ಲಂಚವಿಲ್ಲದೆ ಇಲ್ಲಿ ಚಿಕಿತ್ಸೆ ಸಿಗಲ್ಲ..!
ಮಂಡ್ಯ

ಲಂಚವಿಲ್ಲದೆ ಇಲ್ಲಿ ಚಿಕಿತ್ಸೆ ಸಿಗಲ್ಲ..!

July 7, 2018

ಮಂಡ್ಯ: ಇಲ್ಲಿ ಲಂಚವಿಲ್ಲದೇ ಚಿಕಿತ್ಸೆಯೇ ಸಿಗುವುದಿಲ್ಲ, ಬಹಿರಂಗವಾಗಿ ಲಂಚ ಬಾಕ ವೈದ್ಯರ ಹಣ ವಸೂಲಿ ದಂಧೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದು ನಾಗಮಂಗಲ ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞೆ ಡಾ.ವಸಂತಲಕ್ಷ್ಮಿ ರೋಗಿಗಳಿಂದ ಹಣ ವಸೂಲಿ ಮಾಡುತ್ತಿ ರುವ ದೃಶ್ಯವೀಗ ಸಾಮಾಜಿಕ ಜಾಲತಾಣ ದಲ್ಲಿ ವೈರಲ್ ಆಗಿದೆ.ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಶುಲ್ಕ ಪಡೆಯದೆ ಉಚಿತ ಚಿಕಿತ್ಸೆ ನೀಡಬೇಕು. ಆದರೆ ಡಾ.ವಸಂತಲಕ್ಷ್ಮಿ ರೋಗಿಗಳಿಂದ 10, 20 ಹಾಗೂ 30, 50 ರೂ.ಗಳನ್ನು ವಸೂಲಿ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ.

ಡಾ.ವಸಂತ ಲಕ್ಷ್ಮಿ ರೋಗಿಗಳಿಂದ ಹಣ ವಸೂಲಿ ಮಾಡುವುದಲ್ಲದೆ, ಆಸ್ಪತ್ರೆಯ ಔಷಧಿಗಳನ್ನು ಹಣಕ್ಕಾಗಿ ಮಾರಾಟ ಮಾಡುತ್ತಾರೆ ಎಂಬ ಆರೋಪವೂ ಕೇಳಿ ಬಂದಿದೆ. ಉಚಿತ ಆಂಬ್ಯುಲೆನ್ಸ್‍ಗೂ ರೋಗಿಗಳು ಹಣ ಕಟ್ಟಬೇಕು. ಆಸ್ಪತ್ರೆಗೆ ಬರುವ ಮಹಿಳೆ ಯರಲ್ಲಿ ಒಬ್ಬರೋ ಇಬ್ಬರಿಗೆ ಸಲಹೆ ನೀಡುವ ಈಕೆ. ಉಳಿದವರಿಗೆ ಇಲ್ಲ ಸಲ್ಲದ ಕಾರಣ ಹೇಳುವ ಮೂಲಕ ಮಂಡ್ಯದ ತನ್ನ ಖಾಸಗಿ ನರ್ಸಿಂಗ್ ಹೋಂಗೆ ಹೋಗು ವಂತೆ ಹೇಳುತ್ತಾರೆ ಎಂದು ರೋಗಿಗಳು ಆರೋಪಿಸುತ್ತಾರೆ.

ಸರ್ಕಾರಿ ಆಸ್ಪತ್ರೆ ಎಂದ ಮೇಲೆ ವೈದ್ಯರು ಕೇಂದ್ರ ಸ್ಥಾನದಲ್ಲಿಯೇ ಇರಬೇಕು ಎಂಬ ನಿಯಮವಿದೆ. ಆದರೆ ಅದನ್ನು ಗಾಳಿಗೆ ತೂರಿರುವ ಡಾ.ವಸಂತ ಲಕ್ಷ್ಮಿ ಮಂಡ್ಯ ದಿಂದ ನಿತ್ಯವೂ ನಾಗಮಂಗಲಕ್ಕೆ ಬರುತ್ತಾರೆ ಎಂದು ಸ್ಥಳೀಯ ಸಾರ್ವಜನಿಕರು ಹೇಳುತ್ತಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ ನಡೆಯುತ್ತಿದ್ದು, ವೈದ್ಯರು ರೋಗಿಗಳಿಂದ ಹಣ ವಸೂಲಿ ಮಾಡುತ್ತಾರೆ. ಆದ್ದರಿಂದ ಕೂಡಲೇ ಮೇಲಧಿಕಾರಿಗಳು ಎಚ್ಚೆತ್ತು ಕೊಂಡು ವೈದ್ಯೆಯ ವಿರುದ್ಧ ಕ್ರಮ ಕೈಗೊಂಡು ಬೇರೆಡೆಗೆ ವರ್ಗಾವಣೆ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Translate »