ಹುಣಸೂರು, ಫೆ.5(ಕೆಕೆ)-ರೈತರ ಸಾಲಮನ್ನಾಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ರೈತ ಸಂಘದಿಂದ ಧರಣಿ ನಡೆಸಿ, ಎಸಿ ಮೂಲಕ ರಾಜ್ಯ ಪಾಲರಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಲಾಯಿತು. ನಗರದ ಉಪ ವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಜಮಾವಣೆಗೊಂಡ ರೈತರು, ಸಾಲಮನ್ನಾ ಸಮಸ್ಯೆ ಪರಿಹರಿಸುವಂತೆ ಘೋಷಣೆ ಕೂಗಿದರು. ರಾಜ್ಯದ ಹಿಂದಿನ ಸಮ್ಮಿಶ್ರ ಸರ್ಕಾರ ರೈತರ ಸಾಲಮನ್ನಾ ಯೋಜನೆ ಜಾರಿಗೆ ತಂದಿತು. ಇದರಿಂದ ಕೆಲ ರೈತರ ಸಾಲ ಭಾಗಶಃ ಮನ್ನಾ ಆಗಿದೆ. ಉಳಿದ ರೈತರ ಸಾಲ ಹಂತ-ಹಂತವಾಗಿ ಮನ್ನಾ ಆಗುತ್ತಿದೆ. ಪ್ರಸಕ್ತ ಸಾಲಿನಲ್ಲಿ…
ಭಕ್ತಿಮಾರ್ಗದ ಪ್ರವರ್ತಕ ಶ್ರೀ ಮಧ್ವಾಚಾರ್ಯರು
February 5, 2020ಮೈಸೂರು ಬ್ರಾಹ್ಮಣ ಯುವ ವೇದಿಕೆಯ `ಮಧ್ವನಮನ’ ಕಾರ್ಯಕ್ರಮದಲ್ಲಿ ಡಿ.ಟಿ.ಪ್ರಕಾಶ್ ಮೈಸೂರು, ಫೆ.4(ಎಂಟಿವೈ)- ಮಧ್ವ ನವಮಿ ಪ್ರಯುಕ್ತ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಅಗ್ರಹಾರದ ಮಧ್ವಾ ಚಾರ್ಯರ ರಸ್ತೆಯಲ್ಲಿ, ನೂರೊಂದು ಗಣಪತಿ ದೇವಾಲಯದ ಬಳಿ ಮಂಗಳವಾರ `ಮಧ್ವನಮನ’ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಮಧ್ವಾಚಾರ್ಯರ ಭಾವಚಿತ್ರಕ್ಕೆ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲೆ ಪಾಜಕ ಗ್ರಾಮದ ಮಧ್ಯಗೇಹ ಭಟ್ಟ-ವೇದವತಿ ದಂಪತಿಗೆ ಜನಿಸಿದ ಆನಂದ ತೀರ್ಥರು (ಪೂರ್ವಾಶ್ರಮದ…
ಶಹೀನ್‍ಭಾಗ್ ಹೋರಾಟಗಾರರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರಲ್ಲಿ ಪ್ರತಿಭಟನೆ
February 5, 2020ಮೈಸೂರು,ಫೆ.4(ಪಿಎಂ)- ದೆಹಲಿಯ ಶಹೀನ್‍ಭಾಗ್‍ನಲ್ಲಿ ಸಿಎಎ ಹಾಗೂ ಎನ್‍ಆರ್‍ಸಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವವರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಆಗ್ರಹಿಸಿ ಎಐಎಂಎಸ್‍ಎಸ್ (ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ)ಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು. 2 ತಿಂಗಳಿಂದ ಕಾಲೇಜು ವಿದ್ಯಾರ್ಥಿನಿಯರು, ಗೃಹಿಣಿಯರು ಶಹೀನ್‍ಭಾಗ್‍ನಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಪ್ರತಿಭಟನಾನಿರತರ ದುಃಖ ಆಲಿಸಬೇಕಾದ ಕೇಂದ್ರ ಸರ್ಕಾರದ ಬಿಜೆಪಿ ನಾಯಕರು ನಿರ್ಲಕ್ಷ್ಯ ವಹಿಸಿದ್ದಾರೆ. ಪ್ರತಿಭಟನಾಕಾರರನ್ನು ದೇಶ ದ್ರೋಹಿಗಳೆಂ ಬಂತೆ ಚಿತ್ರಿಸಲು…
