ಬೇಬಿ ಬೆಟ್ಟದಲ್ಲಿ ಸಂಭ್ರಮದ ರಥೋತ್ಸವ
ಮಂಡ್ಯ

ಬೇಬಿ ಬೆಟ್ಟದಲ್ಲಿ ಸಂಭ್ರಮದ ರಥೋತ್ಸವ

February 29, 2020

ಚಿನಕುರಳಿ,ಫೆ.28(ಸಿ.ಎ.ಲೋಕೇಶ್)- ಪುರಾಣ ಪ್ರಸಿದ್ದ ಬೇಬಿಬೆಟ್ಟದ ಬಾರಿ ದನಗಳ ಜಾತ್ರಾಮಹೋತ್ಸವದ ಅಂಗವಾಗಿ ಶುಕ್ರವಾರ `ಸಿದ್ದಲಿಂಗೇಶ್ವರ-ಮಹದೇಶ್ವರ ರಥೋತ್ಸವ’ ಸಂಭ್ರಮದಿಂದ ಜರುಗಿತು.

ಜಾತ್ರಾ ಮೈದಾನದ ಆವರಣದಿಂದ ಹೊರಟ ರಥೋತ್ಸವಕ್ಕೆ ಬೆಳಿಗ್ಗೆ 9.50ರ ಸಮಯದಲ್ಲಿ ಡಾ.ಶ್ರೀ ತ್ರಿನೇತ್ರಮಹಂತ ಸ್ವಾಮೀಜಿ, ಗುರುಸಿದ್ದೇಶ್ವರಸ್ವಾಮೀಜಿ, ಜಿಪಂ ಸದಸ್ಯ ಸಿ.ಅಶೋಕ್, ತಾಪಂ ಸದಸ್ಯ ಸಿ.ಎಸ್.ಗೋಪಾಲಗೌಡ, ತಾಪಂ ಇಓ ಆರ್.ಪಿ.ಮಹೇಶ್, ಮುಖಂಡ ಶಿಂಡಭೋಗನ ಹಳ್ಳಿ ನಾಗಣ್ಣ ಅವರು ಚಾಲನೆ ನೀಡಿದರು.

ಮಹದೇಶ್ವರಸ್ವಾಮಿ ದೇವಸ್ಥಾನದ ಆವರಣದಿಂದ ಪೂರ್ವಾಭಿಮುಖವಾಗಿ ಹೊರಟ ರಥ ದೇವಸ್ಥಾನ ಹಿಂಭಾಗದ ಜಾತ್ರಾ ಮೈದಾನವನ್ನು ಒಂದು ಸುತ್ತು ಪ್ರದರ್ಶಿಸಲಾಯಿತು. ರಥೋತ್ಸವದ ಅಂಗ ವಾಗಿ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು, ಭಕ್ತಿಯಿಂದ ರಥ ಎಳೆದರು.

ಭಕ್ತರು ರಥಕ್ಕೆ ಹಣ್ಣು-ಜವನ ಎಸೆದು ಭಕ್ತಿಯಿಂದ ನಮಸ್ಕರಿಸಿರು. ರಥೋತ್ಸವ ದಲ್ಲಿ ಭಾಗವಹಿಸಿದ್ದ ಭಕ್ತರು ಮಹದೇಶ್ವರನಿಗೆ “ಉಘೇ ಉಘೇ” ಎಂದು ಘೋಷಣೆ ಕೂಗುವ ಮೂಲಕ ಭಕ್ತಿ ಪ್ರದರ್ಶಿಸಿದರು.

ಇದಕ್ಕೂ ಮುನ್ನ ಬೆಳಿಗ್ಗೆಯಿಂದಲೇ ಹಲವು ಹೋಮ ಹವನಗಳು ನಡೆದವು. ಜಾತ್ರಾ ಸಮಿತಿಯ ಸದಸ್ಯ ರಾಮಕೃಷ್ಣೇ ಗೌಡ ಮತ್ತು ದಂಪತಿಗಳು ಹೋಮದ ಪೂಜೆ ಯಲ್ಲಿ ಪಾಲ್ಗೊಂಡು ರಥೋತ್ಸವದ ಹೋಮ, ಪೂಜಾ ಕಾರ್ಯಕ್ರಮ ನಡೆಸಿಕೊಟ್ಟರು.

