ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ವಿಷಾದ ಮೈಸೂರು, ಜ.13(ಎಸ್‍ಪಿಎನ್)- ರಾಷ್ಟ್ರೀಯ ಹೆದ್ದಾರಿ ಅಥವಾ ಗ್ರಾಮೀಣ ಪ್ರದೇಶದ ಹೈವೇಗಳಲ್ಲಿ ಸಂಭವಿಸುವ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕುತ್ತಿಲ್ಲ. ವಿಳಂಬದಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಅಭಿಪ್ರಾಯಪಟ್ಟರು. ಮೈಸೂರು ಜೆ.ಕೆ.ಮೈದಾನದ ಎಂಎಂಸಿ ಮತ್ತು ಆರ್‍ಐನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ- 2020 ಅಂಗವಾಗಿ ರಸ್ತೆ ಸುರಕ್ಷತೆ, ಜೀವರಕ್ಷಕ, ಅಮೂಲ್ಯ ಸಮಯ ಮತ್ತು ಆಪತ್ಬಾಂಧವ ಕಾನೂನು…
ರಾಮಾಯಣ ಸರ್ವ ಸಂಪನ್ನ ಮಹಾಕಾವ್ಯ: ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅಭಿಮತ
January 14, 2020ಮೈಸೂರು, ಜ.13(ಎಸ್‍ಪಿಎನ್)-ನಮ್ಮ ಪೂರ್ವಜರ ಕಾಲದಲ್ಲಿ ಚರ್ಚೆ ಯಾಗುತ್ತಿದ್ದಂತೆ. ಪ್ರಸ್ತುತ ಭಾರತದ ಪ್ರತಿ ಯೊಂದು ಹಳ್ಳಿಯಲ್ಲೂ ರಾಮಾಯಣ ಮಹಾಕಾವ್ಯ ಹಾಗೂ ಶ್ರೀರಾಮನ ವ್ಯಕ್ತಿತ್ವ ಕುರಿತು ಚರ್ಚೆಯಾಗಬೇಕು. ರಾಮ- ರಾಮಾಯಣ ಮಹಾಕಾವ್ಯ ಸರ್ವ ಸಂಪನ್ನ ಗುಣಗಳನ್ನು ಹೊಂದಿರುವ ಪರಿಪೂರ್ಣ ಕಾವ್ಯವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಅಭಿಪ್ರಾಯಪಟ್ಟರು. ಮೈಸೂರು ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಸನಾತನ ಸಭಾ ವತಿ ಯಿಂದ ರಾಮಾಯಣ ಪ್ರವಚನ ಮಾಲಿಕೆ ಐದನೇ ಸರಣಿ ಆರಂಭೋತ್ಸವ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,…
ಪ್ರಧಾನಿ ನರೇಂದ್ರ ಮೋದಿ ಭಾಷಣ ಅತ್ಯಂತ ಪ್ರಭಾವಶಾಲಿ
January 14, 2020ಮೈಸೂರು, ಜ.13(ಪಿಎಂ)- ಪ್ರಭಾವಶಾಲಿ ಭಾಷಣ ಮಾಡುವುದು ಒಂದು ಕಲೆ. ಪ್ರಸ್ತುತ ಪ್ರಧಾನಿ ನರೇಂದ್ರಯವರು ಅತ್ಯಂತ ಪ್ರಭಾವಶಾಲಿ ಭಾಷಣ ಮಾಡುವ ಕಲೆ ಕರಗತ ಮಾಡಿಕೊಂಡಿದ್ದು, ಆ ಮೂಲಕ ಭಾರತದ ಒಬ್ಬ ರಾಷ್ಟ್ರ ರಾಜಕಾರಣಿ ಜಗತ್ತಿನಾದ್ಯಂತ ಗಮನ ಸೆಳೆದಿದ್ದಾರೆ ಎಂದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಪ್ರಧಾನ್ ಗುರುದತ್ತ ಅಭಿಪ್ರಾಯಪಟ್ಟರು. ಮೈಸೂರಿನ ಬಾಸುದೇವ ಸೋಮಾನಿ ಕಾಲೇಜಿನ ಸಭಾಂಗಣದಲ್ಲಿ ಮೈಸೂರು ವಿವಿ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ (ಎನ್‍ಎಸ್‍ಎಸ್) ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಯುವ ದಿನದ…
