ಮೈಸೂರು, ಮಾ.6(ಆರ್‍ಕೆ)-ಗ್ರಾಮ ದೇವತೆ ಹಬ್ಬದ ಸಿದ್ಧತೆ ವೇಳೆ ಉಂಟಾದ ಗಲಾಟೆಯಲ್ಲಿ ಮಧ್ಯ ಪ್ರವೇಶಿಸಿ, ಸಮಾಧಾನಪಡಿಸಲೆತ್ನಿಸಿದ ಮಾಜಿ ಕಾರ್ಪೊರೇಟರ್ ರಜನಿ ಅವರ ಪತಿ ಅಣ್ಣಯ್ಯರ ಮೇಲೆ ಲಾಂಗ್‍ನಿಂದ ಹಲ್ಲೆ ನಡೆಸಿ ಗಾಯಗೊಳಿಸಿ ರುವ ಘಟನೆ ಮೈಸೂರು ತಾಲೂಕು ಯರಗನ ಹಳ್ಳಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ಘಟನೆಯಲ್ಲಿ ತಲೆಗೆ ಗಾಯಗಳಾಗಿರುವ ಸಿದ್ದೇಗೌಡರ ಮಗ ಅಣ್ಣಯ್ಯರನ್ನು ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಣ್ಣಯ್ಯ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಚೇತರಿಸಿಕೊಳ್ಳುತ್ತಿ ದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅಣ್ಣಯ್ಯರ ಮೇಲೆ ಹಲ್ಲೆ ನಡೆಸಿ, ಅವರ…
ಮಾವನ ಎದುರೇ ಮಚ್ಚಿನಿಂದ ಕೊಚ್ಚಿ ಪತ್ನಿ ಕೊಂದ ಪತಿ
March 7, 2020ಮೈಸೂರು,ಮಾ.6(ಆರ್‍ಕೆ)- ಮಾವನ ಎದುರೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿ ಯೋರ್ವ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿರುವ ಪೈಶಾಚಿಕ ಕೃತ್ಯ ಮೈಸೂರು ತಾಲೂಕು ಇಲವಾಲ ಹೋಬಳಿ, ಹೊಸಕಾಮನಕೊಪ್ಪಲು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ. ಹೊಸಕಾಮನಕೊಪ್ಪಲಿನ ನಾಗೇಶ (38), ತನ್ನ ಪತ್ನಿ ಶ್ರೀಮತಿ ಮಮತಾ (26)ರನ್ನು ಕೊಲೆ ಮಾಡಿದವನಾಗಿದ್ದು, ಆತನನ್ನು ಇಲವಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಾರ್ ಬೆಂಡಿಂಗ್ ಕೆಲಸ ಮಾಡುವ ನಾಗೇಶನ ಮೊದಲ ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನಂತರ 8 ವರ್ಷದ ಹಿಂದೆ ಪಿರಿಯಾಪಟ್ಟಣದವರಾದ ಮಮತಾರೊಂದಿಗೆ ಎರಡನೇ ಮದುವೆಯಾಗಿದ್ದ….
