Tag: Mysore

ಇ-ಆಡಳಿತದ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಿ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‍ಕುಮಾರ್ ಸಲಹೆ
ಮೈಸೂರು

ಇ-ಆಡಳಿತದ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಿ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‍ಕುಮಾರ್ ಸಲಹೆ

March 1, 2020

ಮೈಸೂರು, ಫೆ.29(ಆರ್‍ಕೆ)- ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಪ್ರತಿ ಯೊಬ್ಬರೂ ಇ-ಆಡಳಿತದ ಬಗ್ಗೆ ತಿಳಿದು ಕೊಳ್ಳುವುದು ಅವಶ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್‍ಕುಮಾರ್ ತಿಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿ ವತಿಯಿಂದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಕರ್ನಾಟಕ ಸರ್ಕಾರದ ಸೇವಾ ಸಿಂಧು ಹಾಗೂ ಸ್ನಾತ ಕೋತ್ತರ ಅಧ್ಯಯನ ವಿಭಾಗಗಳ ಅಧ್ಯಕ್ಷರು, ನಿರ್ದೇಶಕರು, ಸಂಯೋಜಿತ ಕಾಲೇಜು ಗಳ ಪ್ರಾಂಶುಪಾಲರು ಹಾಗೂ ನೋಡಲ್ ಅಧಿಕಾರಿಗಳಿಗಾಗಿ ಒಂದು ದಿನದ ಸ್ಟಾರ್ಟ್ ಅಪ್ ಟ್ರೈನಿಂಗ್…

ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಡಬೇಕು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಿವಿಮಾತು
ಮೈಸೂರು

ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ಬಿಡಬೇಕು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಕಿವಿಮಾತು

March 1, 2020

ಮೈಸೂರು, ಫೆ.29- ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯ, ಖಾಸಗಿ ಶಾಲೆಗಳಲ್ಲಿ ಸಿಗದಿದ್ದರೂ ಕೂಡ ಪೋಷಕರು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುತ್ತಿದ್ದು, ಈ ವ್ಯಾಮೋಹ ಬಿಡಬೇಕು ಎಂದು ವರುಣಾ ಕ್ಷೇತ್ರದ ಶಾಸಕ ಡಾ|| ಯತೀಂದ್ರ ಸಿದ್ದರಾಮಯ್ಯ ಕರೆ ನೀಡಿದರು. ಮೈಸೂರು ತಾಲೂಕು ಡಿ. ಸಾಲುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಬಿಸಿಯೂಟ, ಸಮವಸ್ತ್ರ, ಶೂ, ಸೈಕಲ್, ಹಾಲು ಎಲ್ಲವನ್ನು ನೀಡುತ್ತಿದ್ದು, ಮಕ್ಕಳು…

‘ಗ್ರೇಟರ್ ಮೈಸೂರು’ ಶೀಘ್ರ ಘೋಷಣೆ
ಮೈಸೂರು

‘ಗ್ರೇಟರ್ ಮೈಸೂರು’ ಶೀಘ್ರ ಘೋಷಣೆ

February 29, 2020

ಮೈಸೂರು, ಫೆ. 28 (ಆರ್‍ಕೆ)- ಬಹು ನಿರೀಕ್ಷಿತ `ಗ್ರೇಟರ್ ಮೈಸೂರು’ ಯೋಜನೆಯನ್ನು ಮುಂಬರುವ ರಾಜ್ಯ ಬಜೆಟ್‍ನಲ್ಲಿ ಸೇರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಪ್ರಗತಿ ಹಂತ ದಲ್ಲಿರುವ ಅಂಗಡಿ ಮಳಿಗೆ ನಿರ್ಮಾಣ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮೈಸೂರು ನಗರವನ್ನು ಮತ್ತಷ್ಟು ವಿಸ್ತರಿಸಿ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಗೆ ಸುತ್ತಲಿನ ಇನ್ನಷ್ಟು ಗ್ರಾಮಗಳನ್ನು ಸೇರ್ಪಡಿಸಬೇಕೆಂದು ಜಿಲ್ಲಾಧಿ ಕಾರಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದರು. ಅಲ್ಲದೆ, ಸಂಸದರು, ಈ…

ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 42ಕ್ಕೇರಿಕೆ
ಮೈಸೂರು

ದೆಹಲಿ ಹಿಂಸಾಚಾರ: ಸಾವಿನ ಸಂಖ್ಯೆ 42ಕ್ಕೇರಿಕೆ

February 29, 2020

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಶುಕ್ರವಾರ 42ಕ್ಕೆ ಏರಿಕೆಯಾಗಿದ್ದು, ಗಲಭೆ ಪೀಡಿತ ಪ್ರದೇಶಗಳಲ್ಲಿ ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ. ಈ ಕುರಿತಂತೆ ದೆಹಲಿ ಆರೋಗ್ಯ ಇಲಾಖೆ ಶುಕ್ರ ವಾರ ಮಾಹಿತಿ ನೀಡಿದ್ದು, ಹಿಂಸಾಚಾರದಲ್ಲಿ ಗಾಯ ಗೊಂಡು ಆಸ್ಪತ್ರೆ ಸೇರಿದ್ದವರ ಪೈಕಿ ಹಲವರು ಮೃತರಾಗಿ ದ್ದಾರೆ ಎಂದು ತಿಳಿಸಿದ್ದಾರೆ. ಆ ಮೂಲಕ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ದಲ್ಲಿ ಸಾವನ್ನಪ್ಪಿದವರ ಸಂಖ್ಯೆ 42ಕ್ಕೆ ಏರಿಕೆಯಾದಂತಾಗಿದೆ. ಪ್ರಸ್ತುತ ದೆಹಲಿ ಶಾಂತಿಯುತ ವಾಗಿದ್ದು, ಹಿಂಸಾಚಾರ ಪೀಡಿತ ಪ್ರದೇಶಗಳೂ ಕೂಡ ಸಹಜಸ್ಥಿತಿಯತ್ತ…

ಇಂದು, ನಾಳೆ ಎಂಆರ್‍ಸಿಯಲ್ಲಿ ಪ್ರತಿಷ್ಠಿತ `ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್’ ರೇಸ್
ಮೈಸೂರು

ಇಂದು, ನಾಳೆ ಎಂಆರ್‍ಸಿಯಲ್ಲಿ ಪ್ರತಿಷ್ಠಿತ `ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್’ ರೇಸ್

February 29, 2020

ಮೈಸೂರು, ಫೆ.28-ಇದೇ ಪ್ರಥಮ ಬಾರಿಗೆ ಮೈಸೂರು ರೇಸ್ ಕ್ಲಬ್ ವತಿಯಿಂದ ಪ್ರತಿಷ್ಠಿತ `ದಿ ಇಂಡಿಯನ್ ಟರ್ಫ್ ಇನ್ವಿಟೇಷನ್ ಕಪ್-2020’ ರೇಸ್ ಫೆ.29 ಮತ್ತು ಮಾ.1ರಂದು ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಪ್ರತಿಷ್ಠಿತ ರೇಸ್‍ನಲ್ಲಿ 1 ಕೋಟಿ ರೂ. ಬಹುಮಾನ ಹಾಗೂ 6 ಲಕ್ಷ ರೂ. ಮೌಲ್ಯದ ಆಕರ್ಷಕ ಟ್ರೋಫಿಗಳಿದ್ದು, ಇನ್ವಿಟೇಷನ್ ಕಪ್ ಸೇರಿ 8 ರೇಸ್‍ಗಳು ನಡೆಯಲಿವೆ. ಎರಡೂ ದಿನಗಳಲ್ಲೂ ತಲಾ 8 ರೇಸ್‍ಗಳನ್ನು ನಡೆಸಲಾಗುತ್ತಿದ್ದು, 120 ಕುದುರೆ ಗಳು ರೇಸ್‍ನಲ್ಲಿ ಭಾಗಿಯಾಗಲಿವೆ. ಮೊದಲ…

