Tag: Mysore

ಬಸ್ ಪ್ರಯಾಣ ದರ ಏರಿಕೆಗೆ ಖಂಡನೆ
ಮೈಸೂರು

ಬಸ್ ಪ್ರಯಾಣ ದರ ಏರಿಕೆಗೆ ಖಂಡನೆ

February 29, 2020

ಮೈಸೂರು,ಫೆ.28(ವೈಡಿಎಸ್)-ರಾಜ್ಯ ಸರ್ಕಾರವು ಶೇ.12ರಷ್ಟು ಬಸ್ ಪ್ರಯಾಣ ದರ ಏರಿಸಿರುವುದನ್ನು ಖಂಡಿಸಿ ಕೆಪಿಸಿಸಿ ಮಹಿಳಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಯಿತು. ನಗರದ ಗೌನ್‍ಹೌಸ್ ವೃತ್ತದ ಬಳಿ ಶುಕ್ರವಾರ ಮಧ್ಯಾಹ್ನ ಜಮಾವಣೆ ಗೊಂಡ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದು, ದಿನೇ ದಿನೇ ಬೆಲೆ ಹೆಚ್ಚಳದಿಂದ ಜನಸಾಮಾನ್ಯರು ಪರದಾಡುವಂತಾಗಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ದರವನ್ನು 150 ರೂ.ಗಳಷ್ಟು ಹೆಚ್ಚಿಸಿತ್ತು. ಈಗ ರಾಜ್ಯ ಸರ್ಕಾರ ಶೇ.12ರಷ್ಟು ಬಸ್ ಪ್ರಯಾಣ ದರ ಹೆಚ್ಚಳ…

ವಿಜಯ ವಿಠ್ಠಲದಲ್ಲಿ ವಿಜ್ಞಾನ ದಿನಾಚರಣೆ
ಮೈಸೂರು

ವಿಜಯ ವಿಠ್ಠಲದಲ್ಲಿ ವಿಜ್ಞಾನ ದಿನಾಚರಣೆ

February 29, 2020

ಮೈಸೂರು, ಫೆ. 28- ಮೈಸೂರಿನ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಸಿ.ವಿ. ರಾಮನ್ ಭಾವಾಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ “ರಾಷ್ಟ್ರೀಯ ವಿಜ್ಞಾನ ದಿನ”ವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಎಚ್. ಸತ್ಯಪ್ರಸಾದ್ ಮಾತನಾಡುತ್ತಾ ಬೆಳಕಿನ ಚದುರುವಿಕೆಯ ಸಂಶೋಧನೆಯಿಂದ ಸರ್ ಸಿ.ವಿ. ರಾಮನ್ ನೊಬೆಲ್ ಪಾರಿತೋಷಕ ಪುರಸ್ಕøತರಾದದ್ದು ಭಾರತಕ್ಕೆ ಹೆಮ್ಮೆಯ ವಿಷಯ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಶ್ರೇಷ್ಠ ಭಾರತೀಯರಲ್ಲಿ ಸಿ.ವಿ. ರಾಮನ್ ಪ್ರಮುಖರು. ರಾಮನ್ ಅವರು ನೂರಾರು ಭಾರತೀಯ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶಕರಾಗಿದ್ದುಕೊಂಡು…

