ಮೈಸೂರು, ಮಾ.10(ಎಂಕೆ)- ನೋ ಸ್ಟಾಕ್, ನೋ ಸ್ಟಾಕ್… ಇಲ್ಲಿ ರಿಪೋರ್ಟ್ ಸರಿಯಿಲ್ಲ ರೀ, ಹೊರಗಡೆ ಮಾಡಿಸಿ ಕೊಂಡ್ ಬನ್ನಿ… ಮೆಡಿಸಿನ್ ತಂದ್ರೆ ಟ್ರೀಟ್‍ಮೆಂಟ್ ಕೊಡ್ತಿವೀ… ನಮ್ಮಲ್ಲಿ ಟಿಟಿ ಇಂಜೆಕ್ಷನ್ನೇ ಇಲ್ಲ ರೀ…!
ಮೈಸೂರಿನ ದೊಡ್ಡಾಸ್ಪತ್ರೆ ಎಂದೇ ಕರೆಯ ಲ್ಪಡುವ ಕೆ.ಆರ್.ಆಸ್ಪತ್ರೆಯಲ್ಲಿ ಬಡರೋಗಿ ಗಳಿಗೆ ವೈದ್ಯರಾಡುವ ಬಿಚ್ಚುನುಡಿಗಳಿವು. ಹೌದು! ಬಡವರು, ಆರ್ಥಿಕವಾಗಿ ಹಿಂದು ಳಿದವರು ಅರಸಿ ಬರುವ ಕೆ.ಆರ್. ಆಸ್ಪತ್ರೆ ಯಲ್ಲಿ ಸಾಧಾರಣ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. 10 ರೂ. ಚೀಟಿ ಕೊಂಡರೇ ಸಾಕು ಉಚಿತ ಅಥವಾ ಕಡಿಮೆ ಖರ್ಚಿನ ಚಿಕಿತ್ಸೆ ದೊರಕುತ್ತದೆ ಎಂದು ಪ್ರತಿನಿತ್ಯ ಬರುವ ಸಾವಿರಾರು ರೋಗಿಗಳಿಗೆ ಚಿಕಿತ್ಸಾ ಸೌಲಭ್ಯಗಳಿದ್ದರೂ ಇಲ್ಲದಂತಾಗಿದೆ.
ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ ಹಾಗೂ ಉತ್ಕøಷ್ಟ ಗುಣಮಟ್ಟದ ಸ್ಕ್ಯಾನಿಂಗ್ ಸೌಲಭ್ಯ ಗಳನ್ನು ಹೊಂದಿದ್ದರೂ, ಎಕ್ಸ್‍ರೇ, ಮೆಡಿ ಸಿನ್, ಎಂಆರ್‍ಐ ಸ್ಕ್ಯಾನಿಂಗ್, ರಕ್ತ ಪರೀಕ್ಷೆ ಗಳು ಹಾಗೂ ಇನ್ನಿತರೆ ಚಿಕಿತ್ಸೆಗಳಿಗೆ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ಸ್ ಮತ್ತು ಲ್ಯಾಬ್ ಗಳಿಗೆ ಬರೆದುಕೊಡಲಾಗುತ್ತಿದೆ.
ಹೊರರೋಗಿ ವಿಭಾಗ ಹಾಗೂ ತುರ್ತು ಚಿಕಿತ್ಸಾ ವಿಭಾಗದ ವೈದ್ಯರು ಕರ್ತವ್ಯ ನಿರ್ವಹಿಸುವ ಟೇಬಲ್ ಮೇಲೆ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ಸ್ ಮತ್ತು ಲ್ಯಾಬ್ ಗಳಿಗೆ ಸಂಬಂಧಿಸಿದ ಫಾರಂಗಳಿರು ವುದು, ವಿಸಿಟಿಂಗ್ ಕಾರ್ಡ್ ಇರುವುದು ಇದಕ್ಕೆ ಸಾಕ್ಷಿಯಾಗಿದೆ.
ಪ್ರತಿನಿತ್ಯ ಸಾವಿರಾರು ಮಂದಿ ರೋಗಿ ಗಳು ಭೇಟಿ ನೀಡಲಿದ್ದು, ಅದರಲ್ಲಿ ಅರ್ಧ ದಷ್ಟು ರೋಗಿಗಳ ಕಾಯಿಲೆಗೆ ಸಂಬಂಧಿಸಿ ದಂತೆ ತಪಾಸಣೆ ಅಥವಾ ರಕ್ಷ ಪರಿ ಶೀಲನೆಗಳನ್ನು ಮಾಡಿಸುವಂತೆ ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್ಸ್ ಮತ್ತು ಲ್ಯಾಬ್ ಗಳಿಗೆ ಚೀಟಿ ಬರೆಯಲಾಗುತ್ತಿದೆ. ಉಚಿತ ಅಥವಾ ಕಡಿಮೆ ಖರ್ಚಿನ ಚಿಕಿತ್ಸೆ ದೊರಕ ಲಿದೆ ಎಂದು ಬರುವ ರೋಗಿಗಳು ಇತ್ತ ಚಿಕಿತ್ಸೆಯನ್ನು ಪಡೆಯದೆ, ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಪಘಾತದಂತಹ ತುರ್ತು ಚಿಕಿತ್ಸಾ ಕೇಸುಗಳು ಬಂದಾಗ ಅಗತ್ಯವಾಗಿ ಬೇಕಾಗುವ ಟಿಟಿ ಇಂಜೆಕ್ಷನ್ ಗಳು ಸ್ಟಾಕ್ ಇಲ್ಲದೆ ಹೊರಗಡೆಯಿಂದ ತರಿಸಿಕೊಂಡು ನೀಡಬೇಕಾಗುತ್ತದೆ. ಒಂದು ಬಾರಿ ನೀಡುವ ಸ್ಟಾಕ್‍ಗಳಲ್ಲೇ ಮೂರ್ನಾಕು ದಿನಗಳು ನಿರ್ವಹಿಸಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಮುರುಕಲು ವ್ಹೀಲ್ ಚೇರ್, ಟ್ರಾಲಿ ಬಳಕೆ: ಕೆ.ಆರ್.ಆಸ್ಪತ್ರೆಯಲ್ಲಿ ರೋಗಿಗಳನ್ನು ಕೂರಿಸಿ ಅಥವಾ ಮಲಗಿಸಿಕೊಂಡು ಸಾಗಿ ಸಲು ಬಳಸುವ ವ್ಹೀಲ್ ಚೇರ್‍ಗಳು ಮತ್ತು ಟ್ರಾಲಿಗಳಲ್ಲಿ ಭಾಗಶಃ ಶೇ.50 ರಷ್ಟು ಮುರಿ ದಿದ್ದು, ಅವುಗಳನ್ನು ಸರಿಪಡಿಸುವ ಅಥವಾ ಬಣ್ಣ ಬಳಿಯುವ ಕೆಲಸವನ್ನು ಮಾಡದಿ ರುವುದು ಬೇಸರದ ಸಂಗತಿಯಾಗಿದೆ.
