ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿ ರಿಂಗ್ ರಸ್ತೆ ಆಜುಬಾಜು ಬಡಾವಣೆ, ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಶೀಘ್ರ ಸಭೆ
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿ ರಿಂಗ್ ರಸ್ತೆ ಆಜುಬಾಜು ಬಡಾವಣೆ, ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಶೀಘ್ರ ಸಭೆ

March 7, 2020

ಬೆಂಗಳೂರು,ಮಾ.6-ಮೈಸೂರು ಹೊರ ವರ್ತುಲ (ರಿಂಗ್ ರಸ್ತೆ) ರಸ್ತೆಗೆ ಹೊಂದಿಕೊಂಡಂತಿರುವ ಚಾಮುಂ ಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಅದರಿಂದ ಅನು ಮೋದಿತ ಬಡಾವಣೆಗಳು ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆಯೂ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಶೀಘ್ರದಲ್ಲೇ ಸಂಬಂಧಿಸಿದ ಸಚಿವರು, ಅಧಿಕಾರಿಗಳ ಸಭೆ ಕರೆದು ಕ್ರಮ ಕೈಗೊಳ್ಳು ವುದಾಗಿ ಕಾನೂನು ಸಚಿವ ಮಾಧುಸ್ವಾಮಿ ವಿಧಾನ ಸಭೆ ಯಲ್ಲಿ ಶುಕ್ರವಾರ ಪ್ರಕಟಿಸಿದ್ದಾರೆ.

ಮೈಸೂರು ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಅಭಿವೃದ್ಧಿಗೊಂಡಿರುವ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಮುಡಾ ಹಾಗೂ ಖಾಸಗಿ ಬಡಾವಣೆಗಳು ಮತ್ತು ಗ್ರಾಮಗಳ ಮೂಲ ಸೌಕರ್ಯ ಸಂಬಂಧ ಜಿ.ಟಿ.ದೇವೇಗೌಡರು ಮಾಡಿದ ಪ್ರಸ್ತಾಪಕ್ಕೆ ನಗರಾಭಿವೃದ್ಧಿ ಸಚಿವರ ಪರವಾಗಿ ಉತ್ತರಿಸಿದ ಮಾಧು ಸ್ವಾಮಿ, ಅಭಿವೃದ್ಧಿಪಡಿಸಿ, ಹಸ್ತಾಂತರವಾಗಿರುವ ಬಡಾವಣೆಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ನಗರಪಾಲಿಕೆ ಜವಾಬ್ದಾರಿಯೇ ಹೊರತು ನಗರಾಭಿವೃದ್ಧಿ ಪ್ರಾಧಿಕಾರದ ಕಾರ್ಯವಲ್ಲ. ಪ್ರಾಧಿಕಾರವೇ ಅಭಿವೃದ್ಧಿ ಪಡಿಸಿದ ಪಾಲಿಕೆಗೆ ಹಸ್ತಾಂ ತರವಾಗದ ಬಡಾವಣೆ ನಿರ್ವಹಣೆ ಪ್ರಾಧಿಕಾರಕ್ಕೆ ಸಂಬಂಧಿಸಿದ್ದಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ಮಧ್ಯೆ ಪ್ರಾಧಿಕಾರ ನಿರ್ಮಿಸಿ, ಪಾಲಿಕೆಗೆ ಹಸ್ತಾಂತರ ಮಾಡಿರುವ ಬಡಾವಣೆಗಳು ಹಾಗೂ ಪಾಲಿಕೆ ವ್ಯಾಪ್ತಿಗೆ ಬರುವಂತಹ ಅನುಮೋದಿತ ಖಾಸಗಿ ಬಡಾ ವಣೆಗಳ ನಿರ್ವಹಣೆ ಪಾಲಿಕೆಯದ್ದೇ ಆಗಿದೆ. ಅದ ರಂತೆ ಪಾಲಿಕೆ ನಿರ್ವಹಣೆ ಮಾಡುತ್ತಿದೆ ಎಂದರು.

