜಹಾನ್ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಹೊಸಹಳ್ಳಿ ಬೋರೇಗೌಡರ ನಿಧನದಿಂದ ತೆರವಾಗಿದ್ದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ಉಪಚುನಾವಣೆ ನಿಗದಿಯಾಗಿತ್ತು. ನಗರಸಭೆಯ ಧರಣಪ್ಪ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನಗರದ 26ನೇ ವಾರ್ಡ್‍ನ ಸದಸ್ಯೆ, ಮೂಡಾ ಅಧ್ಯಕ್ಷ ಮುನಾವರ್ ಖಾನ್ ಪತ್ನಿ ಷಹಜಹಾನ್ ಪ್ರತಿಸ್ಪರ್ಧಿ 1ನೇ ವಾರ್ಡ್‍ನ…

ಮೋಕ್ಷಕ್ಕಾಗಿ ಕುಟುಂಬ ಆತ್ಮಹತ್ಯೆಗೆ ಪ್ರಚೋದನೆ
ಮಂಡ್ಯ

ಮೋಕ್ಷಕ್ಕಾಗಿ ಕುಟುಂಬ ಆತ್ಮಹತ್ಯೆಗೆ ಪ್ರಚೋದನೆ

July 9, 2018

ಮಂಡ್ಯ:  ಮಂತ್ರವಾದಿಗಳ ಪ್ರಚೋದನೆಯಿಂದ ದೆಹಲಿಯ ಭಾಟಿಯಾ ಕುಟುಂಬದ 11 ಮಂದಿ ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಅದೇ ಮಾದರಿಯಲ್ಲಿ ಮಂಗಳಮುಖಿ ಮಂತ್ರವಾದಿಯೋರ್ವ ಮೋಕ್ಷಕ್ಕಾಗಿ ಮಹಿಳೆಯೋರ್ವಳ ಕುಟುಂಬವನ್ನು ಆತ್ಮಹತ್ಯೆಗೆ ಪ್ರಚೋದಿಸಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ಮಂಡ್ಯ ತಾಲೂಕಿನ ಮಾರಗೋಡನಹಳ್ಳಿಯ ಅನಿತಾ ಕುಟುಂಬಕ್ಕೆ ಮಂಗಳಮುಖಿ ಮಾಂತ್ರಿಕನೋರ್ವ ಮೋಕ್ಷಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ತಾನು ಬೆಳವಾಡಿಯ ಬಳಿ ಕೆಲಸದ ನಿಮಿತ್ತ ಹೋಗಿದ್ದ ವೇಳೆ ಮಂಗಳಮುಖಿ ಮಂತ್ರವಾದಿಯೋರ್ವ “ನಿನ್ನ ಸಾವಿನಿಂದ ಮಕ್ಕಳಿಗೆ ಮುಕ್ತಿ, ಮೋಕ್ಷ…

