ಮೈಸೂರು, ಫೆ.3(ಎಂಟಿವೈ)- ಅದೊಂದು ಭವಿಷ್ಯದ ಭರವಸೆಯ ಬಾಲ ವಿಜ್ಞಾನಿಗಳ ಸಂಗಮ ಸ್ಥಳ. ನಗರ, ಗ್ರಾಮೀಣ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಮಾಡಿ ರುವ ಹೊಸ ಆವಿಷ್ಕಾರವನ್ನು ಅನಾವರಣಗೊಳಿಸುವ ಮೂಲಕ ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿದರು.
ಮೈಸೂರಿನ ಜಾಕಿ ಕ್ವಾರ್ಟಸ್‍ನಲ್ಲಿರುವ ಸರ್ಕಾರಿ ಆದರ್ಶ ವಿದ್ಯಾಲಯದ ಆವರಣದಲ್ಲಿ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ `ಇನ್ನೋವೇಷನ್ ಇನ್ ಸೈನ್ಸ್ ಪರ್ಸೂಟ್ ಫಾರ್ ಇನ್‍ಸ್ಪೈರ್ಡ್ ರಿಸರ್ಚ್’(ಐಎನ್‍ಎಸ್‍ಪಿಐಆರ್‍ಇ) ಜಿಲ್ಲಾ ಮಟ್ಟದ ವಸ್ತು ಪ್ರದರ್ಶನದಲ್ಲಿ ಮೈಸೂರು, ಚಾಮರಾಜನಗರ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿ ಗಳು ಪಾಲ್ಗೊಂಡು, `ನಾವು ಭವಿಷ್ಯದ ವಿಜ್ಞಾನಿ’ಗಳಾಗಲಿ ದ್ದೇವೆ ಎಂಬ ಸಂದೇಶ ಸಾರಿದರು.
ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಆಸಕ್ತಿ ಬೆಳೆಸಿ, ಸಂಶೋಧ ನೆಗೆ ಪ್ರೋತ್ಸಾಹ ನೀಡುವುದು ಹಾಗೂ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ನಾವೀನ್ಯತೆ ಬೆಳೆಸಲು ಪ್ರತಿ ವರ್ಷ `ಇನ್‍ಸ್ಪೈರ್’ ವಸ್ತು ಪ್ರದರ್ಶನವನ್ನು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆಯೋಜಿಸಲಾಗು ತ್ತಿದ್ದು, ಈ ಪ್ರದರ್ಶನದಲ್ಲಿ ಆಯ್ಕೆಯಾದ ಮಾದರಿ ಗಳಿಗೆ ನಗದು ಬಹುಮಾನದೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತದೆ. ಈ ಬಾರಿ ದೇಶ ದಾದ್ಯಂತ 44,006 ವಿದ್ಯಾರ್ಥಿಗಳು `ಇನ್‍ಸ್ಪೈರ್’ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 42,143 ಮಂದಿ ಆಯ್ಕೆಯಾಗಿ ದ್ದಾರೆ. ಇದರಲ್ಲಿ ರಾಜ್ಯದ ವಿದ್ಯಾರ್ಥಿಗಳ ಪಾಲು ಶೇ.18.65 ರಷ್ಟು ಇರುವುದು ವಿಶೇಷ. ಕರ್ನಾಟಕದಲ್ಲಿ 7,861 ವಿದ್ಯಾರ್ಥಿಗಳು ಈ ಪ್ರದರ್ಶನದಲ್ಲಿ ತಮ್ಮ ಆವಿಷ್ಕಾರ ಪ್ರದರ್ಶಿಸಲಿದ್ದಾರೆ. ಮೈಸೂರು ಜಿಲ್ಲೆಯಿಂದ 233 ಹಾಗೂ ಚಾಮರಾಜನಗರ ಜಿಲ್ಲೆಯಿಂದ 96 ವಿದ್ಯಾರ್ಥಿ ಗಳು ಈ ಜಿಲ್ಲಾ ಮಟ್ಟದ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.
