ಮೈಸೂರು, ಮಾ.12(ಪಿಎಂ)- ಮೈಸೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕ ಹುದ್ದೆಗೆ ನೇರ ನೇಮ ಕಾತಿಯಲ್ಲಿ ಆಯ್ಕೆಯಾಗಿದ್ದ ಚಿನ್ನಸ್ವಾಮಿ ಮತ್ತು ಆರ್ಮುಗಂ ಎಂಬುವರನ್ನು ಏಕಾಏಕಿ ಕೈಬಿಡಲಾಗಿದೆ ಎಂದು ಆರೋಪಿಸಿ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು. ಮೈಸೂರು ಡಿಸಿ ಕಚೇರಿ ಎದುರು ಜಮಾ ವಣೆಗೊಂಡ ಗುತ್ತಿಗೆ ಪೌರಕಾರ್ಮಿಕರು, ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿ ರದ್ದುಪಡಿಸಿದ ಬಳಿಕ ಮೈಸೂರು ಪಾಲಿಕೆಯಲ್ಲಿ ಪೌರಕಾರ್ಮಿಕರ ನೇರ ನೇಮಕಕ್ಕೆ ಅಧಿಸೂಚನೆ ಹೊರಡಿಸ ಲಾಯಿತು. ಈ ನೇಮಕ ಪ್ರಕ್ರಿಯೆಯಲ್ಲಿ ನಿಯಮಬದ್ಧವಾಗಿಯೇ ಆಯ್ಕೆಯಾಗಿದ್ದ ಚಿನ್ನಸ್ವಾಮಿ ಮತ್ತು…
ಸರ್ಕಾರದ ಹಣಕ್ಕೆ ಕಾಯದೇ ಜನಬೆಂಬಲ ಪಡೆದು ನಾಟಕ ರೂಪಿಸಿ
March 13, 2020ಮೈಸೂರು,ಮಾ.12(ವೈಡಿಎಸ್)-ನಾಟಕೋತ್ಸವ ಕ್ಕಾಗಿ ಸರ್ಕಾರದ ಅನುದಾನ ಕಾಯಬೇಕಾದ ಅಗತ್ಯವಿಲ್ಲ. ಜನರ ಬೆಂಬಲ ಪಡೆದು ನಾಟಕಗಳನ್ನು ರೂಪಿಸಬೇಕು ಎಂದು ರಂಗ ನಿರ್ದೇಶಕ ಬಿ.ಸುರೇಶ್ ಸಲಹೆ ನೀಡಿದರು. ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ `ಅಭಿಯಂತರರು’ ತಂಡವು ತಂಜಾವೂರಿನ `ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ’ದ ಸಹಯೋಗದಲ್ಲಿ ನಡೆಯುತ್ತಿರುವ 4 ದಿನಗಳ `ರಾಷ್ಟ್ರೀಯ ರಂಗ ಉತ್ಸವ’ ವನ್ನು ಗುರುವಾರ ಉದ್ಘಾಟಿಸಿ, ಮಾತನಾಡಿದರು. ಕಡಿಮೆ ಹಣದಲ್ಲೂ ಒಳ್ಳೆಯ ನಾಟಕ ಪ್ರದರ್ಶಿಸಬಹುದು. ರಂಗ ಚಳವಳಿ ಶಾಶ್ವತವಾಗಬೇಕಾದರೆ ಜನರ ಬೆಂಬಲ ಅಗತ್ಯ. ಸರ್ಕಾರದಿಂದ ಹಣ, ಬೆಂಬಲ ಪಡೆದರೆ ಆಳುವವರನ್ನು ಪ್ರಶ್ನಿಸಲು…
ರೌಡಿಗಳೊಂದಿಗೆ ಸಂಪರ್ಕ; ಪೊಲೀಸರಿಗೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಖಡಕ್ ಎಚ್ಚರಿಕೆ
March 13, 2020ಬೆಂಗಳೂರು, ಮಾ.12- ರೌಡಿಗಳ ಜೊತೆಗೆ ಸಂಪರ್ಕ ಹೊಂದಿರುವ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ಎಚ್ಚರಿಕೆ ನೀಡಿದ್ದಾರೆ. ಭೂಗತ ಪಾತಕಿ ರವಿ ಪೂಜಾರಿ ಜತೆಗೆ ಪೊಲೀಸ್ ಅಧಿಕಾರಿಯೊಬ್ಬರು ಸಂಪರ್ಕ ದಲ್ಲಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಬಹಿರಂಗಗೊಂಡ ಹಿನ್ನೆಲೆ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ವೇಳೆ ರವಿಪೂಜಾರಿ ಹಲವು ಸ್ಫೋಟಕ ಮಾಹಿತಿ ಬಿಚ್ಚಿಟ್ಟಿ ದ್ದಾನೆ. ಸಿಸಿಬಿಯಲ್ಲಿ ಕಾರ್ಯ ನಿರ್ವಹಿಸಲು ನಮ್ಮ ಅಧಿಕಾರಿಯೊಬ್ಬರು ಯೋಗ್ಯರಲ್ಲ ಎಂದ ಅವರು ತನಿಖೆಯಲ್ಲಿ ಪಾರದರ್ಶಕತೆ ಇರಬೇಕು. ಸಾರ್ವಜನಿಕರು, ದೇಶಕ್ಕೆ ಮೋಸ ಮಾಡಿರುವ…