ಫೆ.16ಕ್ಕೆ ಉತ್ತನಹಳ್ಳಿ ಅಮ್ಮನ ಜಾತ್ರೆ
February 5, 2020ಮೈಸೂರು,ಫೆ.4(ಎಂಟಿವೈ)- ಸರ್ಕಾರಿ ಉತ್ತನಹಳ್ಳಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿ ಉಂಟಾಗಿದ್ದ ಗೊಂದಲಕ್ಕೆ ಮಂಗಳವಾರ ತೆರೆಬಿದ್ದಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ ಕ್ಯಾಲೆಂಡರ್ ನಲ್ಲಿ ನಮೂದಾಗಿರುವಂತೆ ಫೆ.16ರಂದೇ ಜಾತ್ರೆ ನಡೆಸಲು ಒಕ್ಕೊರಲಿನಿಂದ ಸಮ್ಮತಿಸಲಾಯಿತು. 2020ರ ಕ್ಯಾಲೆಂಡರ್‍ನಲ್ಲಿ ಉತ್ತನಹಳ್ಳಿಯ ಈ ಸಾಲಿನ ಜಾತ್ರಾ ಮಹೋತ್ಸವ ಫೆ.16 ರಂದು ಪ್ರಕಟವಾಗಿತ್ತು. ಆದರೆ ಅರಮನೆ ಸಂಪ್ರದಾಯದಂತೆ ಫೆ.9ರಂದು ಜಾತ್ರಾ ಮಹೋತ್ಸವ ನಡೆಯಬೇಕಿತ್ತು. ಈ ಹಿನ್ನೆಲೆ ಯಲ್ಲಿ ಜಾತ್ರಾ ಸಂಬಂಧ ಗೊಂದಲ ಸೃಷ್ಟಿಯಾಗಿತ್ತು. ಸೋಮವಾರ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಗ್ರಾಮಸ್ಥರೊಂದಿಗೆ…
ಕೊರೋನಾ ವೈರಸ್ ಆತಂಕ: ಮೆಡಿಕಲ್ ಸ್ಟೋರ್‍ಗಳಲ್ಲಿ ಮಾಸ್ಕ್‍ಗಳ ಖರೀದಿಗೆ ಮುಗಿಬೀಳುತ್ತಿರುವ ಜನ
February 5, 2020ಮೈಸೂರು, ಫೆ. 4(ಆರ್‍ಕೆ)- ಕೊರೋನಾ ವೈರಸ್‍ಗೆ ಬೆಚ್ಚಿರುವ ಸಾರ್ವಜನಿಕರು ಸುರಕ್ಷತೆಗಾಗಿ ಮಾಸ್ಕ್‍ಗಳ ಮೊರೆ ಹೋಗುತ್ತಿದ್ದಾರೆ. ಚೈನಾ ದೇಶದಲ್ಲಿ ಕಂಡು ಬಂದಿರುವ ಮಾರಣಾಂತಿಕ ಕೊರೋನಾ ವೈರಸ್ ಸೋಂಕು ನೆರೆ ಕೇರಳಾದಲ್ಲೂ ಕಾಣಿಸಿ ಕೊಂಡಿರುವುದರಿಂದ ಆತಂಕಗೊಂಡಿರುವ ನಾಗರಿಕರು ಮುನ್ನೆಚ್ಚರಿಕೆಯಾಗಿ ವೈದ್ಯಕೀಯ ಮಾಸ್ಕ್‍ಗಳನ್ನು ಬಳಸಲು ನಿರ್ಧರಿಸಿ, ಅವುಗಳ ಖರೀದಿಸಲು ಮುಂದಾಗಿದ್ದಾರೆ. ಅಪರೂಪಕ್ಕೆ ಮಾರಾಟವಾಗುತ್ತಿದ್ದ ಮಾಸ್ಕ್‍ಗಳು ಕಳೆದ ಒಂದು ವಾರದಿಂದ ಮೆಡಿಕಲ್ ಸ್ಟೋರ್‍ಗಳಲ್ಲಿ ಹೆಚ್ಚಾಗಿ ಮಾರಾಟ ವಾಗುತ್ತಿವೆ. ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪ್ರಸಿದ್ಧ ರಘುಲಾಲ್ ಅಂಡ್ ಕಂಪನಿಯಲ್ಲಿ ಮಾಸ್ಕ್‍ಗಳಿಗೆ ಭಾರೀ ಬೇಡಿಕೆ ಆರಂಭವಾಗಿದೆ….
ಇರ್ವಿನ್ ರಸ್ತೆ ಬಾಕಿ ಅಭಿವೃದ್ಧಿ ಕಾಮಗಾರಿ ಮಾ.1 ರಿಂದ ಆರಂಭ
February 5, 2020ಮೈಸೂರು, ಫೆ. 4- ಮೈಸೂರಿನ ಹೃದಯ ಭಾಗದ ಪ್ರತಿಷ್ಠಿತ ಐತಿಹಾಸಿಕ ಇರ್ವಿನ್ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿ ಅಂತೂ ಮಾರ್ಚ್ 1 ರಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಇರ್ವಿನ್ ರಸ್ತೆಯಲ್ಲಿ 4 ತಿಂಗಳು ವಾಹನ ಸಂಚಾರ ಬಂದ್ ಮಾಡಿ, ಸುರಕ್ಷಿತ ಕಾಮಗಾರಿಗೆ ಅವಕಾಶ ಕಲ್ಪಿಸುವಂತೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು ನಾಳೆ (ಫೆ. 5) ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲು ಉದ್ದೇಶಿಸಿ ದ್ದಾರೆ. ಕೆಎಸ್‍ಆರ್‍ಟಿಸಿ ಗ್ರಾಮಾಂತರ ಬಸ್ ನಿಲ್ದಾಣ…
ಎರಡು ಮರಗಳಿಗೆ ಕತ್ತರಿ!
February 5, 2020ಮೈಸೂರು, ಫೆ.4(ಎಂಕೆ)- ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ 2 ಬೃಹತ್ ಮರಗಳನ್ನು ಧರೆಗುರುಳಿಸಿದ್ದು, ಇದರ ಬಗ್ಗೆ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮರಗಳು ಹಚ್ಚ ಹಸಿರಿನಿಂದ ಕೂಡಿದ್ದು, ಬಲಿಷ್ಠವಾಗಿಯೇ ಇದ್ದವು. ಹೇಳಿ ಕೇಳಿ ಈ ರಸ್ತೆಯಲ್ಲಿ ಮರಗಳಿರುವುದೇ ಅಪರೂಪ. ಅಂತಹದರಲ್ಲಿ ಇದ್ದಂತಹ 2 ಬೃಹತ್ ಮರಗಳನ್ನು ಉರುಳಿಸಿರುವುದರಿಂದ ಈ ರಸ್ತೆ ಬೆಂಗಾಡಾಗಿ ಪರಿಣಮಿಸಿದೆ. ಅಷ್ಟಕ್ಕೂ ಈ ಮರಗಳನ್ನು ಕಡಿಯಲು ಕಾರಣವೇನು? ಇವುಗಳಿಂದ ಯಾರಿಗೆ ತೊಂದರೆಯಾಗು ತ್ತಿತ್ತು? ಎಂದು ಪ್ರಶ್ನಿಸಿರುವ ಪರಿಸರ ಪ್ರೇಮಿ ಶರ್ಮಾ ಅವರು, ರಾಜಾರೋಷವಾಗಿ…
ಷೇರು ಮಾರಾಟ ಪ್ರಸ್ತಾಪ ಖಂಡಿಸಿ ಮೈಸೂರಲ್ಲಿ ಎಲ್‍ಐಸಿ ನೌಕರರ ಪ್ರತಿಭಟನೆ
February 5, 2020ಮೈಸೂರು, ಫೆ.4(ಪಿಎಂ)- ಭಾರತೀಯ ಜೀವ ವಿಮಾ ನಿಗಮದ(ಎಲ್‍ಐಸಿ) ಷೇರು ಮಾರಾಟಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ ಮೈಸೂರಿನ ಬನ್ನಿಮಂಟಪದ ಎಲ್‍ಐಸಿ ಕಚೇರಿ ಆವರಣದಲ್ಲಿ ನಿಗಮದ ನೌಕರರು ಮಂಗಳವಾರ ಪ್ರತಿಭಟನೆ ನಡೆಸಿದರು. ಆಲ್ ಇಂಡಿಯಾ ಇನ್ಷೂರೆನ್ಸ್ ಎಂಪ್ಲಾ ಯೀಸ್ ಅಸೋಸಿಯೇಷನ್ (ಎಐಐಇಎ) ಕರೆ ಮೇರೆಗೆ ಮಂಗಳವಾರ ರಾಷ್ಟ್ರವ್ಯಾಪಿ ಎಲ್‍ಐಸಿ ಸಿಬ್ಬಂದಿ ಮಧ್ಯಾಹ್ನ ಊಟದ ವಿರಾಮದ ವೇಳೆ ಒಂದು ಗಂಟೆ ಕಾಲ ಪ್ರತಿಭಟನೆ ನಡೆಸಿದ್ದು, ಮೈಸೂರಿನಲ್ಲೂ ಮಧ್ಯಾಹ್ನ 12.30ರಿಂದ ಒಂದು ಗಂಟೆಗೂ ಹೆಚ್ಚು ಕಾಲ ನೌಕರರು ಪ್ರತಿಭಟನೆ ನಡೆಸಿ ದರು….