ನಾಮಕರಣಕ್ಕೆ ಹೋಗುತ್ತಿದ್ದ ಪ್ರಯಾಣಿಕರ ಕಾರು ಅಪಘಾತ
ಮಂಡ್ಯ

ನಾಮಕರಣಕ್ಕೆ ಹೋಗುತ್ತಿದ್ದ ಪ್ರಯಾಣಿಕರ ಕಾರು ಅಪಘಾತ

July 9, 2018

ಮಂಡ್ಯ: ನಾಮಕರಣಕ್ಕೆ ಹೋಗುತಿದ್ದ ಪ್ರಯಾಣಿಕರ ಕಾರು ಅಪಘಾತ ಕ್ಕೀಡಾಗಿ ಓರ್ವ ಸಾವನ್ನಪ್ಪಿ, ನಾಲ್ವರು ಗಾಯ ಗೊಂಡಿರುವ ಘಟನೆ ನಾಗಮಂಗಲ ತಾಲೂಕಿನ ಒಡೆಯರಹಳ್ಳಿ ಬಳಿ ಇಂದು ನಡೆದಿದೆ. ತುರುವೆಕೆರೆಯ ಸಂತೋಷ್ ಬಿನ್ ಮಂಜುನಾಥ್(23) ಸಾವನ್ನಪ್ಪಿದ್ದು, ವಿನೋದ್, ವಿಜಯ್ ಕುಮಾರ್, ಚೌಡೇಶ್ ಕುಮಾರ್, ನವನೀತ್ ಗಾಯಗೊಂಡಿದ್ದಾರೆ. ಘಟನೆ ಹಿನ್ನೆಲೆ: ಸಂತೋಷ್ ಅವರನ್ನೊಳ ಗೊಂಡ ಸ್ನೇಹಿತರ ತಂಡ ಕಾರ್ (ಕೆ.ಎ.06. ಡಿ.8182)ನಲ್ಲಿ ಬೆಂಗಳೂರಿನಿಂದ ಎ.ಸಿ.ಗಿರಿಗೆ ಬರುತ್ತಿದ್ದರು. ಮಾರ್ಗ ಮಧ್ಯೆ ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯ ಎನ್.ಹೆಚ್.75 ರಸ್ತೆಯಲ್ಲಿ ವಡೇರ ಹಳ್ಳಿ ಗೇಟ್…

ಶೋಕಿಗಾಗಿ ಬೈಕ್ ಕಳ್ಳತನ: ಮೂವರು ಅಪ್ರಾಪ್ತರ ಬಂಧನ
ಮಂಡ್ಯ

ಶೋಕಿಗಾಗಿ ಬೈಕ್ ಕಳ್ಳತನ: ಮೂವರು ಅಪ್ರಾಪ್ತರ ಬಂಧನ

July 9, 2018

ಮಂಡ್ಯ:  ಶೋಕಿಗಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಮೂವರು ಅಪ್ರಾಪ್ತ ಬಾಲಕರನ್ನು ಪಾಂಡವಪುರ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಸುಮಾರು 10 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಹಲವು ದಿನಗಳಿಂದ ಪಾಂಡವಪುರ ಸೇರಿದಂತೆ ಸುತ್ತಮುತ್ತಲಿನಲ್ಲಿ ಬೈಕ್ ಕಳವು ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಎಂ.ಕೆ.ದೀಪಕ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಈ ತನಿಖಾ ತಂಡಕ್ಕೆ ಜು.4 ರಂದು ಸಿಕ್ಕಿಬಿದ್ದ ಕಾನೂನು ಸಂಘರ್ಷ ಕ್ಕೊಳಪಡುವ ಮೂವರು ಬಾಲಕರನ್ನು ವಿಚಾರಣೆಗೊಳಪಡಿಸಿದಾಗ ಬೈಕ್ ಕಳವು ಪ್ರಕರಣಗಳು ಬೆಳಕಿಗೆ ಬಂದಿದೆ. ಪಾಂಡವ ಪುರ ಟಿಎಪಿಸಿಎಂಎಸ್ ಕಲ್ಯಾಣ ಮಂಟಪ ಬಳಿ 2, ಬಿಜಿಎಸ್…

ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ
ಮಂಡ್ಯ

ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ

July 8, 2018

ಮಂಡ್ಯ: 2018ರ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನಗೊಳಿಸಲು ಮಂಜೂರಾತಿ ನೀಡಲಾಗಿದೆ. ಇವುಗಳಲ್ಲಿ ತಾಲೂಕುವಾರು ಮುಖ್ಯ ಬೆಳೆಗಳನ್ನು ಗ್ರಾಪಂ ಮಟ್ಟಕ್ಕೆ ಮತ್ತು ಇತರೆ ಬೆಳೆಗಳನ್ನು ಹೋಬಳಿ ಮಟ್ಟಕ್ಕೆ ಅಧಿಸೂಚಿಸಿ ಅನುಷ್ಠಾನ ಗೊಳಿಸಲು ಮಂಜೂರಾತಿ ನೀಡಲಾಗಿದೆ. ಗ್ರಾಪಂ: ಭತ್ತ ನೀರಾವರಿ ಬೆಳೆಗೆ ಮಂಡ್ಯ, ಮದ್ದೂರು, ಮಳವಳ್ಳಿ, ಕೆ.ಆರ್.ಪೇಟೆ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕುಗಳ ಅಧಿಸೂಚಿತ ಗ್ರಾಪಂಗಳಲ್ಲಿ, ರಾಗಿ (ಮಳೆ ಆಶ್ರಿತ) ಬೆಳೆಗೆ ನಾಗಮಂಗಲ ಮತ್ತು ಪಾಂಡವಪುರ ತಾಲೂಕುಗಳ ಅಧಿಸೂಚಿತ ಗ್ರಾಪಂಗಳಲ್ಲಿ,…

