ನಿರಂತರ ರಾಸಾಯನಿಕಯುಕ್ತ ನೀರಲ್ಲೇ ನಿಲ್ಲುವುದರಿಂದ ಚರ್ಮರೋಗ ಭೀತಿ
ಮೈಸೂರು

ನಿರಂತರ ರಾಸಾಯನಿಕಯುಕ್ತ ನೀರಲ್ಲೇ ನಿಲ್ಲುವುದರಿಂದ ಚರ್ಮರೋಗ ಭೀತಿ

July 9, 2019

ಮೈಸೂರು,ಜು.8(ಎಂಕೆ)-ದಿನದ 10 ಗಂಟೆ ನೀರಲ್ಲೇ ನಿಂತು ಬಟ್ಟೆ ಒಗೆಯು ವುದರಿಂದ ಚರ್ಮ ಕಾಯಿಲೆ ಬರುತ್ತಿದೆ. ಅಲ್ಲದೆ ತಮ್ಮ ವೃತ್ತಿಯನ್ನು ಉಳಿಸಿಕೊಳ್ಳಲು ಪರದಾಡುವಂತಾಗಿದ್ದು, ಕಳೆದ 15 ವರ್ಷ ಗಳಿಂದ ವಾಷಿಂಗ್ ಮೆಷಿನ್ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಮೈಸೂ ರಿನ ಮಡಿವಾಳರ ಅಳಲಾಗಿದೆ.

ನಗರದಲ್ಲಿರುವ ಕುಕ್ಕರಹಳ್ಳಿ ಕೆರೆ, ಯಾದವಗಿರಿ, ಕೆಸರೆ ಹಾಗೂ ಗುಬ್ಳಿಕಟ್ಟೆ ದೋಬಿ ಘಾಟ್‍ಗಳಲ್ಲಿ 200ಕ್ಕೂ ಅಧಿಕ ಮಂದಿ ಬಟ್ಟೆ ಸ್ವಚ್ಛಗೊಳಿಸುವವರಿದ್ದು, 400ಕ್ಕೂ ಹೆಚ್ಚು ಕುಟುಂಬಗಳು ಇದೇ ವೃತ್ತಿಯನ್ನು ಅವಲಂಬಿಸಿವೆ. ನಾಲ್ಕು ದೋಬಿ ಘಾಟ್ ಗಳಿಗೆ ವಾಷಿಂಗ್ ಮೆಷಿನ್ ಹಾಗೂ ಇತರೆ ಯಂತ್ರಗಳನ್ನು ನೀಡುವಂತೆ ಹಾಗೂ ದೋಬಿಘಾಟ್‍ಗಳನ್ನು ಆಧುನೀಕರಣ ಗೊಳಿಸುವಂತೆ ಸಾಕಷ್ಟು ಭಾರಿ ಮನವಿ ಮಾಡಿದ್ದರು ಇನ್ನೂ ಪರಿಹಾರ ದೊರೆತಿಲ್ಲ.

ಚರ್ಮ ರೋಗ: ಸೋಪಿನ ನೀರಿನಲ್ಲಿ ನಿಂತು ದಿನದ 10ಕ್ಕೂ ಹೆಚ್ಚು ಗಂಟೆ ಬಟ್ಟೆ ಒಗೆಯುವುರಿಂದ ಕಾಲು ಮತ್ತು ಕೈಗಳಿಗೆ ವಿಚಿತ್ರ ಚರ್ಮದ ಕಾಯಿಲೆ ಬಂದಿದೆ. ಇದನ್ನು ಸರಕಾರಿ ಆಸ್ಪತ್ರೆಗೆ ತೋರಿಸಿದರೆ ಔಷಧಿ ನೀಡುತ್ತಾರೆ. ಆದರೂ ಗುಣ ಆಗುವುದಿಲ್ಲ. ಇದೇ ಸಮಸ್ಯೆಯಿಂದ ಹಲವು ಮಂದಿ ಬಳಲುತ್ತಿದ್ದಾರೆ. ಉತ್ತಮ ಚಿಕಿತ್ಸೆಗಾಗಿ 15 ಸಾವಿರ ಖರ್ಚಾಗುತ್ತದೆ ಎಂದು ಡಾಕ್ಟರ್ ಹೇಳುತ್ತಿದ್ದಾರೆ. ದಿನಕ್ಕೆ ನೂರು ಅಥವಾ ಇನ್ನೂರು ರೂಪಾಯಿ ಸಂಪಾದನೆ ಮಾಡುವ ನಮ್ಮತ್ರ ಹಣವೂ ಇಲ್ಲ. ಆದ್ದ ರಿಂದ ವಾಷಿಂಗ್ ಮೆಷಿನ್ ನೀಡಿ ಎಂದು ಕೇಳುತ್ತಲೇ ಇದ್ದೇವೆ. ಇಲ್ಲಿಯವರೆಗೆ ಯಾರು ಸ್ಪಂದಿಸುತ್ತಿಲ್ಲ ಎಂದು ಕುಕ್ಕರಹಳ್ಳಿ ಕೆರೆ ದೋಬಿಘಾಟ್‍ನ ಅಗಸ ರವಿ ‘ಮೈಸೂರು ಮಿತ್ರ’ನಲ್ಲಿ ಅಳಲು ತೊಡಿಕೊಂಡರು.

