Tag: Mysore

ಸರ್ಕಾರಿ ಅತಿಥಿ ಗೃಹ ಆವರಣ, ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ತಕ್ಷಣ ನಂದಿಸಿ, ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ
ಮೈಸೂರು

ಸರ್ಕಾರಿ ಅತಿಥಿ ಗೃಹ ಆವರಣ, ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಆಕಸ್ಮಿಕ ಬೆಂಕಿ ತಕ್ಷಣ ನಂದಿಸಿ, ಅನಾಹುತ ತಪ್ಪಿಸಿದ ಅಗ್ನಿಶಾಮಕ ದಳ

February 4, 2020

ಮೈಸೂರು, ಫೆ.3(ಎಸ್‍ಬಿಡಿ)- ಮೈಸೂರಿನ ಸರ್ಕಾರಿ ಅತಿಥಿ ಗೃಹ ಆವರಣ ಹಾಗೂ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಕಂಡುಬಂದ ಆಕಸ್ಮಿಕ ಬೆಂಕಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು. ಕಿಡಿಗೇಡಿಗಳಿಂದಾಗಿ ಸರ್ಕಾರಿ ಅತಿಥಿ ಗೃಹದ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡು, ಸುಮಾರು ಆರೇಳು ಎಕರೆ ಪ್ರದೇಶಕ್ಕೆ ಆವರಿಸಿತ್ತು. ಹುಲ್ಲು ಒಣಗಿದ್ದರಿಂದ ಬಹುಬೇಗ ಬೆಂಕಿ ವ್ಯಾಪಿಸಿತ್ತು. ವಿಷಯ ತಿಳಿದ ಬನ್ನಿಮಂಟಪ ಹಾಗೂ ಸರಸ್ವತಿಪುರಂ ಅಗ್ನಿಶಾಮಕ ಠಾಣೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಎರಡು ವಾಹನಗಳ ಮೂಲಕ ಬೆಂಕಿಯನ್ನು ನಂದಿಸಿ ದರು. ಹುಲ್ಲು ಹಾಗೂ ಕುರುಚಲು ಗಿಡಗಳು ಸುಟ್ಟು…

ನಕಲಿ ವೈದ್ಯರಿಂದ ಕ್ಲಿನಿಕ್‍ಗಳ ನಿರ್ವಹಣೆ: ಕ್ರಮ ಕೈಗೊಳ್ಳದ ಅಧಿಕಾರಿಗಳು
ಮೈಸೂರು

ನಕಲಿ ವೈದ್ಯರಿಂದ ಕ್ಲಿನಿಕ್‍ಗಳ ನಿರ್ವಹಣೆ: ಕ್ರಮ ಕೈಗೊಳ್ಳದ ಅಧಿಕಾರಿಗಳು

February 4, 2020

ಜಿಪಂ ವಿಚಕ್ಷಣ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯೆ ಹೆಚ್.ಕೆ.ಭಾಗ್ಯ ಗಂಭೀರ ಆರೋಪ ಮೈಸೂರು, ಫೆ.3(ಪಿಎಂ)- ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪದವಿ ಪಡೆದ ಮಹಿಳಾ ವೈದ್ಯರೊಬ್ಬರು ಕೆಪಿಎಂಇ ಕಾಯ್ದೆ ಅಡಿ ತಮ್ಮ ಹೆಸರಿನಲ್ಲಿ ಪರವಾನಗಿ ಪಡೆದು ನಕಲಿ ವೈದ್ಯರಿಂದ ಸೇವೆ ಕಲ್ಪಿಸುತ್ತಿದ್ದಾರೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಹಾಗೂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೂ ಇನ್ನು ಕ್ರಮ ಕೈಗೊಂಡಿಲ್ಲ ಎಂದು ಜಿಪಂ ವಿಚಕ್ಷಣ ಮತ್ತು ಮೇಲ್ವಿಚಾರಣಾ ಸಮಿತಿ ಸದಸ್ಯೆ ಹೆಚ್.ಕೆ.ಭಾಗ್ಯ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ…

ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ವೃದ್ಧಿಗೆ ಮೈಸೂರಲ್ಲಿ ‘ಇನ್‍ಸ್ಪೈರ್’
ಮೈಸೂರು

ಶಾಲಾ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ವೃದ್ಧಿಗೆ ಮೈಸೂರಲ್ಲಿ ‘ಇನ್‍ಸ್ಪೈರ್’

February 4, 2020

ಮೈಸೂರು, ಫೆ.3(ಎಂಟಿವೈ)- ಅದೊಂದು ಭವಿಷ್ಯದ ಭರವಸೆಯ ಬಾಲ ವಿಜ್ಞಾನಿಗಳ ಸಂಗಮ ಸ್ಥಳ. ನಗರ, ಗ್ರಾಮೀಣ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿ ರುವ ಹೊಸ ಆವಿಷ್ಕಾರವನ್ನು ಅನಾವರಣಗೊಳಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿದರು. ಮೈಸೂರಿನ ಜಾಕಿ ಕ್ವಾರ್ಟಸ್‍ನಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದ ಆವರಣದಲ್ಲಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ…

ಆಸಿಡ್ ದಾಳಿ ಸಂತ್ರಸ್ತೆಯ ಜೀವನವನ್ನೇ ಅಂತ್ಯಗೊಳಿಸುತ್ತಿದೆ…
ಮೈಸೂರು

ಆಸಿಡ್ ದಾಳಿ ಸಂತ್ರಸ್ತೆಯ ಜೀವನವನ್ನೇ ಅಂತ್ಯಗೊಳಿಸುತ್ತಿದೆ…

February 4, 2020

= ಸಂತ್ರಸ್ತರ ಸಮಾಜ ಸ್ವೀಕರಿಸದೇ ಇರುವುದು ಬಹಳ ನೋವಿನ ಸಂಗತಿ = ಆಸಿಡ್ ದಾಳಿಯಿಂದ ಬದುಕುಳಿದ ಮೈಸೂರಿನ ವೈದ್ಯೆಯ ಬದುಕುವ ಸಾಹಸಗಾಥೆ = ದಾಳಿಯ ದುಷ್ಕರ್ಮಿಗಳಿಗೆ ಮರಣ ದಂಡನೆಯನ್ನೇ ವಿಧಿಸುವುದು ಸೂಕ್ತ ಶಿಕ್ಷೆ ವಿಧಾನ ಮೈಸೂರು, ಜ. 3- ಆಸಿಡ್ ಸಂತ್ರಸ್ತೆ ಲಕ್ಷ್ಮಿ ಅಗರ್ ವಾಲ್‍ರವರ ಬದುಕಿನ ದುರಂತ ಕಥೆಯಾಧಾರಿತ ಚಲನಚಿತ್ರ ‘ಚಾಪಾಕ್’ ಸಿನಿಮಾ ಇತ್ತೀಚೆಗಷ್ಟೇ ಬಿಡುಗಡೆಯಾಗಿ, ಸಿನಿರಸಿಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇಂತಹ ನೂರಾರು ಆಸಿಡ್ ಸಂತ್ರಸ್ತರು ನಮ್ಮ ಸಮಾಜದಲ್ಲಿ ದುಃಖದ ಮಡಿಲಲ್ಲೇ ಕಾಲ ತಳ್ಳುತ್ತಿರುವುದನ್ನು ನಾವು…

ಕ್ಯಾಲೆಂಡರ್ ಅವಾಂತರ: ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನ ಜಾತ್ರೆ ದಿನಾಂಕ ಗೊಂದಲ
ಮೈಸೂರು

ಕ್ಯಾಲೆಂಡರ್ ಅವಾಂತರ: ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನ ಜಾತ್ರೆ ದಿನಾಂಕ ಗೊಂದಲ

