ವಿಜಯ ವಿಠ್ಠಲದಲ್ಲಿ ವಿಜ್ಞಾನ ದಿನಾಚರಣೆ
ಮೈಸೂರು

ವಿಜಯ ವಿಠ್ಠಲದಲ್ಲಿ ವಿಜ್ಞಾನ ದಿನಾಚರಣೆ

February 29, 2020

ಮೈಸೂರು, ಫೆ. 28- ಮೈಸೂರಿನ ವಿಜಯ ವಿಠ್ಠಲ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಸಿ.ವಿ. ರಾಮನ್ ಭಾವಾಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ “ರಾಷ್ಟ್ರೀಯ ವಿಜ್ಞಾನ ದಿನ”ವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಎಚ್. ಸತ್ಯಪ್ರಸಾದ್ ಮಾತನಾಡುತ್ತಾ ಬೆಳಕಿನ ಚದುರುವಿಕೆಯ ಸಂಶೋಧನೆಯಿಂದ ಸರ್ ಸಿ.ವಿ. ರಾಮನ್ ನೊಬೆಲ್ ಪಾರಿತೋಷಕ ಪುರಸ್ಕøತರಾದದ್ದು ಭಾರತಕ್ಕೆ ಹೆಮ್ಮೆಯ ವಿಷಯ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಶ್ರೇಷ್ಠ ಭಾರತೀಯರಲ್ಲಿ ಸಿ.ವಿ. ರಾಮನ್ ಪ್ರಮುಖರು. ರಾಮನ್ ಅವರು ನೂರಾರು ಭಾರತೀಯ ಯುವ ವಿಜ್ಞಾನಿಗಳಿಗೆ ಮಾರ್ಗದರ್ಶಕರಾಗಿದ್ದುಕೊಂಡು ವಿಜ್ಞಾನದ ಅಭಿವೃದ್ಧಿಗೆ ಸ್ಫೂರ್ತಿಯಾಗಿದ್ದಾರೆ. ಸಿ.ವಿ. ರಾಮನ್ ಉದಾತ್ತ ಗುಣ ಮತ್ತು ಸತ್ಯನಿಷ್ಠತೆಯಿಂದ ಚಂದ್ರಶೇಖರ್‍ರಂತಹ ಅನೇಕ ವಿಜ್ಞಾನಿಗಳ ಸಾಧನೆಗೆ ಸ್ಫೂರ್ತಿದಾಯಕವೆನಿಸಿತು. ಭಾರತ ದೇಶವು ಕೇವಲ ಸಾಂಸ್ಕøತಿಕ ಮತ್ತು ಧಾರ್ಮಿಕವಾಗಿ ಮಾತ್ರ ಶ್ರೀಮಂತವಾಗಿರದೆ ವೈಜ್ಞಾನಿಕವಾಗಿಯೂ ಶ್ರೀಮಂತ ರಾಷ್ಟ್ರವೆಂದು ಜಗತ್ತಿಗೆ ತೋರಿಸಿದ ವಿಜ್ಞಾನಿ ಸಿ.ವಿ.ರಾಮನ್. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಮತ್ತು ತಾರ್ಕಿಕ ಶಕ್ತಿಯನ್ನು ಬೆಳೆಸಿಕೊಂಡು ಶುದ್ಧವಿಜ್ಞಾನದ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪರೀಕ್ಷೆಯಲ್ಲಿ ಕೇವಲ ಅಂಕಗಳನ್ನು ಗಳಿಸುವುದು ಗುರಿಯಾಗಿರದೆ, ಆತ್ಮತೃಪ್ತಿ ಹಾಗೂ ಜ್ಞಾನ ಸಂಪಾದನೆಗಾಗಿ ಅಧ್ಯಯನಶೀಲರಾಗಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

Translate »