ಮೈಸೂರು,ಮಾ.12-ಮೈಸೂರಿನ ನೃತ್ಯ ವಿದ್ಯಾ ಪೀಠವು ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾ ಸಭಾಂಗಣದಲ್ಲಿ ಮಾ.14ರಂದು ಸಂಜೆ 6 ಗಂಟೆಗೆ ಕು.ಬೃಂದಾ ನಂಜುಂಡಸ್ವಾಮಿ ಅವರಿಂದ ನೃತ್ಯ ವಂದನಂ ಭರತನಾಟ್ಯ, ಏಕವ್ಯಕ್ತಿ ಪ್ರದರ್ಶನದ ಮೂಲಕ ಗುರುಪ್ರಣಾಮ ಕಾರ್ಯ ಕ್ರಮ ಆಯೋಜಿಸಿದೆ. ಕಾರ್ಯಕ್ರಮವನ್ನು ಶ್ರೀ ಉಮಾ ಮಹೇಶ್ವರಿ ನೃತ್ಯಕಲಾ ಕ್ಷೇತ್ರದ ನಿರ್ದೇಶಕ ವಿದುಷಿ ಟಿ.ಎಸ್. ಶ್ರೀಲಕ್ಷ್ಮಿ ಕುಮಾರ್ ಉದ್ಘಾಟಿಸು ವರು. ಮುಖ್ಯ ಅತಿಥಿಗಳಾಗಿ ಮೈಸೂರು ವಿಶ್ವ ವಿದ್ಯಾನಿಲಯ ನಿವೃತ್ತ ಸಂಸ್ಕøತ ಪ್ರಾಧ್ಯಾಪಕ ಕೆ.ಎಲ್.ಪ್ರಸನ್ನಾಕ್ಷಿ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಬಿ.ಕೆ.ಸಂಧ್ಯಾ ಭಾಗವಹಿಸುವರು.