ಕುವೆಂಪು ಸಾಹಿತ್ಯ ಆತ್ಮಸ್ಥೈರ್ಯದ ಕಣಜ
January 14, 2020ಮೈಸೂರು, ಜ.13(ಪಿಎಂ)- ಯಾವ ಮನೋವೈದ್ಯರು ನೀಡಲಾಗದ ಆತ್ಮ ಸ್ಥೈರ್ಯವನ್ನು ರಾಷ್ಟ್ರಕವಿ ಕುವೆಂಪು ಸಾಹಿತ್ಯ ನಮಗೆ ನೀಡಲಿದೆ ಎಂದು ಮುಕ್ತ ವಿವಿ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ಸ್ಮರಿಸಿದರು. ಮೈಸೂರು ವಕೀಲರ ಸಂಘದ ವತಿ ಯಿಂದ ಸಂಘದ ಸಭಾಂಗಣದಲ್ಲಿ ಸೋಮ ವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ 116ನೇ ಜಯಂತೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಕುವೆಂಪು ಸಮಾನತೆಯ ನ್ಯಾಯ, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಪ್ರತಿ ಪಾದಿಸಿದವರು ಎಂದು ತಿಳಿಸಿದರು. ಕನ್ನಡವಿರುವ ತನಕ ಕುವೆಂಪು ನಮ್ಮೊ ಡನೆ ಇರಲಿದ್ದಾರೆ….
ಪಾಲಿಕೆ ಸದಸ್ಯರೊಂದಿಗೆ ಅನುಚಿತ ವರ್ತನೆ ಉಗ್ರಾಣ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
January 14, 2020ಮೈಸೂರು,ಜ.13(ಎಂಟಿವೈ)- ಪರಿಶೀಲನೆಗೆ ಅವಕಾಶ ನೀಡದೆ ಇಬ್ಬರು ಪಾಲಿಕೆ ಸದಸ್ಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಉಗ್ರಾಣ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಂಡು, ನಡೆದಿರುವ ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸುವಂತೆ ಆಗ್ರಹಿಸಿ ಮೈಸೂರು ನಗರ ಪಾಲಿಕೆ ಕಚೇರಿ ಮುಂದೆ ವಿನಾಯಕ ಕ್ರೀಡಾ ಹಾಗೂ ಸಮಾಜ ಸೇವಾ ಸಂಸ್ಥೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪರಿಶಿಷ್ಟ ಜಾತಿ ಹಾಗೂ ಹಿಂದುಳಿತ ವರ್ಗಕ್ಕೆ ಸೇರಿದ ಪಾಲಿಕೆ ಸದಸ್ಯರಾದ ಡಾ.ಅಶ್ವಿನಿ ಹಾಗೂ ಪಲ್ಲವಿ ಬೇಗಂ ಜ.4ರಂದು ಮೈಸೂರು ಪಾಲಿಕೆ ಉಗ್ರಾಣವನ್ನು ಪರಿಶೀಲಿಸಲು ತೆರಳಿದ್ದಾಗ ಉಗ್ರಾಣ ಸಿಬ್ಬಂದಿ…