ಸದನದಲ್ಲಿ ಸಂವಿಧಾನಕ್ಕೆ ಅಪಚಾರ ಮಾಡುವಂತಹ ಚರ್ಚೆ ಸಲ್ಲದು
March 13, 2020ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಶಯ ಮೈಸೂರು,ಮಾ.12-ಚರ್ಚೆ ನೆಪದಲ್ಲಿ ಶ್ರೇಷ್ಠ ಸಂವಿಧಾನಕ್ಕೆ ಅಪಚಾರ ಮಾಡ ಬಾರದು ಎಂದು ಮಾಜಿ ಮೇಯರ್, ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ ಹೇಳಿದ್ದಾರೆ. ಸದನದಲ್ಲಿ ಸಂವಿಧಾನ ಕುರಿತ ವಿಶೇಷ ಚರ್ಚೆ ವೇಳೆ ನಡೆದಿರುವ ಅಸಂಬದ್ಧ ಘಟನೆಗಳ ಬಗ್ಗೆ ಪತ್ರಿಕಾ ಪ್ರಕಟಣೆ ಯಲ್ಲಿ ವಿಷಾದ ವ್ಯಕ್ತಪಡಿಸಿರುವ ಅವರು, ಪ್ರಜಾಪ್ರಭುತ್ವ, ಸಮಾಜ ವಾದ, ಜಾತ್ಯಾತೀತತೆ ಹಾಗೂ ರಾಷ್ಟ್ರೀಯ ಸಮಗ್ರತೆಯನ್ನು ಸ್ಪಷ್ಟಪಡಿಸುವ ಸಂವಿಧಾನ ನಾವು ಪೂಜಿಸುವ ಭಗವದ್ಗೀತೆಯಷ್ಟೇ ಶ್ರೇಷ್ಠ. ಪ್ರತಿಯೊಬ್ಬ ಪ್ರಜೆಯ ಹಕ್ಕು ಹಾಗೂ ಕರ್ತವ್ಯಗಳನ್ನು ಸಂವಿಧಾನ…
ನೃತ್ಯ ವಂದನಂ ಭರತನಾಟ್ಯ ಏಕವ್ಯಕ್ತಿ ಪ್ರದರ್ಶನ
March 13, 2020ಮೈಸೂರು,ಮಾ.12-ಮೈಸೂರಿನ ನೃತ್ಯ ವಿದ್ಯಾ ಪೀಠವು ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾ ಸಭಾಂಗಣದಲ್ಲಿ ಮಾ.14ರಂದು ಸಂಜೆ 6 ಗಂಟೆಗೆ ಕು.ಬೃಂದಾ ನಂಜುಂಡಸ್ವಾಮಿ ಅವರಿಂದ ನೃತ್ಯ ವಂದನಂ ಭರತನಾಟ್ಯ, ಏಕವ್ಯಕ್ತಿ ಪ್ರದರ್ಶನದ ಮೂಲಕ ಗುರುಪ್ರಣಾಮ ಕಾರ್ಯ ಕ್ರಮ ಆಯೋಜಿಸಿದೆ. ಕಾರ್ಯಕ್ರಮವನ್ನು ಶ್ರೀ ಉಮಾ ಮಹೇಶ್ವರಿ ನೃತ್ಯಕಲಾ ಕ್ಷೇತ್ರದ ನಿರ್ದೇಶಕ ವಿದುಷಿ ಟಿ.ಎಸ್. ಶ್ರೀಲಕ್ಷ್ಮಿ ಕುಮಾರ್ ಉದ್ಘಾಟಿಸು ವರು. ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವ ವಿದ್ಯಾನಿಲಯ ನಿವೃತ್ತ ಸಂಸ್ಕøತ ಪ್ರಾಧ್ಯಾಪಕ ಕೆ.ಎಲ್.ಪ್ರಸನ್ನಾಕ್ಷಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ…
ಅಕ್ರಮ ಗೋ ಸಾಗಣೆ; ಇಬ್ಬರ ಸೆರೆ, 37 ಹಸು-ಕರುಗಳ ರಕ್ಷಣೆ