ಆದರೆ ಸಚಿವರ ಉತ್ತರದಿಂದ ತೃಪ್ತರಾಗದ ಶಾಸಕ ಜಿ.ಟಿ.ದೇವೇಗೌಡರು, ಕಳೆದ 20-25 ವರ್ಷಗಳಿಂದ ಮೈಸೂರು ರಿಂಗ್ ರಸ್ತೆಗೆ ಹೊಂದಿಕೊಂಡಂತೆ ಇರುವ ಬಡಾವಣೆ ಹಾಗೂ ಗ್ರಾಮಗಳ ಮೂಲ ಸೌಕರ್ಯದ ಬಗ್ಗೆ ಮೈಸೂರು ಪಾಲಿಕೆಯಾಗಲೀ, ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರವಾಗಲೀ ಅಥವಾ ಆಯಾ ಗ್ರಾಮ ಪಂಚಾಯ್ತಿಗಳಾ ಗಲೀ ನಿರ್ದಿಷ್ಟವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಬಡಾ ವಣೆ, ಗ್ರಾಮಗಳನ್ನು ಯಾರು ನಿರ್ವಹಣೆ ಮಾಡಬೇಕೆಂಬುದರ ಬಗ್ಗೆ ಗೊಂದಲವಿದೆ. ಇಂತಹ ಬಡಾವಣೆ ಹಾಗೂ ಗ್ರಾಮಗಳಲ್ಲಿ ಕಸ ವಿಲೇವಾರಿಯಾಗು ತ್ತಿಲ್ಲ, ಬೀದಿ ದೀಪದ ವ್ಯವಸ್ಥೆ ಇಲ್ಲ, ಸಮರ್ಪಕ ಕುಡಿ ಯುವ ನೀರಿನ ಸರಬರಾಜಿಲ್ಲ, ರಸ್ತೆಗಳಿಲ್ಲ, ಉದ್ಯಾನ ವನಗಳಿಲ್ಲ. ಇಲ್ಲಿ ವಾಸಿಸುತ್ತಿರುವಂತಹ ಜನರು ದಿನ ನಿತ್ಯ ಒಂದಲ್ಲ ಒಂದು ರೋಗ ರುಜಿನಗಳಿಗೆ ತುತ್ತಾಗುತ್ತಿದ್ದಾರೆ. ರಿಂಗ್ ರಸ್ತೆ ಆಜುಬಾಜಿನಲ್ಲಿ ಭಾರೀ ಪ್ರಮಾಣದಲ್ಲಿ ಕಸ ತಂದು ಸುರಿಯಲಾಗುತ್ತಿದೆ. ಸ್ವಚ್ಛ ಮೈಸೂರು ಕಲ್ಪನೆಗೆ ಇದು ಕಪ್ಪು ಚುಕ್ಕೆಯಾಗಿದೆ. ಈ ಬಡಾವಣೆಗಳ ಹಾಗೂ ಗ್ರಾಮಗಳ ಮೂಲ ಸೌಕರ್ಯಕ್ಕೆ 200 ಕೋಟಿ ರೂ. ವಿಶೇಷ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿತ್ತು. ಸರ್ಕಾರ ಅದನ್ನೂ ಪರಿಗಣಿಸಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು. ಸರ್ಕಾರ ಕೂಡಲೇ ಈ ಸಮಸ್ಯೆ ಪರಿಹರಿಸಬೇಕು, ರಿಂಗ್ ರಸ್ತೆಗೆ ಹೊಂದಿಕೊಂಡಂ ತಿರುವ ಬಡಾವಣೆಗಳು ಹಾಗೂ ಗ್ರಾಮಗಳಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರಲ್ಲದೇ, ರಿಂಗ್ ರಸ್ತೆಯಿಂದ 1 ಕಿಲೋಮೀಟರ್ ಅಂತರದಲ್ಲಿರುವ ಎಲ್ಲಾ ಗ್ರಾಮಗಳಿಗೂ ಮೂಲ ಸೌಕರ್ಯವನ್ನು ಮುಡಾವೇ ಕಲ್ಪಿಸುವಂತೆ ಆದೇಶಿಸಬೇಕೆಂದು ಮನವಿ ಮಾಡಿ ದರು. ಕೊನೆಗೆ ಸಚಿವ ಮಾಧುಸ್ವಾಮಿ ರಿಂಗ್ ರಸ್ತೆಯ ಆಜು-ಬಾಜು ಬಡಾವಣೆಗಳು ಮತ್ತು ಸುತ್ತಮುತ್ತಲ ಗ್ರಾಮಗಳ ಮೂಲ ಸೌಕರ್ಯ ಕಲ್ಪಿಸುವ ಸಂಬಂಧ ಶೀಘ್ರವೇ ಅಧಿಕಾರಿಗಳ ಸಭೆ ಕರೆದು ನಿರ್ಧಾರ ಕೈಗೊಳ್ಳು ವುದಾಗಿ ಭರವಸೆ ನೀಡಿದರು. ಇದೇ ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದನೆಗೊಂಡಿ ರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಖಾಸಗಿ ಬಡಾವಣೆಗಳಲ್ಲಿ ಮೂಲ ಸೌಕರ್ಯವನ್ನು ಕಲ್ಪಿಸು ವುದು ಸಂಬಂಧಪಟ್ಟ ಬಡಾವಣೆಗಳ ಅಭಿವೃದ್ಧಿದಾ ರರ ಹೊಣೆ ಎಂದು ಎಚ್ಚರಿಕೆ ನೀಡಿದರು.

Translate »