ಸೂಕ್ತ ದಾಖಲೆ ಒದಗಿಸುವ ಎಲ್ಲಾ ರೈತರ ಸಾಲ ಮನ್ನಾ
ಮೈಸೂರು

ಸೂಕ್ತ ದಾಖಲೆ ಒದಗಿಸುವ ಎಲ್ಲಾ ರೈತರ ಸಾಲ ಮನ್ನಾ

February 29, 2020

ಬೆಂಗಳೂರು,ಫೆ.28-ಸೂಕ್ತ ದಾಖಲೆ ಗಳನ್ನು ಒದಗಿಸುವ ಎಲ್ಲಾ ರೈತರ ಸಾಲ ಮನ್ನಾ ಆಗಲಿದ್ದು, ಯಾರೂ ಆತಂಕಕ್ಕೆ ಒಳಗಾಗ ಬಾರದು ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ರೈತರ ಸಾಲ ಮನ್ನಾ ಯೋಜನೆಯಲ್ಲಿ ರಾಜ್ಯ ಸರ್ಕಾರವು ಸುಮಾರು 1.10 ಲಕ್ಷ ರೈತರನ್ನು ಕೈಬಿಡು ತ್ತಿದೆ ಎಂದು ಆರ್ಥಿಕ ಇಲಾಖಾಧಿಕಾರಿ ಗಳು ತಿಳಿಸಿದ್ದಾರೆ ಎಂಬ ವರದಿಗಳು ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ಹಿನ್ನೆಲೆ ಶುಕ್ರವಾರ ರಾತ್ರಿ ಮುಖ್ಯಮಂತ್ರಿಗಳು ಈ ಸಂಬಂಧ ಟ್ವೀಟ್ ಮಾಡಿದ್ದಾರೆ.

ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಅನುದಾನಕ್ಕಾಗಿ ಸಿಎಂಗೆ ಮನವಿ
ಮೈಸೂರು

ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೂ ಅನುದಾನಕ್ಕಾಗಿ ಸಿಎಂಗೆ ಮನವಿ

February 29, 2020

ಮೈಸೂರು, ಫೆ.28(ಎಸ್‍ಬಿಡಿ)- ಮೈಸೂರು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಒತ್ತಾಯಿ ಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂ ಗಣದಲ್ಲಿ ಶುಕ್ರವಾರ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮೈಸೂರು ನಗರ ಪಾಲಿಕೆಗೆ ವಿಶೇಷ ಅನು ದಾನಕ್ಕೆ ಮನವಿ ಮಾಡಿದ್ದು, 100 ಕೋಟಿ ರೂ.ಗಳನ್ನಾದರೂ ಬಿಡುಗಡೆ ಮಾಡಿ ಸುತ್ತೇನೆ. ತಕ್ಷಣಕ್ಕೆ 50 ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಜಿಲ್ಲಾ ಪಂಚಾಯ್ತಿ, ತಾಲೂಕು…

ಮೈಸೂರಿಂದ ಬೆಳಗಾವಿ, ಸಿಕಂದರಾಬಾದ್‍ಗೆ 4 ಸ್ಲೀಪರ್ ವೋಲ್ವೊ ಬಸ್
ಮೈಸೂರು

ಮೈಸೂರಿಂದ ಬೆಳಗಾವಿ, ಸಿಕಂದರಾಬಾದ್‍ಗೆ 4 ಸ್ಲೀಪರ್ ವೋಲ್ವೊ ಬಸ್

February 29, 2020

ಮೈಸೂರು, ಫೆ.28(ಎಸ್‍ಬಿಡಿ)- ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗದಿಂದ ಮೊದಲ ಬಾರಿಗೆ ಆರಂಭಿಸಿದ ಸ್ಲೀಪರ್ ಸೌಲಭ್ಯದ 4 ವೋಲ್ವೊ ಬಸ್‍ಗಳ ಸಂಚಾರ ಸೇವೆಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಶುಕ್ರವಾರ ಸಬರ್ಬನ್ ಬಸ್ ನಿಲ್ದಾಣ ದಲ್ಲಿ ಚಾಲನೆ ನೀಡಿದರು. ಮೈಸೂರು-ಸಿಕಂದರಾಬಾದ್ ಮಾರ್ಗ ದಲ್ಲಿ 2 `ಅಂಬಾರಿ ಡ್ರೀಮ್‍ಕ್ಲಾಸ್ ಎಸಿ ಸ್ಲೀಪರ್ ಬಸ್’ಗಳು ಸಂಚರಿಸಲಿವೆ. ಇವು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹೈದರಾಬಾದ್ ಸಂಪ ರ್ಕಿಸಲಿವೆ. ಕೆಂಗೇರಿ ನೈಸ್ ರಸ್ತೆ ಮುಖಾಂ ತರ ಹೆಬ್ಬಾಳ, ಯಲಹಂಕ ಮಾರ್ಗವಾಗಿ ಸಂಚಾರ…

ಹೈದರಾಬಾದ್ ಎನ್‍ಕೌಂಟರ್: ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲು ಸುಪ್ರೀಂ ನಕಾರ
ಮೈಸೂರು

