Tag: Mysore

ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ
ಮೈಸೂರು

ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ

November 26, 2019

ಮೈಸೂರು, ನ.25(ಆರ್‍ಕೆಬಿ)- ಕರ್ನಾಟಕ ದಲಿತ ವೆಲ್‍ಫೇರ್ ಟ್ರಸ್ಟ್ ಹಾಗೂ ಅಶೋಕಪುರಂ ಅಭಿಯಾನ ಬಳಗದಿಂದ ಚಾಮುಂಡಿ ಬೆಟ್ಟದ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಕಾರ್ಯ ಕ್ರಮ ನಡೆಸಲಾಯಿತು. ಮಹಿಷನ ಪ್ರತಿಮೆಗೆ ಪುಷ್ಪಾ ರ್ಚನೆ, ಮೇಣದ ಬತ್ತಿ ಗೌರವ ಸಲ್ಲಿಸಲಾಯಿತು. ಬಳಿಕ ಮಹಿಷಾ ಮಹಾರಾಜನಿಗೆ ಜಯವಾಗಲಿ ಎಂದು ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಮಹಿಷಾ ಒಬ್ಬ ಆಡಳಿತಗಾರ, ಮಹಾರಾಜನನ್ನು ರಾಕ್ಷಸ ಎಂದು ಮನುವಾದಿಗಳು ಬಿಂಬಿಸಿದ್ದಾರೆ. ಹೀಗಾಗಿ ಕಳೆದ 7 ವರ್ಷಗಳಿಂದ ಮಹಿಷಾ…

ಇಂಡಸ್ ಇಂಡ್ ಬ್ಯಾಂಕ್ ನಾಗೇಶ್ ನ್ಯಾಷನಲ್ ಟಿ-20 ಅಂಧರ ಕ್ರಿಕೆಟ್ ಪಂದ್ಯಾವಳಿ ಲೀಗ್‍ಗೆ ಚಾಲನೆ
ಮೈಸೂರು

ಇಂಡಸ್ ಇಂಡ್ ಬ್ಯಾಂಕ್ ನಾಗೇಶ್ ನ್ಯಾಷನಲ್ ಟಿ-20 ಅಂಧರ ಕ್ರಿಕೆಟ್ ಪಂದ್ಯಾವಳಿ ಲೀಗ್‍ಗೆ ಚಾಲನೆ

November 26, 2019

ಮೈಸೂರು,ನ.25(ಪಿಎಂ)-ಇಂಡಸ್ ಇಂಡ್ ಬ್ಯಾಂಕ್ ನಾಗೇಶ್ ನ್ಯಾಷನಲ್ ಟಿ-20 ಅಂಧರ ಕ್ರಿಕೆಟ್ ಪಂದ್ಯಾ ವಳಿಯ ಲೀಗ್ ಪಂದ್ಯಗಳು ಇಂದಿನಿಂದ ಮೈಸೂರಿನ ಎಸ್‍ಜೆಸಿಇ-ಕೆಎಸ್‍ಸಿಎ ಮೈದಾನದಲ್ಲಿ ಆರಂಭ ಗೊಂಡಿದ್ದು, ನ.27ರವರೆಗೆ ಒಟ್ಟು 5 ಪಂದ್ಯಗಳು ನಡೆಯಲಿವೆ. `ಎ’ ಗುಂಪಿನಿಂದ ಕರ್ನಾಟಕ, ಹರಿಯಾಣ, ಗೋವಾ ಮತ್ತು ದೆಹಲಿ ತಂಡಗಳು ಈ ಲೀಗ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿವೆ. ತ್ರಿಪುರ ರಾಜ್ಯದ ಅಗರ್ತಲಾ ನಗರದಲ್ಲಿ ಪಂದ್ಯಾವಳಿಗೆ ಚಾಲನೆ ಸಿಕ್ಕಿದ್ದು, ದೇಶದ 11 ಸ್ಥಳಗಳಲ್ಲಿ ಇದೇ ರೀತಿ ಲೀಗ್ ಪಂದ್ಯಗಳು ನಡೆಯಲಿವೆ. 2020ರ ಜನವರಿ ಅಂತ್ಯದಲ್ಲಿ ದೆಹಲಿಯಲ್ಲಿ ಫೈನಲ್…