February 4, 2020

ಮೈಸೂರು, ಫೆ.3(ಎಂಟಿವೈ)- ಮೈಸೂರು ತಾಲೂಕಿನ ಸರ್ಕಾರಿ ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಸಂಬಂಧ ಉಂಟಾಗಿದ್ದ ಗೊಂದಲ ಮುಂದುವರೆದಿದ್ದು, ಸಂಪ್ರದಾಯದಂತೆ ಫೆ.9ರಂದೇ ಜಾತ್ರೆ ನಡೆಸುವುದು ಸೂಕ್ತ ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅಭಿಪ್ರಾಯಪಟ್ಟಿದ್ದು, ಗ್ರಾಮದ ಎಲ್ಲಾ ಕೋಮಿನ ಜನರ ಅಭಿಪ್ರಾಯ ಪಡೆದು, ಅಂತಿಮ ನಿರ್ಧಾರಕ್ಕೆ ಬರುವಂತೆ ಸಲಹೆ ನೀಡಿದ್ದಾರೆ. 1868ರಿಂದಲೂ ಅರಮನೆ ಪಂಚಾಂಗದಂತೆ ಪ್ರತಿ ವರ್ಷ ಮಾಘ ಮಾಸದ ಮೂರನೇ ಭಾನುವಾರದಂದೇ ಜ್ವಾಲಾಮುಖಿ ತ್ರಿಪುರ ಸುಂದರಿ ವರ್ಧಂತಿ ಮಹೋತ್ಸವ ನಡೆಸುವುದು ಸಂಪ್ರದಾಯ. ಇದರಂತೆ…

ಫೆ.16ರಿಂದ ಶ್ರೀರಾಮಕೃಷ್ಣ, ಶಾರದಾದೇವಿ, ಸ್ವಾಮಿ ವಿವೇಕಾನಂದರ ಜಾತ್ರಾ ಮಹೋತ್ಸವ
ಮೈಸೂರು

ಫೆ.16ರಿಂದ ಶ್ರೀರಾಮಕೃಷ್ಣ, ಶಾರದಾದೇವಿ, ಸ್ವಾಮಿ ವಿವೇಕಾನಂದರ ಜಾತ್ರಾ ಮಹೋತ್ಸವ

February 4, 2020

ಮೈಸೂರು ನಗರದ ಈ ಮಹನೀಯರ ಹೆಸರಿನ ಬಡಾವಣೆಗಳಲ್ಲಿ ವಿಶೇಷ ಸಂದೇಶ ಕಾರ್ಯಕ್ರಮದ ರೂಪುರೇಷೆ ಪ್ರಕಟಿಸಿದ ಡಿ.ಮಾದೇಗೌಡ ಮೈಸೂರು, ಫೆ.3(ಎಸ್‍ಬಿಡಿ)- ಮೈಸೂರಿ ನಲ್ಲಿ ಫೆ.16ರಿಂದ 3 ದಿನ ದಿವ್ಯತ್ರಯರ ಜಾತ್ರಾ ಮಹೋತ್ಸವ ಹಾಗೂ ಶ್ರೀ ರಾಮ ಕೃಷ್ಣ ರಥೋತ್ಸವ ಏರ್ಪಡಿಸಲಾಗಿದೆ. ಶ್ರೀ ರಾಮಕೃಷ್ಣ ಬಳಗ, ಶ್ರೀ ರಾಮಕೃಷ್ಣ ಸೇವಾ ಕೇಂದ್ರ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ದಿವ್ಯತ್ರಯರಾದ ಶ್ರೀ ರಾಮಕೃಷ್ಣರು, ಶಾರದಾದೇವಿ ಹಾಗೂ ಸ್ವಾಮಿ ವಿವೇಕಾನಂದರ ಜಾತ್ರಾ ಮಹೋ ತ್ಸವ ಏರ್ಪಡಿಸಿದ್ದು, ಈ ಹಿನ್ನೆಲೆ ಶ್ರೀರಾಮ ಕೃಷ್ಣ ಆಶ್ರಮದ ಅಧ್ಯಕ್ಷರಾದ…