ಪ್ರೀತಿಗೆ ಪೋಷಕರ ವಿರೋಧ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
ಮಂಡ್ಯ, ಮೈಸೂರು

ಪ್ರೀತಿಗೆ ಪೋಷಕರ ವಿರೋಧ: ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

July 7, 2018

ಮಂಡ್ಯ:  ಮದುವೆಗೆ ಪೋಷಕರು ವಿರೋಧ ವ್ಯಕ್ತಪಡಿಸಿ ದ್ದರಿಂದ ಪ್ರೇಮಿಗಳಿಬ್ಬರ ಜೀವನ ದುರಂತ ಅಂತ್ಯ ಕಂಡಿರುವ ಘಟನೆ ಶ್ರೀರಂಗ ಪಟ್ಟಣ ತಾಲೂಕಿನ ಚಿಕ್ಕಾಯರಳ್ಳಿಯಲ್ಲಿ ನಡೆದಿದೆ. ಮೂಲತಃ ಹೆಚ್.ಡಿ.ಕೋಟೆ ತಾಲೂಕು ಯಡಿಯಾಲ ಗ್ರಾಮದ ನಿವಾಸಿಗಳಾದ ಶಿವು @ ಚಿನ್ನು ಬಿನ್ ವೆಂಕಟೇಶ್(19) ಮತ್ತು ಅನ್ನಪೂರ್ಣ ಬಿನ್ ಭಾಗ್ಯಮ್ಮ (18) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಘಟನೆ ಹಿನ್ನೆಲೆ: ಶಿವು ಮತ್ತು ಅನ್ನಪೂರ್ಣ ಇಬ್ಬರೂ ಬಸ್‍ನಲ್ಲಿ ಹೆಚ್.ಡಿ.ಕೋಟೆಯಿಂದ ಗುರುವಾರವೇ ಶ್ರೀರಂಗಪಟ್ಟಣಕ್ಕೆ ಬಂದಿದ್ದು, ಕೆಆರ್‍ಎಸ್‍ಗೆ ತೆರಳಿ ಅಲ್ಲಿ ಸುತ್ತಮುತ್ತ ಸುತ್ತಾಡಿದ್ದಾರೆ. ಸಂಜೆಯಾದ…