ಕಲೆ-ಸಾಹಿತ್ಯದಿಂದ ವೃತ್ತಿಜೀವನದಲ್ಲಿ ಪ್ರಗತಿ: ಪ್ರೊ.ಕಾ.ನಾ.
February 5, 2020ಮೈಸೂರು, ಫೆ.4(ಎಸ್‍ಪಿಎನ್)- ಇಂದಿನ ವಿದ್ಯಾರ್ಥಿಗಳು ಕಲೆ-ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರೆ ಮುಂದೆ ವೃತ್ತಿಜೀವನದಲ್ಲಿ ಉತ್ತಮ ಕೌಶಲ ಬೆಳೆಸಿಕೊಳ್ಳಬಹುದು ಎಂದು ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಕಿವಿಮಾತು ಹೇಳಿದರು. ಮೈಸೂರಿನ ಕಲಾಮಂದಿರದ ಕಿರು ರಂಗ ಮಂದಿರದಲ್ಲಿ ದೇಶಿರಂಗ ಸಾಂಸ್ಕøತಿಕ ಸಂಸ್ಥೆ ಆಯೋಜಿಸಿದ್ದ ದೇಶಿರಂಗ-2020 `ರಂಗ ಮತ್ತು ನೃತ್ಯೋತ್ಸವ’ದಲ್ಲಿ ಅವರು ಮಾತನಾಡಿದರು. `ಕೃಷ್ಣ ಜನಮನ’ ಹಲವು ವರ್ಷಗಳಿಂದ ಕಾಲೇಜು ವಿದ್ಯಾರ್ಥಿಗಳನ್ನು ಸಂಘಟಿಸಿ, ರಂಗಭೂಮಿ, ಜನಪದದ ವಿವಿಧ ಪ್ರಕಾರಗಳನ್ನು ಕಲಿಸುತ್ತಿದ್ದಾರೆ. ತಾವು ಕಲಿತಿರುವ ವಿದ್ಯೆಯನ್ನು ಬೇರೆಯವರಿಗೆ ಕಲಿಸುವುದರಲ್ಲಿ ಸಂತೃಪ್ತಭಾವ ಹೊಂದಿ ದ್ದಾರೆ…
ಎಸ್‍ಸಿ, ಎಸ್‍ಟಿ, ಟಿಎಸ್‍ಪಿ ಕುರಿತು ಮಾಸಿಕ ಸಭೆ
February 4, 2020ಮೈಸೂರು, ಫೆ.3- ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಜಾತಿಗಳ ಉಪಯೋಜನೆ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಅಭಿರಾಮ್. ಜಿ.ಶಂಕರ್ ಅಧ್ಯಕ್ಷತೆಯಲ್ಲಿ ಜಿಲ್ಲಾ ಮೇಲ್ವಿಚಾರಣೆ ಸಮಿತಿ ಮಾಸಿಕ ಸಭೆ ನಡೆಯಿತು. ಈ ಸಂದರ್ಭದಲ್ಲಿ ಶಾಸಕರಾದ ಅಶ್ವಿನ್‍ಕುಮಾರ್, ಹೆಚ್.ಪಿ.ಮಂಜುನಾಥ್ ಪಾಲ್ಗೊಂಡು, ವಿವಿಧ ಇಲಾಖೆ ಗಳ ಅಧಿಕಾರಿಗಳೊಂದಿಗೆ ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ ಕುರಿತು ಚರ್ಚಿಸಿದರು. ಸಭೆಯಲ್ಲಿ ಆಯಾ ಇಲಾಖೆ ಅನುಚಿತ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಜಾತಿ ಉಪಯೋಜನೆ…