ಹವಾಮಾನ ವೈಪರೀತ್ಯದಿಂದ ಆಹಾರ ಉತ್ಪಾದನೆ ಕುಸಿತ
ಮೈಸೂರು

ಹವಾಮಾನ ವೈಪರೀತ್ಯದಿಂದ ಆಹಾರ ಉತ್ಪಾದನೆ ಕುಸಿತ

February 29, 2020

ಬೆಂಗಳೂರು,ಫೆ.28(ಕೆಎಂಶಿ)-ಹವಾಮಾನ ವೈಪ ರೀತ್ಯದಿಂದಾಗಿ ನಮಗೆ ನಿರೀಕ್ಷಿತ ಪ್ರಮಾಣದಲ್ಲಿ ಆಹಾರ ಉತ್ಪಾದನೆಯಾಗುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆತಂಕ ವ್ಯಕ್ತಪಡಿಸಿದರು. ಹವಾಮಾನ ಬದಲಾವಣೆ ಕುರಿತ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೇ.55ರಷ್ಟು ಆಹಾರ ಉತ್ಪನ್ನಗಳು, ಶೇ.74ರಷ್ಟು ಎಣ್ಣೆ ಬೀಜಗಳು ಉತ್ಪಾದನೆಯಾಗುತ್ತವೆ. ಆದರೆ ಇತ್ತೀಚಿನ ಹವಾ ಮಾನ ವೈಪರಿತ್ಯದಿಂದ ನಮ್ಮ ಗುರಿ ಮುಟ್ಟಲಾಗುತ್ತಿಲ್ಲ. ಹಾಗೆಂದು ರಾಜ್ಯಕ್ಕೆ ಎಣ್ಣೆಬೀಜ ಇಲ್ಲವೆ ಆಹಾರದ ಕೊರತೆ ಉಂಟಾಗಿಲ್ಲ. ಈ ಹವಾಮಾನ ವೈಪರಿತ್ಯದಿಂದ ನಮ್ಮ ಲ್ಲಿರುವ ನೆಲ-ಜಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ…

1.26 ಲಕ್ಷ ರೂ. ಎಗರಿಸಿದ್ದ ಇಬ್ಬರು ಇರಾನಿ ಪ್ರವಾಸಿಗರ ಸೆರೆ
ಮೈಸೂರು

1.26 ಲಕ್ಷ ರೂ. ಎಗರಿಸಿದ್ದ ಇಬ್ಬರು ಇರಾನಿ ಪ್ರವಾಸಿಗರ ಸೆರೆ

February 29, 2020

ಮೈಸೂರು,ಫೆ.28(ಆರ್‍ಕೆ)-ಮೈಸೂರಿನ ಉಪಯೋಗಿಸಿದ ಕಾರುಗಳ ಷೋ ರೂಂವೊಂ ದರ ಅಕೌಂಟೆಂಟ್ ಗಮನ ಬೇರೆಡೆ ಸೆಳೆದು 1.26 ಲಕ್ಷ ರೂ. ನಗದು ಎಗರಿಸಿ ಪರಾರಿಯಾಗಿದ್ದ ಇಬ್ಬರು ಇರಾನಿ ಪ್ರವಾಸಿಗರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇರಾನಿ ಪ್ರಜೆಗಳಾದ ಸೈಯದ್ ರೋಸ್ಟಮಿ ಮತ್ತು ಸಬರ್ ಹುಸೇನ್ ಬಂಧಿತರಾಗಿದ್ದು, 4 ದಿನಗಳ ಹಿಂದೆ ಅಪರಾಧ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ ಇವರನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಿಚಾರಣೆಗೊಳಪಡಿಸಿದ ಮೈಸೂರಿನ ಹುಣಸೂರು ರಸ್ತೆಯ ಮಾಂಡವಿ ಮೋಟಾರ್ಸ್ ಯೂಸ್ಡ್ ಕಾರ್‍ಗಳ ಟ್ರೂ ವ್ಯಾಲ್ಯೂ ಶೋರೂಂನಲ್ಲಿ ಅಕೌಂಟೆಂಟ್ ಗಮನ ಬೇರೆಡೆ…