2020-21 ಸಾಲಿನ ಕೇಂದ್ರ ಬಜೆಟ್ ದೇಶದ ರಚನಾತ್ಮಕ ಪರಿವರ್ತನೆಗೆ ಸಹಕಾರಿ
ಮೈಸೂರು

2020-21 ಸಾಲಿನ ಕೇಂದ್ರ ಬಜೆಟ್ ದೇಶದ ರಚನಾತ್ಮಕ ಪರಿವರ್ತನೆಗೆ ಸಹಕಾರಿ

February 4, 2020

ಸಿಐಐ ಮೈಸೂರು ಘಟಕದ ಅಧ್ಯಕ್ಷ ಭಾಸ್ಕರ್ ಕಳಲೆ ಅಭಿಮತ ಮೈಸೂರು, ಫೆ.3(ಎಂಕೆ)- ಕೇಂದ್ರ ಹಣ ಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ 2020-21ನೇ ಸಾಲಿನ ‘ಕೇಂದ್ರ ಬಜೆಟ್’ ದೇಶದ ರಚನಾತ್ಮಕ ಪರಿವರ್ತನೆಗೆ ಪೂರಕವಾಗಿದೆ ಎಂದು ಭಾರತೀಯ ಉದ್ಯಮ ಒಕ್ಕೂಟ(ಸಿಐಐ)ದ ಮೈಸೂರು ಘಟಕದ ಅಧ್ಯಕ್ಷ ಭಾಸ್ಕರ್ ಕಳಲೆ ಅಭಿಪ್ರಾಯಪಟ್ಟರು. ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿ ರುವ ಎಸ್‍ಡಿಎಂಐಎಂಡಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಬಜೆಟ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಂಡಿಸಿರುವ ಕಳೆದ ಬಜೆಟ್‍ಗಳಂತೆಯೇ ಪ್ರಸ್ತುತ ಬಜೆಟ್ ನಲ್ಲಿಯೂ ಆರ್ಥಿಕತೆಯಲ್ಲಿ…

ಮೈಸೂರು ವಿವಿ ಆವರಣದಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ
ಮೈಸೂರು

ಮೈಸೂರು ವಿವಿ ಆವರಣದಲ್ಲಿ ಖಾಸಗಿ ವಾಹನಗಳಿಗೆ ನಿರ್ಬಂಧ

February 4, 2020

ಮೈಸೂರು, ಫೆ.3(ಎಂಕೆ)- ಮೈಸೂರು ವಿವಿ ಮಾನಸಗಂಗೋತ್ರಿ ಆವರಣದಲ್ಲಿ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ಇ-ಕಾರ್ಟ್ ವಾಹನಗಳ ಸೌಲಭ್ಯ ಒದಗಿಸಿರುವ ಹಿನ್ನೆಲೆ ಪ್ರಾಯೋಗಿಕವಾಗಿ ಖಾಸಗಿ ವಾಹನಗಳನ್ನು ನಿರ್ಬಂಧಿಸಲಾಗಿದೆ. ಸೋಮವಾರ ಬೆಳಿಗ್ಗೆಯಿಂದಲೇ ಖಾಸಗಿ ವಾಹನಗಳನ್ನು ಮಾಸನಗಂಗೋತ್ರಿ ಆವರಣದೊಳಗೆ ಸಂಚರಿಸದಂತೆ ತಡೆಯಲಾಯಿತು. ಈ ಸಂಬಂಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಕುಲಸಚಿವ ಶಿವಪ್ಪ, ವಿದ್ಯಾರ್ಥಿಗಳಿಗೆ ಬ್ಯಾಟರಿ ಚಾಲಿತ ಇ-ಕಾರ್ಟ್ ವಾಹನಗಳ ಪರಿಚಯವನ್ನು ಮಾಡಿಸುವ ದೃಷ್ಟಿಯಿಂದ ಆಟೋ, ಕಾರು ಇನ್ನಿತರೆ ಖಾಸಗಿ ವಾಹನಗಳನ್ನು ಪ್ರಾಯೋಗಾತ್ಮಕವಾಗಿ ತಡೆಯಲಾಯಿತು. ಆದರೆ ಖಾಸಗಿ ವಾಹನಗಳನ್ನು ಕಡ್ಡಾಯವಾಗಿ ನಿರ್ಬಂಧಿಸುವ ಕುರಿತು…