ಯೆಸ್ ಬ್ಯಾಂಕ್ ಬಿಕ್ಕಟ್ಟು ಶೀಘ್ರ ಶಮನ, ನಿಮ್ಮ ಹಣ ಸುರಕ್ಷಿತ: ವಿತ್ತ ಸಚಿವೆ ಅಭಯ
March 7, 2020ನವದೆಹಲಿ, ಮಾ.6- ಯೆಸ್ ಬ್ಯಾಂಕ್ ಖಾತೆದಾರರ ಹಣ ಸುರಕ್ಷಿತವಾಗಿದ್ದು, ಖಾತೆ ದಾರರು ಯಾವುದೇ ರೀತಿಯ ಆತಂಕ ಪಡುವ ಅಗತ್ಯವಿಲ್ಲ. ಬಿಕ್ಕಟ್ಟು ಶೀಘ್ರದಲ್ಲೇ ಬಗೆಹರಿಯುವ ವಿಶ್ವಾಸವಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾ ರಾಮನ್ ಹೇಳಿದ್ದಾರೆ. ದೇಶದ ಬ್ಯಾಂಕಿಂಗ್ ವಲಯದಲ್ಲಿ ತಲ್ಲಣ ಸೃಷ್ಟಿಸಿರುವ ಯೆಸ್ ಬ್ಯಾಂಕ್ ಆಡಳಿತ ಮಂಡಳಿಯ ಸೂಪರ್ ಸೀಡ್ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಸಂಜೆ ದೆಹಲಿ ಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಯೆಸ್ ಬ್ಯಾಂಕ್ ಬಿಕ್ಕಟ್ಟಿನ ಕುರಿತು ಭಾರತೀಯ…
ಮದ್ಯಪಾನ ಮಾಡುತ್ತಿದ್ದ ಯುವಕರ ಮೇಲೆ ಏಕಾಏಕಿ ದುಷ್ಕರ್ಮಿಗಳ ದಾಳಿ
March 7, 2020ಓರ್ವ ಸಾವು, ಮತ್ತೋರ್ವ ಪಾರು ನಂಜನಗೂಡು,ಮಾ. 6(ರವಿ)-ನಿರ್ಜನ ಪ್ರದೇಶದ ರಸ್ತೆ ಬದಿ ಪಾನಗೋಷ್ಠಿ ನಡೆಸುತ್ತಿದ್ದ ಯುವಕನೊಬ್ಬನ ಮೇಲೆ ದುಷ್ಕರ್ಮಿಗಳು ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿ ಹತ್ಯೆಗೈದ ನಂತರ ಶವವನ್ನು ನಾಲೆಗೆ ಎಸೆದಿ ರುವ ಘಟನೆ ನಂಜನಗೂಡು ತಾಲೂಕು ಕಲ್ಕುಂದ ಗ್ರಾಮದ ಹೊರವಲಯದಲ್ಲಿ ಗುರುವಾರ ರಾತ್ರಿ ನಡೆದಿದೆ. ಹತ್ಯೆಗೀಡಾದ ಯುವಕನ ಜೊತೆ ಪಾನಗೋಷ್ಠಿ ನಡೆಸುತ್ತಿದ್ದ ಆತನ ಸ್ನೇಹಿತ ದುಷ್ಕರ್ಮಿಗಳ ಹಲ್ಲೆ ಯಿಂದ ತೀವ್ರವಾಗಿ ಗಾಯಗೊಂಡನಾದರೂ, ಅವ ರಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ. ವಿವರ: ತಾಲೂಕಿನ ತಗಡೂರು ಗ್ರಾಮದ ಮನೋಜ್(20)…
ಶ್ರೀರಾಮ, ಮೈಶುಗರ್, ಪಾಂಡವಪುರ ಸಕ್ಕರೆ ಕಾರ್ಖಾನೆ ಖಾಸಗೀಕರಣ
March 7, 2020ಬೆಂಗಳೂರು,ಮಾ.6(ಕೆಎಂಶಿ)-ಮಂಡ್ಯ ಜಿಲ್ಲೆಯ ಮೈಶುಗರ್, ಪಾಂಡವಪುರ ಹಾಗೂ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿ ಯವರಿಗೆ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಜೂನ್ ತಿಂಗಳಿನಿಂದ ಕಬ್ಬು ಅರೆ ಯಲು ಸೂಚನೆ ಕೊಡಲಾಗಿದೆ ಎಂದು ತೋಟಗಾರಿಕೆ ಮತ್ತು ಸಕ್ಕರೆ ಸಚಿವ ಶಿವರಾಂ ಹೆಬ್ಬಾರ್ ವಿಧಾನ ಪರಿಷತ್‍ನಲ್ಲಿ ತಿಳಿಸಿದರು. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಜೆಡಿಎಸ್‍ನ ಶ್ರೀಕಂಠೇಗೌಡ ಅವರು ಮಾತನಾಡು ತ್ತಿದ್ದ ವೇಳೆ ಮಧ್ಯ ಪ್ರವೇಶಿಸಿದ ಶಿವರಾಂ ಹೆಬ್ಬಾರ್, ಶ್ರೀರಾಮ, ಪಾಂಡವಪುರ, ಮೈಶುಗರ್ ಸಕ್ಕರೆ ಕಾರ್ಖಾನೆಗಳನ್ನು 40 ವರ್ಷಗಳ ಅವಧಿಗೆ ಖಾಸಗಿ…
ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿ ರಿಂಗ್ ರಸ್ತೆ ಆಜುಬಾಜು ಬಡಾವಣೆ, ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಶೀಘ್ರ ಸಭೆ
March 7, 2020ಬೆಂಗಳೂರು,ಮಾ.6-ಮೈಸೂರು ಹೊರ ವರ್ತುಲ (ರಿಂಗ್ ರಸ್ತೆ) ರಸ್ತೆಗೆ ಹೊಂದಿಕೊಂಡಂತಿರುವ ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಅದರಿಂದ ಅನು ಮೋದಿತ ಬಡಾವಣೆಗಳು ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆಯೂ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಶೀಘ್ರದಲ್ಲೇ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳು ವುದಾಗಿ ಕಾನೂನು ಸಚಿವ ಮಾಧುಸ್ವಾಮಿ ವಿಧಾನ ಸಭೆ ಯಲ್ಲಿ ಶುಕ್ರವಾರ ಪ್ರಕಟಿಸಿದ್ದಾರೆ. ಮೈಸೂರು ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಅಭಿವೃದ್ಧಿಗೊಂಡಿರುವ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ…
ರಜೆ ಮಜಾಕ್ಕಾಗಿ ಶಾಲಾ ಮಕ್ಕಳಿಂದ ‘ಕೊರೊನಾ’ ನಾಟಕ!
March 7, 2020ಹನೂರು,ಮಾ.6(ಸೋಮ)- ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ಗೊರಸಾಣೆ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ರಜೆ-ಮಜಾ ಉದ್ದೇಶದಿಂದ ಕೊರೊನಾ ಬಂದವರಂತೆ ನಾಟಕವಾಡಿದ್ದಾರೆ. ಈಗಾಗಲೇ ಚೀನಾ ಸೇರಿದಂತೆ ವಿಶ್ವಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಗುರುವಾರ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪ್ರೇಮ್ ಕುಮಾರ್ ಮಕ್ಕಳಿಗೆ ಕೋವಿಡ್-19 (ಕೊರೊನಾ) ವೈರಸ್ ಬಗ್ಗೆ ಅರಿವು ಮೂಡಿ ಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಕೊರೊನಾ ವೈರಸ್ ಸೋಂಕು ಇದ್ದ ಮಕ್ಕಳಿಗೆ ರಜೆ…
ಬಂಡೀಪುರ ಕಾಡ್ಗಿಚ್ಚು ನಿಯಂತ್ರಣಕ್ಕೆ ಹೆಲಿಕಾಪ್ಟರ್