ರಾಷ್ಟ್ರಮಟ್ಟದ ಕ್ರಿಕೆಟ್‍ಗೆ ಮೈಸೂರಿನ ನಾಲ್ವರು ಬಾಲಕರು ಆಯ್ಕೆ
ಮೈಸೂರು

ರಾಷ್ಟ್ರಮಟ್ಟದ ಕ್ರಿಕೆಟ್‍ಗೆ ಮೈಸೂರಿನ ನಾಲ್ವರು ಬಾಲಕರು ಆಯ್ಕೆ

November 26, 2019

ಮೈಸೂರು, ನ.25(ವೈಡಿಎಸ್)- ದಮನ್ ಅಂಡ್ ದಿಯು ದ್ವೀಪ ಸಮೂಹದಲ್ಲಿ ನಡೆ ಯುವ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾ ವಳಿಗೆ ಮೈಸೂರಿನ ನಾಲ್ವರು ಕಿರಿಯ ಕ್ರೀಡಾ ಪಟುಗಳು ಆಯ್ಕೆಯಾಗಿದ್ದಾರೆ. ದಮನ್ ದಿಯು ದ್ವೀಪದಲ್ಲಿ 2020ರ ಜ.3ರಿಂದ 8ರವರೆಗೆ 17 ವರ್ಷದೊಳಗಿನ ಕ್ರೀಡಾಪಟು ಗಳಿಗೆ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಮೈಸೂರಿನಿಂದ ಸಿದ್ದಾರ್ಥ ನಗರ ನಿವಾಸಿ ಹಂ.ಪಾ.ನಾಗರಾಜ್ ಮತ್ತು ಜಯಲಕ್ಷ್ಮಿ ದಂಪತಿ ಪುತ್ರ ಹೆಚ್.ಎನ್. ಪವನ್, ನಂದಿನಿ ಲೇಔಟ್‍ನ ಸಿದ್ದರಾಜು ಮತ್ತು ಸೌಮ್ಯ ದಂಪತಿ ಪುತ್ರ ಲಿಖಿತ್ ಎಸ್.ಗೌಡ, ವಸಂತನಗರದ ಸುಂದರ್…

ಎಚ್ಚರಿಕೆಯಿಂದ ಮತ ಚಲಾಯಿಸಲು ಮನವಿ
ಮೈಸೂರು

ಎಚ್ಚರಿಕೆಯಿಂದ ಮತ ಚಲಾಯಿಸಲು ಮನವಿ

November 26, 2019

ಮೈಸೂರು,ನ.25(ಆರ್‍ಕೆಬಿ)- ದಲಿತರು, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾ ತರು ಈ ಉಪ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕುವುದರಿಂದ ಸಾಮಾಜಿಕ ನ್ಯಾಯಕ್ಕೆ ಕೊಡಲಿ ಪೆಟ್ಟು ನೀಡುವಂತಾಗುವ ಕಾರಣ ಎಲ್ಲರೂ ಎಚ್ಚರಿಕೆಯಿಂದ ಮತ ಹಾಕುವಂತೆ ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಕೆ.ಸಿ. ಪುಟ್ಟಸಿದ್ದಶೆಟ್ಟಿ ಮನವಿ ಮಾಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಒಂದನೇ ತರಗತಿಯಿಂದ ಏಳನೇ ತರಗತಿವರೆಗಿನ ಹಿಂದುಳಿದ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ನೂತನ ಸಾಲಿಗೆ ನಿಲ್ಲಿಸಲಾಗಿದೆ. ಶಿಕ್ಷಣ ಇಲಾಖೆ ಡಾ.ಬಿ.ಆರ್….