March 13, 2020ಮೈಸೂರು, ಮಾ.12(ಎಂಕೆ)- ಗೋವುಗಳ ಅಕ್ರಮ ಸಾಗಣೆ ತಂಡದ ಮೇಲೆ ಗುರುವಾರ ದಾಳಿ ನಡೆಸಿದ ಸಿಸಿಬಿ ಪೊಲೀಸರು, 37 ಹಸು-ಕರುಗಳನ್ನು ರಕ್ಷಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಮೈಸೂ ರಿನ ಲಷ್ಕರ್ ಮೊಹಲ್ಲಾದ ಅಫ್ಸಾನ್ ಖಾನ್ (23), ರುಮಾನ್ ಪಾಷ (22) ಬಂಧಿತರು. ಕೆ.ಆರ್.ನಗರ ತಾಲೂಕಿನ ದೊಡ್ಡಳ್ಳಿ ಸಂತೆ ಯಿಂದ ಗೋವುಗಳನ್ನು ಖರೀದಿಸಿ ಮೈಸೂರಿನ ಕಸಾಯಿಖಾನೆಗೆ ಬೊಲೆರೋ ಪಿಕ್‍ಅಪ್ (ಕೆಎ: 51-9970) ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಕೆ.ಆರ್.ಮಿಲ್ ಕಾಲೋನಿ ಬಳಿ ಸಿಕ್ಕಿಬಿದ್ದಿದ್ದಾರೆ. ರಕ್ಷಿಸಿದ ಗೋವುಗಳನ್ನು ಮೈಸೂರಿನ ಚಾಮುಂಡಿಬೆಟ್ಟದ…
ಮುಂದುವರೆದ ಕೋವಿಡ್-19 ಆತಂಕ: ಮೈಸೂರಿನ ಯೋಗ ಪ್ರವಾಸೋದ್ಯಮವೂ ಕುಸಿತ
March 12, 2020ಮೈಸೂರಿಗೆ ಬರುತ್ತಿಲ್ಲ ವಿದೇಶಿ ವಿದ್ಯಾರ್ಥಿಗಳು, ವಾಸ್ತವ್ಯ ವಿಸ್ತರಿಸಿದ ತರಬೇತಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಮೈಸೂರು, ಮಾ.11(ಆರ್‍ಕೆ)- ಕೊರೊನಾ (ಕೋವಿಡ್-19) ಮಾರಣಾಂತಿಕ ವೈರಸ್ ಪ್ರಬಲವಾಗಿ ವ್ಯಾಪಿಸುತ್ತಿರುವುದರಿಂದ ಮೈಸೂರಿನ ಯೋಗ ಪ್ರವಾಸೋದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ವಿದೇಶಗಳಲ್ಲಿ ಕೋವಿಡ್-19 ವ್ಯಾಪಕ ವಾಗಿ ಹರಡುತ್ತಿರುವುದು ಖಚಿತವಾಗಿರು ವುದರಿಂದ ವಿದೇಶಿ ಪ್ರವಾಸಿಗರು ಹಾಗೂ ಯೋಗ ವಿದ್ಯಾರ್ಥಿಗಳು ಮೈಸೂರಿಗೆ ಕೈ ಗೊಂಡಿದ್ದ ಪ್ರವಾಸವನ್ನು ರದ್ದುಪಡಿಸಿದ್ದು, ಯೋಗ ಕಲಿಯಲು ಮೈಸೂರಿಗೆ ಈಗಾ ಗಲೇ ಬಂದಿದ್ದ ಹಲವು ವಿದೇಶಿ ವಿದ್ಯಾರ್ಥಿ ಗಳು ಕೊರೊನಾ ವೈರಸ್ ಭೀತಿಯಿಂದಾಗಿ ತಮ್ಮ…
ದೊಡ್ಡಾಸ್ಪತ್ರೆಯಲ್ಲಿ ದೊಡ್ಡ ಸಮಸ್ಯೆ!?
March 12, 2020ಮೈಸೂರು, ಮಾ.10(ಎಂಕೆ)- ನೋ ಸ್ಟಾಕ್, ನೋ ಸ್ಟಾಕ್… ಇಲ್ಲಿ ರಿಪೋರ್ಟ್ ಸರಿಯಿಲ್ಲ ರೀ, ಹೊರಗಡೆ ಮಾಡಿಸಿ ಕೊಂಡ್ ಬನ್ನಿ… ಮೆಡಿಸಿನ್ ತಂದ್ರೆ ಟ್ರೀಟ್‍ಮೆಂಟ್ ಕೊಡ್ತಿವೀ… ನಮ್ಮಲ್ಲಿ ಟಿಟಿ ಇಂಜೆಕ್ಷನ್ನೇ ಇಲ್ಲ ರೀ…! ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಕರೆಯ ಲ್ಪಡುವ ಕೆ.ಆರ್.ಆಸ್ಪತ್ರೆಯಲ್ಲಿ ಬಡರೋಗಿ ಗಳಿಗೆ ವೈದ್ಯರಾಡುವ ಬಿಚ್ಚುನುಡಿಗಳಿವು. ಹೌದು! ಬಡವರು, ಆರ್ಥಿಕವಾಗಿ ಹಿಂದು ಳಿದವರು ಅರಸಿ ಬರುವ ಕೆ.ಆರ್. ಆಸ್ಪತ್ರೆ ಯಲ್ಲಿ ಸಾಧಾರಣ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. 10 ರೂ. ಚೀಟಿ ಕೊಂಡರೇ ಸಾಕು ಉಚಿತ ಅಥವಾ ಕಡಿಮೆ…
ಮುಡಾ ನಿವೇಶನ ಕಬಳಿಸಿದ `ನಕಲಿ ವ್ಯಕ್ತಿ’: ಪೊಲೀಸರಿಗೆ ದೂರು ನೀಡಿ ವರ್ಷವಾದರೂ ಎಫ್‍ಐಆರ್ ಮಾತ್ರ ಆಗಿಲ್ಲ!