ಪ್ರದರ್ಶನದಲ್ಲಿ ಏನೇನಿದೆ: ಪ್ಲಾಸ್ಟಿಕ್ ಸೇರಿದಂತೆ ಕಸವನ್ನು ದಹಿಸಿ, ವಿದ್ಯುತ್ ಉತ್ಪಾದಿಸುವ ಮಾದರಿ, ಸುಧಾರಿತ ಡ್ರೋನ್, ರೋಬೊಟ್, ದೇಶದ ಭದ್ರತಾ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದಾದ ಸ್ವಯಂಚಾಲಿತ ಕಾರು, ವಾಹನ ದಟ್ಟಣೆ ವೇಳೆ ಆಂಬುಲೆನ್ಸ್‍ಗೆ ಸುಗಮ ಹಾದಿ ಕಲ್ಪಿಸುವ ಕ್ರಮ, ಸೋಲಾರ್‍ನ ಟೋಪಿ, ಹೆಲ್ಮೆಟ್, ರೈಲು, ಒಕ್ಕಣೆ ಯಂತ್ರ, ಪ್ಲಾಸ್ಟಿಕ್‍ನಿಂದ ಇಟ್ಟಿಗೆ, ಟೈಲ್ಸ್, ಮೋಟಾರ್ ಬಳಸದೇ ಬಾವಿ, ನದಿಯಿಂದ ಕೃಷಿ ಚಟುವಟಿಕೆಗೆ ನೀರೆತ್ತುವ ವಿಧಾನ ಸೇರಿದಂತೆ ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳು ತಮ್ಮದೇ ಕಲ್ಪನೆಯಲ್ಲಿ ವೈಜ್ಞಾನಿಕ ಮಾದರಿ ತಯಾರಿಸಿದ್ದಾರೆ. ಎರಡು ದಿನಗಳ ಸ್ಪರ್ಧೆಯಲ್ಲಿ ಇಂದು ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರು ಮೌಲ್ಯ ಮಾಪನ ಮಾಡಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹತೆಯುಳ್ಳ ಮಾದರಿಗಳನ್ನು ಆಯ್ಕೆ ಮಾಡಲಿದ್ದಾರೆ. ಶುಕ್ರವಾರ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ವಿಜ್ಞಾನ ಉಪನ್ಯಾಸಕರು ಮೌಲ್ಯಮಾ ಪನ ಮಾಡಲಿದ್ದಾರೆ. ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾ ಗುವ ವಿದ್ಯಾರ್ಥಿಗಳಿಗೆ ವಿಷಯ ತಜ್ಞರು ಮಾರ್ಗದರ್ಶನ ಮಾಡಲಿದ್ದಾರೆ. ರಾಜ್ಯ, ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾ ಗುವ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ತರಬೇತಿ ಶಿಬಿರ ನಡೆಸಿ, ವಿದ್ಯಾರ್ಥಿಗಳು ತಾವು ತಯಾರಿಸಿರುವ ಮಾದರಿಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಆರ್ಥಿಕ ನೆರವು ನೀಡಲಿದೆ.
ಚಾಲನೆ: ಜಾಕಿ ಕ್ವಾರ್ಟಸ್‍ನ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ನಡೆದ `ಇನ್‍ಸ್ಪೈರ್’ ವಸ್ತು ಪ್ರದ ರ್ಶನವನ್ನು ಗುರುವಾರ ಬೆಳಿಗ್ಗೆ ಡಿಡಿಪಿಐ ಡಾ. ಪಾಂಡುರಂಗ ಉದ್ಘಾಟಿಸಿ, ವಿದ್ಯಾರ್ಥಿಗಳÀ ಪ್ರತಿಭೆ ಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಪ್ರತಿವರ್ಷ ವಿವಿಧ ಕಾರ್ಯಕ್ರಮ ಆಯೋಜಿಸುತ್ತಿದೆ. ಮಕ್ಕಳ ವಿಜ್ಞಾನ ಹಬ್ಬ, ಪ್ರತಿಭಾ ಕಾರಂಜಿ ಹಾಗೂ `ಇನ್‍ಸ್ಪೈರ್’ ವಸ್ತು ಪ್ರದರ್ಶನÀ ನಡೆಸಲಾಗುತ್ತಿದ್ದು, ಇದರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 10 ಸಾವಿರ ರೂ. ನಗದು ಬಹುಮಾನವಿದೆ. ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನಕ್ಕೆ ಅದÀ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಿಟಿಇ ಪ್ರಾಂಶುಪಾಲರಾದ ಹೆಚ್.ಎನ್.ಗೀತಾ, ಡಯಟ್ ಪ್ರಾಂಶುಪಾಲ ಕೆ.ಮಹದೇವಪ್ಪ, ಬಿಇಒಗಳಾದ ಉದಯ್‍ಕುಮಾರ್, ನಾಗರಾಜು, ಇನ್ನೋವೇಷನ್ ಇನ್ ಸೈನ್ಸ್ ಪರ್ಸೂಟ್ ಫಾರ್ ಇನ್‍ಸ್ಪೈರ್ಡ್ ರಿಸರ್ಚ್’ ಪ್ರತಿನಿಧಿ ಮಥುರಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.