ಡಾಕ್ಟರ್ಸ್, ನರ್ಸ್ ಅಲ್ವೇಸ್ ಬಿಜಿ: ರೋಗಿ ಗಳಿಗೆ ಚಿಕಿತ್ಸೆ ನೀಡುವ ಬದಲು ಮೊಬೈಲ್‍ನಲ್ಲೇ ವೈದ್ಯರು, ನರ್ಸ್‍ಗಳು ನಿರತರಾಗಿರುವುದು ಸಾಮಾನ್ಯವಾಗಿದೆ. ತುರ್ತುಚಿಕಿತ್ಸಾ ಘಟಕದ 8 ವಾರ್ಡ್‍ನಲ್ಲಿ ಟ್ರೈನಿಂಗ್ ವೈದ್ಯರೇ ಹೆಚ್ಚಾಗಿದ್ದು, ಕೆಲ ವರು ಚಿಕಿತ್ಸೆ ನೀಡುವಲ್ಲಿ ನಿರತರಾದರೆ ಹಲವರು ಇಂಜೆಕ್ಷನ್ ನೀಡುವ ಸ್ಥಳದಲ್ಲಿ ಕುಳಿತು ಮೊಬೈಲ್ ವೀಕ್ಷಣೆ ಮಾಡುವುದು ಹೆಚ್ಚಾಗಿದೆ. ವೈದ್ಯರೇ ಮೊಬೈಲ್‍ನಲ್ಲಿ ಮೈಮರೆ ತರೆ ರೋಗಿಗಳ ಪಾಡೇನು ಎಂದು ಆಸ್ಪತ್ರೆಗೆ ಭೇಟಿ ನೀಡಿದ ರೋಗಿಯೊಬ್ಬರು ‘ಮೈಸೂರು ಮಿತ್ರ’ನಲ್ಲಿ ದೂರಿದರು.
ಪಾರ್ಕ್ ಪಾರ್ಕಿಂಗ್: ಆಸ್ಪತ್ರೆ ಮುಂದಿ ರುವ ಉದ್ಯಾನವನ ಸಂಪೂರ್ಣ ಪಾರ್ಕಿಂಗ್ ಸ್ಥಳವಾಗಿ ಮಾರ್ಪಟ್ಟಿದೆ. ಆಸ್ಪತ್ರೆ ಆವರಣ ಸ್ವಚ್ಛ ಮತ್ತು ಹಸಿರಿನಿಂದ ಕೂಡಿರಲಿ ಎಂದು ವಿವಿಧ ಬಗೆ ಮರ-ಗಿಡಗಳನ್ನು ಬೆಳೆಸಿ ದ್ದರೂ ಅವುಗಳ ನಡುವೆಯೇ ಕಾರು, ಬೈಕ್‍ಗಳನ್ನು ಪಾರ್ಕಿಂಗ್ ಮಾಡುತ್ತಿರು ವುದರಿಂದ ಹಸಿರೆಂಬುದೇ ಮಾಯವಾಗಿ ಧೂಳಿನ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಒಳ ಅಥವಾ ಹೊರ ರೋಗಿಗಳ ಸಂಬಂಧಿಕರು ಕುಳಿತು ವಿಶ್ರಾಂತಿ ಪಡೆ ಯಲು ಸ್ಥಳವಿಲ್ಲದಂತಾಗಿದೆ.
ಅನೈರ್ಮಲ್ಯ: ಆಸ್ಪತ್ರೆಯಲ್ಲಿರುವ ಶೌಚಾ ಲಯಗಳು ದುರ್ವಾಸನೆಯಿಂದ ಕೂಡಿದ್ದು, ರೋಗಿಗಳ ಬಳಸಲು ಹಿಂದೇಟು ಹಾಕುತ್ತಿ ದ್ದಾರೆ. ಹಳೇ ಜಯದೇವ ಆಸ್ಪತ್ರೆ ಕಟ್ಟಡ ದಲ್ಲಂತೂ ಶೌಚಾಲಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಒಳರೋಗಿಗಳು ಪರದಾ ಡುವ ಸ್ಥಿತಿಯುಂಟಾಗಿದೆ. ಜತೆಗೆ ಆಸ್ಪತ್ರೆ ಆವರಣದ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ವಸ್ತು ಗಳ ಕಸದ ರಾಶಿ ಸಾಮಾನ್ಯವಾಗಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ.