ಕೊರೋನಾ ವೈರಸ್ ಆತಂಕ: ಮೆಡಿಕಲ್ ಸ್ಟೋರ್‍ಗಳಲ್ಲಿ ಮಾಸ್ಕ್‍ಗಳ ಖರೀದಿಗೆ ಮುಗಿಬೀಳುತ್ತಿರುವ ಜನ
ಮೈಸೂರು

ಕೊರೋನಾ ವೈರಸ್ ಆತಂಕ: ಮೆಡಿಕಲ್ ಸ್ಟೋರ್‍ಗಳಲ್ಲಿ ಮಾಸ್ಕ್‍ಗಳ ಖರೀದಿಗೆ ಮುಗಿಬೀಳುತ್ತಿರುವ ಜನ

February 5, 2020

ಮೈಸೂರು, ಫೆ. 4(ಆರ್‍ಕೆ)- ಕೊರೋನಾ ವೈರಸ್‍ಗೆ ಬೆಚ್ಚಿರುವ ಸಾರ್ವಜನಿಕರು ಸುರಕ್ಷತೆಗಾಗಿ ಮಾಸ್ಕ್‍ಗಳ ಮೊರೆ ಹೋಗುತ್ತಿದ್ದಾರೆ.

ಚೈನಾ ದೇಶದಲ್ಲಿ ಕಂಡು ಬಂದಿರುವ ಮಾರಣಾಂತಿಕ ಕೊರೋನಾ ವೈರಸ್ ಸೋಂಕು ನೆರೆ ಕೇರಳಾದಲ್ಲೂ ಕಾಣಿಸಿ ಕೊಂಡಿರುವುದರಿಂದ ಆತಂಕಗೊಂಡಿರುವ ನಾಗರಿಕರು ಮುನ್ನೆಚ್ಚರಿಕೆಯಾಗಿ ವೈದ್ಯಕೀಯ ಮಾಸ್ಕ್‍ಗಳನ್ನು ಬಳಸಲು ನಿರ್ಧರಿಸಿ, ಅವುಗಳ ಖರೀದಿಸಲು ಮುಂದಾಗಿದ್ದಾರೆ.

ಅಪರೂಪಕ್ಕೆ ಮಾರಾಟವಾಗುತ್ತಿದ್ದ ಮಾಸ್ಕ್‍ಗಳು ಕಳೆದ ಒಂದು ವಾರದಿಂದ ಮೆಡಿಕಲ್ ಸ್ಟೋರ್‍ಗಳಲ್ಲಿ ಹೆಚ್ಚಾಗಿ ಮಾರಾಟ ವಾಗುತ್ತಿವೆ. ಮೈಸೂರಿನ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪ್ರಸಿದ್ಧ ರಘುಲಾಲ್ ಅಂಡ್ ಕಂಪನಿಯಲ್ಲಿ ಮಾಸ್ಕ್‍ಗಳಿಗೆ ಭಾರೀ ಬೇಡಿಕೆ ಆರಂಭವಾಗಿದೆ. ಇದರ ಮಾಲೀಕ ರಾದ ಎನ್. ರಾಘವನ್, ‘ಮೈಸೂರು ಮಿತ್ರ’ನಿಗೆ ಜನರ ಆತಂಕ ವಿವರಿಸಿದರು.

ಕೊರೋನಾ ವೈರಸ್ ಭೀತಿಯಲ್ಲಿರುವ ಜನರು ಮುಂಜಾಗ್ರತೆಗೆ ಮುಂದಾಗಿದ್ದು ಮಾಸ್ಕ್‍ಗಳಿಗೆ ದಿಢೀರ್ ಬೇಡಿಕೆ ಹೆಚ್ಚಾಗಲು ಕಾರಣ. ಕಾರ್ಖಾನೆ, ಕೈಗಾರಿಕೆ ಹಾಗೂ ಹೆಚ್ಚು ಜನರು ಕೆಲಸ ಮಾಡುವ ಉದ್ಯಮ- ಕಚೇರಿಗಳಲ್ಲಿ ಈ ವೈರಸ್ ಹರಡಬಹು ದೆಂಬ ಕಾರಣಕ್ಕೆ ನಾಗರಿಕರು ಮಾಸ್ಕ್ ಧರಿಸಲಾರಂಭಿಸಿದ್ದಾರೆ.