ಸಿನಿಮಾ ನೋಡುತ್ತಿದ್ದಾಗಲೇ ಸಾವನ್ನಪ್ಪಿದ್ದ!
ಮೈಸೂರು

ಸಿನಿಮಾ ನೋಡುತ್ತಿದ್ದಾಗಲೇ ಸಾವನ್ನಪ್ಪಿದ್ದ!

November 26, 2019

ಮೈಸೂರು, ನ.25(ಆರ್‍ಕೆ)- ಸಿನಿಮಾ ನೋಡುತ್ತಿದ್ದಾಗಲೇ ಅಪರಿಚಿತ ವ್ಯಕ್ತಿ ಯೋರ್ವ ಸಾವನ್ನಪ್ಪಿರುವ ಘಟನೆ ಮೈಸೂರಿನ ಪ್ರಭಾ ಚಿತ್ರಮಂದಿರದಲ್ಲಿ ಇಂದು ಸಂಜೆ ನಡೆದಿದೆ. ಸುಮಾರು 40ರಿಂದ 45 ವರ್ಷ ವಯಸ್ಸು, ಸಾಧಾರಣ ಮೈಕಟ್ಟು ಹೊಂದಿರುವ ವ್ಯಕ್ತಿಯ ಎಡಗೈ ಮೇಲೆ ‘ಬೋರೇಗೌಡ’ ಎಂಬ ಅಚ್ಚೆ ಇದೆ ಎಂದು ದೇವರಾಜ ಠಾಣೆ ಪೊಲೀಸರು ತಿಳಿಸಿದ್ದಾರೆ. ಇಂದು ಮಧ್ಯಾಹ್ನ ಮ್ಯಾಟನಿ ಶೋಗೆ ಹೋಗಿದ್ದ ಅವರು ‘ಕಾಳಿದಾಸ ಕನ್ನಡ ಮೇಷ್ಟ್ರು’ ಸಿನಿಮಾ ವೀಕ್ಷಿಸುತ್ತಿದ್ದರು. ಸಂಜೆ 4.15 ಗಂಟೆಗೆ ಸಿನಿಮಾ ಬಿಟ್ಟು ಜನರೆಲ್ಲಾ ಹೋದ ಮೇಲೆ ಸ್ವಚ್ಛ…

ಮಹಾರಾಷ್ಟ್ರ ಸರ್ಕಾರ ರಚನೆ: ಇಂದು ಸುಪ್ರೀಂ ತೀರ್ಪು
ಮೈಸೂರು

ಮಹಾರಾಷ್ಟ್ರ ಸರ್ಕಾರ ರಚನೆ: ಇಂದು ಸುಪ್ರೀಂ ತೀರ್ಪು

November 25, 2019

ನವದೆಹಲಿ: ರಾಷ್ಟ್ರಪತಿ ಆಡಳಿತ ಹಿಂತೆಗೆದುಕೊಂಡು ತರಾತುರಿಯಲ್ಲಿ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಿದ್ದು ಹಾಗೂ ಕುದುರೆ ವ್ಯಾಪಾರ ತಡೆಯಲು ಕೂಡಲೇ ಬಹುಮತ ಸಾಬೀತಿಗೆ ಆದೇಶ ಕೊಡಬೇಕೆಂದು ಕೋರಿ ಶಿವಸೇನೆ, ಎನ್‍ಸಿಪಿ ಮತ್ತು ಕಾಂಗ್ರೆಸ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಭಾನುವಾರ ಕೈಗೆತ್ತಿಕೊಂಡಿತು. ಇಂದಿನ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಮಹಾ ರಾಷ್ಟ್ರ ರಾಜ್ಯಪಾಲರಿಗೆ ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ಸಂಬಂಧಿಸಿದ ದಾಖಲೆಗಳು…

ರಾಜ್ಯ ಸರ್ಕಾರದಿಂದ 2020ರ ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ
ಮೈಸೂರು

ರಾಜ್ಯ ಸರ್ಕಾರದಿಂದ 2020ರ ಸಾರ್ವಜನಿಕ ರಜಾದಿನಗಳ ಪಟ್ಟಿ ಬಿಡುಗಡೆ

November 25, 2019

ಬೆಂಗಳೂರು: ಕರ್ನಾಟಕ ಸರ್ಕಾರ 2020 ರ ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಪ್ರಕಟಿಸಿದೆ. ಶುಕ್ರವಾರ ಪ್ರಕಟಗೊಂಡಿರುವ ಈ ಪಟ್ಟಿ 1881ರ ನೆಗೋಶಿ ಯಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆಯಂತೆ ರಜಾ ದಿನಗಳ ನಿಗದಿ ಮಾಡಲಾಗಿದೆ. ಪಟ್ಟಿಯಲ್ಲಿ ಇರುವ ರಜಾದಿನಗಳು ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ 18 ಸಾರ್ವಜನಿಕ ರಜಾ ದಿನಗಳಿವೆ. ಸೋಮವಾರ ಅಥವಾ ಶುಕ್ರವಾರದಂದು ಬರುವ 10 ರಜಾ ದಿನಗಳನ್ನು ಇದು ಹೊಂದಿರುವ ಕಾರಣ 2020ರಲ್ಲಿ ದೀರ್ಘ ವಾರಾಂತ್ಯವನ್ನು ನಿರೀಕ್ಷಿಸಲಾಗಿದೆ. ಕರ್ನಾಟಕದ ರಜಾ ದಿನಗಳ ಪಟ್ಟಿ ಜನವರಿ…

ಅಯೋಧ್ಯೆ ತೀರ್ಪಿನ ಬಳಿಕ ದೇಶದ ಜನತೆ ಏಕತೆಯ ಮನೋಭಾವ ತೋರಿಸಿದ್ದು ಶ್ಲಾಘನೀಯ
ಮೈಸೂರು

ಅಯೋಧ್ಯೆ ತೀರ್ಪಿನ ಬಳಿಕ ದೇಶದ ಜನತೆ ಏಕತೆಯ ಮನೋಭಾವ ತೋರಿಸಿದ್ದು ಶ್ಲಾಘನೀಯ

November 25, 2019

ನವದೆಹಲಿ, ನ. 24- ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ತಿಂಗಳ ಕೊನೆಯ ಭಾನುವಾರ ನಡೆಸಿ ಕೊಡುವ ಜನಪ್ರಿಯ ರೇಡಿಯೋ ಕಾರ್ಯ ಕ್ರಮ ಮನ್ ಕಿ ಬಾತ್ ನಲ್ಲಿ ಮಾತನಾಡಿದರು. ಅವರ ಭಾಷಣದ ಮುಖ್ಯಾಂಶಗಳು: ಅಯೋಧ್ಯೆ ಭೂ ವಿವಾದ ಕೇಸ್‍ನಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಬಳಿಕ ದೇಶದ ಜನತೆ ತೋರಿಸಿದ ತಾಳ್ಮೆ, ಸಹನೆ, ಪ್ರಬುದ್ಧತೆ ಯನ್ನು ನೋಡಿದಾಗ ಜನರಿಗೆ ದೇಶದ ಹಿತಾಸಕ್ತಿಗಿಂತ ದೊಡ್ಡದು ಯಾವುದೂ ಇಲ್ಲ ಎಂದು ಸಾಬೀತಾಗಿದೆ. ಐತಿಹಾಸಿಕ ತೀರ್ಪಿನ ಬಳಿಕ ದೇಶ ಹೊಸ ದಾರಿ…

ಬೈ ಎಲೆಕ್ಷನ್ ಬಳಿಕ ಬಿಜೆಪಿಯವರು ದೇವೇಗೌಡರ ಮನೆ ಬಾಗಿಲು ತಟ್ಟುತ್ತಾರೆ.! ಮಾಜಿ ಸಚಿವ ಸಿ.ಎಸ್.ಪುಟ್ಟರಾಜು
ಮೈಸೂರು

