ಮೈಸೂರು ಪಾಲಿಕೆಗೆ ನೇರ ನೇಮಕಾತಿಯಲ್ಲಿ ಇಬ್ಬರು ಗುತ್ತಿಗೆ ಪೌರಕಾರ್ಮಿಕರ ಕೈಬಿಟ್ಟಿದ್ದಕ್ಕೆ ಪ್ರತಿಭಟನೆ
ಮೈಸೂರು

ಮೈಸೂರು ಪಾಲಿಕೆಗೆ ನೇರ ನೇಮಕಾತಿಯಲ್ಲಿ ಇಬ್ಬರು ಗುತ್ತಿಗೆ ಪೌರಕಾರ್ಮಿಕರ ಕೈಬಿಟ್ಟಿದ್ದಕ್ಕೆ ಪ್ರತಿಭಟನೆ

March 13, 2020

ಮೈಸೂರು, ಮಾ.12(ಪಿಎಂ)- ಮೈಸೂರು ಮಹಾನಗರ ಪಾಲಿಕೆಯ ಪೌರಕಾರ್ಮಿಕ ಹುದ್ದೆಗೆ ನೇರ ನೇಮ ಕಾತಿಯಲ್ಲಿ ಆಯ್ಕೆಯಾಗಿದ್ದ ಚಿನ್ನಸ್ವಾಮಿ ಮತ್ತು ಆರ್ಮುಗಂ ಎಂಬುವರನ್ನು ಏಕಾಏಕಿ ಕೈಬಿಡಲಾಗಿದೆ ಎಂದು ಆರೋಪಿಸಿ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.

ಮೈಸೂರು ಡಿಸಿ ಕಚೇರಿ ಎದುರು ಜಮಾ ವಣೆಗೊಂಡ ಗುತ್ತಿಗೆ ಪೌರಕಾರ್ಮಿಕರು, ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಪದ್ಧತಿ ರದ್ದುಪಡಿಸಿದ ಬಳಿಕ ಮೈಸೂರು ಪಾಲಿಕೆಯಲ್ಲಿ ಪೌರಕಾರ್ಮಿಕರ ನೇರ ನೇಮಕಕ್ಕೆ ಅಧಿಸೂಚನೆ ಹೊರಡಿಸ ಲಾಯಿತು. ಈ ನೇಮಕ ಪ್ರಕ್ರಿಯೆಯಲ್ಲಿ ನಿಯಮಬದ್ಧವಾಗಿಯೇ ಆಯ್ಕೆಯಾಗಿದ್ದ ಚಿನ್ನಸ್ವಾಮಿ ಮತ್ತು ಆರ್ಮುಗಂ ಹೆಸರು ತಾತ್ಕಾಲಿಕ ಪಟ್ಟಿಯಲ್ಲಿತ್ತು. ಆದರೆ ಕೊನೆ ಹಂತದಲ್ಲಿ ಇಬ್ಬರನ್ನೂ ಕೈಬಿಟ್ಟಿರುವುದು ಎಷ್ಟು ಸರಿ? ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಹಂಗಾಮಿ `ಸೂಪರ್‍ವೈಸರ್’ ಹುದ್ದೆ ಯಲ್ಲಿದ್ದವರೂ ತಾವು `ಪೌರಕಾರ್ಮಿಕರು’ ಎಂದು ಸುಳ್ಳು ದೃಢೀಕರಣ ಪತ್ರ ನೀಡಿ ಪೌರಕಾರ್ಮಿಕ ಹುದ್ದೆಗೆ ಅರ್ಜಿ ಸಲ್ಲಿಸಿ ದ್ದರು. ಸುಳ್ಳು ದೃಢೀಕರಣ ಪತ್ರದ ಆಧಾ ರದ ಮೇಲೆ ಹಂಗಾಮಿ `ಸೂಪರ್ ವೈಸರ್’ಗಳ ಅರ್ಜಿ ಸ್ವೀಕೃತವಾಗಿ ನೇರ ನೇಮಕದ ಅಂತಿಮ ಪಟ್ಟಿಗೂ ಹೆಸರು ಸೇರ್ಪಡೆಯಾಗಿದೆ. ಆದರೆ, ನೈಜ ಹಂಗಾಮಿ ಪೌರಕಾರ್ಮಿಕರಾದ ಚಿನ್ನ ಸ್ವಾಮಿ ಮತ್ತು ಆರ್ಮುಗಂ ಹೆಸರನ್ನು ಅಂತಿಮ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಆಕ್ಷೇಪಿಸಿದರು.

ನೈಜ ಹಂಗಾಮಿ ಪೌರಕಾರ್ಮಿಕರಿಗೆ ಅನ್ಯಾಯವಾಗಲು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು, ನಗರಪಾಲಿಕೆ ಆರೋಗ್ಯ ಅಧಿಕಾರಿ, ಪಾಲಿಕೆ ಪರಿವೀಕ್ಷಕರು ಹಾಗೂ ಪರಿಸರ ಅಭಿಯಂತರರೇ ಕಾರಣ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಚಿನ್ನಸ್ವಾಮಿ, ಆರ್ಮುಗಂ, ಮುಖಂಡ ರಾದ ಆರ್ಟಿಸ್ಟ್ ಎಸ್.ನಾಗರಾಜು, ಎಂ.ಮಹದೇವ, ಮಧುವನ ಚಂದ್ರು, ಪಿ.ಮಂಜುನಾಥ್, ದಸಂಸದ ಮಹ ದೇವ, ಎನ್.ಪಿ.ಗುರುದತ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Translate »