ಹೈದರಾಬಾದ್ ಎನ್‍ಕೌಂಟರ್: ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲು ಸುಪ್ರೀಂ ನಕಾರ

February 29, 2020

ನವದೆಹಲಿ, ಫೆ.28- ತೆಲಂಗಾಣದ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಎನ್‍ಕೌಂಟರ್ ಮಾಡಿದ ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಿಸಲು ಮತ್ತು ಮೃತಪಟ್ಟವರಿಗೆ ಪರಿಹಾರ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ. ಎನ್‍ಕೌಂಟರ್‍ನಲ್ಲಿ ಮೃತಪಟ್ಟವರ ಕುಟುಂಬಗಳು ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬ್ಡೆ, ಅರ್ಜಿ ಸಲ್ಲಿಸಿದ ಕುಟುಂಬಗಳು ಮೂವರು ಸದಸ್ಯರಿರುವ ವಿಚಾರಣಾ ಆಯೋಗವನ್ನು ಸಂಪರ್ಕಿಸಲು ತಿಳಿಸಿತು. ಆಯೋಗ ಎನ್‍ಕೌಂಟರ್ ಬಗ್ಗೆ ತನಿಖೆ ನಡೆಸುತ್ತಿದ್ದು. ನಿಮ್ಮ ಬಳಿ ಇರುವ ದಾಖಲೆಯನ್ನು ಆಯೋಗಕ್ಕೆ ನೀಡಿ ಎಂದು…

ದತ್ತಾತ್ರೆಯ ಪಾಟೀಲರ ಮಂತ್ರಿ ಮಾಡಿ, ಇಲ್ಲದಿದ್ದರೆ 10 ಶಾಸಕರಿಂದ ರಾಜೀನಾಮೆ
ಮೈಸೂರು

ದತ್ತಾತ್ರೆಯ ಪಾಟೀಲರ ಮಂತ್ರಿ ಮಾಡಿ, ಇಲ್ಲದಿದ್ದರೆ 10 ಶಾಸಕರಿಂದ ರಾಜೀನಾಮೆ

February 29, 2020

ಕಲಬುರಗಿ: ಬಿ.ಎಸ್.ಯಡಿಯೂರಪ್ಪ ಸರ್ಕಾರ ಸುಭದ್ರವಾಗಿರಬೇಕೆಂದರೆ ಶಾಸಕ ದತ್ತಾತ್ರೆಯ ಪಾಟೀಲರನ್ನು ಮಂತ್ರಿ ಮಾಡಬೇಕು ಇಲ್ಲದಿದ್ದರೆ 10 ಶಾಸಕರ ಕೈಯ್ಯಲ್ಲಿ ರಾಜೀನಾಮೆ ಕೊಡಿಸುತ್ತೇನೆ ಎಂದು ಶ್ರೀಶೈಲ ಸಾರಂಗಮಠದ ಸ್ವಾಮೀಜಿಗಳು ಬಹಿರಂಗ ವಾಗಿ ಧಮ್ಕಿ ಹಾಕಿದ್ದಾರೆ. ಕಲಬುರಗಿಯ ಸಾರಂಗದರ ದೇಶಿಕೇಂದ್ರ ಶೀಗಳು ಕಾರ್ಯಕ್ರಮ ವೊಂದರಲ್ಲಿ ಮಾತನಾಡಿ ಮಾತು ಕೊಟ್ಟಂತೆ ದತ್ತಾತ್ರೆಯ ಪಾಟೀಲ್‍ರನ್ನು ಮುಂದಿನ ವರ್ಷದೊಳಗೆ ಮಂತ್ರಿ ಮಾಡಬೇಕು. ಇಲ್ಲದಿದ್ದರೆ ಅವರಿಗೆ ರಾಜಿನಾಮೆ ನೀಡಿ ಮನೆಯಲ್ಲಿರುವಂತೆ ಹೇಳುತ್ತೇನೆ. ಇದೇ ವೇಳೆ ಶಾಸಕ ಅಪ್ಪುಗೌಡರಿಗೂ ರಾಜೀನಾಮೆ ನೀಡುವಂತೆ ಹೇಳುತ್ತೇನೆ ಎಂದರು. ಇನ್ನು ಕಲ್ಯಾಣ ಕರ್ನಾಟಕ…

1 28 29 30 31 32 330
Translate »