ಬೆಂಗಳೂರು,ಜು.8(ಎಸಿಪಿ)-ಮುಂಬೈನ ಪಂಚತಾರಾ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿ ರುವ ಅತೃಪ್ತ ಶಾಸಕರು, ನಾಳೆ (ಜು.9) ಬೆಂಗ ಳೂರಿಗೆ ಆಗಮಿಸುವ ನಿರೀಕ್ಷೆ ಇದೆ. ಮಂಗಳವಾರ ತಮ್ಮನ್ನು ಖುದ್ದಾಗಿ ಭೇಟಿ ಮಾಡಿ ರಾಜೀನಾಮೆ ನೀಡಿರುವುದಕ್ಕೆ ವಿವರಣೆ ನೀಡಬೇಕೆಂದು ವಿಧಾನಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಎಲ್ಲಾ ಶಾಸಕರಿಗೂ ಪ್ರತ್ಯೇಕ ವಾಗಿ ನೋಟೀಸ್ ಜಾರಿ ಮಾಡಿರುವುದರಿಂದ ಶಾಸಕರು ಬೆಂಗಳೂರಿಗೆ ನಾಳೆ ಬರಲಿದ್ದಾರೆ ಎಂದು ಹೇಳಲಾಗಿದೆ. ಮೈತ್ರಿ ಸರ್ಕಾರದ ಸಚಿ ವರುಗಳು ಸಾಮೂಹಿಕ ರಾಜೀನಾಮೆ ನೀಡಿದ್ದು, ಅತೃಪ್ತರಿಗೆ ಸಚಿವ ಸ್ಥಾನ ನೀಡಿ ಸರ್ಕಾರ ಉಳಿಸಿ ಕೊಳ್ಳಲು…
ಮೈತ್ರಿ ಸರ್ಕಾರ ಉಳಿವಿಗೆ ಕಾಮರಾಜ್ ಸೂತ್ರದ ಮೊರೆ
July 9, 2019ಬೆಂಗಳೂರು, ಜು. 8(ಕೆಎಂಶಿ)-ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ನಾಯಕರು ಕಾಮರಾಜ್ ಸೂತ್ರದ ಮೊರೆ ಹೋಗಿದ್ದಾರೆ. ರಾಜಧಾನಿಯಲ್ಲಿ ಇಂದು ಇಡೀ ದಿನ ಸರ್ಕಾರ ಉಳಿಸುವ ಮತ್ತು ಉರುಳಿಸುವ ಕಾರ್ಯ ಬಿರುಸಿ ನಿಂದ ಸಾಗಿತ್ತು. ಸರ್ಕಾರ ಉಳಿಸುವ ಸಲು ವಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಕಾಮರಾಜ್ ಸೂತ್ರ ಅನುಸರಿಸಿ ತಮ್ಮ ಮಂತ್ರಿಮಂಡಲವನ್ನು ಪೂರ್ಣ ಪ್ರಮಾಣದಲ್ಲಿ ಪುನಾರಚನೆಗೆ ಮುಂದಾಗಿದ್ದಾರೆ. ಎರಡೂ ಪಕ್ಷಗಳ ನಾಯಕರ ತೀರ್ಮಾನ ದಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್‍ನ ಎಲ್ಲಾ ಸಚಿವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ…
ಅತೃಪ್ತ ಶಾಸಕರ ಹಿಡಿದಿಡಲು ಸಂಪುಟ ಪುನರ್ ರಚನೆ
July 9, 2019ಬೆಂಗಳೂರು, ಜು.8(ಕೆಎಂಶಿ)-ಅತೃಪ್ತ ಶಾಸಕರನ್ನು ಸಮಾಧಾನ ಪಡಿಸಲು ಸಚಿವ ಸಂಪುಟವನ್ನು ಸಂಪೂರ್ಣ ಪುನರ್ ರಚನೆ ಮಾಡು ವುದಾಗಿ ಮಾಜಿ ಮುಖ್ಯಮಂತ್ರಿ ಹಾಗೂ ಸಿಎಲ್‍ಪಿ ನಾಯಕ ಸಿದ್ದ ರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕೆಲವು ಸದಸ್ಯರಿಗೆ ಸಚಿವರಾಗಬೇಕೆಂಬ ಆಸೆ ಇದೆ ಮತ್ತು ಇತರ ಸಮಸ್ಯೆಗಳಿವೆ. ನಾವು ಅದನ್ನು ಬಗೆಹರಿಸುತ್ತೇವೆ. ಯಾರೂ ಆತುರದ ನಿರ್ಧಾರ ತೆಗೆದುಕೊಂಡು ಬಿಜೆಪಿ ಸೇರಬಾರದು ಎಂದರು. ಪಕ್ಷೇತರ ಅಭ್ಯರ್ಥಿ ಶಂಕರ್ ಸೇರಿ ಕಾಂಗ್ರೆಸ್ ಪಾಲಿನ 22 ಸಚಿವರು ಸ್ವಯಂಪ್ರೇರಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ…