ಬೆಳ್ಳಂಬೆಳಿಗ್ಗೆ ಶ್ರೀರಂಗಪಟ್ಟಣ ಬಳಿ ಹೆದ್ದಾರಿ ದರೋಡೆ
ಮೈಸೂರು

ಬೆಳ್ಳಂಬೆಳಿಗ್ಗೆ ಶ್ರೀರಂಗಪಟ್ಟಣ ಬಳಿ ಹೆದ್ದಾರಿ ದರೋಡೆ

February 3, 2020

ಶ್ರೀರಂಗಪಟ್ಟಣ, ಫೆ.2(ವಿನಯ್ ಕಾರೇಕುರ)- ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ದರೋಡೆಕೋರರು ಕೇವಲ 15 ನಿಮಿಷದಲ್ಲಿ ಎರಡು ದರೋಡೆ ನಡೆಸಿದ್ದು, ಕಾರು ಮತ್ತು ಬೈಕನ್ನು ಅಪಹರಿಸಿದ್ದಾರೆ. ಶ್ರೀರಂಗಪಟ್ಟಣ ನಿವಾಸಿ, ಟಿಪ್ಪರ್ ಚಾಲಕ ಮಣಿಕುಮಾರ್ ಎಂಬುವರು ತಮ್ಮ ಬೈಕನ್ನು ಕಳೆದುಕೊಂಡರೆ, ಕೊಡಗಿನ ಸುಂಟಿಕೊಪ್ಪ ನಿವಾಸಿ ವೋಲಾ ಕಾರು ಚಾಲಕ ರೈಮಂಡ್ ಡಿಸೋಜ ಅವರ ಕಾರನ್ನು ದರೋಡೆ ಕೋರರು ಅಪಹರಿಸಿದ್ದಾರೆ. ಭಾನುವಾರ ಮುಂಜಾನೆ 5.30ರ ವೇಳೆಯಲ್ಲಿ ಕ್ವಾರಿಯೊಂದರ ಟಿಪ್ಪರ್ ಚಾಲಕನಾಗಿರುವ ಶ್ರೀರಂಗ ಪಟ್ಟಣದ ಮಣಿಕುಮಾರ್, ತಮ್ಮ ಪ್ಯಾಷನ್ ಪ್ರೋ (ಕೆಎ 07…

ಫೆ.6ಕ್ಕೆ ಸಂಪುಟ ವಿಸ್ತರಣೆ
ಮೈಸೂರು

ಫೆ.6ಕ್ಕೆ ಸಂಪುಟ ವಿಸ್ತರಣೆ

February 3, 2020

ಬೆಂಗಳೂರು, ಫೆ.2-ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದೆ. ಫೆ.6ರಂದು ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ. ಬೆಂಗಳೂರಿನ ಗೃಹ ಕಚೇರಿ ಕೃಷ್ಣಾದಲ್ಲಿ ಭಾನುವಾರ ಸುದ್ದಿ ಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು, ಫೆ.6ರಂದು ಸಂಪುಟ ವಿಸ್ತರಣೆಯಾಗಲಿದೆ. ಅಂದು ಬೆಳಿಗ್ಗೆ 10.30ಕ್ಕೆ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದರು. ಸಂಪುಟ ವಿಸ್ತರಣೆಯೋ ಅಥವಾ ಪುನರ್ ರಚನೆಯೋ ಎಂಬುದನ್ನು ಸೋಮವಾರ ತೀರ್ಮಾನಿಸುವುದಾಗಿ ಹೇಳಿದ ಅವರು, ನೂತನ ಸಚಿವರಾಗಿ ಯಾರೆಲ್ಲಾ ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ….

1 51 52 53 54 55 330
Translate »