ಇಂದು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆ
January 14, 2020ಮೈಸೂರು, ಜ.13- ನೆಹರು ಯುವ ಕೇಂದ್ರ, ಶ್ರೀ ತಲ ಕಾವೇರಿ ಮಹಿಳಾ ವಿದ್ಯಾ ಸಂಸ್ಥೆ ಮತ್ತು ಕಾಲೇಜು ಸಹ ಯೋಗದಲ್ಲಿ ಹಿಂದೂ ಸ್ಥಾನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.14 ರಂದು ಬೆಳಿಗ್ಗೆ 11 ಗಂಟೆಗೆ ದಿವ್ಯಚೇತನ ಸ್ವಾಮಿ ವಿವೇಕಾನಂದರ ಜನ್ಮ ದಿನಾ ಚರಣೆ ಹಮ್ಮಿಕೊಳ್ಳಲಾಗಿದೆ. ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ ಕಾರ್ಯಕ್ರಮ ಉದ್ಘಾಟಿಸಲಿದ್ದು, ಹಿಂದೂ ಸ್ಥಾನ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಜೆ.ಪ್ರಿಯಾ ಅಧ್ಯಕ್ಷತೆ ವಹಿಸುವರು ಎಂದು ನೆಹರು ಯುವ ಕೇಂದ್ರದ ಎಸ್.ಸಿದ್ದರಾಮಪ್ಪ ತಿಳಿಸಿದ್ದಾರೆ. ಕ್ರೀಡಾ ಸಾಮಗ್ರಿಗಳನ್ನು ನಗರಪಾಲಿಕೆ…
ಮೈಸೂರು, ಚಾ.ನಗರ ಧಾರ್ಮಿಕ ಕ್ಷೇತ್ರಗಳಿಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ದಂಪತಿ ಭೇಟಿ
January 14, 2020ಮೈಸೂರು, ಜ.13(ಪಿಎಂ/ಎಸ್‍ಎಸ್)- ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನಿಂದ ಇಡೀ ದೇಶದಲ್ಲಿ ವಿಶೇಷ ಗಮನ ಸೆಳೆದಿದ್ದ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ದಂಪತಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು. ಭಾನುವಾರ ಬೆಳಿಗ್ಗೆ ಮೈಸೂರಿನ ಚಾಮುಂಡೇ ಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ದಂಪತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ಅವರ ಪತ್ನಿ ರೂಪಾಂಜಲಿ ಗೊಗೊಯ್ ಅವರನ್ನು ದೇವ ಸ್ಥಾನದ ಆಡಳಿತ ಮಂಡಳಿ ವತಿಯಿಂದ…
ಮೈಸೂರಿನ ಐವರು ಸೇರಿ 90 ಇನ್ಸ್‍ಪೆಕ್ಟರ್‍ಗಳ ವರ್ಗಾವರ್ಗಿ
