ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟರತ್ನಮ್ಮಣ್ಣಿ ಹಾಗೂ ದಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ಸಹೋದರಿ ವಿಶಾಲಾಕ್ಷಿದೇವಿ ಅವರ ನಿಧನದಿಂದಾಗಿ ಮುಂದೂಡಲಾಗಿದ್ದ ವಜ್ರಮುಷ್ಠಿ ಕಾಳಗ, ಶಮಿಪೂಜೆ ಹಾಗೂ ವಿಜಯಯಾತ್ರೆ(ವಿಜಯದಶಮಿ)ಯನ್ನು ಅ.22ರಂದು ಅರಮನೆಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ನವರಾತ್ರಿ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುವಾಗ ರಾಜಮನೆತನದವರು ಕೆಲವು ಕಟ್ಟುಪಾಡುಗಳನ್ನು ಅನುಸರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯ ಪೂಜಾ ಸಂದರ್ಭದಲ್ಲಿ ಅರಮನೆಯ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಸಿದ ನಂತರ ಅರಮನೆಯ ಆವರಣದಲ್ಲಿರುವ ಭುವನೇಶ್ವರಿ ದೇವಾಲಯಕ್ಕೆ ಚಿನ್ನದ ಅಡ್ಡಪಲ್ಲಕ್ಕಿಯಲ್ಲಿ ಪಟ್ಟದ…
ಖಾಸಗಿ ದರ್ಬಾರ್ ಆರಂಭ
October 11, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುವುದರೊಂದಿಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಸಹ ಬುಧವಾರದಿಂದ ಆರಂಭವಾಯಿತು. ನವರಾತ್ರಿಯ ಮೊದಲ ದಿನವಾದ ಇಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನ ಖಚಿತ ಸಿಂಹಾಸನಾರೂಢರಾಗಿ ಸಂಪ್ರದಾಯದಂತೆ ಕೆಲ ವಿಧಿ-ವಿಧಾನಗಳನ್ನು ಪೂರೈಸಿ, ಗಮನ ಸೆಳೆದರು. ಅರಮನೆಯ ದರ್ಬಾರ್ ಹಾಲ್‍ನಲ್ಲಿ ಇಂದು ಬೆಳಗಿನಿಂದ ಮಧ್ಯಾಹ್ನ ದವರೆಗೆ ವಿವಿಧ ಪೂಜಾ ಕೈಂಕರ್ಯ ಗಳಲ್ಲಿ ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾಕುಮಾರಿ ಒಡೆಯರ್ ಪಾಲ್ಗೊಂಡು, ಖಾಸಗಿ ದರ್ಬಾರ್‌ಗೆ…
ದೇಶ-ವಿದೇಶಿ ಪ್ರವಾಸಿಗರಿಗೆ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಪ್ರದಾಯಿಕ ಸ್ವಾಗತ
