ಬಂಡೀಪುರ ಕಾಡ್ಗಿಚ್ಚು ನಿಯಂತ್ರಣಕ್ಕೆ ಹೆಲಿಕಾಪ್ಟರ್
ಮೈಸೂರು

ಬಂಡೀಪುರ ಕಾಡ್ಗಿಚ್ಚು ನಿಯಂತ್ರಣಕ್ಕೆ ಹೆಲಿಕಾಪ್ಟರ್

March 7, 2020
  • ಅರಣ್ಯ ಇಲಾಖೆಯಿಂದ ನವೆಂಬರ್‍ನಲ್ಲಿ ಪತ್ರ
  • ಹೆಲಿಕಾಪ್ಟರ್ ಒದಗಿಸಲು ಸಿದ್ಧ ಎಂದಿರುವ ವಾಯುಸೇನೆ

ಮೈಸೂರು, ಮಾ.6- ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆಗೆ ಭಾರತೀಯ ವಾಯುಸೇನೆ ಕೈ ಜೋಡಿಸಲು ಸಿದ್ಧವಾಗಿದೆ. ಭಾರೀ ಬೆಂಕಿ ಅವಘಡ ಸಂಭವಿಸಿದರೆ ಸೇನೆ ಹೆಲಿಕಾ ಪ್ಟರ್ ಸೇವೆ ಒದಗಿಸುವುದಾಗಿ ತಿಳಿಸಿದೆ. ಇದ ರಿಂದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇ ಶದ ಸಿಬ್ಬಂದಿಗಳಲ್ಲಿ ಸಮಾಧಾನ ಮೂಡಿದೆ.

2019ರಲ್ಲಿ ಬಂಡೀಪುರ ಅರಣ್ಯದ ಕುಂದ ಕೆರೆ, ಗೋಪಾಲಸ್ವಾಮಿ ಬೆಟ್ಟ ವಲ ಯದಲ್ಲಿ ಹತ್ತಾರು ಸ್ಥಳದಲ್ಲಿ ಉಂಟಾಗಿದ್ದ ಕಾಡ್ಗಿಚ್ಚು 20 ಸಾವಿರ ಎಕರೆ ಅರಣ್ಯ ಪ್ರದೇಶ ವನ್ನು ಸಂಪೂರ್ಣ ಭಸ್ಮ ಮಾಡಿತ್ತು. ವಾರ ಕಳೆದರೂ ಬೆಂಕಿ ನಂದಿಸಲಾಗದೆ ಸಿಬ್ಬಂದಿ ಅಸಹಾಯಕ ರಾಗಿದ್ದರು. ತಮಿಳುನಾಡಿನ ಮದುಮಲೈನಲ್ಲೂ ಕಾಡ್ಗಿಚ್ಚಿನಿಂದಾಗಿ ಗಡಿ ದಾಟುವುದಕ್ಕೆ ಆತಂಕ ಎದುರಾಗಿತ್ತು. ಮೂರ್ನಾಲ್ಕು ಕಿ.ಮೀ ಬೆಂಕಿ ಮುಂದೆ ದಾಟಿ ದ್ದರೆ ಬಂಡೀಪುರ ಅರಣ್ಯಕ್ಕೆ ಅಪಾಯವಾಗು ತ್ತಿತ್ತು. ಕ್ಲಿಷ್ಟ ಪರಿಸ್ಥಿತಿಯಲ್ಲಿ ವಾಯುಸೇನೆಯ 2 ಹೆಲಿಕಾಪ್ಟರ್‍ಗಳು ಆಗಮಿಸಿ, ನುಗು ಹಾಗೂ ಕಬಿನಿ ಜಲಾಶಯದಿಂದ ವಾಟರ್ ಬ್ಯಾಗ್ ಬಳಸಿ ಬೆಂಕಿ ಉರಿಯುತ್ತಿದ್ದ ಸ್ಥಳಕ್ಕೆ ನೀರು ಸುರಿದು ಬೆಂಕಿಯನ್ನು ನಿಯಂತ್ರಿಸಿದ್ದವು.

