ಇ-ಆಡಳಿತದ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಿ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‍ಕುಮಾರ್ ಸಲಹೆ
ಮೈಸೂರು

ಇ-ಆಡಳಿತದ ಬಗ್ಗೆ ಜ್ಞಾನ ವೃದ್ಧಿಸಿಕೊಳ್ಳಿ ಮೈಸೂರು ವಿವಿ ಕುಲಪತಿ ಪ್ರೊ. ಹೇಮಂತ್‍ಕುಮಾರ್ ಸಲಹೆ

March 1, 2020

ಮೈಸೂರು, ಫೆ.29(ಆರ್‍ಕೆ)- ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳೆದಂತೆ ಪ್ರತಿ ಯೊಬ್ಬರೂ ಇ-ಆಡಳಿತದ ಬಗ್ಗೆ ತಿಳಿದು ಕೊಳ್ಳುವುದು ಅವಶ್ಯ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ. ಹೇಮಂತ್‍ಕುಮಾರ್ ತಿಳಿಸಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜು ಅಭಿವೃದ್ಧಿ ಮಂಡಳಿ ವತಿಯಿಂದ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಕರ್ನಾಟಕ ಸರ್ಕಾರದ ಸೇವಾ ಸಿಂಧು ಹಾಗೂ ಸ್ನಾತ ಕೋತ್ತರ ಅಧ್ಯಯನ ವಿಭಾಗಗಳ ಅಧ್ಯಕ್ಷರು, ನಿರ್ದೇಶಕರು, ಸಂಯೋಜಿತ ಕಾಲೇಜು ಗಳ ಪ್ರಾಂಶುಪಾಲರು ಹಾಗೂ ನೋಡಲ್ ಅಧಿಕಾರಿಗಳಿಗಾಗಿ ಒಂದು ದಿನದ ಸ್ಟಾರ್ಟ್ ಅಪ್ ಟ್ರೈನಿಂಗ್ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಇಂದು ವಿಜ್ಞಾನ ಮತ್ತು ತಂತ್ರಜ್ಞಾನ ಬೃಹದಾಕಾರವಾಗಿ ಬೆಳೆದಿದೆ. ಕುಳಿತಲ್ಲೇ ಜಗತ್ತನ್ನು ತಿಳಿದುಕೊಳ್ಳುವ ಅವಕಾಶವಿದೆ. ಈ ತಂತ್ರಾಂಶವನ್ನು ಪ್ರತಿಯೊಬ್ಬರೂ ತಿಳಿದು ಕೊಂಡು ಇ-ಆಡಳಿತದ ಜ್ಞಾನವನ್ನು ವೃದ್ಧಿಸಿ ಕೊಳ್ಳಬೇಕು ಎಂದು ನುಡಿದರು.

ಮೈಸೂರು ವಿಶ್ವವಿದ್ಯಾನಿಲಯದ ಪರೀಕ್ಷೆ, ಅಕಾಡೆಮಿ, ನೋಂದಣಿಗೆ ಸಂಬಂಧಿಸಿ ದಂತೆ ಅಂತರ್ಜಾಲದಲ್ಲಿ 49 ಸೇವೆಗಳ ಬಗ್ಗೆ ಮಾಹಿತಿ ಲಭ್ಯವಿದೆ. ಆ ಪೈಕಿ ಕೇವಲ 15 ಸೇವೆಗಳನ್ನು ಮಾತ್ರ ನಾವು ಬಳಸಿಕೊಳ್ಳು ತ್ತಿದ್ದೇವೆ. 2020ರಲ್ಲಿ ವಿಶ್ವವಿದ್ಯಾನಿಲಯದ ಶೇ. 80ರಷ್ಟು ಚಟುವಟಿಕೆಗಳನ್ನು ಡಿಜಿಟಲೀ ಕರಣ ಮಾಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಇ-ಗವರ್ನಿಂಗ್ ಮತ್ತು ರಾಜ್ಯ ವಿಶೇಷ ನೋಡಲ್ ಅಧಿಕಾರಿ ಡಾ. ಭಾಗ್ಯವನ ಎಸ್. ಮುದಿಗೌಡ ಅವರು ಮಾತನಾಡಿ, ಹೊಸ ಆವಿಷ್ಕಾರಗಳು ಮುಂದಿನ ದಿನ ಗಳಲ್ಲಿ ಇಡೀ ಜಗತ್ತನ್ನೇ ಬದಲಾಯಿಸು ತ್ತೇವೆ. ಬದಲಾದ ಪರಿಸ್ಥಿತಿಗೆ ನಾವು ಹೊಂದಿಕೊಂಡರೆ ಮಾತ್ರ ಬದುಕು ಸುಂದರವಾಗುತ್ತದೆ ಎಂದರು.

ಬೇರೆ ಬೇರೆ ರಾಷ್ಟ್ರಗಳಿಗೆ ಹೋಲಿಸಿದಲ್ಲಿ ನಮ್ಮ ದೇಶದ ವಿಶ್ವವಿದ್ಯಾನಿಲಯಗಳು ಹಿಂದೆ ಉಳಿದಿವೆ. ಇ-ಆಡಳಿತ, ಇ-ಕಚೇರಿ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸ ಬೇಕು ಎಂದು ಅಭಿಪ್ರಾಯಪಟ್ಟರು.

ಮೈಸೂರು ವಿಶ್ವವಿದ್ಯಾನಿಲಯದ ಕುಲ ಸಚಿವ ಪ್ರೊ.ಆರ್.ಶಿವಪ್ಪ, ವಿಜ್ಞಾನ ನಿಕಾ ಯದ ಡೀನ್ ಪ್ರೊ. ವೆಂಕಟೇಶಮೂರ್ತಿ, ಪ್ರಾಧ್ಯಾಪಕರಾದ ಪ್ರೊ. ಆನಂದ, ಪ್ರೊ. ಶ್ರೀಕಂಠಸ್ವಾಮಿ ಹಾಗೂ ಇತರರು ಕಾರ್ಯಾ ಗಾರದಲ್ಲಿ ಪಾಲ್ಗೊಂಡಿದ್ದರು.

Translate »