October 10, 2018ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸುವ ದೇಶ ವಿದೇಶಗಳ ಪ್ರವಾಸಿಗರಿಗೆ ಮೈಸೂರಿನ ಜನನಿ ಟ್ರಸ್ಟ್ ವತಿಯಿಂದ ಮಂಗಳವಾರ ಮೈಸೂರು ಅರಮನೆ ಆವರಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ವಿದೇಶಿಯರಿಗೆ ಮೈಸೂರಿನ ಸಂಸ್ಕೃತಿಯನ್ನು ಬಿಂಬಿಸುವ ಸಲುವಾಗಿ ಮೈಸೂರು ಸಿಲ್ಕ್ ಸೀರೆ ಉಟ್ಟ ಜನನಿ ಟ್ರಸ್ಟ್ ಮಹಿಳಾ ಸದಸ್ಯರು ದೇಶ ವಿದೇಶಗಳ ಪ್ರವಾಸಿಗರಿಗೆ ಸಾಂಪ್ರದಾಯಿಕವಾಗಿ ಹಣೆಗೆ ತಿಲಕವಿಟ್ಟು, `ಸ್ವಾಗತವು ನಿಮಗೆ, ಸುಸ್ವಾಗತವೂ ನಿಮಗೆ.. ಹಾಡು ಹೇಳಿ ಆರತಿ ಎತ್ತಿ ಸ್ವಾಗತಿಸಿದರು. ಪನ್ನೀರ್‍ದಾನಿಯಿಂದ ಸುವಾಸಿತ ಪನ್ನೀರು ಸಿಂಪಡಿಸಿ, ಗುಲಾಬಿ ಹೂ ನೀಡಿ, ಮೈಸೂರು ಪೇಟ…
ಖಾಸಗಿ ದರ್ಬಾರ್‌ಗೆ ಭಾರೀ ಭದ್ರತೆ ನಡುವೆ ಶಾಸ್ತ್ರೋಕ್ತ ಸಿಂಹಾಸನ ಜೋಡಣೆ
October 5, 2018ಮೈಸೂರು: ನಾಡ ಹಬ್ಬ ದಸರಾ ಮಹೋತ್ಸವದ ಪ್ರಮುಖ ಆಚರಣೆ ಖಾಸಗಿ ದರ್ಬಾರ್ ಅ.10ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಗುರುವಾರ ಬಿಗಿ ಭದ್ರತೆಯಲ್ಲಿ ಅರಮನೆ ನೆಲಮಾಳಿಗೆಯ ಭದ್ರತಾ ಕೊಠಡಿಯಿಂದ ರತ್ನ ಖಚಿತ ಸಿಂಹಾಸನವನ್ನು ದರ್ಬಾರ್ ಹಾಲ್‍ಗೆ ತಂದು ಜೋಡಿಸಲಾಯಿತು. ಯದುವಂಶ ಪರಂಪರೆಗಳಲ್ಲಿ ಖಾಸಗಿ ದರ್ಬಾರ್ ಒಂದಾಗಿದ್ದು, ನವರಾತ್ರಿಯ ವೇಳೆ ಹಲವು ಕಟ್ಟುಪಾಡುಗಳೊಂದಿಗೆ ಒಂಭತ್ತು ದಿನವೂ ದಿನಕ್ಕೆ ಎರಡು ಬಾರಿ ಖಾಸಗಿ ದರ್ಬಾರ್ ನಡೆಯಲಿದೆ. ಶತಮಾನದ ಇತಿಹಾಸವಿರುವ ಚಿನ್ನದ ಸಿಂಹಾಸನದ ಮೇಲೆ ರಾಜರು ಆಸೀನರಾಗಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸ ಲಿದ್ದಾರೆ….
ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ವಾಹನ ಡಿಕ್ಕಿ: ಅರಮನೆ ಮುಂದಿನ ವಿಶೇಷ ಕಲ್ಲಿನ ಬ್ಯಾರಿಕೇಡ್ ಧ್ವಂಸ
September 25, 2018ಮೈಸೂರು: ಟಯರ್ ಸಿಡಿದು ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಅರಮನೆ ಜಯ ಮಾರ್ತಾಂಡ ಗೇಟ್ ಬಳಿ ಅಳವಡಿಸಿರುವ ಕಲ್ಲಿನ ವಿಶೇಷ ಬ್ಯಾರಿಕೇಡ್ ಧ್ವಂಸವಾಗಿ ರುವ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ಕ್ಯಾತಮಾರನಹಳ್ಳಿಯ ಎಲೆ ಕ್ಟ್ರಿಕಲ್ ಗುತ್ತಿಗೆದಾರ ರವಿಕುಮಾರ್ ಎಂಬು ವರಿಗೆ ಸೇರಿದ ಬೊಲೆರೋ(ಕೆಎ09, ಸಿ4060) ವಾಹನವು ನಂಜನಗೂಡಿನಿಂದ ಬರುತ್ತಿ ದ್ದಾಗ ಶನಿವಾರ ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಅದರ ಮುಂಭಾಗದ ಎಡ ಗಡೆ ಚಕ್ರದ ಟಯರ್ ಸಿಡಿದ ಪರಿ ಣಾಮ ಚಾಲಕನ…