ವಾಯುಸೇನೆಯ ಸೇವೆಯ ಮಹತ್ವ ಅರಿತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು, 2019ರ ನವೆಂಬರ್‍ನಲ್ಲಿ ಸರ್ಕಾರಕ್ಕೆ ಪತ್ರ ಬರೆದು ಕಾಡ್ಗಿಚ್ಚು ವೇಳೆ ಹೆಲಿ ಕಾಪ್ಟರ್ ಸೇವೆ ಒದಗಿಸುವಂತೆ ಕೋರಿ ದ್ದರು. ರಾಜ್ಯ ಸರ್ಕಾರವೂ ವಾಯುಸೇನೆಗೆ ಮನವಿ ಮಾಡಿತ್ತು. ಪ್ರತಿಯಾಗಿ ಏರ್ ಮಾರ್ಷಲ್ ಟಿ.ಡಿ. ಜೋಸೆಫ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯ ದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಪತ್ರ ಬರೆದು, ಕಾಡ್ಗಿಚ್ಚು ವೇಳೆ ಹೆಲಿಕಾಪ್ಟರ್ ಸೇವೆ ನೀಡುವುದಾಗಿ ಭರವಸೆ ನೀಡಿದ್ದಾರೆ.

ಕಟ್ಟೆಚ್ಚರ: ಈಗ ಬೇಸಿಗೆ ಆರಂಭವಾ ಗಿದ್ದು, ಬಂಡೀಪುರ ಅರಣ್ಯ ಪೂರ್ಣ ಒಣಗಿದೆ. 1024 ಚ.ಕಿ.ಮೀ. ವ್ಯಾಪ್ತಿಯ 13 ವಲಯಗಳಲ್ಲೂ 10, 20 ಹಾಗೂ 30 ಮೀಟರ್ ಅಗಲದ 2550 ಕಿ.ಮೀ ಫೈರ್ ಲೈನ್ ನಿರ್ಮಿಸಲಾಗಿದೆ. ಪ್ರತಿ ವಲಯಕ್ಕೂ ತಲಾ 40 ಮಂದಿ ಫೈರ್‍ವಾಚರ್, ತಲಾ 15 ಮಂದಿ ಕ್ಯಾಂಪ್ ವಾಚರ್‍ಗಳು ಕಾಡ್ಗಿಚ್ಚು ತಡೆಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೂ ಇನ್ನು 2 ತಿಂಗಳು ಸೂಕ್ಷ್ಮವಾಗಿ ಕಾಡನ್ನು ಕಾಯುವುದೇ ಸವಾಲಾಗಿದೆ.

