Tag: Mandya

ಹೆಚ್‍ಡಿಕೆ ಬಜೆಟ್‍ಗೆ ಮಂಡ್ಯ ಜಿಲ್ಲೆಯಲ್ಲಿ ಅಸಮಾಧಾನ
ಮಂಡ್ಯ

ಹೆಚ್‍ಡಿಕೆ ಬಜೆಟ್‍ಗೆ ಮಂಡ್ಯ ಜಿಲ್ಲೆಯಲ್ಲಿ ಅಸಮಾಧಾನ

July 6, 2018

ರೈತರ ತುಟಿಗೆ ತುಪ್ಪ ಸವರುವ ಬಜೆಟ್: ರೈತರ ಆಕ್ರೋಶ ಮಂಡ್ಯ: ಇಡೀ ರಾಜ್ಯದಲ್ಲೇ ಜೆಡಿಎಸ್‍ಗೆ ಅತ್ಯಧಿಕ ನೆಲೆಕೊಟ್ಟ ಜಿಲ್ಲೆ ಮಂಡ್ಯ. ಅಂತೆಯೇ ಹೆಚ್.ಡಿ.ಕುಮಾರ ಸ್ವಾಮಿ ಸಿಎಂ ಆಗುತ್ತಿದ್ದಂತೆ ಜಿಲ್ಲೆಯ ಜನ ಕುಣಿದು ಕುಪ್ಪಳಿಸಿದ್ದರು. ಜೊತೆಗೆ ಬಜೆಟ್ ಮೇಲೆ ಜಿಲ್ಲೆಯ ಜನಕ್ಕೆ ಭಾರಿ ನಿರೀಕ್ಷೆ ಇತ್ತು. ಅಂತೆಯೇ ಜಿಲ್ಲೆಗೆ ಸಾಕಷ್ಟು ಅನುದಾನ ನೀಡಿದರೂ, ಹಾಸನಕ್ಕೆ ನೀಡಿದ ಅರ್ಧ ಭಾಗದ ಅನುದಾನವನ್ನೂ ಮಂಡ್ಯಕ್ಕೆ ನೀಡಿಲ್ಲ ಎಂಬ ಅಸಮಾಧಾನ ಜಿಲ್ಲೆಯಲ್ಲಿ ಅಲ್ಲಲ್ಲಿ ಹೊಗೆಯಾಡುತ್ತಿದೆ. ಸಾಲಮನ್ನಾ ಘೋಷಣೆಯಾಗಿದ್ದರೂ ಬಹುತೇಕ ರೈತರು ಇದು ರೈತ…

ದಿ.ಬೋರೇಗೌಡರ ನಿವಾಸಕ್ಕೆ ಅಂಬಿ ಭೇಟಿ: ಸಾಂತ್ವನ
ಮಂಡ್ಯ

ದಿ.ಬೋರೇಗೌಡರ ನಿವಾಸಕ್ಕೆ ಅಂಬಿ ಭೇಟಿ: ಸಾಂತ್ವನ

July 6, 2018

ಮಂಡ್ಯ:  ಇತ್ತೀಚೆಗೆ ನಿಧನರಾಗಿದ್ದ ಮಂಡ್ಯ ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡರ ನಿವಾಸಕ್ಕಿಂದು ಮಾಜಿ ಸಚಿವ, ನಟ ಅಂಬರೀಶ್ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಬೋರೇಗೌಡರ ನಿಧನದ ದಿನ ಮತ್ತು ತಿಥಿ ಕಾರ್ಯದಲ್ಲೂ ಪಾಲ್ಗೊಳ್ಳದ ಅಂಬ ರೀಶ್ ಇಂದು ಅವರ ಮನೆಗೆ ದಿಢೀರ್ ಭೇಟಿ ನೀಡಿ ಬೋರೇಗೌಡರ ತಂದೆ, ತಾಯಿ, ಪತ್ನಿ ಮತ್ತು ಮಕ್ಕಳಿಗೆ ಸಾಂತ್ವನ ಹೇಳಿ ದರು. ಅಂಬರೀಶ್‍ಗೆ ನಟ ರಾಕ್‍ಲೈನ್ ವೆಂಕ ಟೇಶ್ ಮತ್ತು ಬೆಂಬಲಿಗರು ಸಾಥ್ ನೀಡಿದರು. ಈ ವೇಳೆ ಮಾತನಾಡಿದ…