ತಿಂಗಳಿಗೆ 50 ಮಾಸ್ಕ್‍ಗಳು ಮಾತ್ರ ಮಾರಾಟ ವಾಗುತ್ತಿದ್ದವು. ಆದರೆ ವಾರದಿಂದೀಚೆಗೆ ಪ್ರತೀ ದಿನ 100 ಮಾಸ್ಕ್‍ಗಳು ಮಾರಾಟವಾ ಗುತ್ತಿವೆ. ಬಳಸಿ ಬಿಸಾಡುವ, ಮರು ಬಳಕೆಯ ಮಾಸ್ಕ್‍ಗಳಿಗೆ ಬೇಡಿಕೆ ಹೆಚ್ಚಾಗಿರುವುದ ರಿಂದ ಮೆಡಿಕಲ್ ಸ್ಟೋರ್‍ಗಳಲ್ಲಿ ಮಾಸ್ಕ್‍ಗಳ ಕೊರತೆ ಉಂಟಾಗಿದೆ ಎಂದು ರಾಘವನ್ ತಿಳಿಸಿದರು. ಬೇಡಿಕೆಗೆ ತಕ್ಕಂತೆ ಪೂರೈಕೆ ಯಾಗುತ್ತಿಲ್ಲವಾದ್ದರಿಂದ ಸಹಜವಾಗಿ ಮಾಸ್ಕ್‍ಗಳ ಬೆಲೆ ಹೆಚ್ಚಳವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಮಾಸ್ಕ್ ಗಳಿಗೆ ಜನರು ಪರದಾಡುವಂತಾಗ ಬಹುದು. ಆದ್ದರಿಂದ ಈಗಲೇ ಸರ್ಕಾರ, ಜಿಲ್ಲಾಡಳಿತವು ಕೈಗೆಟಕುವ ದರದಲ್ಲಿ ಮಾಸ್ಕ್ ಗಳನ್ನು ಮೆಡಿಕಲ್ ಸ್ಟೋರ್‍ಗಳ ಮೂಲಕ ಸಿಗುವಂತೆ ಆಜ್ಞೆ ಮಾಡುವುದು ಸೂಕ್ತ ಎಂದು ರಾಘವನ್ ಅಭಿಪ್ರಾಯಪಟ್ಟರು.

ಅದೇ ರೀತಿ ಧನ್ವಂತರಿ ರಸ್ತೆಯಲ್ಲಿನ ಮೆಡಿ ಕಲ್ ಸ್ಟೋರ್ಸ್, ಅಗ್ರಹಾರ, ವಿವಿ ಮೊಹಲ್ಲಾ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಮೈಸೂರು ನಗರದಾದ್ಯಂತ ಎಲ್ಲಾ ಔಷಧಿ ಅಂಗಡಿ ಗಳಲ್ಲಿ ಮಾಸ್ಕ್‍ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಈ ನಡುವೆ ಕೊರೋನಾ ವೈರಸ್ ಹರಡದಂತೆ ಅಗತ್ಯ ಮುಂಜಾಗ್ರತಾ ಕ್ರಮ ಗಳನ್ನು ಕೈಗೊಳ್ಳುತ್ತಿರುವ ಜಿಲ್ಲಾ ಆರೋಗ್ಯಾ ಧಿಕಾರಿ ಡಾ. ಕೆ. ವೆಂಕಟೇಶ್, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಅನ್ನು ಮೀಸಲಿರಿಸಿದ್ದು, ಇಂದು ಅಲ್ಲಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಪರಿಶೀಲಿಸಿದರು.

ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಎನ್. ನಂಜುಂಡಸ್ವಾಮಿ, ಸ್ಥಾನಿಕ ವೈದ್ಯಾಧಿಕಾರಿ ಡಾ. ರಾಜೇಶ್, ಪ್ರತ್ಯೇಕ ವಾರ್ಡ್‍ಗೆ ವೈದ್ಯರು, ಸಿಬ್ಬಂದಿಗಳನ್ನು ನಿಯೋ ಜಿಸಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿ, ರೋಗಿಗಳಿಗೆ ತಪಾಸಣೆ ಮತ್ತು ಚಿಕಿತ್ಸೆಗೆ ಸಕಲ ವ್ಯವಸ್ಥೆ ಕಲ್ಪಿಸಿದ್ದಾರೆ.

Translate »