ಭಕ್ತಿಮಾರ್ಗದ ಪ್ರವರ್ತಕ ಶ್ರೀ ಮಧ್ವಾಚಾರ್ಯರು
ಮೈಸೂರು

ಭಕ್ತಿಮಾರ್ಗದ ಪ್ರವರ್ತಕ ಶ್ರೀ ಮಧ್ವಾಚಾರ್ಯರು

February 5, 2020

ಮೈಸೂರು ಬ್ರಾಹ್ಮಣ ಯುವ ವೇದಿಕೆಯ `ಮಧ್ವನಮನ’ ಕಾರ್ಯಕ್ರಮದಲ್ಲಿ ಡಿ.ಟಿ.ಪ್ರಕಾಶ್
ಮೈಸೂರು, ಫೆ.4(ಎಂಟಿವೈ)- ಮಧ್ವ ನವಮಿ ಪ್ರಯುಕ್ತ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಅಗ್ರಹಾರದ ಮಧ್ವಾ ಚಾರ್ಯರ ರಸ್ತೆಯಲ್ಲಿ, ನೂರೊಂದು ಗಣಪತಿ ದೇವಾಲಯದ ಬಳಿ ಮಂಗಳವಾರ `ಮಧ್ವನಮನ’ ಕಾರ್ಯಕ್ರಮ ಆಯೋಜಿಸ ಲಾಗಿತ್ತು. ಮಧ್ವಾಚಾರ್ಯರ ಭಾವಚಿತ್ರಕ್ಕೆ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ. ಪ್ರಕಾಶ್ ಪುಷ್ಪ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು, ಉಡುಪಿ ಜಿಲ್ಲೆ ಪಾಜಕ ಗ್ರಾಮದ ಮಧ್ಯಗೇಹ ಭಟ್ಟ-ವೇದವತಿ ದಂಪತಿಗೆ ಜನಿಸಿದ ಆನಂದ ತೀರ್ಥರು (ಪೂರ್ವಾಶ್ರಮದ ಹೆಸರು) ಬಳಿಕ ವಾಸುದೇವ ಮಧ್ವಾಚಾರ್ಯರಾಗಿ 13ನೇ ಶತಮಾನದಲ್ಲಿ ದ್ವೈತ ಮತದ ಸ್ಥಾಪಕರಾಗಿ ತತ್ವಜ್ಞಾನಿಗಳಾದರು. 74ನೇ ವಯಸ್ಸಿನಲ್ಲಿ ಬದರಿಕಾಶ್ರಮಕ್ಕೆ ಒಬ್ಬರೇ ನಡೆಯುತ್ತಲೇ ಪ್ರಯಾಣ ಹೋದ ದಿನವನ್ನೇ `ಮಧ್ವನವಮಿ’ ಎಂದು ಆಚರಿಸಲಾಗುತ್ತದೆ. ಭಕ್ತಿಮಾರ್ಗದ ಪ್ರವರ್ತಕರಾದ ಮಧ್ವಾಚಾರ್ಯರು ಕನ್ನಡ ದಲ್ಲಿ ದಾಸಪಂಥದ ಮಾರ್ಗವು ಸಂಗೀತ ಕಲಾ ಪ್ರಕಾರದೊಡನೆ ಬೆಳೆಯಲು ಸ್ಫ್ಪೂರ್ತಿ ಯಾದರು ಎಂದರು.

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷ ಕೆ.ರಘುರಾಂ ಮಾತ ನಾಡಿ, ಮಧ್ವಾಚಾರ್ಯರ ದ್ವೈತ ಸಿದ್ಧಾಂತ ತತ್ವ ಸಂದೇಶ ಪಾಲಿಸಿದ ಶ್ರೀ ರಾಘವೇಂದ್ರ ಸ್ವಾಮಿಗಳು 16ನೇ ಶತಮಾನದಲ್ಲಿ ಪವಾಡ ಪುರುಷರಾಗಿ ಹೊರಹೊಮ್ಮಿದರು. ಜನರ ಕಷ್ಟ ನಿವಾರಿಸುವ ಭಕ್ತಿ, ಮೋಕ್ಷ ಮಾರ್ಗದ ಮೂಲಕ ಹಲವೆಡೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಸ್ಥಾಪಿತವಾಗಿವೆ. ಈ ಮಠಗಳು ಮಧ್ವಾ ಚಾರ್ಯರ ಆಧ್ಯಾತ್ಮಿಕ ಶಕ್ತಿ ಕೇಂದ್ರಗಳಾಗಿವೆ.

ಉಡುಪಿಯ ಅಷ್ಟಮಠಗಳಲ್ಲಿ ವ್ಯಾಸ ರಾಜ ಮಠ ಮತ್ತು ಉತ್ತರಾಧಿಮಠಗಳು ಸೇರಿದಂತೆ ವಿವಿಧ ಮಾಧ್ವ ಮಠಗಳು, ಮಧ್ವಾಚಾರ್ಯರ ಜೀವನ ಸಂದೇಶ ಸಾರುತ್ತಾ, ಶಿಕ್ಷಣ ಸಂಸ್ಥೆಗಳು ಮತ್ತು ದಾಸೋಹ ಭವನಗಳನ್ನು ಸ್ಥಾಪಿಸಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿವೆ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಮೇಲುಕೋಟೆ ವೆಂಗೀಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಪಾಲಿಕೆ ಸದಸ್ಯೆ ಸೌಮ್ಯ ಉಮೇಶ್, ಬ್ರಾಹ್ಮಣ ಯುವ ವೇದಿಕೆ ಸಂಘಟನಾ ಕಾರ್ಯದರ್ಶಿಗಳಾದ ಸುದರ್ಶನ್, ಎಂ.ಆರ್.ಬಾಲಕೃಷ್ಣ, ಅಗಸ್ತ್ಯ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಸಿ.ವಿ.ಪಾರ್ಥಸಾರಥಿ, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್. ಸತ್ಯನಾರಾಯಣ, ಬ್ರಾಹ್ಮಣ ಯುವ ವೇದಿಕೆಯ ವಿಕ್ರಂ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಲೋಕೇಶ್, ಜಯಸಿಂಹ, ವಿನಯ್ ಕಣಗಾಲ್, ಹೆಚ್.ವಿ.ಭಾಸ್ಕರ್, ಕಡಕೊಳ ಜಗದೀಶ್, ಕೆ.ಎಂ.ನಿಶಾಂತ್, ಪ್ರಶಾಂತ್, ಕೃಷ್ಣ ರಾಜೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಬಸವ ರಾಜು, ಬಸಪ್ಪ, ಮುಳ್ಳೂರು ಸುರೇಶ್, ಗಣೇಶ್ ಪ್ರಸಾದ್, ಚಕ್ರಪಾಣಿ ಮತ್ತಿತರರಿದ್ದರು.

Translate »