ಮೈಸೂರು ಜಿಲ್ಲೆಯಲ್ಲಿ 183 ಶಂಕಿತ ಪ್ರಕರಣ8 ಮಂದಿಗೆ ಡೆಂಗ್ಯೂ ಜ್ವರ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 183 ಶಂಕಿತ ಪ್ರಕರಣ8 ಮಂದಿಗೆ ಡೆಂಗ್ಯೂ ಜ್ವರ

July 9, 2019

ಮೈಸೂರು,ಜು.8(ಆರ್‍ಕೆ)- ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧೆಡೆ ಒಟ್ಟು 8 ಮಂದಿಗೆ ಡೆಂಗ್ಯೂ ಜ್ವರ ಇರುವುದು ಖಚಿತವಾಗಿದೆ.

ಅಶುಚಿತ್ವ, ಕೊಳಚೆ ನೀರು ನಿಂತಿರು ವುದು, ಸೊಳ್ಳೆಗಳ ಸಂತಾನೋತ್ಪತ್ತಿಗೆ ಉತ್ತಮ ತಾಣವಾಗಿವೆ. ಇದು ಡೆಂಗ್ಯೂ ಜ್ವರ ಹೆಚ್ಚು ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಜೂನ್ ಮಾಹೆಯೊಂದ ರಲ್ಲೇ 83 ಶಂಕಿತ ಜ್ವರದ ಪ್ರಕರಣ ವರದಿ ಯಾಗಿದ್ದು, ಆ ಪೈಕಿ 8 ಮಂದಿಗೆ ಡೆಂಗ್ಯೂ ಪಾಸಿಟಿವ್ ರಿಪೋರ್ಟ್ ಬಂದಿದೆ ಎಂದು ಜಿಲ್ಲಾ ವೆಕ್ಟರ್‍ಬಾರ್ನ್ ಡಿಸೀಸಸ್ ಕಂಟ್ರೋಲ್ ಆಫೀಸರ್ ಡಾ.ಚಿದಂಬರ ಅವರು ‘ಮೈಸೂರು ಮಿತ್ರ’ನಿಗೆ ಸೋಮವಾರ ತಿಳಿಸಿದರು. ಜನವರಿಯಲ್ಲಿ 13, ಫೆಬ್ರವರಿ ಯಲ್ಲಿ 37, ಮಾರ್ಚ್‍ನಲ್ಲಿ 19, ಏಪ್ರಿಲ್ ನಲ್ಲಿ 16, ಮೇನಲ್ಲಿ 15 ಮಂದಿಯ ರಕ್ತದ ಸ್ಯಾಂಪಲ್ ಪರೀಕ್ಷಿಸಲಾಗಿತ್ತಾದರೂ, ಯಾರದ್ದೂ ಡೆಂಗ್ಯೂ ಪಾಸಿಟಿವ್ ಬಂದಿ ರಲಿಲ್ಲ. ಆದರೆ ಜೂನ್ ಒಂದೇ ತಿಂಗಳಲ್ಲಿ 83 ಮಂದಿಯ ರಕ್ತದ ಸ್ಯಾಂಪಲ್‍ಗಳನ್ನು ಪರೀಕ್ಷಿಸಲಾಗಿದ್ದು, 8 ಮಂದಿಗೆ ಡೆಂಗ್ಯೂ ಜ್ವರವಿರುವುದು ಪ್ರಯೋಗಾಲಯ ವರದಿ ಯಿಂದ ದೃಢಪಟ್ಟಿದೆ ಎಂದು ಅವರು ತಿಳಿಸಿದರು.

ಡೆಂಗ್ಯೂ ಪೀಡಿತರಲ್ಲಿ ಮೂವರು ಮೈಸೂರು ನಗರದವರಾದರೆ, ಐವರು ಗ್ರಾಮಾಂತರ ಪ್ರದೇಶದವರು. ಪಾಸಿಟಿವ್ ಬಂದಿರುವವರ ಪೈಕಿ ಬಹುತೇಕರು ಬೇರೆ ಜಿಲ್ಲೆ, ರಾಜ್ಯಗಳಿಂದ ವಲಸೆ ಬಂದವರಾಗಿ ದ್ದಾರೆ ಎಂದು ಡಾ. ಚಿದಂಬರ ತಿಳಿಸಿದ್ದಾರೆ.

ಕಳೆದ ವರ್ಷ 49 ಮಂದಿಗೆ ಡೆಂಗ್ಯೂ ಖಚಿತಪಟ್ಟಿತ್ತು. 2017ರಲ್ಲಿ 843 ಮಂದಿಗೆ ಡೆಂಗ್ಯೂ ದೃಢಪಟ್ಟಿದ್ದು, ಇಬ್ಬರು ಮೃತ ಪಟ್ಟಿದ್ದರು. 2016ರಲ್ಲಿ 582, 2015ರಲ್ಲಿ 382 ಹಾಗೂ 2014ರಲ್ಲಿ 66 ಮಂದಿಗೆ ಡೆಂಗ್ಯೂ ಜ್ವರ ಇರುವುದು ಖಚಿತವಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಡೆಂಗ್ಯೂ ಜ್ವರ ಶಂಕಿತರ ರಕ್ತದ ಸ್ಯಾಂಪಲ್ ಗಳನ್ನು ಮೈಸೂರಿನ ನಜರ್‍ಬಾದ್‍ನಲ್ಲಿ ರುವ ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿರುವ ಡಿಸ್ಟ್ರಿಕ್ಟ್ ಕಾಂಟಿನಲ್ ಸರ್ವೆಲೆನ್ಸ್ ಲ್ಯಾಬೊರೇಟರಿ (ಆಅSಐ) ಯಲ್ಲಿ ‘ಎಲಿಜಾ’ ಆಧಾರಿತ ಪರೀಕ್ಷೆಗೆ ಒಳಪಡಿಸಲಾಗುವುದು ಎಂದ ಡಾ. ಚಿದಂಬರ, ಜ್ವರ ಕಾಣಿಸಿಕೊಂಡ ರೋಗಿ ಗಳನ್ನು ಪರೀಕ್ಷಿಸಿ ರಕ್ತದ ಸ್ಯಾಂಪಲ್ ಗಳನ್ನು ತೆಗೆದು ಲ್ಯಾಬೊರೇಟರಿಗಳಿಗೆ ಕಳುಹಿಸುವಂತೆ ಇಲಾಖೆಯ ಆರೋಗ್ಯ ಸಹಾಯಕಿಯರು, ಸರ್ವೆಲೆನ್ಸ್ ವಿಭಾಗದ ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಂಗಳು, ಖಾಸಗಿ ಲ್ಯಾಬೋರೇಟರಿಗಳು, ಡಯೋಗ್ನೊಸ್ಟಿಕ್ ಸೆಂಟರ್‍ಗಳಿಗೆ ಬರುವ ರಕ್ತದ ಮಾದರಿ ಪರೀಕ್ಷಿಸಿದಾಗ ಹೊರಬೀಳುವ ರೋಗ ಲಕ್ಷಣದ ಮಾಹಿತಿಯನ್ನು ನೀಡು ವಂತೆಯೂ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

Translate »