ಬೈ ಎಲೆಕ್ಷನ್ ಬಳಿಕ ಬಿಜೆಪಿಯವರು ದೇವೇಗೌಡರ ಮನೆ ಬಾಗಿಲು ತಟ್ಟುತ್ತಾರೆ.! ಮಾಜಿ ಸಚಿವ ಸಿ.ಎಸ್.ಪುಟ್ಟರಾಜು

November 25, 2019

ಮಂಡ್ಯ,ನ.24(ನಾಗಯ್ಯ)- ಬೈ ಎಲೆಕ್ಷನ್ ಫಲಿತಾಂಶ ಪ್ರಕಟವಾದ ಡಿ.9ರ ಬಳಿಕ ಸರ್ಕಾರ ಉಳಿಸಿಕೊಳ್ಳಲು ಬಿಜೆಪಿ ಲೀಡರ್‍ಗಳು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಮನೆ ಬಾಗಿಲು ತಟ್ಟುತ್ತಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು. ಕೆ.ಆರ್.ಪೇಟೆ ತಾಲೂಕಿನ ಮಡುವಿನಕೋಡಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ದೇವರಾಜು ಪರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆ ಬಳಿಕ ರಾಜ್ಯ ರಾಜಕೀಯ ಲೆಕ್ಕಾಚಾರವೇ ಬದಲಾಗುತ್ತದೆ ಎಂಬ ಹೊಸದೊಂದು ಬಾಂಬ್ ಸಿಡಿಸಿದರು. ಉಪಚುನಾವಣೆಯ ಬಳಿಕ ಸರ್ಕಾರ ಉಳಿಯ ಬೇಕಾದರೆ 15 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬೇಕಾಗುತ್ತದೆ. ಆದರೆ…

ಬೆಂಗಳೂರಿನ ಹುಳಿಮಾವು ಕೆರೆ ಕೋಡಿ ಒಡೆದು, ಸಾವಿರಾರು ಮನೆಗಳು ಜಲಾವೃತ
ಮೈಸೂರು

ಬೆಂಗಳೂರಿನ ಹುಳಿಮಾವು ಕೆರೆ ಕೋಡಿ ಒಡೆದು, ಸಾವಿರಾರು ಮನೆಗಳು ಜಲಾವೃತ

November 25, 2019

ಬೆಂಗಳೂರು, ನ. 24- ಬೆಂಗಳೂರು ದಕ್ಷಿಣದ ದೊಡ್ಡ ಕೆರೆ ಎಂದೇ ಖ್ಯಾತಿಗಳಿಸಿರುವ ಹುಳಿಮಾವು ಕೆರೆಯ ಕೋಡಿ ಒಡೆದು, ಸುತ್ತಮುತ್ತಲಿನ ಬಡಾ ವಣೆಗಳಿಗೆ ನೀರು ನುಗ್ಗಿದ್ದು, ಸಾವಿರಾರು ಮನೆಗಳು ಜಲಾವೃತವಾಗಿರುವ ಘಟನೆ ಭಾನುವಾರ ನಡೆದಿದೆ. ಇಲ್ಲಿನ ಬೊಮ್ಮನಹಳ್ಳಿ ವಲಯದ ಅರಕೆರೆ ವಾರ್ಡ್ ನಲ್ಲಿರುವ ಹುಳಿಮಾವು ಕೆರೆಯ ಕೋಡಿ ಒಡೆದು ಅಕ್ಷಯ ಗಾರ್ಡನ್ ಅಪಾರ್ಟ್‍ಮೆಂಟ್ ಸಮುಚ್ಚಯದ ಆಸು ಪಾಸಿನ ಪ್ರದೇಶಗಳು ಜಲಾವೃತವಾಗಿವೆ. ಸಮೀಪದ ತಗ್ಗು ಪ್ರದೇಶದಲ್ಲಿರುವ ಅನೇಕ ಮನೆಗಳಿಗೂ ನೀರು ನುಗ್ಗಿದ ಪರಿಣಾಮ 2 ಸಾವಿರಕ್ಕೂ ಹೆಚ್ಚು ಮನೆಗಳು ಜಲಾವೃತ…

1 129 130 131 132 133 330
Translate »