ಟಿಸಿಎಸ್ ಟೆಕ್‍ಬೈಟ್ಸ್ ಕ್ವಿಜ್ ಸ್ಪರ್ಧೆಯಲ್ಲಿ ಮೈಸೂರಿನ ಎನ್‍ಐಇ ಕಾಲೇಜಿಗೆ ಪ್ರಶಸ್ತಿ
ಮೈಸೂರು

ಟಿಸಿಎಸ್ ಟೆಕ್‍ಬೈಟ್ಸ್ ಕ್ವಿಜ್ ಸ್ಪರ್ಧೆಯಲ್ಲಿ ಮೈಸೂರಿನ ಎನ್‍ಐಇ ಕಾಲೇಜಿಗೆ ಪ್ರಶಸ್ತಿ

February 29, 2020

ಮೈಸೂರು, ಫೆ.28- ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿ ರುವ ಬೋರ್ಡ್ ಫಾರ್ ಐ.ಟಿ. ಎಜು ಕೇಷನ್ ಸ್ಟ್ಯಾಂಡರ್ಡ್ (ಬೈಟ್ಸ್) ಆಯೋಜಿಸಿದ್ದ ಟಿಸಿಎಸ್ ಟೆಕ್‍ಬೈಟ್ಸ್ ರಸಪ್ರಶ್ನೆ ಸ್ಪರ್ಧೆಯ ಮೈಸೂರು ಪ್ರಾದೇ ಶಿಕ ಆವೃತ್ತಿಯ ಅಂತಿಮ ಸ್ಪರ್ಧೆಯಲ್ಲಿ ಮೈಸೂರಿನ ಎನ್‍ಐಇ ಕಾಲೇಜು ಪ್ರಶಸ್ತಿ ಪಡೆದಿದೆ. ವಿನ್ನರ್ ಅಪ್ ಆಗಿ ಎನ್‍ಐಇ ಕಾಲೇಜಿನ ವರುಣ್ ಗುಪ್ತಾ ಮತ್ತು ಗುರುಪ್ರಸಾದ್ ವೀರಣ್ಣ, ರನ್ನರ್ ಅಪ್ ಆಗಿ ಎನ್‍ಐಇ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೈಸೂರಿನ ಶಿವೇಶ್ ಶ್ರೀವಾಸ್ತವ…

ವಿಜ್ಞಾನದ ಬೆಳವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ
ಚಾಮರಾಜನಗರ

ವಿಜ್ಞಾನದ ಬೆಳವಣಿಗೆಯಿಂದ ದೇಶದ ಅಭಿವೃದ್ಧಿ ಸಾಧ್ಯ

February 29, 2020

ಚಾಮರಾಜನಗರ,ಫೆ.28-ವಿಜ್ಞಾನದ ಬೆಳವಣಿಗೆಯಿಂದ ದೇಶವು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಗೊಂಡು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆÉ ಎಂದು ವಿಶ್ರಾಂತ ಕುಲಪತಿ, ಕೃಷಿ ವಿಜ್ಞಾನಿ ಪ್ರೊ.ಎಂ. ಮಹದೇವಪ್ಪ ಅಭಿಪ್ರಾಯಪಟ್ಟರು. ನಗರದ ಜಿಲ್ಲಾಡಳಿತ ಭವನದಲ್ಲಿರುವ ಕೆಡಿಪಿ ಸಭಾಂಗಣದಲ್ಲಿ ಶುಕ್ರವಾರ ಸಾರ್ವ ಜನಿಕ ಶಿಕ್ಷಣ ಇಲಾಖೆ ಮತ್ತು ಗ್ರಾವಿಟಿ ಸೈನ್ಸ್ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 1960ರಲ್ಲಿ 50 ಮಿಲಿಯನ್ ಟನ್ ಆಹಾರ ಉತ್ಪಾದಿಸುತ್ತಿದ್ದ ದೇಶವು ಹೆಚ್ಚಿನ ಆಹಾರ ಉತ್ಪನ್ನಗಳಿಗಾಗಿ ಹೊರದೇಶ ಗಳನ್ನು ಅವಲಂಬಿಸಿತ್ತು. ವಿಜ್ಞಾನದ ಬೆಳ…

