ಟಿಸಿಎಸ್ ಟೆಕ್‍ಬೈಟ್ಸ್ ಕ್ವಿಜ್ ಸ್ಪರ್ಧೆಯಲ್ಲಿ ಮೈಸೂರಿನ ಎನ್‍ಐಇ ಕಾಲೇಜಿಗೆ ಪ್ರಶಸ್ತಿ
ಮೈಸೂರು

ಟಿಸಿಎಸ್ ಟೆಕ್‍ಬೈಟ್ಸ್ ಕ್ವಿಜ್ ಸ್ಪರ್ಧೆಯಲ್ಲಿ ಮೈಸೂರಿನ ಎನ್‍ಐಇ ಕಾಲೇಜಿಗೆ ಪ್ರಶಸ್ತಿ

February 29, 2020

ಮೈಸೂರು, ಫೆ.28- ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮತ್ತು ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿ ರುವ ಬೋರ್ಡ್ ಫಾರ್ ಐ.ಟಿ. ಎಜು ಕೇಷನ್ ಸ್ಟ್ಯಾಂಡರ್ಡ್ (ಬೈಟ್ಸ್) ಆಯೋಜಿಸಿದ್ದ ಟಿಸಿಎಸ್ ಟೆಕ್‍ಬೈಟ್ಸ್ ರಸಪ್ರಶ್ನೆ ಸ್ಪರ್ಧೆಯ ಮೈಸೂರು ಪ್ರಾದೇ ಶಿಕ ಆವೃತ್ತಿಯ ಅಂತಿಮ ಸ್ಪರ್ಧೆಯಲ್ಲಿ ಮೈಸೂರಿನ ಎನ್‍ಐಇ ಕಾಲೇಜು ಪ್ರಶಸ್ತಿ ಪಡೆದಿದೆ. ವಿನ್ನರ್ ಅಪ್ ಆಗಿ ಎನ್‍ಐಇ ಕಾಲೇಜಿನ ವರುಣ್ ಗುಪ್ತಾ ಮತ್ತು ಗುರುಪ್ರಸಾದ್ ವೀರಣ್ಣ, ರನ್ನರ್ ಅಪ್ ಆಗಿ ಎನ್‍ಐಇ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮೈಸೂರಿನ ಶಿವೇಶ್ ಶ್ರೀವಾಸ್ತವ ಮತ್ತು ಸೌರಭ್ ತ್ರಿಪಾಠಿ ಹೊರಹೊಮ್ಮಿದರು.

ಟಿಸಿಎಸ್ ಸಂಸ್ಥೆಯು ವಿಜೇತರಿಗೆ ತಲಾ ರೂ. 12,000 ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಮತ್ತು ರನ್ನರ್ಸ್ ಅಪ್‍ಗಳಿಗೆ ತಲಾ ರೂ. 10,000 ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ನೀಡಿತು. ಟಿಸಿಎಸ್‍ನ ಬೆಂಗಳೂರು ಡೆಲಿವರಿ ಸೆಂಟರ್‍ನ ಹೆಡ್ ಸುನೀಲ್ ದೇಶಪಾಂಡೆ ವಿಜೇತರಿಗೆ ಬಹುಮಾನ ವಿತರಿಸಿದರು. ಎಸ್‍ಜೆಸಿಇ ಕಾಲೇಜಿನ ಪ್ರಾಂಶುಪಾಲ ಟಿ.ಎನ್.ನಾಗಭೂಷಣ್ ಉಪಸ್ಥಿತರಿದ್ದರು. ವಿಜೇತರು ಬೆಂಗಳೂರಿನಲ್ಲಿ ಮಾ.11ರಂದು ನಡೆಯಲಿರುವ ರಾಜ್ಯಮಟ್ಟದ ಅಂತಿಮ ಸ್ಪರ್ಧೆಯಲ್ಲಿ ಪ್ರತಿನಿಧಿಸುವರು.

Translate »