ರಜೆ ಮಜಾಕ್ಕಾಗಿ ಶಾಲಾ ಮಕ್ಕಳಿಂದ  ‘ಕೊರೊನಾ’ ನಾಟಕ!
ಮೈಸೂರು

ರಜೆ ಮಜಾಕ್ಕಾಗಿ ಶಾಲಾ ಮಕ್ಕಳಿಂದ  ‘ಕೊರೊನಾ’ ನಾಟಕ!

March 7, 2020

ಹನೂರು,ಮಾ.6(ಸೋಮ)- ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ತಪ್ಪಲಿನ ಗೊರಸಾಣೆ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳು ರಜೆ-ಮಜಾ ಉದ್ದೇಶದಿಂದ ಕೊರೊನಾ ಬಂದವರಂತೆ ನಾಟಕವಾಡಿದ್ದಾರೆ. ಈಗಾಗಲೇ ಚೀನಾ ಸೇರಿದಂತೆ ವಿಶ್ವಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್ ಭಾರತಕ್ಕೂ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಗುರುವಾರ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಪ್ರೇಮ್ ಕುಮಾರ್ ಮಕ್ಕಳಿಗೆ ಕೋವಿಡ್-19 (ಕೊರೊನಾ) ವೈರಸ್ ಬಗ್ಗೆ ಅರಿವು ಮೂಡಿ ಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ವೇಳೆ ಕೊರೊನಾ ವೈರಸ್ ಸೋಂಕು ಇದ್ದ ಮಕ್ಕಳಿಗೆ ರಜೆ ನೀಡಬೇಕೆಂದು ಸರ್ಕಾರ ಆದೇಶ ಹೊರಡಿಸಿರುವ ಮಾಹಿತಿಯನ್ನು ನೀಡಿದರು. ಇದನ್ನೇ  ನೆಪ ಮಾಡಿಕೊಂಡ ಶಾಲೆಯ 7 ವಿದ್ಯಾರ್ಥಿಗಳು ಕೆಲವೇ ಗಂಟೆಯಲ್ಲಿ ಗಂಟಲು ನೋವೆಂದು ಕೆಮ್ಮು, ವಾಂತಿ ಬಂದಂತೆ ವರ್ತಿಸಿ ಕೆಲಕಾಲ ಆತಂಕ ಸೃಷ್ಟಿಸಿದರು. ಇದರಿಂದ ಗಾಬರಿ ಗೊಂಡ ಶಿಕ್ಷಕ ಕೂಡಲೇ ಮಕ್ಕಳನ್ನು ಸಮೀಪದ ಮಹದೇಶ್ವರಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ತಪಾಸಣೆಗೊಳಪಡಿಸಿದರು. ಈ ವೇಳೆ ವೈದ್ಯರು ಮಕ್ಕಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಧೈರ್ಯ ಹೇಳಿ ವಿದ್ಯಾರ್ಥಿ ಗಳ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದರು. ನಂತರ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಥಮ ಚಿಕಿತ್ಸೆ ನೀಡಿ ಮತ್ತೆ ಶಾಲೆಗೆ ಕಳುಹಿಸಿ ಕೊಟ್ಟಿದ್ದರು. ಮೊದಲಿಗೆ ಮೂವರು ಮಕ್ಕಳು ಅಸ್ವಸ್ಥಗೊಂಡವರಂತೆ ನಟಿಸಿದ್ದಾರೆ. ನಂತರ ಶಾಲೆಯಲ್ಲಿ ಇನ್ನು ನಾಲ್ವರು ಮಕ್ಕಳು ಇದೇ ರೀತಿ ಅಸ್ವಸ್ಥ ಗೊಂಡವರಂತೆ ನಟಿಸಿದ್ದರು. ಮುನ್ನಚ್ಚರಿಕೆಯಾಗಿ ವೈದ್ಯರ ತಂಡ ಶಾಲೆಗೆ ಭೇಟಿ ನೀಡಿ ಕುಡಿಯುವ ನೀರು ಹಾಗೂ ಮಕ್ಕಳ ತಪಾಸಣೆ ನಡೆಸಿ ಯಾವುದೇ ಸೋಂಕು ಇಲ್ಲ ಎಂದು ದೃಢಪಡಿಸಿ ದ್ದಾರೆ. ಶುಕ್ರವಾರ ಎಂದಿನಂತೆ ಮಕ್ಕಳು ಶಾಲೆಗೆ ಆಗಮಿಸಿ ದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿ ಕಾರಿ ಟಿ.ಆರ್.ಸ್ವಾಮಿ ತಿಳಿಸಿದ್ದಾರೆ.

Translate »