ಬೆಂಗಳೂರು,ಫೆ.28-ಸೂಕ್ತ ದಾಖಲೆ ಗಳನ್ನು ಒದಗಿಸುವ ಎಲ್ಲಾ ರೈತರ ಸಾಲ ಮನ್ನಾ ಆಗಲಿದ್ದು, ಯಾರೂ ಆತಂಕಕ್ಕೆ ಒಳಗಾಗ ಬಾರದು ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ. ರೈತರ ಸಾಲ ಮನ್ನಾ ಯೋಜನೆಯಲ್ಲಿ ರಾಜ್ಯ ಸರ್ಕಾರವು ಸುಮಾರು 1.10 ಲಕ್ಷ ರೈತರನ್ನು ಕೈಬಿಡು ತ್ತಿದೆ ಎಂದು ಆರ್ಥಿಕ ಇಲಾಖಾಧಿಕಾರಿ ಗಳು ತಿಳಿಸಿದ್ದಾರೆ ಎಂಬ ವರದಿಗಳು ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ಹಿನ್ನೆಲೆ ಶುಕ್ರವಾರ ರಾತ್ರಿ ಮುಖ್ಯಮಂತ್ರಿಗಳು ಈ ಸಂಬಂಧ ಟ್ವೀಟ್ ಮಾಡಿದ್ದಾರೆ.