March 7, 2020ಅರಣ್ಯ ಇಲಾಖೆಯಿಂದ ನವೆಂಬರ್‍ನಲ್ಲಿ ಪತ್ರ ಹೆಲಿಕಾಪ್ಟರ್ ಒದಗಿಸಲು ಸಿದ್ಧ ಎಂದಿರುವ ವಾಯುಸೇನೆ ಮೈಸೂರು, ಮಾ.6- ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆಗೆ ಭಾರತೀಯ ವಾಯುಸೇನೆ ಕೈ ಜೋಡಿಸಲು ಸಿದ್ಧವಾಗಿದೆ. ಭಾರೀ ಬೆಂಕಿ ಅವಘಡ ಸಂಭವಿಸಿದರೆ ಸೇನೆ ಹೆಲಿಕಾ ಪ್ಟರ್ ಸೇವೆ ಒದಗಿಸುವುದಾಗಿ ತಿಳಿಸಿದೆ. ಇದ ರಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇ ಶದ ಸಿಬ್ಬಂದಿಗಳಲ್ಲಿ ಸಮಾಧಾನ ಮೂಡಿದೆ. 2019ರಲ್ಲಿ ಬಂಡೀಪುರ ಅರಣ್ಯದ ಕುಂದ ಕೆರೆ, ಗೋಪಾಲಸ್ವಾಮಿ ಬೆಟ್ಟ ವಲ ಯದಲ್ಲಿ ಹತ್ತಾರು ಸ್ಥಳದಲ್ಲಿ ಉಂಟಾಗಿದ್ದ ಕಾಡ್ಗಿಚ್ಚು 20 ಸಾವಿರ ಎಕರೆ…
ಹಲ್ಲೆ ಸಂಚು ಬಯಲು ಮಾಡುವಲ್ಲಿ ತನಿಖಾಧಿಕಾರಿ ವಿಫಲ: ಗೃಹ ಸಚಿವರಿಗೆ ಶಾಸಕ ತನ್ವೀರ್ ಸೇಠ್ ಪತ್ರ
March 7, 2020ಮೈಸೂರು, ಮಾ.6-ತಮ್ಮ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಸಂಚಿನ ಹಿಂದಿರುವ ಪ್ರಮುಖರು, ಸಂಘಟನೆ ಹಾಗೂ ಉದ್ದೇಶವನ್ನು ಪತ್ತೆ ಹಚ್ಚುವಲ್ಲಿ ತನಿಖಾಧಿಕಾರಿಗಳು ವಿಫಲವಾಗಿದ್ದಾರೆ ಎಂದು ನರಸಿಂಹರಾಜ ಶಾಸಕ ತನ್ವೀರ್ ಸೇಠ್ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಮೈಸೂರಿನ ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ 2019ರ ನ.17ರಂದು ತಾವು ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದಾಗ ದುಷ್ಕರ್ಮಿ ಯೋರ್ವ ಮಾರಣಾಂತಿಕ ಹಲ್ಲೆ ನಡೆಸಿದ್ದನ್ನು ಉಲ್ಲೇಖಿಸಿರುವ ಅವರು, ಈ ಪ್ರಕರಣದ ತನಿಖೆಯನ್ನು ಮೈಸೂರು ನಗರ ಅಪರಾಧ ವಿಭಾಗದ ಡಿಸಿಪಿ…
ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ: ಮೈಸೂರು ಎಸ್ಪಿ ರಿಷ್ಯಂತ್ ಕಿವಿಮಾತು
March 7, 2020ಮೈಸೂರು, ಮಾ.6- ಪರೀಕ್ಷೆ ಬರೆ ಯುವ ವೇಳೆ ಸಮಯ ವ್ಯರ್ಥ ಮಾಡದೇ ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಎಂದು ಜಿಲ್ಲಾ ಪೆÇಲೀಸ್ ವರಿ ಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ವಿದ್ಯಾರ್ಥಿ ಗಳಿಗೆ ಕಿವಿಮಾತು ಹೇಳಿದರು. ಜ್ಞಾನಬುತ್ತಿ ಸಂಸ್ಥೆ ವತಿಯಿಂದ ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಸಂಜೆ ಏರ್ಪಡಿಸಿದ್ದ ಪೆÇಲೀಸ್ ಸಬ್‍ಇನ್ಸ್ ಪೆಕ್ಟರ್ ಪರೀಕ್ಷಾ ತರಬೇತಿ ಶಿಬಿರದ ಸಮಾ ರೋಪ ಮತ್ತು ಅಧ್ಯಯನ ಪುಸ್ತಕ ಬಿಡು ಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನದಲ್ಲಿ ಅಸಾಧ್ಯ ಎಂಬುವುದು…