ಗಣಿ, ಕಂದಾಯ ಇಲಾಖಾಧಿಕಾರಿಗಳ ದಾಳಿ: 10ಕ್ಕೂ ಹೆಚ್ಚು ಅಕ್ರಮ ಜಲ್ಲಿ ಕ್ರಷರ್ ಗಳಿಗೆ ಬೀಗ
ಮಂಡ್ಯ

ಗಣಿ, ಕಂದಾಯ ಇಲಾಖಾಧಿಕಾರಿಗಳ ದಾಳಿ: 10ಕ್ಕೂ ಹೆಚ್ಚು ಅಕ್ರಮ ಜಲ್ಲಿ ಕ್ರಷರ್ ಗಳಿಗೆ ಬೀಗ

July 5, 2018

ಮಂಡ್ಯ:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ರಾಜ್ಯಸರ್ಕಾರ ಟೇಕಾಫ್ ಆಗುತ್ತಿರುವ ಬೆನ್ನಲ್ಲೇ ಜೆಡಿಎಸ್ ವಿರೋಧಿಗಳನ್ನು ಹಣಿಯುವ ಪ್ರಕ್ರಿಯೆ ಸದ್ದಿಲ್ಲದೆ ಶುರುವಾಗಿದೆ. ಇದರ ಭಾಗವಾಗಿ ಮೊನ್ನೆಯಷ್ಟೇ ನಾಗಮಂಗಲ ತಾಲೂಕಿನ ವಿವಿಧೆಡೆ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಬಲಿಗರಿಗೆ ಸೇರಿದಂತೆ 10ಕ್ಕೂ ಹೆಚ್ಚು ಅಕ್ರಮ ಕ್ರಷರ್ ಮತ್ತು ಗಣಿಗಾರಿಕೆಗಳಿಗೆ ಬೀಗ ಜಡಿಯಲಾಗಿದೆ. ನಾಗಮಂಗಲ ತಾಲೂಕಿನ ವಿವಿಧೆಡೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಾಗಭೂಷಣ್ ಹಾಗೂ ಕಂದಾಯ ಇಲಾಖೆ ತಾಲೂಕು ತಹಶೀಲ್ದಾರ್ ಎಂ.ನಂಜುಂಡಯ್ಯ ನೇತೃತ್ವದ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ ಅನುಮತಿ ಇಲ್ಲದೆ…

ಕ್ರಷರ್ ಕಚೇರಿಯಲ್ಲಿ ದಾಂಧಲೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಮಂಡ್ಯ

ಕ್ರಷರ್ ಕಚೇರಿಯಲ್ಲಿ ದಾಂಧಲೆ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

July 5, 2018

ಮಂಡ್ಯ: ಕ್ರಷರ್ ನಲ್ಲಿ ಸೋಲಿಂಗ್ (ಬೋಡ್ರಸ್ ಕಲ್ಲು)ತೆಗೆದು ಕೊಳ್ಳದ ವಿಚಾರಕ್ಕೆ ಸಂಬಂಧಿಸಿ ದಂತೆ ಐವರ ತಂಡವೊಂದು ಕ್ರಷರ್ ಕಚೇರಿಗೆ ನುಗ್ಗಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಘಟನೆ ಶ್ರೀರಂಗಪಟ್ಟಣ ತಾಲ್ಲೂಕು ಚನ್ನನಕೆರೆ ಬಳಿ ಮಂಗಳವಾರ ಸಂಜೆ ನಡೆದಿದೆ. ಚನ್ನನಕೆರೆ ಬಳಿಯ ಕೆಎಸ್‍ಸಿ(ಕಾವೇರಿ ಸ್ಟೋನ್ ಕ್ರಷರ್) ಕಚೇರಿ ಮೇಲೆಯೇ ಐವರು ದಾಳಿ ಮಾಡಿದ್ದು ಸಿಬ್ಬಂದಿ ಸೋಮ ಅಲಿಯಾಸ್ ಸೋಮಶೇಖರ್ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಾಂಧಲೆ ನಡೆಸಿರುವ ಟಿ.ಎಂ. ಹೊಸೂರಿನ…

ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಸಾಫ್ಟ್ ವೇರ್ ಉದ್ಯಮಿಗಳ ಕಣ್ಣು
ಮಂಡ್ಯ

ಮಂಡ್ಯ ಲೋಕಸಭಾ ಕ್ಷೇತ್ರದ ಮೇಲೆ ಸಾಫ್ಟ್ ವೇರ್ ಉದ್ಯಮಿಗಳ ಕಣ್ಣು

July 3, 2018

ಮಂಡ್ಯ: ಲೋಕಸಭಾ ಕ್ಷೇತ್ರದ ಮೇಲೆ ಐಟಿ ಉದ್ಯಮಿಗಳ ಕಣ್ಣು ಬಿದ್ದಿದೆ. ಕ್ಷೇತ್ರದ ಮೇಲೆ ಒಬ್ಬೊಬ್ಬರೇ ಒಲವು ತೋರುತ್ತಿದ್ದು ಮತ್ತಷ್ಟು ಕುತೂಹಲಕ್ಕೆ ಕಾರಣ ವಾಗಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಮೇಲುಕೋಟೆ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಸೋಲು ಅನುಭವಿಸಿರೋ ಉದ್ಯಮಿ, ರೈತ ನಾಯಕ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಪುತ್ರ ದರ್ಶನ್ ಪುಟ್ಟಣ್ಣಯ್ಯ ಸ್ಪರ್ಧೆಗೆ ರೈತ ಸಂಘದ ಕೆಲ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ತಮ್ಮ ಅಮೆರಿಕಾ ಕಂಪನಿಯನ್ನು ಮಾರಾಟ ಮಾಡಿ, ಮೈಸೂರಿನಲ್ಲಿ ವ್ಯವಹಾರ ಮಾಡೋ ಜೊತೆಗೆ ರೈತ ಹೋರಾಟ…

ಎಲ್ಲಾ ಜಿಲ್ಲೆಗಳಲ್ಲೂ ಜಾನಪದ ಲೋಕ ಸ್ಥಾಪನೆಯಾಗಲಿ
ಮಂಡ್ಯ

ಎಲ್ಲಾ ಜಿಲ್ಲೆಗಳಲ್ಲೂ ಜಾನಪದ ಲೋಕ ಸ್ಥಾಪನೆಯಾಗಲಿ

July 2, 2018

ಮಂಗಲದಲ್ಲಿ ನಡೆದ ಭರ್ಜರಿ ನಾಟಿಕೋಳಿ ಸಾಂಬಾರ್, ರಾಗಿ ಮುದ್ದೆ ಉಣ್ಣುವ ಸ್ಪರ್ಧೆಯಲ್ಲಿ ಕೆಟಿಎಸ್, 7 ಮುದ್ದೆ ಉಂಡ ಮೀಸೆ ಈರೇಗೌಡಗೆ ಜಯ ಮಂಡ್ಯ: ಜಾನಪದ ತಜ್ಞ ಎಚ್.ಎಲ್.ನಾಗೇಗೌಡರು ರಾಮನಗರ ದಲ್ಲಿ ಸ್ಥಾಪಿಸಿರುವ ಜಾನಪದ ಲೋಕದ ಶಾಖೆಯನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರ ಗಳಲ್ಲೂ ಸ್ಥಾಪಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಿಳಿಸಿದರು. ತಾಲೂಕಿನ ಮಂಗಲ ಗ್ರಾಮದಲ್ಲಿಂದು ಆಯೋಜಿಸಲಾಗಿದ್ದ ನಾಟಿಕೋಳಿ ಸಾಂಬಾರ್, ರಾಗಿ ಮುದ್ದೆ ಉಣ್ಣುವ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಆಧು ನಿಕತೆಯ ಸೋಗಿನಲ್ಲಿ ‘ನಶಿಸಿ…