January 14, 2020ಮೈಸೂರು, ಜ.13(ಎಸ್‍ಬಿಡಿ)- ಮೈಸೂರಿನ ಐವರು ಸೇರಿದಂತೆ ರಾಜ್ಯಾದ್ಯಂತ 90 ಪೊಲೀಸ್ ಇನ್ಸ್‍ಪೆಕ್ಟರ್ ಗಳ ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎನ್.ಮುನಿಯಪ್ಪ ಲಷ್ಕರ್ ಠಾಣೆಯಿಂದ ದೇವರಾಜ ಸಂಚಾರ ಠಾಣೆಗೆ, ಕೆ.ಶ್ರೀಕಾಂತ್ ಎಸಿಬಿಯಿಂದ ನಜರ್ ಬಾದ್ ಠಾಣೆಗೆ, ಮೊಹಮ್ಮದ್ ಇರ್ಶಾದ್ ಜಿಲ್ಲಾ ಅಪರಾಧ ದಾಖಲೆಗಳ ಬ್ಯೂರೋ(ಡಿಸಿಆರ್‍ಬಿ)ದಿಂದ ಸಿಐಡಿಗೆ, ಬಿ.ಜಿ.ಪ್ರಕಾಶ್ ವಿವಿಪುರಂ ಸಂಚಾರ ಠಾಣೆ ಯಿಂದ ರಾಜ್ಯ ಗುಪ್ತವಾರ್ತೆ ವಿಭಾಗಕ್ಕೆ ಹಾಗೂ ಎಲ್. ಅರುಣ್ ಮಂಡಿ ಠಾಣೆಯಿಂದ ಕರ್ನಾಟಕ ಲೋಕಾ ಯುಕ್ತ (ಕೆಎಲ್‍ಎ)ಕ್ಕೆ ವರ್ಗಾವಣೆಗೊಂಡಿದ್ದಾರೆ. ಸ್ಥಳ ನಿರೀಕ್ಷಣೆಯಲ್ಲಿದ್ದ ಪಿ.ಪಿ.ಸಂತೋಷ್…
ಮಹಿಳೆ ಮಾಂಗಲ್ಯ ಸರ ಅಪಹರಣ
January 14, 2020ಮೈಸೂರು, ಜ.13(ಆರ್‍ಕೆ)- ಅಂಗಡಿಯಿಂದ ಮನೆಗೆ ನಡೆದು ಕೊಂಡು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ರಾಮಕೃಷ್ಣನಗರದಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ. ರಾಮಕೃಷ್ಣನಗರ ‘ಇ’ ಅಂಡ್ ‘ಎಫ್’ ಬ್ಲಾಕ್ ನಿವಾಸಿ ಪಾರ್ವತಿ ಎಂಬುವರೇ 1.2 ಲಕ್ಷ ರೂ. ಮೌಲ್ಯದ 40 ಗ್ರಾಂ ಚಿನ್ನದ ಮಾಂಗಲ್ಯ ಸರ ಕಳೆದುಕೊಂಡವರು. ಜ.10ರಂದು ಸಂಜೆ 4 ಗಂಟೆ ವೇಳೆಗೆ ರಾಮಕೃಷ್ಣನಗರದ ರೂಬಿ ಬೇಕರಿ ಬಳಿಯ ಕ್ರಾಸ್ ರೋಡ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಿನಿಂದ ಬೈಕ್‍ನಲ್ಲಿ ಬಂದ ಅಪರಿಚಿತ ಯುವಕನೋರ್ವ ಏಕಾಏಕಿ ತಮ್ಮ…
ಗುಂಡ್ಲುಪೇಟೆಯಲ್ಲಿ ಶಂಕಿತ ಉಗ್ರನ ವಶ
January 13, 2020ಚಾಮರಾಜನಗರ, ಜ.12(ಎಸ್‍ಎಸ್, ಎಸಿಪಿ)-ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಉಗ್ರರ ಕರಿನೆರಳು ಕಾಣಿಸಿಕೊಂಡಿದ್ದು, ಗುಂಡ್ಲುಪೇಟೆಯ ಮದರಸಾವೊಂದರ ಮೇಲೆ ಶನಿವಾರ ಸಂಜೆ ಆಂತರಿಕ ಭದ್ರತಾ ವಿಭಾಗ (ಐಎಸ್‍ಡಿ), ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಜಿಲ್ಲಾ ಪೊಲೀಸರು ಜಂಟಿ ದಾಳಿ ನಡೆಸಿ ಶಂಕಿತ ಉಗ್ರನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಈ ದಾಳಿಯಲ್ಲಿ ಶಂಕಿತ ಉಗ್ರನಿಗೆ ಆಶ್ರಯ ನೀಡಿದ ಶಂಕೆ ಮೇರೆಗೆ ಮದರಸಾದ ಮೌಲ್ವಿ ಯನ್ನೂ ವಶಕ್ಕೆ ಪಡೆದಿದ್ದ ಐಎಸ್‍ಡಿ ತಂಡ ವಿಚಾರಣೆ ನಂತರ ಭಾನುವಾರ ಸಂಜೆ ಅವರನ್ನು ಬಿಡುಗಡೆ ಮಾಡಿದೆ ಎಂದು ಪೊಲೀಸ್…










