ಸರ್ಕಾರದ ಹಣಕ್ಕೆ ಕಾಯದೇ ಜನಬೆಂಬಲ ಪಡೆದು ನಾಟಕ ರೂಪಿಸಿ
ಮೈಸೂರು

ಸರ್ಕಾರದ ಹಣಕ್ಕೆ ಕಾಯದೇ ಜನಬೆಂಬಲ ಪಡೆದು ನಾಟಕ ರೂಪಿಸಿ

March 13, 2020

ಮೈಸೂರು,ಮಾ.12(ವೈಡಿಎಸ್)-ನಾಟಕೋತ್ಸವ ಕ್ಕಾಗಿ ಸರ್ಕಾರದ ಅನುದಾನ ಕಾಯಬೇಕಾದ ಅಗತ್ಯವಿಲ್ಲ. ಜನರ ಬೆಂಬಲ ಪಡೆದು ನಾಟಕಗಳನ್ನು ರೂಪಿಸಬೇಕು ಎಂದು ರಂಗ ನಿರ್ದೇಶಕ ಬಿ.ಸುರೇಶ್ ಸಲಹೆ ನೀಡಿದರು.

ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ `ಅಭಿಯಂತರರು’ ತಂಡವು ತಂಜಾವೂರಿನ `ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರ’ದ ಸಹಯೋಗದಲ್ಲಿ ನಡೆಯುತ್ತಿರುವ 4 ದಿನಗಳ `ರಾಷ್ಟ್ರೀಯ ರಂಗ ಉತ್ಸವ’ ವನ್ನು ಗುರುವಾರ ಉದ್ಘಾಟಿಸಿ, ಮಾತನಾಡಿದರು.

ಕಡಿಮೆ ಹಣದಲ್ಲೂ ಒಳ್ಳೆಯ ನಾಟಕ ಪ್ರದರ್ಶಿಸಬಹುದು. ರಂಗ ಚಳವಳಿ ಶಾಶ್ವತವಾಗಬೇಕಾದರೆ ಜನರ ಬೆಂಬಲ ಅಗತ್ಯ. ಸರ್ಕಾರದಿಂದ ಹಣ, ಬೆಂಬಲ ಪಡೆದರೆ ಆಳುವವರನ್ನು ಪ್ರಶ್ನಿಸಲು ಸಾಧ್ಯವಾಗದು ಎಂದರು.

ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಕಾಲದಲ್ಲಿದ್ದೇವೆ. ನಾಟಕವನ್ನು ಪ್ರತಿಭಟನೆಯ ಅತಿದೊಡ್ಡ ಅಸ್ತ್ರವಾಗಿ ಬಳಸ ಬೇಕಿದೆ. ಸುದ್ದಿವಾಹಿನಿಗಳು ಮತ್ತು ಸಾಮಾಜಿಕ ಜಾಲ ತಾಣಗಳು ಸುಳ್ಳನ್ನೇ ಸತ್ಯ ಎಂದು ಬಿಂಬಿಸಲು ಹೊರ ಟಿವೆ. ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಟಿವಿ ವೀಕ್ಷಣೆಯಿಂದ ದೂರವಿರಬೇಕು ಎಂದರು.

ಇಂದು ರಂಗಭೂಮಿ ಕಟ್ಟಿ ಬೆಳೆಸುವವರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಟಿವಿ ಮಾಧ್ಯಮಗಳು ಸುಳ್ಳು ಹೇಳುವ ಮಾಧ್ಯಮವಾಗಿದ್ದರೆ ಕೆಲವು ಪತ್ರಿಕೆ ಗಳು ಆಳುವ ಪಕ್ಷದ ಮುಖವಾಣಿಯಾಗಿ ಕೆಲಸ ಮಾಡು ತ್ತಿವೆ. ಜತೆಗೆ ಸಿನಿಮಾ, ಧಾರಾವಾಹಿಗಳು ಕೇವಲ ಸರಕು ಮಾರಾಟ ಮಾಡುವ ಕೆಲಸ ಮಾಡುತ್ತಿವೆ. ನಾನು ಮಾಡಿದ ಸಿನಿಮಾಗಳು ಸಹ ಇಂಥದ್ದೇ ತಪ್ಪನ್ನು ಮಾಡಿವೆ. ಹಾಗಾಗಿ ರಂಗಭೂಮಿ ಮೂಲಕ ಜನರಿಗೆ ಸತ್ಯ-ಸುಳ್ಳು ಯಾವುದು ಎಂಬುದರ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಅವರು ನುಡಿದರು.

ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಬಹುತೇಕ ಟಿವಿ ಮಾಧ್ಯಮ, ಪತ್ರಿಕೆಗಳು ಆಳುವ ಪಕ್ಷದ ಮುಖವಾಣಿಯಾಗಿವೆ ಎಂದು ಸುರೇಶ್ ಹೇಳಿದರು. ಆದರೆ, ಎಲ್ಲಾ ಪತ್ರಿಕೆಗಳು, ಸುದ್ದಿ ವಾಹಿನಿ ಗಳು ಕೇಂದ್ರ ಸರ್ಕಾರದ ಪರವಾಗಿವೆ ಎಂಬುದು ಸುಳ್ಳು. ಬಹಳಷ್ಟು ಪತ್ರಿಕೆಗಳು, ಟಿವಿಗಳು ಕೇಂದ್ರದ ವಿರುದ್ಧ ಸುಳ್ಳನ್ನೂ ಹೇಳುತ್ತಿವೆ. ಹಾಗಾಗಿ ಇದೇ ಸತ್ಯ ವೆಂದು ನಂಬಲಾಗದು. ಸುಳ್ಳು ಯಾವುದು ಎಂಬು ದನ್ನು ತಿಳಿಯಬೇಕಿದೆ ಎಂದು ಗಮನ ಸೆಳೆದರು.

ಮೊದಲೆಲ್ಲಾ ಪತ್ರಿಕೆಗಳಲ್ಲಿ ತೇಜೋವಧೆಯಾದರೆ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದರು. ಇಂದು ಸಾಮಾ ಜಿಕ ಜಾಲತಾಣದಲ್ಲಿ ವ್ಯಕ್ತಿಯನ್ನು ಭ್ರಷ್ಟ, ಕಳ್ಳ, ಕ್ರಿಮಿನಲ್ ಎಂದು ತೇಜೋವಧೆ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಂಗಭೂಮಿ ಮನುಷ್ಯರನ್ನು ಬೆಸೆಯುವ ಕೆಲಸ ಮಾಡಬೇಕು ಎಂದರು. ನಂತರ ಶಿವಮೊಗ್ಗದ ಹೊಂಗಿರಣ ತಂಡವು ಡಾ.ಸಾಸ್ವೆಹಳ್ಳಿ ಸತೀಶ್ ನಿರ್ದೇ ಶನದ `ಹೂವು’(ಕನ್ನಡ) ನಾಟಕ ಪ್ರದರ್ಶಿಸಿತು. ದಕ್ಷಿಣ ವಲಯ ಸಾಂಸ್ಕøತಿಕ ಕೇಂದ್ರದ ಸದಸ್ಯ ತೋ. ನಂಜುಂಡಸ್ವಾಮಿ, `ಅಭಿಯಂತರರು’ ತಂಡದ ಅಧ್ಯಕ್ಷ ಹೆಚ್.ಎಸ್.ಸುರೇಶ್‍ಬಾಬು ಉಪಸ್ಥಿತರಿದ್ದರು.

Translate »