ಸಿಐಐ ಮೈಸೂರು ಘಟಕದ ಅಧ್ಯಕ್ಷ ಭಾಸ್ಕರ್ ಕಳಲೆ ಅಭಿಮತ
ಮೈಸೂರು, ಫೆ.3(ಎಂಕೆ)- ಕೇಂದ್ರ ಹಣ ಕಾಸು ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ 2020-21ನೇ ಸಾಲಿನ ‘ಕೇಂದ್ರ ಬಜೆಟ್’ ದೇಶದ ರಚನಾತ್ಮಕ ಪರಿವರ್ತನೆಗೆ ಪೂರಕವಾಗಿದೆ ಎಂದು ಭಾರತೀಯ ಉದ್ಯಮ ಒಕ್ಕೂಟ(ಸಿಐಐ)ದ ಮೈಸೂರು ಘಟಕದ ಅಧ್ಯಕ್ಷ ಭಾಸ್ಕರ್ ಕಳಲೆ ಅಭಿಪ್ರಾಯಪಟ್ಟರು.
ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿ ರುವ ಎಸ್‍ಡಿಎಂಐಎಂಡಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಬಜೆಟ್ ಸಮಾವೇಶದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮಂಡಿಸಿರುವ ಕಳೆದ ಬಜೆಟ್‍ಗಳಂತೆಯೇ ಪ್ರಸ್ತುತ ಬಜೆಟ್ ನಲ್ಲಿಯೂ ಆರ್ಥಿಕತೆಯಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರಲು ಒತ್ತು ನೀಡ ಲಾಗಿದೆ ಎಂದರು.
ದೊಡ್ಡಮಟ್ಟದ ಬಜೆಟ್ ಇದಾಗಿದ್ದು, ವಿಶೇಷ, ಮಹತ್ವಾಕಾಂಕ್ಷೆಯ ಹಾಗೂ ಅಭಿವೃದ್ಧಿಗೆ ಪೂರಕವಾಗಿದೆ. 2022ರ ವೇಳೆಗೆ ದೇಶದ ರೈತರ ಅದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಯಾವ ರೈತರು ತಮ್ಮ ಜಮೀನಿನಲ್ಲಿ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲವೋ ಅಂತಹವರು ಸೋಲಾರ್ ಘಟಕಗಳನ್ನು ಸ್ಥಾಪಿಸಿಕೊಂಡು ಪರ್ಯಾಯ ಅದಾಯವನ್ನು ಕಾಣ ಬಹುದಾಗಿದೆ. ಅಲ್ಲದೆ ಸೋಲಾರ್ ಘಟಕ ಗಳ ಸ್ಥಾಪನೆಯಿಂದ ಪರಿಸರದ ಮೇಲೆ ಉಂಟಾಗುವ ಮಾಲಿನ್ಯ ಕಡಿಮೆಯಾಗು ತ್ತದೆ ಮತ್ತು ವಿದ್ಯುತ್ ಕೊರತೆಯನ್ನು ನಿವಾ ರಿಸಿಕೊಳ್ಳಬಹುದು. ರೈತರು ಬೆಳೆದ ಬೆಳೆ ಗಳನ್ನು ಮಾರುಕಟ್ಟೆಗೆ ಸಾಗಿಸಲು ವಿಮಾನ ವ್ಯವಸ್ಥೆ ಮಾಡಿರುವುದು ವಿಶೇಷ ಎಂದು ತಿಳಿಸಿದರು. ಸರ್ಕಾರ ತೆರಿಗೆ ಪ್ರಮಾಣವನ್ನು ಕಡಿಮೆ ಗೊಳಿಸಬೇಕು ಎಂದರೆ ತಪ್ಪಾಗು ತ್ತದೆ. ಉದ್ಯಮಿಗಳು ತೆರಿಗೆ ಕಟ್ಟದಿದ್ದರೆ ಸರ್ಕಾರಕ್ಕೆ ಹಣ ಎಲ್ಲಿಂದ ಬರಬೇಕು. ರಸ್ತೆ ಮತ್ತು ಇನ್ನಿತರೆ ಮೂಲಭೂತ ಸೌಕರ್ಯ ಗಳ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರು ತಮ್ಮ ಅದಾಯಕ್ಕನುಗುಣವಾಗಿ ತಪ್ಪದೆ ತೆರಿಗೆ ಕಟ್ಟಬೇಕು. ಸ್ವಾರ್ಥ ಬಿಟ್ಟು ತೆರಿಗೆ ಪಾವತಿ ಮಾಡಿ ಎಂದು ಸಲಹೆ ನೀಡಿದರು.
