ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದಿರುವ ಹಿಂಸಾಚಾರದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಶುಕ್ರವಾರ 42ಕ್ಕೆ ಏರಿಕೆಯಾಗಿದ್ದು, ಗಲಭೆ ಪೀಡಿತ ಪ್ರದೇಶಗಳಲ್ಲಿ ಅರೆ ಸೇನಾಪಡೆಗಳನ್ನು ನಿಯೋಜಿಸಲಾಗಿದೆ.
ಈ ಕುರಿತಂತೆ ದೆಹಲಿ ಆರೋಗ್ಯ ಇಲಾಖೆ ಶುಕ್ರ ವಾರ ಮಾಹಿತಿ ನೀಡಿದ್ದು, ಹಿಂಸಾಚಾರದಲ್ಲಿ ಗಾಯ ಗೊಂಡು ಆಸ್ಪತ್ರೆ ಸೇರಿದ್ದವರ ಪೈಕಿ ಹಲವರು ಮೃತರಾಗಿ ದ್ದಾರೆ ಎಂದು ತಿಳಿಸಿದ್ದಾರೆ. ಆ ಮೂಲಕ ದೆಹಲಿಯಲ್ಲಿ ನಡೆಯುತ್ತಿರುವ ಹಿಂಸಾಚಾರ ದಲ್ಲಿ ಸಾವನ್ನಪ್ಪಿದವರ ಸಂಖ್ಯೆ 42ಕ್ಕೆ ಏರಿಕೆಯಾದಂತಾಗಿದೆ. ಪ್ರಸ್ತುತ ದೆಹಲಿ ಶಾಂತಿಯುತ ವಾಗಿದ್ದು, ಹಿಂಸಾಚಾರ ಪೀಡಿತ ಪ್ರದೇಶಗಳೂ ಕೂಡ ಸಹಜಸ್ಥಿತಿಯತ್ತ ಮರಳು ತ್ತಿವೆ. ಅಂಗಡಿ ಮುಂಗಟ್ಟು ಗಳನ್ನು ತೆರೆಯಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸರಿ ಸುಮಾರು 7000ಕ್ಕೂ ಅಧಿಕ ಪ್ಯಾರಾಮಿಲಿಟರಿ ಪಡೆ ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಅಲ್ಲದೆ ನೂರಾರು ಪೆÇಲೀಸರು ಹಿಂಸಾಚಾರಕ್ಕೆ ತುತ್ತಾಗಿದ್ದ ಈಶಾನ್ಯ ದೆಹಲಿಯ ಜಾಫ್ರಾಬಾದ್, ಮೌಜ್ ಪುರ, ಚಂದ್ ಬಾಗ್, ಖುರೇಜಿ ಖಾಸ್ ಮತ್ತು ಭಜನ್‍ಪುರ್‍ನಲ್ಲಿ ಮೊಕ್ಕಾಂ ಹೂಡಿದ್ದು, ಶಾಂತಿ ಸುವ್ಯವಸ್ಥೆಯ ಪಾಲನೆಯಲ್ಲಿ ತೊಡಗಿದ್ದಾರೆ.
ಕೇಂದ್ರ, ದೆಹಲಿ ಸರ್ಕಾರಕ್ಕೆ ‘ಹೈ’ ನೊಟೀಸ್: ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ವಾದ್ರಾ ಮತ್ತಿತರರ ವಿರುದ್ದ ಎಫ್‍ಐಆರ್ ದಾಖಲಿಸಬೇಕೆಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ, ದೆಹಲಿ ರಾಜ್ಯ ಸರ್ಕಾರ ಹಾಗೂ ದೆಹಲಿ ಪೆÇಲೀಸರಿಗೆ ಶುಕ್ರವಾರ ನೊಟೀಸ್ ನೀಡಿದೆ.
