ಮೈಸೂರು, ಫೆ.28(ಎಸ್‍ಬಿಡಿ)- ಮೈಸೂರು ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಗಳ ಬಳಿ ಒತ್ತಾಯಿ ಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಮೈಸೂರು ಜಿಲ್ಲಾ ಪಂಚಾಯ್ತಿ ಸಭಾಂ ಗಣದಲ್ಲಿ ಶುಕ್ರವಾರ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಮೈಸೂರು ನಗರ ಪಾಲಿಕೆಗೆ ವಿಶೇಷ ಅನು ದಾನಕ್ಕೆ ಮನವಿ ಮಾಡಿದ್ದು, 100 ಕೋಟಿ ರೂ.ಗಳನ್ನಾದರೂ ಬಿಡುಗಡೆ ಮಾಡಿ ಸುತ್ತೇನೆ. ತಕ್ಷಣಕ್ಕೆ 50 ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾ ಯಿತಿ, ನಗರ ಸಭೆ, ಪುರಸಭೆಗಳಿಗೆ 10 ಕೋಟಿ ರೂ. ಅನುದಾನ ಕೋರಿದ್ದೇನೆ. ಮೈಸೂರಿನ ಕುಕ್ಕರಹಳ್ಳಿ ಕೆರೆ ನೈರ್ಮಲ್ಯ, ಅಭಿವೃದ್ಧಿಗೆ 10-15 ಕೋಟಿ ರೂ. ಅಗತ್ಯ ವಿದೆ ಎಂದು ಕೇಳಿಕೊಂಡಿದ್ದು, ತಕ್ಷಣಕ್ಕೆ 5 ಕೋಟಿ ರೂ. ಬಿಡುಗಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದು ವಿವರಿಸಿದರು.
ಜಿಪಂ ಸದಸ್ಯರಾದ ರವಿಶಂಕರ್, ಬೀರಿ ಹುಂಡಿ ಬಸವಣ್ಣ ಮಾತನಾಡಿ, ಚುನಾ ವಣೆ ಸಂದರ್ಭದಲ್ಲಿ ಜನರಿಗೆ ನಾವು ನೀಡಿದ್ದ ಭರವಸೆ ಈಡೇರಿಸಲು ಸಾಧ್ಯವಾ ಗಿಲ್ಲ. ಜಿಪಂಗೆ ಕೇವಲ 15-20 ಲಕ್ಷ ರೂ. ಅನುದಾನ ನೀಡುತ್ತಿದ್ದಾರೆ. ದಯಮಾಡಿ ವಿಶೇಷ ಅನುದಾನ ಬಿಡುಗಡೆಗೆ ನಮ್ಮ ಪರ ವಾಗಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕಲ್ಪಿಸುತ್ತಿಲ್ಲ. ಈ ಹಿಂದೆ ಕೆಲಸ ಮಾಡಿದ್ದರ ಹಣವನ್ನೂ ಶ್ರಮಿಕರಿಗೆ ಬಿಡುಗಡೆ ಮಾಡಿಲ್ಲ ಎಂದು ಸದಸ್ಯರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ಜಿಪಂ ಸಿಇಓ ಕೆ.ಜ್ಯೋತಿ, ಬಿಡುಗಡೆಯಾಗ ಬೇಕಿರುವ ಬಾಕಿ ಅನುದಾನದ ಸಂಬಂಧ ಮಾಹಿತಿ ಸಲ್ಲಿಸುವುದಾಗಿ ತಿಳಿಸಿದರು.
ಮನೆ ನಿರ್ಮಾಣಕ್ಕೆ ಸಹಾಯಧನ ಕೋರಿದ ಬಡವರಿಗೆ ಹಣವೇ ಬಂದಿಲ್ಲ ಎಂದು ಸದಸ್ಯರೊಬ್ಬರು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಉಳ್ಳ ವರೇ ಒಂದು ನಿವೇಶನ ತೋರಿಸಿ ಹಲವು ಬಾರಿ ಸಹಾಯಧನ ಪಡೆದಿದ್ದಾರೆ. ಇಂತ ಹವರನ್ನು ಒಂದಲ್ಲಾ ಒಂದು ರೀತಿ ನಾವೂ ನೀವು ಎಲ್ಲಾ ರಕ್ಷಿಸುತ್ತಿದ್ದೇವೆ ಅನ್ನಿಸುತ್ತದೆ. ಇದು ಬದಲಾಗಬೇಕು. ಎಲ್ಲಾ ಸದಸ್ಯರೂ ತಮ್ಮ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಿ, ಅರ್ಹರನ್ನು ಮಾತ್ರ ಗುರುತಿಸಿ, ಪ್ರಮಾ ಣೀಕರಿಸಿ. 8-10 ದಿನಗಳಲ್ಲಿ ಫಲಾ ನುಭವಿ ಗಳ ಖಾತೆಗೆ ಆರ್‍ಟಿಜಿಎಸ್ ಮಾಡಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ದರು. ಜನರಿಗೆ ಸಮರ್ಪಕವಾಗಿ ಕುಡಿ ಯುವ ನೀರು ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಇದೇ ವೇಳೆ ಅಧಿಕಾರಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ, ಜಿಪಂ ಅಧ್ಯಕ್ಷೆ ಪರಿ ಮಳಾ ಶ್ಯಾಮ್, ಉಪಾಧ್ಯಕ್ಷೆ ಗೌರಮ್ಮ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರಪಾಲಿಕೆ ಆಯುಕ್ತ ಗುರುದತ್ ಹೆಗಡೆ ಇನ್ನಿತರರು ಉಪಸ್ಥಿತರಿದ್ದರು.