March 12, 2020ಮುಡಾ ನಿವೇಶನ ಪಡೆದವರು ಎಚ್ಚರದ ಮೇಲೆ ಎಚ್ಚರ ವಹಿಸಬೇಕಿದೆ ಮೈಸೂರು, ಮಾ.11-ವ್ಯಕ್ತಿಯೋರ್ವರಿಗೆ ಮಂಜೂರಾಗಿದ್ದ ಲಕ್ಷಾಂತರ ರೂ. ಮೌಲ್ಯದ ಮುಡಾ ನಿವೇಶನವನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿರುವ ಬಗ್ಗೆ ಮುಡಾ ಅಧಿ ಕಾರಿಗಳೇ ಪೊಲೀಸರಿಗೆ ದೂರು ಸಲ್ಲಿಸಿ ವರ್ಷವಾದರೂ ಆ ದೂರನ್ನು ಇನ್ನೂ ದಾಖ ಲಿಸಿಕೊಳ್ಳದೇ ಇರುವ ಬಗ್ಗೆ ವರದಿಯಾಗಿದೆ. ನಿವೇಶನದ ಮೂಲ ಮಂಜೂರಾತಿದಾ ರನ ಹೆಸರಿನಲ್ಲೇ ನಕಲಿ ವ್ಯಕ್ತಿ ಕ್ಲಿಯರ್ ಟೈಟಲ್ ಡೀಡ್ ಪಡೆದು ನಿವೇಶನವನ್ನು ಮಾರಾಟ ಮಾಡಿದ್ದು, ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ಕ್ರಮ…
ಟರ್ಕಿ ಪ್ರವಾಸದಿಂದ ಮರಳಿದ ಮಾನಸ ಗಂಗೋತ್ರಿ ಅತಿಥಿ ಪ್ರಾಧ್ಯಾಪಕ ನಾಪತ್ತೆ
March 12, 2020ಮೈಸೂರು, ಮಾ. 11- ಟರ್ಕಿ ಪ್ರವಾಸದಿಂದ ಮರಳಿದ ಮಾನಸ ಗಂಗೋತ್ರಿ ಅತಿಥಿ ಪ್ರಾಧ್ಯಾಪಕ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಮೈಸೂರಿನ ಚದುರಂಗ ರಸ್ತೆಯಲ್ಲಿ ರುವ ಯೂನಿವರ್ಸಿಟಿ ಕ್ವಾರ್ಟರ್ಸ್ ನಿವಾಸಿ ಪ್ರಾಧ್ಯಾಪಕ ಟಿ.ಆರ್. ಸ್ವರೂಪ್(33) ಅಧ್ಯ ಯನಕ್ಕಾಗಿ ಫೆಬ್ರವರಿ 1ರಂದು ಟರ್ಕಿಗೆ ತೆರಳಿ ಮಾರ್ಚ್ 2ರಂದು ವಾಪಸ್ಸಾಗಿದ್ದರು. ಅಂದಿನಿಂದ ಯಾರ ಜೊತೆ ಯಲ್ಲೂ ಸರಿಯಾಗಿ ಮಾತನಾಡದೇ ಮೌನಿಯಾಗಿದ್ದರು. ಮಾರ್ಚ್ 7ರಂದು ಬೆಳಿಗ್ಗೆ ಡಿಪಾರ್ಟ್‍ಮೆಂಟ್‍ಗೆ ಹೋಗುತ್ತೇನೆ ಎಂದು ಹೋದವರು ಮತ್ತೆ ವಾಪಸ್ಸಾಗಿಲ್ಲ ಎಂದು ಅವರ ಪತ್ನಿ ಶ್ರೀಮತಿ ಎ.ಎಸ್. ಪುಣ್ಯಶ್ರೀ ಪೊಲೀಸರಿಗೆ…