ವಾಯ್ಸ್ ಆಫ್ ಲಾಯರ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯ ಮೂರ್ತಿ ಡಿ.ಎನ್. ಪಾಟೀಲ್ ಹಾಗೂ ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, ನೊಟೀಸ್ ಜಾರಿ ಮಾಡಿ ವಿಚಾರಣೆಯನ್ನು ಏಪ್ರಿಲ್ 13ಕ್ಕೆ ಮುಂದೂಡಿತು. ದ್ವೇಷದ ಭಾಷಣಗಳ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಆಮ್ ಆದ್ಮಿ ಪಕ್ಷದ ನಾಯಕರಾದ ಮನೀಷ್ ಸಿಸೋಡಿಯಾ, ಅಮಾನುಲ್ಲಾ ಖಾನ್, ಎಐಎಂಐಎಂ ನಾಯಕರಾದ ಅಕ್ಬರುದ್ದೀನ್ ಓವೈಸಿ, ವಾರೀಸ್ ಪಠಾಣ್ ಹಾಗೂ ವಕೀಲ ಮೆಹಮೂದ್ ಪರೇಚಾ ವಿರುದ್ದ ಪ್ರಕರಣ ದಾಖಲಿಸಲು ಆದೇಶಿಸ ಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಕೆಲ ನಿರ್ಧಿಷ್ಟ ರಾಜಕೀಯ ಪಕ್ಷಗಳ ನಾಯಕರ ದ್ವೇಷ ಭಾಷಣಗಳಿಗೆ ಸಂಬಂಧಿಸಿದಂತೆ ಹಲವು ಆರ್ಜಿಗಳನ್ನು ಗುರುವಾರ ಹೈಕೋರ್ಟ್‍ನಲ್ಲಿ ಸಲ್ಲಿಸಲಾಗಿತ್ತು. ಈ ರಾಜಕೀಯ ನಾಯಕರ ದ್ವೇಷ ಪೂರಿತ ಭಾಷಣಗಳಿಂದಾಗಿ ಕೋಮು ಗಲಭೆಗಳು ಭುಗಿಲೆದ್ದಿದ್ದು, ಇದರಿಂದಾಗಿ ಈಶಾನ್ಯ ದೆಹಲಿಯಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ದೆಹಲಿ ನೂತನ ಪೆÇಲೀಸ್ ಆಯುಕ್ತರಾಗಿ ಎಸ್.ಎನ್.ಶ್ರೀವಾಸ್ತವ
ನವದೆಹಲಿ: ಹಿರಿಯ ಐಪಿಎಸ್ ಅಧಿ ಕಾರಿ ಎಸ್.ಎನ್. ಶ್ರೀ ವಾಸ್ತವ ಅವರನ್ನು ಕೇಂದ್ರ ಸರ್ಕಾರ ಶುಕ್ರವಾರ ದೆಹ ಲಿಯ ನೂತನ ಪೆÇಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದೆ. 1985ನೇ ವಿಭಾಗದ ಅರುಣಾಚಲ ಪ್ರದೇಶ-ಗೋವಾ-ಮಿಜೋರಂ ಮತ್ತು ಕೇಂದ್ರಾಡಳಿತ ಪ್ರದೇಶ (ಎಜಿಎಂಯುಟಿ) ಶ್ರೇಣಿಯ ಐಪಿಎಸ್ ಅಧಿಕಾರಿ ಶ್ರೀವಾಸ್ತವ ಆಗಿದ್ದಾರೆ. ಒಂದು ತಿಂಗಳ ವಿಸ್ತರಣಾವಧಿಯ ಸೇವೆಯಲ್ಲಿದ್ದ ಅಮೂಲ್ಯ ಪಾಟ್ನಾಯಕ್ ಅವರ ದೆಹಲಿ ಪೆÇಲೀಸ್ ಆಯುಕ್ತ ಸೇವೆ ನಾಳೆಗೆ ಮುಕ್ತಾಯ ವಾಗಲಿದೆ. ಈಗಾಗಲೇ ವಿಶೇಷ ಆಯುಕ್ತ ರಾಗಿರುವ ಶ್ರೀವಾಸ್ತವ ಅವರಿಗೆ ಮಾರ್ಚ್ 1ರವರೆಗೆ ಮತ್ತು ಮುಂದಿನ ಆದೇಶ ಬರುವವರೆಗೆ ದೆಹಲಿ ಪೆÇಲೀಸ್ ಆಯುಕ್ತರಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಈ ಹಿಂದೆ ದೆಹಲಿ ಪೆÇಲೀಸ್ ವಿಶೇಷ ಘಟಕದ ಮುಖ್ಯಸ್ಥರಾಗಿದ್ದ ಶ್ರೀವಾಸ್ತವ ಮುಜಾಹಿದ್ದೀನ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೆಲ ದಿನಗಳ ಹಿಂದಷ್ಟೇ ಈಶಾನ್ಯ ದೆಹಲಿಯಲ್ಲಿ ಉಂಟಾದ ತೀವ್ರ ಹಿಂಸಾಚಾರದಿಂದ ಅಪಾರ ಸಾವು ನೋವಿನ ನಂತರ ದೆಹಲಿ ಪೆÇಲೀಸರು ಪರಿಸ್ಥಿತಿಯನ್ನು ನಿರ್ವಹಿಸಿದ ರೀತಿಗೆ ವ್ಯಾಪಕ ಟೀಕೆ ಬಂದಿತ್ತು. ಈ ಹಿನ್ನಲೆಯಲ್ಲಿ ಅಮೂಲ್ಯ ಪಾಟ್ನಾಯಕ್ ಅವರನ್ನು ತುರ್ತಾಗಿ ಸರ್ಕಾರ ಬದಲಾಯಿಸಿರಲೂಬಹುದು ಎಂದು ಹೇಳಲಾಗುತ್ತಿದೆ.