ಮಂಡ್ಯ ಅಭಿವೃದ್ಧಿಗೆ ಪತ್ರಕರ್ತರ ಸಹಕಾರ ಅಗತ್ಯ: ಎಂ.ಶ್ರೀನಿವಾಸ್
ಮಂಡ್ಯ

ಮಂಡ್ಯ ಅಭಿವೃದ್ಧಿಗೆ ಪತ್ರಕರ್ತರ ಸಹಕಾರ ಅಗತ್ಯ: ಎಂ.ಶ್ರೀನಿವಾಸ್

July 2, 2018

ಮಂಡ್ಯ:  ರಾಜ್ಯ ರಾಜಧಾನಿ ಬೆಂಗಳೂರು ಹಾಗೂ ಮೈಸೂರು ನಗರ ಗಳ ನಡುವೆ ದೊಡ್ಡ ಹಳ್ಳಿಯಂತಿರುವ ಮಂಡ್ಯ ನಗರದ ಅಭಿವೃದ್ಧಿಗೆ ಪತ್ರಕರ್ತರು ಸೇರಿದಂತೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿಂದು ಜಿಲ್ಲಾ ಪತ್ರಕರ್ತರ ಮತ್ತು ಮುದ್ರಣಕಾರರ ಸಹ ಕಾರ ಸಂಘ ಆಯೋಜಿಸಿದ್ದ ಕನ್ನಡ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಒಂದು ಕಾಲದಲ್ಲಿ ಪ್ರಪಂಚಕ್ಕೆ ಸಕ್ಕರೆ ನೀಡುತ್ತಿದ್ದ ಜಿಲ್ಲೆ ಇಂದು ಕೈಗಾರಿಕೆ, ವ್ಯಾಪಾರ, ಕೃಷಿಯಲ್ಲಿ ಹಿಂದುಳಿದಿದೆ. ರೈತರು ಸಾಲದ ಸುಳಿಯಲ್ಲಿ ಸಿಲುಕಿ…

ಮಕ್ಕಳಿಗೆ ಪಾಠಮಾಡದೆ ರಾಜಕಾರಣದಲ್ಲಿ ಶಿಕ್ಷಕರ ಕಾಲಹರಣ
ಮಂಡ್ಯ

ಮಕ್ಕಳಿಗೆ ಪಾಠಮಾಡದೆ ರಾಜಕಾರಣದಲ್ಲಿ ಶಿಕ್ಷಕರ ಕಾಲಹರಣ

June 30, 2018

ಮಂಡ್ಯ:  ಮಕ್ಕಳಿಗೆ ಸರಿಯಾಗಿ ಪಾಠ ಮಾಡದೆ ರಾಜಕೀಯ ನಾಯಕರ ಜೊತೆ ತಿರುಗಾಡುತ್ತಾ ಕಾಲಹರಣ ಮಾಡುತ್ತಿ ರುವ ಶಿಕ್ಷಕರ ವಿರುದ್ಧ ತಾಪಂ ಸಭೆಯಲ್ಲಿಂದು ಆಕ್ರೋಶ ವ್ಯಕ್ತವಾಯಿತು. ತಾಪಂ ಸಭಾಂಗಣದಲ್ಲಿಂದು ಅಧ್ಯಕ್ಷೆ ಶೈಲಜಾ ಅಧ್ಯಕ್ಷತೆಯಲ್ಲಿ ನಡೆದ 2018-19ನೇ ಸಾಲಿನ ತಾಪಂ ಕಾರ್ಯಕ್ರಮಗಳ ಕ್ರಿಯಾ ಯೋಜನೆ ಸಭೆಯಲ್ಲಿ ಮಾತನಾಡಿದ ಸದಸ್ಯ ಬೋರೇಗೌಡ, ಶಿಕ್ಷಕರು ಸಮರ್ಪಕ ವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಸಾರ್ವ ಜನಿಕ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಓಡಾಡಿ ಕೊಂಡಿರುತ್ತಾರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು….

ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ವಿಭಿನ್ನ ಕಾರ್ಯಕ್ರಮ ಮಹಿಳಾ ಸಿಬ್ಬಂದಿಗಳಿಗೆ ಸೀಮಂತ
ಮಂಡ್ಯ

ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ವಿಭಿನ್ನ ಕಾರ್ಯಕ್ರಮ ಮಹಿಳಾ ಸಿಬ್ಬಂದಿಗಳಿಗೆ ಸೀಮಂತ

June 30, 2018

ಮಂಡ್ಯ: ಅಲ್ಲಿ ಸಂಭ್ರಮ, ಸಡಗರ ಮನೆ ಮಾಡಿತ್ತು. ತುಂಬು ಗರ್ಭಿಣಿಯರಿಗೆ ಮುತೈದೆಯರು ಸೀಮಂತ ಶಾಸ್ತ್ರ ಗಳನ್ನು ಮಾಡುತ್ತಿದ್ದರು. ಟೇಬಲ್ ಮೇಲೆ ಬಗೆಬಗೆಯ ಹಣ್ಣುಗಳನ್ನು ಇಡಲಾಗಿತ್ತು. ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುತ್ತಿದ ಜನರು. ಇದು ಮನೆಯಲ್ಲಿ ಅಥವಾ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಶುಭ ಸಮಾರಂಭವಲ್ಲ. ಬದಲಾಗಿ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಕಂಡು ಬಂದ ದೃಶ್ಯ. ಹೌದು. ಇತ್ತೀಚೆಗೆ ಪಾಂಡವಪುರದ ಪೊಲೀಸ್ ಠಾಣೆಯಲ್ಲಿ ಮಹಿಳಾ ಪಿಎಸ್‍ಐಗೆ ಸಿಬ್ಬಂದಿಗಳು ಸೀಮಂತ ಮಾಡಿ ಸಂಭ್ರಮಿಸಿ ದ್ದರು. ಅದರಂತೆ ಶುಕ್ರವಾರ ಮಳವಳ್ಳಿ ಪೊಲೀಸ್…

ಎಸ್ಪಿ ಕಚೇರಿಯಲ್ಲಿ ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನ!
ಮಂಡ್ಯ

ಎಸ್ಪಿ ಕಚೇರಿಯಲ್ಲಿ ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆಗೆ ಯತ್ನ!

June 30, 2018

ಮಂಡ್ಯ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಮಹಿಳೆ ಯೋರ್ವಳು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಆತ್ಮಹತ್ಯೆ ಯತ್ನ ಪ್ರಕರಣ ಶುಕ್ರವಾರ ನಡೆದಿದೆ. ಮಹಿಳಾ ಪೊಲೀಸ್ ಪೇದೆ ಕಮಲಮ್ಮ (56) ಎಂಬುವವರೇ ಎಸ್ಪಿ ಕಚೇರಿಯಲ್ಲಿ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತೀವ್ರವಾಗಿ ಅಸ್ವಸ್ಥರಾಗಿದ್ದ ಪೇದೆ ಕಮಲಮ್ಮ ಅವರನ್ನು ಸಹೋದ್ಯೋಗಿಗಳು ಜಿಲ್ಲಾ ಸ್ಪತ್ರೆಗೆ ದಾಖಲಿಸಿದ್ದಾರೆ. ಮೊನ್ನೆಯಷ್ಟೆ ಎಸ್ಪಿ ಕಚೇರಿಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿ ಹೊಳಲಿನ ಮಹಿಳೆ ಯೋರ್ವಳು ಆತ್ಮಹತ್ಯೆಗೆ ಯತ್ನಿಸಿ ದ್ದಳು. ಇದೀಗ ಪೊಲೀಸ್ ಸಿಬ್ಬಂದಿಯೇ ಕಚೇರಿಯಲ್ಲಿ…

1 45 46 47 48 49 56
Translate »