ಹೊಸದಾಗಿ ಪ್ರಾರಂಭಿಸುವ ಕಾರ್ಖಾನೆ ಗಳಿಗೆ ಕೆಲ ವಿಶೇಷ ಅನುಕೂಲಗಳನ್ನು ಮಾಡಿಕೊಡಲಾಗಿದೆ. ಕಚ್ಚಾ ಸಾಮಗ್ರಿಗಳ ಮೇಲಿನ ತೆರಿಗೆ ಪಾವತಿಗೆ ಹೆಚ್ಚಿನ ಸಮಯವನ್ನು ನೀಡಲಾಗಿದೆ. ದೇಶದಲ್ಲಿ ಜನ ಸಂಖ್ಯೆ ಹೆಚ್ಚಾದಂತೆ ಮಧ್ಯಮ ವರ್ಗದ ಸಂಖ್ಯೆಯು ಹೆಚ್ಚಾಗುತ್ತದೆ. ಎಲ್ಲರಿಗೂ ತಮ್ಮದೆ ಆಸೆ, ಅಕಾಂಕ್ಷೆಗಳಿರುತ್ತವೆ. ಇವು ಗಳನ್ನು ಪೂರೈಸಲು ಕೇಂದ್ರ ಸರ್ಕಾರ ಸನ್ನದ್ದವಾಗಿದೆ ಎಂದರು.
ದೇಶದಲ್ಲಿ ಉಂಟಾಗಿರುವ ಆರ್ಥಿಕ ಕುಸಿತ ತಾತ್ಕಾಲಿಕವಾಗಿದ್ದು, ರಷ್ತುಗೆ ಹೆಚ್ಚು ಹೊತ್ತು ನೀಡುವುದರ ಜತೆಗೆ ಆಹಾರ ಉತ್ಪನ್ನಗಳ ಉತ್ಪಾದನೆಯನ್ನು ಹೆಚ್ಚಿಸಬೇಕು. ತಂತ್ರಜ್ಞಾನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸದ್ಯ ತಂತ್ರಜ್ಞಾನವನ್ನು ಯಾವ ರೀತಿ ಯಲ್ಲಿ ಬಳಸಿಕೊಳ್ಳಬೇಕು ಎಂಬುದರಲ್ಲಿ ಕೇಂದ್ರ ಸರ್ಕಾರ ಹೆಚ್ಚಿನ ಆಸಕ್ತಿ ವಹಿಸು ತ್ತಿದೆ ಎಂದು ಹೇಳಿದರು.
ಉಪಾಧ್ಯಕ್ಷ ಅಮಿತ್ ಕುಮಾರ್ ಮಾತ ನಾಡಿ, ಬಜೆಟ್‍ನಲ್ಲಿ ಉದ್ಯಮಿಗಳನ್ನು ಕೇಂದ್ರೀಕರಿಸಲಾಗಿದ್ದು, ವಿದ್ಯಾರ್ಥಿಗಳು ಉದ್ಯಮ ಕ್ಷೇತ್ರಕ್ಕೆ ತೊಡಗಿಸಿಕೊಳ್ಳಲು ಇದು ಸರಿಯಾದ ಸಮಯವಾಗಿದೆ. ಕೇಂದ್ರ ಸರ್ಕಾರದಿಂದ ಜನಹಿತ ಬಜೆಟ್ ನೀಡ ಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಿಐಐ ಹಣಕಾಸು ಮತ್ತು ತೆರಿಗೆ ಸಮಿತಿಯ ಎಸ್.ರಂಗನಾಥನ್, ಎಸ್‍ಡಿಎಂಐಎಂಡಿ ನಿರ್ದೇಶಕ ಡಾ.ಎನ್.ಆರ್. ಪರಶುರಾಮನ್, ಪ್ರಾಧ್ಯಾಪಕ ಡಾ.ಎಂ.ಶ್ರೀರಾಮ್, ಕೆ.ಬಾಸ್ಕರ್, ಶ್ರೀನಾಥ್‍ರಾವ್ ಮತ್ತಿತರರು ಉಪಸ್ಥಿತರಿದ್ದರು.