ಸಿಎಂ ರಾಜೀನಾಮೆಗೆ ಆಗ್ರಹಿಸಿ ರಾಜ್ಯಾದ್ಯಂತ ಇಂದು ಬಿಜೆಪಿ ಪ್ರತಿಭಟನೆ
July 9, 2019ಬೆಂಗಳೂರು, ಜು. 8(ಎಸಿಪಿ)-ಮೈತ್ರಿ ಪಕ್ಷದ 14 ಶಾಸಕರ ರಾಜೀನಾಮೆ ಹಾಗೂ ಇಬ್ಬರು ಪಕ್ಷೇತರರು ಬೆಂಬಲ ಹಿಂಪಡೆದ ಹಿನ್ನೆಲೆಯಲ್ಲಿ ಸರ್ಕಾರವು ಅಲ್ಪಮತಕ್ಕೆ ಕುಸಿದಿದ್ದು, ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಾಳೆ (ಜು. 9) ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಇಂದು ಸಂಜೆ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷರೂ ಆದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇಬ್ಬರು ಪಕ್ಷೇತರ ಶಾಸಕರು ಬಿಜೆಪಿಗೆ…
ಜೆಡಿಎಸ್ ಶಾಸಕರ ರೆಸಾರ್ಟ್ ವಾಸ್ತವ್ಯ
July 9, 2019ಬೆಂಗಳೂರು,ಜು.8(ಎಸಿಪಿ)-ಆಪರೇಷನ್ ಕಮಲದಿಂದ ತಪ್ಪಿಸಿ ಕೊಳ್ಳಲು ಜೆಡಿಎಸ್ ಶಾಸಕರು ರೆಸಾರ್ಟ್ ವಾಸ್ತವ್ಯದ ಮೊರೆ ಹೋಗಿದ್ದಾರೆ. ದೇವನಹಳ್ಳಿ ಸಮೀಪದ ಪ್ರಿಸ್ಟೇಜ್ ಗಾಲ್ಫ್ ಕ್ಲಬ್ ರೆಸಾರ್ಟ್‍ನಲ್ಲಿ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್‍ನಲ್ಲಿ ಇಂದು ಬೆಳಿಗ್ಗೆ ಶಾಸಕರ ಸಭೆ ನಡೆಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಯಾವುದೇ ಶಾಸಕರು ಮತ್ತೆ ರಾಜೀನಾಮೆ ನೀಡದಂತೆ ನಿಗಾ ವಹಿಸುವ ಸಲುವಾಗಿ ರೆಸಾರ್ಟ್‍ಗೆ ತೆರಳಲು ಸೂಚನೆ ನೀಡಿದರು. ಮೊದಲಿಗೆ ಕುಶಾಲನಗರ ಬಳಿಯ ರೆಸಾರ್ಟ್‍ವೊಂದರಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿ 30 ಕೊಠಡಿಗಳನ್ನು ಕಾಯ್ದಿರಿಸಲಾಗಿತ್ತು. ಶಾಸಕರನ್ನು ಕರೆದೊಯ್ಯಲು ಓಲ್ವಾ…
ಮೈಸೂರಿನ ರಂಗಕರ್ಮಿ ಮುದ್ದುಕೃಷ್ಣ, ಪತ್ನಿ CFTRI ವಿಜ್ಞಾನಿ ಡಾ.ಡಿ.ಇಂದ್ರಾಣಿ ದಾರುಣ ಸಾವು