ಪೂರ್ಣ ಸಾಲ ಮನ್ನಾ ಭರವಸೆ  ಭಗ್ನ: ಇಬ್ಬರು ರೈತರ ಆತ್ಮಹತ್ಯೆ
ಚಾಮರಾಜನಗರ, ಮಂಡ್ಯ

ಪೂರ್ಣ ಸಾಲ ಮನ್ನಾ ಭರವಸೆ  ಭಗ್ನ: ಇಬ್ಬರು ರೈತರ ಆತ್ಮಹತ್ಯೆ

July 7, 2018

ಮಂಡ್ಯ, ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ ಪೂರ್ಣ ಸಾಲ ಮನ್ನಾ ಆಗಲಿಲ್ಲ ಎಂದು ಮನ ನೊಂದು ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ದೇಮಹಳ್ಳಿ ಹಾಗೂ ಮಂಡ್ಯ ಜಿಲ್ಲೆ ಕಚ್ಚಿಗೆರೆ ಗ್ರಾಮದಲ್ಲಿ ನಡೆದಿದೆ. ಚಾಮರಾಜನಗರ ವರದಿ: ಚಾಮರಾಜ ನಗರ ತಾಲೂಕಿನ ದೇಮಹಳ್ಳಿ ಗ್ರಾಮದ ನಂಜುಂಡಪ್ಪನವರ ಮಗ ಚಿಕ್ಕಸ್ವಾಮಿ ಉ. ಬೆಳ್ಳಪ್ಪ (42) ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಚಿಕ್ಕಸ್ವಾಮಿ ತಮಗಿದ್ದ ಎರಡೂ ವರೆ ಎಕರೆ ಜಮೀನಿನಲ್ಲಿ ಬಾಳೆ ಮತ್ತು ಉದ್ದು…

ಡಾ.ಬಾಬುಜೀ ಭವನ ಕಾಮಗಾರಿ ಶೀಘ್ರ ಆರಂಭ
ಮಂಡ್ಯ

ಡಾ.ಬಾಬುಜೀ ಭವನ ಕಾಮಗಾರಿ ಶೀಘ್ರ ಆರಂಭ

July 7, 2018

ಮಂಡ್ಯ: ಮಂಡ್ಯ ಜನತೆಯ ಬಹುದಿನಗಳ ಬೇಡಿಕೆಯಾದ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ ಸಮುದಾಯ ಭವನದ ಕಾಮಗಾರಿ ಯನ್ನು ಶೀಘ್ರವಾಗಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಎನ್. ಮಂಜುಶ್ರೀ ತಿಳಿಸಿದರು. ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಮಾಜಿ ಪ್ರಧಾನಿ ಡಾ. ಬಾಬು ಜಗಜೀವನರಾಂ ಅವರ 32ನೇ ಪುಣ್ಯತಿಥಿ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದ ಮುಂಭಾಗವಿರುವ ಕಾವೇರಿ ಉದ್ಯಾನವನದಲ್ಲಿ ಡಾ. ಬಾಬು ಜಗಜೀವನರಾಂ ಅವರ ಪ್ರತಿಮೆಗೆ ಮಾರ್ಲಾಪಣೆ ಮಾಡಿ ಅವರು ಮಾತ ನಾಡಿದರು. ಬಹು ದಿನಗಳಿಂದ ಮಂಡ್ಯದಲ್ಲಿ ಡಾ….

ಲಂಚವಿಲ್ಲದೆ ಇಲ್ಲಿ ಚಿಕಿತ್ಸೆ ಸಿಗಲ್ಲ..!
ಮಂಡ್ಯ

ಲಂಚವಿಲ್ಲದೆ ಇಲ್ಲಿ ಚಿಕಿತ್ಸೆ ಸಿಗಲ್ಲ..!

July 7, 2018

ಮಂಡ್ಯ: ಇಲ್ಲಿ ಲಂಚವಿಲ್ಲದೇ ಚಿಕಿತ್ಸೆಯೇ ಸಿಗುವುದಿಲ್ಲ, ಬಹಿರಂಗವಾಗಿ ಲಂಚ ಬಾಕ ವೈದ್ಯರ ಹಣ ವಸೂಲಿ ದಂಧೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ನಾಗಮಂಗಲ ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ವಸಂತಲಕ್ಷ್ಮಿ ರೋಗಿಗಳಿಂದ ಹಣ ವಸೂಲಿ ಮಾಡುತ್ತಿ ರುವ ದೃಶ್ಯವೀಗ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಶುಲ್ಕ ಪಡೆಯದೆ ಉಚಿತ ಚಿಕಿತ್ಸೆ ನೀಡಬೇಕು. ಆದರೆ ಡಾ.ವಸಂತಲಕ್ಷ್ಮಿ ರೋಗಿಗಳಿಂದ 10, 20 ಹಾಗೂ 30, 50 ರೂ.ಗಳನ್ನು…

1 44 45 46 47 48 56
Translate »