ಮೈಸೂರು ಅರಮನೆ ಅಂದ ಸವಿದ ರಾಜ್ಯಪಾಲ ವಜುಭಾಯ್ ರೂಢಾವಾಲಾ
September 6, 2018ಮೈಸೂರು: ಎರಡು ದಿನದಿಂದ ಮೈಸೂರು ಪ್ರವಾಸದಲ್ಲಿರುವ ರಾಜ್ಯಪಾಲ ವಿ.ಆರ್.ವಾಲಾ ಅವರು, ಇಂದು ಮಗ-ಸೊಸೆ ಸಮೇತ ಮೈಸೂರು ಅರಮನೆಗೆ ಭೇಟಿ ನೀಡಿ, ವೀಕ್ಷಿಸಿದರು. ಮಂಗಳವಾರವಷ್ಟೇ ಬಂಡೀಪುರ, ನಾಗರಹೊಳೆ ಪ್ರವಾಸ ಕೈಗೊಂಡಿದ್ದ ರಾಜ್ಯಪಾಲರು, ಇಂದು ಮೈಸೂರು ಅರಮನೆಗೆ ಭೇಟಿ ನೀಡಿ, ಇಲ್ಲಿನ ಸೌಂದರ್ಯಕ್ಕೆ ಮಾರು ಹೋಗಿದ್ದಾರೆ. ಅಲ್ಲದೆ, ವೀಕ್ಷಕರ ಗ್ಯಾಲರಿಯಲ್ಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಕಂಡು ಪುಳಕಿತರಾಗಿದ್ದಾರೆ. ಈ ಬಗ್ಗೆ ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಅವರಿಂದ ಮಾಹಿತಿ ಪಡೆದ ಅವರು, ಅರಮನೆ ನಿರ್ವಹಣೆ ಬಗ್ಗೆ…
ಮೈಸೂರು ಅರಮನೆ ದರ್ಬಾರ್ ಹಾಲ್‍ನಲ್ಲಿ ನಟಿ ನಿಧಿ ಸುಬ್ಬಯ್ಯ ಫೋಟೋ ಶೂಟ್ ಪ್ರಕರಣ
August 5, 2018ಮೈಸೂರು: ಮೈಸೂರು ಅರಮನೆ ಮತ್ತೆ ಸುದ್ದಿಯಾಗಿದೆ. ಪ್ರತಿಷ್ಠಿತರಿಗಾಗಿ ಭದ್ರತಾ ನಿಯಮಗಳನ್ನು ಗಾಳಿಗೆ ತೂರಲಾಗುತ್ತಿದೆ ಎಂಬ ದೂರು ಕೇಳಿ ಬಂದಿದೆ. ದರ್ಬಾರ್ ಹಾಲ್‍ನಲ್ಲಿ ಚಿತ್ರನಟಿ ನಿಧಿ ಸುಬ್ಬಯ್ಯ ಅವರು ತೆಗೆಸಿಕೊಂಡಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅರಮನೆಯ ದರ್ಬಾರ್ ಹಾಲ್‍ನಲ್ಲಿ ಫೋಟೊ ನಿಷೇಧವಾಗಿದ್ದರೂ ನಟಿ ನಿಧಿ ಸುಬ್ಬಯ್ಯ ಅವರಿಗೆ ಅಲ್ಲಿ ಫೋಟೋ ಶೂಟ್‍ಗೆ ಅನುಮತಿ ನೀಡಿದವರು ಯಾರು? ಎಂಬ ಪ್ರಶ್ನೆ ಕಾಡುತ್ತಿದ್ದು, ಸಾರ್ವಜನಿಕರಿಗೆ ಒಂದು ನಿಯಮ, ಗಣ್ಯರಿಗೆ ಒಂದು ನಿಯಮ ಅನುಸರಿಸುತ್ತಿ…
ಮೈಸೂರಲ್ಲಿ ಜಯಚಾಮರಾಜ ಒಡೆಯರ್ ಜನ್ಮ ದಿನಾಚರಣೆ
July 19, 2018ಮೈಸೂರು: ಮಹಾರಾಜ ಜಯಚಾಮರಾಜ ಒಡೆಯರ್ ಜನಪರ ಆಡಳಿತಕ್ಕೆ ಹೆಸರಾಗಿದ್ದೂ ಮಾತ್ರವಲ್ಲ, ಕಲೆ, ಸಾಹಿತ್ಯ ಹಾಗೂ ಸಂಗೀತಕ್ಕೆ ಪ್ರೋತ್ಸಾಹ ನೀಡಿದ್ದರು. ವಿವಿಧ ಪ್ರಕಾರದ ಗೀತೆಗಳ 20 ಸಾವಿರಕ್ಕೂ ಹೆಚ್ಚು ಧ್ವನಿ ಮುದ್ರಿಕೆಗಳನ್ನು ಸಂಗ್ರಹಿಸಿದ್ದರು ಎಂದು ಎಸ್‍ಬಿಆರ್‍ಆರ್ ಮಹಾಜನ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಭೀಮರಾಜ್ ಸ್ಮರಿಸಿದರು. ಮೈಸೂರಿನ ನಜರ್‍ಬಾದಿನ ಶ್ರೀವಾಣಿವಿಲಾಸ ಅರಸು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶ್ರೀಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಜಯಚಾಮರಾಜ ಒಡೆಯರ್ ಅವರ 100ನೇ ಜನ್ಮದಿನಾಚರಣೆಯಲ್ಲಿ ಅವರು…
ಮೈಸೂರು ಅರಮನೆಯಲ್ಲಿ ಕೇರಳ ಸ್ವಾಮೀಜಿ ದರ್ಬಾರ್ ವೈರಲ್ ಆಗಿರುವ ಫೋಟೋ
July 2, 2018ಮೈಸೂರು: ಮೈಸೂರು ಅರಮನೆಯಲ್ಲಿ ಕೇರಳಾದ ಸ್ವಾಮೀಜಿಯವರು ಭದ್ರತಾ ನಿಯಮವನ್ನು ಉಲ್ಲಂಘಿಸಿ ದರ್ಬಾರ್ ನಡೆಸುತ್ತಿರುವ ಪ್ರಕರಣದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದಕ್ಕೆ ಸಂಬಂಧಿಸಿದಂತೆ ಓರ್ವ ಪೇದೆಯನ್ನು ಅಮಾನತು ಮಾಡಿರುವ ಘಟನೆ ವರದಿಯಾಗಿದೆ. ಅರಮನೆಯ ಭದ್ರತಾ ಸಿಬ್ಬಂದಿಯಾಗಿದ್ದ ಪೇದೆ ಚಿಕ್ಕಣ್ಣ ಎಂಬುವರೇ ಅಮಾನತಾದ ಪೇದೆಯಾಗಿದ್ದಾರೆ. ಅರಮನೆಯಲ್ಲಿ ಕೇರಳಾದ ಸ್ವಾಮೀಜಿ ಎನ್ನಲಾದ ಸುನೀಲ್ ದಾಸ್ ಎಂಬುವರು ರಾಜಮನೆತನಕ್ಕೆ ಹತ್ತಿರದವರಾಗಿದ್ದು, ನಿಕಟ ಸಂಪರ್ಕವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಅರಮನೆಗೆ ಆಗಿಂದಾಗ್ಗೆ ಬರುವ ಈ ಸ್ವಾಮೀಜಿ, ಅರಮನೆಯ ಭದ್ರತಾ ವಿಭಾಗದ…
ವಿಶ್ವ ಯೋಗದ ದಿನದ ತಾಲೀಮಿನಲ್ಲಿ 2500ಕ್ಕೂ ಹೆಚ್ಚು ಯೋಗಪಟುಗಳು ಭಾಗಿ
June 11, 2018ಜೂ.17ರಂದು ಮತ್ತೊಂದು ತಾಲೀಮು ಜೂ.21ರಂದು ಒಂದು ಲಕ್ಷ ಯೋಗಪಟುಗಳಿಂದ ಬೃಹತ್ ಯೋಗ ಪ್ರದರ್ಶನ ಲಕ್ಕಿ ಡಿಪ್‍ನಲ್ಲಿ 10 ಮಂದಿಗೆ ಲಭಿಸಲಿದೆ ಪ್ರಶಸ್ತಿ ಮೈಸೂರು: ಈ ಬಾರಿಯೂ ವಿಶ್ವಯೋಗ ದಿನದಂದು ಬೃಹತ್ ಪ್ರದರ್ಶನ ನೀಡಿ ಕಳೆದ ವರ್ಷ ಮಾಡಿರುವ ಗಿನ್ನಿಸ್ ದಾಖಲೆಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿರುವ ಜಿಲ್ಲಾಡಳಿತ ಜೂ.21ರಂದು ಮೈಸೂರಿನ ರೇಸ್‍ಕೋರ್ಸ್ ಆವರಣದಲ್ಲಿ ಒಂದು ಲಕ್ಷ ಯೋಗಪಟುಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಸಲು ನಿರ್ಧರಿಸಿದ್ದು, ಭಾನುವಾರ ಅರಮನೆಯ ಆವರಣದಲ್ಲಿ ನಡೆದ ತಾಲೀಮಿನಲ್ಲಿ 2500ಕ್ಕೂ ಹೆಚ್ಚು ಯೋಗಪಟುಗಳು ಪಾಲ್ಗೊಂಡು ಗಮನ ಸೆಳೆದರು….