July 9, 2019ಮೈಸೂರು, ಜು. 8(ಆರ್‍ಕೆ)- ಉತ್ತರ ಪ್ರದೇಶದ ಲಕ್ನೋ ದಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೈಸೂರಿನ ಖ್ಯಾತ ಹಿರಿಯ ರಂಗಕರ್ಮಿ ಮುದ್ದುಕೃಷ್ಣ(68) ಹಾಗೂ ಪತ್ನಿ, ಸಿಎಫ್‍ಟಿಆರ್‍ಐ ವಿಜ್ಞಾನಿ ಡಾ.ಡಿ.ಇಂದ್ರಾಣಿ ಅವರು ಸಾವನ್ನಪ್ಪಿದ್ದಾರೆ. ಲಕ್ನೋ ನಗರದ ಕಿನ್‍ಜಾರ್ಜ್ ಮೆಡಿಕಲ್ ಕಾಲೇಜಿನ ಶವಾಗಾರದಲ್ಲಿ ದಂಪತಿಯ ದೇಹ ಇರಿಸಲಾಗಿದ್ದು, ಮರಣೋತ್ತರ ಪರೀಕ್ಷಾ ಪಕ್ರಿಯೆ ಪೂರ್ಣಗೊಂಡ ನಂತರ ನಾಳೆ(ಜು.9) ಮಧ್ಯಾಹ್ನದೊಳಗಾಗಿ ಪಾರ್ಥಿವ ಶರೀರವನ್ನು ಮೈಸೂರಿಗೆ ತರಲಾಗುವುದು ಎಂದು ಮುದ್ದು ಕೃಷ್ಣ ಅವರ ಆಪ್ತ ವಲಯ `ಮೈಸೂರು ಮಿತ್ರ’ನಿಗೆ ತಿಳಿಸಿದೆ. ಲಕ್ನೋದಲ್ಲಿರುವ…
ಮೈಸೂರು ಜಿಲ್ಲೆಯಲ್ಲಿ 183 ಶಂಕಿತ ಪ್ರಕರಣ8 ಮಂದಿಗೆ ಡೆಂಗ್ಯೂ ಜ್ವರ
July 9, 2019ಮೈಸೂರು,ಜು.8(ಆರ್‍ಕೆ)- ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧೆಡೆ ಒಟ್ಟು 8 ಮಂದಿಗೆ ಡೆಂಗ್ಯೂ ಜ್ವರ ಇರುವುದು ಖಚಿತವಾಗಿದೆ. ಅಶುಚಿತ್ವ, ಕೊಳಚೆ ನೀರು ನಿಂತಿರು ವುದು, ಸೊಳ್ಳೆಗಳ ಸಂತಾನೋತ್ಪತ್ತಿಗೆ ಉತ್ತಮ ತಾಣವಾಗಿವೆ. ಇದು ಡೆಂಗ್ಯೂ ಜ್ವರ ಹೆಚ್ಚು ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಜೂನ್ ಮಾಹೆಯೊಂದ ರಲ್ಲೇ 83 ಶಂಕಿತ ಜ್ವರದ ಪ್ರಕರಣ ವರದಿ ಯಾಗಿದ್ದು, ಆ ಪೈಕಿ 8 ಮಂದಿಗೆ ಡೆಂಗ್ಯೂ ಪಾಸಿಟಿವ್ ರಿಪೋರ್ಟ್ ಬಂದಿದೆ ಎಂದು ಜಿಲ್ಲಾ ವೆಕ್ಟರ್‍ಬಾರ್ನ್ ಡಿಸೀಸಸ್ ಕಂಟ್ರೋಲ್ ಆಫೀಸರ್ ಡಾ.ಚಿದಂಬರ ಅವರು ‘ಮೈಸೂರು…
ನಿರಂತರ ರಾಸಾಯನಿಕಯುಕ್ತ ನೀರಲ್ಲೇ ನಿಲ್ಲುವುದರಿಂದ ಚರ್ಮರೋಗ ಭೀತಿ
July 9, 2019ಮೈಸೂರು,ಜು.8(ಎಂಕೆ)-ದಿನದ 10 ಗಂಟೆ ನೀರಲ್ಲೇ ನಿಂತು ಬಟ್ಟೆ ಒಗೆಯು ವುದರಿಂದ ಚರ್ಮ ಕಾಯಿಲೆ ಬರುತ್ತಿದೆ. ಅಲ್ಲದೆ ತಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದ್ದು, ಕಳೆದ 15 ವರ್ಷ ಗಳಿಂದ ವಾಷಿಂಗ್ ಮೆಷಿನ್ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಮೈಸೂ ರಿನ ಮಡಿವಾಳರ ಅಳಲಾಗಿದೆ. ನಗರದಲ್ಲಿರುವ ಕುಕ್ಕರಹಳ್ಳಿ ಕೆರೆ, ಯಾದವಗಿರಿ, ಕೆಸರೆ ಹಾಗೂ ಗುಬ್ಳಿಕಟ್ಟೆ ದೋಬಿ ಘಾಟ್‍ಗಳಲ್ಲಿ 200ಕ್ಕೂ ಅಧಿಕ ಮಂದಿ ಬಟ್ಟೆ ಸ್ವಚ್ಛಗೊಳಿಸುವವರಿದ್ದು, 400ಕ್ಕೂ ಹೆಚ್ಚು ಕುಟುಂಬಗಳು ಇದೇ ವೃತ್ತಿಯನ್ನು ಅವಲಂಬಿಸಿವೆ. ನಾಲ್ಕು ದೋಬಿ ಘಾಟ್…