ಶಿಕ್ಷಣ ಸಚಿವರ ಪಚ್ಚೆದೊಡ್ಡಿ ಶಾಲಾ ವಾಸ್ತವ್ಯ ಫಲಶೃತಿ: ಕಾಡಂಚಿನ ಗ್ರಾಮಸ್ಥರ ಹಲವು ಬೇಡಿಕೆಗಳ ಈಡೇರಿಕೆ
ಮೈಸೂರು

ಶಿಕ್ಷಣ ಸಚಿವರ ಪಚ್ಚೆದೊಡ್ಡಿ ಶಾಲಾ ವಾಸ್ತವ್ಯ ಫಲಶೃತಿ: ಕಾಡಂಚಿನ ಗ್ರಾಮಸ್ಥರ ಹಲವು ಬೇಡಿಕೆಗಳ ಈಡೇರಿಕೆ

February 29, 2020

ಹನೂರು,ಫೆ.28(ಸೋಮ)-ತಾಲೂಕಿನ ಕಾಡಂಚಿನ ಗ್ರಾಮ ಪಚ್ಚೆದೊಡ್ಡಿಯಲ್ಲಿ ಫೆ.10ರಂದು ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ಶಾಲಾ ವಾಸ್ತವ್ಯ ಕೈಗೊಂಡಿದ್ದ ಸಂದರ್ಭ ಗ್ರಾಮಸ್ಥರು ಮುಂದಿಟ್ಟಿದ್ದ ಹಲವು ಬೇಡಿಕೆಗಳನ್ನು ಸಚಿವರು ಈಡೇರಿಸಿದ್ದಾರೆ. ಕಾಡಂಚಿನ ಪಚ್ಚೆದೊಡ್ಡಿ ಗ್ರಾಮದಿಂದ 6 ರಿಂದ 10ನೇ ತರಗತಿ ವರೆಗಿನ ಮಕ್ಕಳು ಪ್ರತಿದಿನ ಕಾಡಿನಲ್ಲಿ 10 ಕಿಲೋ ಮೀ.ನಷ್ಟು ನಡೆದುಕೊಂಡೇ ಶಾಲೆಗೆ ಹೋಗಿ ಬರಬೇಕಿರುವುದರಿಂದ ವಾಹ ನದ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಕೋರಿದ್ದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಶಾಲಾ ಮಕ್ಕಳಿಗೆ ವಾಹನ…

ಯಶವಂತ್, ಧರ್ಮೇಂದ್ರ ಸೇರಿ 11 ಪೊಲೀಸ್ ಇನ್ಸ್‍ಪೆಕ್ಟರ್‍ಗಳಿಗೆ ಬಡ್ತಿ
ಮೈಸೂರು

ಯಶವಂತ್, ಧರ್ಮೇಂದ್ರ ಸೇರಿ 11 ಪೊಲೀಸ್ ಇನ್ಸ್‍ಪೆಕ್ಟರ್‍ಗಳಿಗೆ ಬಡ್ತಿ

February 29, 2020

ಮೈಸೂರು, ಫೆ.28-ಮಳವಳ್ಳಿ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಎಂ. ಧರ್ಮೇಂದ್ರ, ಬೆಂಗಳೂರಿನ ಸೈಬರ್ ಕ್ರೈಂ ಠಾಣೆ ಇನ್ಸ್‍ಪೆಕ್ಟರ್ ಕೆ.ಎನ್.ಯಶವಂತಕುಮಾರ್ ಸೇರಿ 11 ಪೊಲೀಸ್ ಇನ್ಸ್‍ಪೆಕ್ಟರ್‍ಗಳಿಗೆ ಡಿವೈಎಸ್ಪಿ ಗಳಾಗಿ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಡ್ತಿ ಪಡೆದಿರುವ ಈ 11 ಡಿವೈಎಸ್ಪಿ ಗಳು ಬೆಂಗಳೂರಿನ ರಾಜ್ಯ ಪೊಲೀಸ್ ವರಿಷ್ಠಾಧಿ ಕಾರಿಗಳ ಕಚೇರಿಯಲ್ಲಿ ವರದಿ ಮಾಡಿಕೊಳ್ಳು ವಂತೆಯೂ ನಂತರ ಸ್ಥಳ ನಿಯೋಜನೆ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪತ್ನಿಯನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಪತಿ
ಮೈಸೂರು