ಕೆಲಸಕ್ಕೆ ಇನ್ನಷ್ಟು ವೇಗ: ಒಂದು ದೋಬಿಘಾಟ್‍ಗೆ ಎರಡು ವಾಷಿಂಗ್ ಮೆಷಿನ್ ನೀಡಿದರೆ ಒಂದು ದಿನಕ್ಕೆ 6 ಸಾವಿರ ಬಟ್ಟೆಗಳನ್ನು ತೊಳೆಯಬಹುದು. ಈ ಮೂಲಕ ನಮ್ಮ ಕೆಲಸಕ್ಕೆ ಇನ್ನಷ್ಟು ವೇಗ ಸಿಗಲಿದೆ. ರೋಗ ರುಜನಗಳಿಂದ ಪಾರಾ ಗುತ್ತೇವೆ. ಅಲ್ಲದೆ ಮಳೆಗಾಲದಲ್ಲಿ ಉಂಟಾ ಗುವ ಸಮಸ್ಯೆಗಳು ದೂರವಾಗಲಿವೆ ಎಂದು ಶ್ರೀ ವೀರ ಮಡಿವಾಳರ ಮಹಾ ಜನ ಸೇವಾ ಸಂಘದ ಗೌರವಾಧ್ಯಕ್ಷ ಎನ್. ಜಗದೀಶ್‍ಕುಮಾರ್ ತಿಳಿಸಿದ್ದಾರೆ.

ನಿವಾಸಿಗಳು, ಸಂಘ ಸಂಸ್ಥೆಗಳು, ಹಾಸ್ಟೆಲ್‍ಗಳು, ಆಸ್ಪತ್ರೆ ಹಾಗೂ ಹೋಟೆಲ್‍ಗಳು ಪ್ರತಿ ದೋಬಿಘಾಟ್‍ಗೆ ಐದು ಸಾವಿರಕ್ಕೂ ಅಧಿಕ ಬಟ್ಟೆಗಳನ್ನು ತೊಳೆಯಲು ನೀಡುತ್ತಾರೆ. ಹೆಚ್ಚಾಗಿ ಆಸ್ಪತ್ರೆ ಬಟ್ಟೆಗಳನ್ನು ತೊಳೆಯುತ್ತೇವೆ. ಈ ಬಟ್ಟೆಗಳಲ್ಲಿ ರಕ್ತ ಹಾಗೂ ಔಷಧಿ ಕಲೆಗಳು ಇರುವುದರಿಂದ ಚರ್ಮಕ್ಕೆ ತೊಂದರೆ ಯಾಗುತ್ತದೆ. ಚರ್ಮಕ್ಕೆ ಮಾತ್ರವಲ್ಲದೆ ಕೈ ಬೆರಳಿನ ಉಗುರುಗಳಿಗೂ ಹಾನಿಯಾಗು ತ್ತದೆ. ಈ ನಿಟ್ಟಿನಲ್ಲಿ ನಮಗೆ ವಾಷಿಂಗ್ ಮೆಷಿನ್ ಅಗತ್ಯವಾಗಿದೆ ಎಂದರು.

ಮೂಲಭೂತ ಸೌಕರ್ಯಗಳಿಲ್ಲ: ನಗರದಲ್ಲಿರುವ ನಾಲ್ಕು ದೋಬಿಘಾಟ್ ಗಳಲ್ಲಿಯೂ ಸರಿಯಾದ ಮೂಲಭೂತ ಸೌಕರ್ಯವಿಲ್ಲ. ಕುಡಿಯುವ ನೀರಿಗೆ ಪರ ದಾಡುವ ಪರಿಸ್ಥಿತಿ ಉಂಟಾಗಿದೆ. ಶೌಚಾ ಲಯದ ವ್ಯವಸ್ಥೆ ಸರಿಯಿಲ್ಲದೆ ಪರಿತಪಿ ಸುವಂತಾಗಿದೆ. ಹೊಸದಾಗಿ ಶೌಚಾಲಯ ಗಳನ್ನು ನಿರ್ಮಾಣ ಮಾಡಿದ್ದರು ಬಳಕೆಗೆ ಯೋಗ್ಯವಾಗಿಲ್ಲ. ಇನ್ನೂ ದೋಬಿಘಾಟ್ ಸುತ್ತಲು ಗಿಡ-ಗಂಟೆಗಳು ಬೆಳೆದು ನಿಂತಿದ್ದು ತಿರುಗಾಡುವುದಕ್ಕೂ ತೊಂದರೆಯಾಗುತ್ತಿದೆ.

ಸಿದ್ದರಾಮಯ್ಯಗೆ ಮನವಿ: ನಗರದ ಲ್ಲಿರುವ ನಾಲ್ಕು ದೋಬಿಘಾಟ್‍ಗಳಿಗೂ ತಲಾ 4 ವಾಷಿಂಗ್ ಮೆಷಿನ್ ನೀಡುವಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದಾಗ ಮನವಿ ಮಾಡಲಾಗಿತ್ತು. ಸಿದ್ದರಾಮಯ್ಯ ಅವರು, ವಾಷಿಂಗ್ ಮೆಷಿನ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅಲ್ಲದೆ ಈ ಪ್ರಕ್ರಿಯೆ ಹಲವು ಬಾರಿ ನಡೆದಿದೆ. ಆದರೆ, ಯಾವುದೇ ಬೆಳವಣಿಗೆ ಆಗಿಲ್ಲ. ಮುಡಾ ಹಾಗೂ ನಗರ ಪಾಲಿಕೆಯವರು ಇದರ ಬಗ್ಗೆ ಗೊತ್ತಿಲ್ಲ ದಂತೆ ವರ್ತಿಸುತ್ತಿದ್ದಾರೆ ಎಂದು ಎನ್. ಜಗದೀಶ್‍ಕುಮಾರ್ ಆರೋಪಿಸಿದ್ಧಾರೆ.

 

Translate »