ನಿವೇಶನ ಖಾತೆ ದಾಖಲೆಗಳೇ ಇಲ್ಲ…ಯಾರದೋ ಮನೆ ಜಾಗಕ್ಕೆ ಮತ್ಯಾರಿಗೋ ಖಾತೆ
July 9, 2019ಮೈಸೂರು, ಜು.8(ಪಿಎಂ)- ಮೈಸೂರು ಮಹಾನಗರಪಾಲಿಕೆಯಲ್ಲಿ ನಿವೇಶನವೊಂದರ ಖಾತೆ ಸಂಬಂಧ ದಾಖಲೆಗಳೇ ಇಲ್ಲ, ಯಾರದೋ ಮನೆ ಜಾಗಕ್ಕೆ ಮತ್ಯಾರಿಗೋ ಖಾತೆ ಮಾಡಿಕೊಟ್ಟಿರುವುದೂ ಸೇರಿದಂತೆ ಹಲವು ಆರೋಪಗಳು ಪಾಲಿಕೆ ಅಧಿಕಾರಿ ವರ್ಗದ ವಿರುದ್ಧ ಸೋಮವಾರ ನಡೆದ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಕೇಳಿ ಬಂದಿತು. ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆ ಯರ್ ಸಭಾಂಗಣದಲ್ಲಿ ಮೇಯರ್ ಪುಷ್ಪ ಲತಾ ಜಗನ್ನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಕೌನ್ಸಿಲ್ ಸಭೆಯಲ್ಲಿ ಪಾಲಿಕೆ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜು ನಾಥ್ ಈ ಆರೋಪಗಳನ್ನು ಮಾಡಿದರ ಲ್ಲದೆ,…
ಪಾದಚಾರಿಗಳಿಗೆ ಫುಟ್‍ಪಾತ್ ಮುಕ್ತಗೊಳಿಸಿ ಇಲ್ಲ ನಗರಪಾಲಿಕೆ ಮುಂದೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿ
July 9, 2019ಮೈಸೂರು, ಜು.8(ಎಸ್‍ಬಿಡಿ)- ಫುಟ್‍ಪಾತ್‍ಗಳನ್ನು ಪಾದಚಾರಿಗಳಿಗೆ ಮುಕ್ತಗೊಳಿಸಿ, ಇಲ್ಲವೇ ನಗರ ಪಾಲಿಕೆ ಮುಂಭಾಗದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಿ ಎಂದು ಕಾರ್ಪೊರೇಟರ್‍ಗಳು ಆಗ್ರಹಿಸಿದ್ದಾರೆ. ಪಾಲಿಕೆಯಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಫುಟ್‍ಪಾತ್ ಅವ್ಯವಸ್ಥೆಯ ಬಗ್ಗೆ ಪ್ರಸ್ತಾಪಿಸಿದ ಕಾರ್ಪೊರೇಟರ್ ಕೆ.ವಿ. ಶ್ರೀಧರ್, ಫುಟ್‍ಪಾತ್‍ಗಳು ಪಾದಚಾರಿಗಳಿಗೆ ಮುಕ್ತವಾಗಿ ರಬೇಕು ಹಾಗೂ ಸ್ವಚ್ಛವಾಗಿರಬೇಕೆಂದು ನ್ಯಾಯಾಲಯದ ಆದೇಶವಿದೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಆಕ್ಟ್‍ನಲ್ಲೂ ಇದನ್ನೇ ಹೇಳಲಾಗಿದೆ. ಅಲ್ಲದೆ ಈ ಹಿಂದೆಯೇ ಕೌನ್ಸಿಲ್ ನಿರ್ಣಯ ಕೈಗೊಳ್ಳಲಾಗಿದೆ. ಆದರೂ ಫುಟ್‍ಪಾತ್ ಗಳನ್ನು ಒಂದೆಡೆ ಮಳಿಗೆದಾರರು ಅತಿಕ್ರಮಿಸಿಕೊಂಡರೆ ಮತ್ತೊಂದೆಡೆ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದಾರೆ….