ಹುಲಿವಾಹನೋತ್ಸವ: ಜಾತ್ರೆಯ ಅಂಗವಾಗಿ ಮಹದೇಶ್ವರಸ್ವಾಮೀ ದೇವ ಸ್ಥಾನದಲ್ಲಿ ಭಕ್ತರು ಹುಲಿವಾಹನೋತ್ಸ ವನ್ನು ನಡೆಸಿದರು. ಸುತ್ತಮುತ್ತಲಿನ ಗ್ರಾಮ ಗಳಿಂದ ಆಗಮಿಸಿದ ಭಕ್ತರು ರಥೋತ್ಸ ವದ ನಡುವೆಯೂ ಸಹ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಹುಲಿವಾಹನ ದನ್ನು ಹೊತ್ತು ಮೆರವಣಿ ನಡೆಸಿದರು.

ಈ ವೇಳೆ ಜಿಪಂ ಸದಸ್ಯ ಸಿ.ಅಶೋಕ್ ಮಾತನಾಡಿ, ಬೇಬಿಬೆಟ್ಟದ ಜಾತ್ರಾ ಮಹೋತ್ಸವವು ಕಳೆದೊಂದು ವಾರ ದಿಂದಲೂ ಶಾಸಕ ಸಿ.ಎಸ್.ಪುಟ್ಟರಾಜು ಅವರ ನೇತೃತ್ವದಲ್ಲಿ ಹಾಗೂ ಡಾ.ಶ್ರೀ ತ್ರಿನೇತ್ರ ಶ್ರೀ, ಶ್ರೀಗುರುಸಿದ್ದೇಶ್ವರ ಸ್ವಾಮೀಜಿ ಸಮಕ್ಷಮದಲ್ಲಿ ಯಶಸ್ವಿಯಾಗಿ ನಡೆದು ಕೊಂಡುಬಂದಿದೆ. ಸುತ್ತಮುತ್ತಲಿನ ಗ್ರಾಮ ಗಳಿಂದ ರೈತರು, ಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ರಥೋ ತ್ಸವವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿ ದ್ದಾರೆ. ಫೆ.29ರಂದು ಜಾತ್ರೆಯಲ್ಲಿ ಆಯ್ಕೆ ಯಾದ ಉತ್ತಮ ರಾಸುಗಳಿಗೆ ಬಹು ಮಾನ ವಿತರಣೆ ಹಾಗೂ ಸಂಜೆ ತೆಪ್ಪೋ ತ್ಸವ ಕಾರ್ಯಕ್ರಮವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಬೇಕೆಂದು ಮನವಿ ಮಾಡಿದರು.

ಡಾ.ತ್ರಿನೇತ್ರಮಹಂತಶಿವಯೋಗಿ ಸ್ವಾಮೀಜಿ, ಶ್ರೀಗುರು ಸಿದ್ದೇಶ್ವರಸ್ವಾಮೀಜಿ ಮಾತನಾಡಿದರು. ಈ ವೇಳೆ ಚಿತ್ರದುರ್ಗದ ಜಗತ್‍ಗುರು ಮಾಚೀದೇವ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಬಸವಮಾಚೀ ದೇವರು, ಜಾತ್ರೆ ಸಮಿತಿ ಸದಸ್ಯ ನಾಗಣ್ಣ, ಜಿಪಂ ಸದಸ್ಯೆ ಶಾಂತಲ, ತಾಪಂ ಸದಸ್ಯ ರಾದ ಸಿ.ಎಸ್. ಗೋಪಾಲೇಗೌಡ, ಗೋವಿಂ ದಯ್ಯ, ಇಓ ಆರ್.ಪಿ.ಮಹೇಶ್, ಉಪ ತಹಶೀಲ್ದಾರ್ ಸುಧಾಕರ್, ಹೊನಗಾನ ಹಳ್ಳಿಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ, ನಾರಾ ಯಣಪುರ ಗ್ರಾಪಂ ಅಧ್ಯಕ್ಷ ರಾಮಚಂದ್ರು, ರಾಮಕೃಷ್ಣೇಗೌಡ, ಸೆಸ್ಕ್ ಎಇಇ ಪುಟ್ಟ ಸ್ವಾಮಿ, ಪಿಡಿಓಗಳಾದ ನಾರಾಯಣ್, ಕೆ.ಮಹೇಶ್, ತಮ್ಮಣ್ಣಗೌಡ, ಗಾಯಕ ರೇವಣ್ಣ ಇದ್ದರು.

Translate »