ಕಾಡ್ಗಿಚ್ಚು ವೇಳೆ ಸೇನಾ ಹೆಲಿಕಾಪ್ಟರ್ ಕಾರ್ಯಾ ಚರಣೆ ನಡೆಸುವುದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳ ಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಿರುವ 3 ಸ್ಥಳ ಗುರುತಿಸಲಾಗಿದೆ. ನೀರೆತ್ತುವ ವೇಳೆ ಮರಗಳು ವಾಟರ್ ಕ್ಯಾರಿಯರ್‍ಗೆ ಅಡ್ಡಿಯಾ ಗದ ಸ್ಥಳ ಗುರುತಿಸಲಾಗಿದೆ. ಕಬಿನಿ, ನುಗು ಜಲಾಶಯ ಹಾಗೂ ಅರಣ್ಯ ಪ್ರದೇಶದ ಲ್ಲಿರುವ ಹಿರಿಕೆರೆಯಲ್ಲಿ ಹೆಲಿಕಾಪ್ಟರ್ ಮೂಲಕ ನೀರೆತ್ತಲು ಯೋಗ್ಯ ಎನ್ನಲಾಗಿದೆ. ಇದ ಕ್ಕಾಗಿ ಈ ಮೂರು ಸ್ಥಳದ ಲೈವ್ ಲೊಕೇ ಷನ್ ಪಡೆಯಲಾಗಿದ್ದು, ತುರ್ತು ಸಂದರ್ಭ ದಲ್ಲಿ ನೀರು ಲಭ್ಯವಿರುವ ಗುರುತಿಸಲ್ಪಟ್ಟ ಮೂರು ಸ್ಥಳಗಳ ಲೊಕೇಷನ್ ಅನ್ನು ವಾಯು ಸೇನೆಗೆ ರವಾನಿಸಲಾಗುತ್ತದೆ. ಇದರೊಂದಿಗೆ ಯಾವುದಾದರೂ ಸ್ಥಳದಲ್ಲಿ ಬೆಂಕಿ ಬಿದ್ದಿ ದ್ದರೆ, ಆ ಲೊಕೇಷನ್ ಶೇರ್ ಮಾಡಿದರೆ ಮಾತ್ರ ಹೆಲಿಕಾಪ್ಟರ್‍ನಲ್ಲಿ ನೀರು ಹಾಕುವ ಕಾರ್ಯಾಚರಣೆ ನಡೆಸಲು ಸುಲಭವಾಗ ಲಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರ ಅರಣ್ಯ ದಲ್ಲಿರುವ ಎಲ್ಲಾ 52 ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಗಳಿಗೆ, ಫೈರ್ ವಾಚರ್‍ಗಳಿಗೆ ಕಟ್ಟೆಚ್ಚರದಿಂದ ಇರುವಂತೆ ಹಾಗೂ ಅಗತ್ಯ ಸಂದರ್ಭದಲ್ಲಿ ಘಟನೆ ಸಂಭವಿಸಿದ ಸ್ಥಳದ ಲೊಕೇಷನ್ ನೀಡುವಂತೆ ಸೂಚಿಸಲಾಗಿದೆ.

ಗಾಳಿ ವೇಗಕ್ಕೆ ತಕ್ಕಂತೆ: ಬೆಂಕಿ ಬಿದ್ದ ಸ್ಥಳ, ನೀರಿರುವ ಸ್ಥಳದ ಮಾಹಿತಿ ಪಡೆದ ವಾಯು ಸೇನೆ ಸಿಬ್ಬಂದಿ ತಮ್ಮಲ್ಲಿರುವ ಸ್ಥಳ ಪತ್ತೆ ಹಾಗೂ ಗಾಳಿಯ ವೇಗ ಪತ್ತೆ ಸಾಧನದ ನೆರವಿನಿಂದ ಕಾರ್ಯಾಚರಣೆ ನಡೆಸಲಿದ್ದಾರೆ. 2ರಿಂದ 5 ಸಾವಿರ ಅಡಿ ಎತ್ತರದಿಂ ದಲೇ ಬೆಂಕಿ ಮೇಲೆ ನೀರು ಸುರಿಯಲಾಗು ತ್ತದೆ. ಮತ್ತಷ್ಟು ಕೆಳಗೆ ಬಂದರೆ ಮರದ ಕೊಂಬೆಗಳು ವಾಟರ್ ಕ್ಯಾರಿಯರ್‍ಗೆ ಸಿಲುಕ ಬಹುದು. ಅಲ್ಲದೆ ಹೆಲಿಕಾಪ್ಟರ್ ರೆಕ್ಕೆ ತಿರುಗುವ ರಭಸಕ್ಕೆ ಗಾಳಿ ಹೆಚ್ಚಾಗಿ ಬೆಂಕಿ ಕೆನ್ನಾಲಿಗೆ ಇನ್ನಷ್ಟು ತೀವ್ರ ಗೊಳ್ಳಬಹುದು. ಈ ಹಿನ್ನೆಲೆಯಲ್ಲಿ ಎತ್ತರ ದಿಂದಲೇ ನೀರು ಸುರಿಯಲಾಗುತ್ತದೆ. ಗಾಳಿಯ ವೇಗ ನೋಡಿಕೊಂಡು ನೀರನ್ನು ನಿಖರ ಸ್ಥಳಕ್ಕೆ ಬೀಳುವಂತೆ ಸುರಿಯಲಾಗುತ್ತದೆ.

ಎಂ.ಟಿ.ಯೋಗೇಶ್ ಕುಮಾರ್

Translate »