ಟರ್ಕಿ ಪ್ರವಾಸದಿಂದ ಮರಳಿದ ಮಾನಸ ಗಂಗೋತ್ರಿ ಅತಿಥಿ ಪ್ರಾಧ್ಯಾಪಕ ನಾಪತ್ತೆ
ಮೈಸೂರು

ಟರ್ಕಿ ಪ್ರವಾಸದಿಂದ ಮರಳಿದ ಮಾನಸ ಗಂಗೋತ್ರಿ ಅತಿಥಿ ಪ್ರಾಧ್ಯಾಪಕ ನಾಪತ್ತೆ

March 12, 2020

ಮೈಸೂರು, ಮಾ. 11- ಟರ್ಕಿ ಪ್ರವಾಸದಿಂದ ಮರಳಿದ ಮಾನಸ ಗಂಗೋತ್ರಿ ಅತಿಥಿ ಪ್ರಾಧ್ಯಾಪಕ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

ಮೈಸೂರಿನ ಚದುರಂಗ ರಸ್ತೆಯಲ್ಲಿ ರುವ ಯೂನಿವರ್ಸಿಟಿ ಕ್ವಾರ್ಟರ್ಸ್ ನಿವಾಸಿ ಪ್ರಾಧ್ಯಾಪಕ ಟಿ.ಆರ್. ಸ್ವರೂಪ್(33) ಅಧ್ಯ ಯನಕ್ಕಾಗಿ ಫೆಬ್ರವರಿ 1ರಂದು ಟರ್ಕಿಗೆ ತೆರಳಿ ಮಾರ್ಚ್ 2ರಂದು ವಾಪಸ್ಸಾಗಿದ್ದರು. ಅಂದಿನಿಂದ ಯಾರ ಜೊತೆ ಯಲ್ಲೂ ಸರಿಯಾಗಿ ಮಾತನಾಡದೇ ಮೌನಿಯಾಗಿದ್ದರು. ಮಾರ್ಚ್ 7ರಂದು ಬೆಳಿಗ್ಗೆ ಡಿಪಾರ್ಟ್‍ಮೆಂಟ್‍ಗೆ ಹೋಗುತ್ತೇನೆ ಎಂದು ಹೋದವರು ಮತ್ತೆ ವಾಪಸ್ಸಾಗಿಲ್ಲ ಎಂದು ಅವರ ಪತ್ನಿ ಶ್ರೀಮತಿ ಎ.ಎಸ್. ಪುಣ್ಯಶ್ರೀ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇವರ ಬಗ್ಗೆ ಮಾಹಿತಿ ಇರುವವರು ಜಯಲಕ್ಷ್ಮಿಪುರಂ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2418316 ಅಥವಾ ನಗರ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆ 2418339 ಅನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ಕೋರಿದೆ.

Translate »