ಪತ್ನಿಯನ್ನು ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ ಪತಿ

February 29, 2020

ಮಳವಳ್ಳಿ, ಫೆ.28-ಕ್ಷುಲ್ಲಕ ಕಾರಣಕ್ಕಾಗಿ ಪತಿರಾಯನೋರ್ವ ಬೆಂಕಿ ಹಚ್ಚಿ ಪತ್ನಿಯನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ತಾಲೂಕಿನ ಬೆಳಕವಾಡಿ ಗ್ರಾಮದಿಂದ ತಡವಾಗಿ ವರದಿಯಾಗಿದೆ. ಗ್ರಾಮದ ಮಹದೇವ ಸ್ವಾಮಿ ಎಂಬಾತನೇ ಪತ್ನಿ ಗೀತಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನಿಸಿದವನಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆಯೇ ಪರಾರಿಯಾಗಿದ್ದಾನೆ. ವಿವರ: ಮಹದೇವಸ್ವಾಮಿ ಮತ್ತು ಗೀತಾ ಅವರಿಗೆ ಕಳೆದ 14 ವರ್ಷದ ಹಿಂದೆ ಮದುವೆಯಾಗಿತ್ತು. ಇತ್ತೀಚೆಗೆ ಮಹದೇವ ಸ್ವಾಮಿ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದನೆನ್ನಲಾಗಿದ್ದು, ಈ ವಿಷಯವಾಗಿ ದಂಪತಿ…

ಬಿಎಸ್‍ವೈಗೆ ಶುಭಾಶಯ ಸುರಿಮಳೆ
ಮೈಸೂರು

ಬಿಎಸ್‍ವೈಗೆ ಶುಭಾಶಯ ಸುರಿಮಳೆ

February 28, 2020

ಬೆಂಗಳೂರು: ರಾಜ್ಯ ರಾಜಕಾರಣ ಗುರುವಾರ ಹೊಸ ರಾಜಕೀಯ ಬಾಂಧವ್ಯಕ್ಕೆ ನಾಂದಿಯಾಯಿತು. ರಾಜಕಾರಣ ಕೇವಲ ಅಧಿಕಾರ ಹಿಡಿಯಲು ನಡೆಯುವ ಪ್ರಕ್ರಿಯೆ ಯಷ್ಟೆ. ಚುನಾವಣೆ, ಸ್ಪರ್ಧೆ, ಪರಸ್ಪರ ಆರೋಪ-ಪ್ರತ್ಯಾರೋಪಗಳು ಬರೀ ರಾಜಕೀಯಕ್ಕೆ ಸೀಮಿತ. ಅದಕ್ಕೂ ಮೀರಿದ್ದು ಮಾನವೀಯ ಸಂಬಂಧ ಗಳು, ಸಾಮರಸ್ಯ, ಬಾಂಧವ್ಯ, ಪ್ರೀತಿ- ವಿಶ್ವಾಸ, ಸಹಬಾಳ್ವೆ. ಇವೆಲ್ಲವೂ ಮಾನವೀಯ ಸಂಬಂಧ ಗಳ ಬಳುವಳಿ ಎಂಬುದಕ್ಕೆ ಸಾಕ್ಷಿಯಾಗಿದ್ದು, ಬೆಂಗಳೂರಿನ ಅರಮನೆ ಮೈದಾನದ ವೈಟ್ ಪೆಟಲ್ಸ್‍ನಲ್ಲಿ ನಡೆದ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಅವರ 78ನೇ ಹುಟ್ಟುಹಬ್ಬದ ಅಭಿ ನಂದನಾ ಸಮಾರಂಭ. ವಿಭಿನ್ನ…

1 29 30 31 32 33 330
Translate »