ಕುವೆಂಪು ಸಾಹಿತ್ಯ ಆತ್ಮಸ್ಥೈರ್ಯದ ಕಣಜ
ಮೈಸೂರು

ಕುವೆಂಪು ಸಾಹಿತ್ಯ ಆತ್ಮಸ್ಥೈರ್ಯದ ಕಣಜ

January 14, 2020

ಮೈಸೂರು, ಜ.13(ಪಿಎಂ)- ಯಾವ ಮನೋವೈದ್ಯರು ನೀಡಲಾಗದ ಆತ್ಮ ಸ್ಥೈರ್ಯವನ್ನು ರಾಷ್ಟ್ರಕವಿ ಕುವೆಂಪು ಸಾಹಿತ್ಯ ನಮಗೆ ನೀಡಲಿದೆ ಎಂದು ಮುಕ್ತ ವಿವಿ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ಸ್ಮರಿಸಿದರು.

ಮೈಸೂರು ವಕೀಲರ ಸಂಘದ ವತಿ ಯಿಂದ ಸಂಘದ ಸಭಾಂಗಣದಲ್ಲಿ ಸೋಮ ವಾರ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಅವರ 116ನೇ ಜಯಂತೋತ್ಸವದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಕುವೆಂಪು ಸಮಾನತೆಯ ನ್ಯಾಯ, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಗಳನ್ನು ಪ್ರತಿ ಪಾದಿಸಿದವರು ಎಂದು ತಿಳಿಸಿದರು.

ಕನ್ನಡವಿರುವ ತನಕ ಕುವೆಂಪು ನಮ್ಮೊ ಡನೆ ಇರಲಿದ್ದಾರೆ. ನಮ್ಮದು ಕೈ ಕೊಡುವ ಸಂಸ್ಕøತಿಯಲ್ಲ, ಮಾತು (ವಚನ) ಕೊಡುವ ಸಂಸ್ಕøತಿ. ನಮ್ಮ ಬಟ್ಟೆ ಹಾಗೂ ದೇಹಕ್ಕಿಂತ ಬದುಕು ಮಡಿಯಾಗಿದ್ದರೆ ಜಗತ್ತಿಗೆ ಚಿರ ಶಾಂತಿ ಎಂಬ ಸಂದೇಶಗಳನ್ನು ರಾಮಾ ಯಣ ದರ್ಶನಂನಲ್ಲಿ ನೀಡಿದ್ದಾರೆ ಎಂದರು.

ಆರಂಭದಲ್ಲಿ ಆಂಗ್ಲ ಭಾಷೆಯಲ್ಲಿ ಸಾಹಿತ್ಯ ಕೃಷಿ ಮಾಡಲು ಹೊರಟ್ಟಿದ್ದ ಕುವೆಂಪು ಅವ ರಿಗೆ ಅವರ ಪ್ರಾಧ್ಯಾಪಕರೊಬ್ಬರು ಮಾತೃ ಭಾಷೆಯಲ್ಲಿ ಸಾಹಿತ್ಯ ರಚಿಸಲು ಸಲಹೆ ನೀಡು ತ್ತಾರೆ. ಮಾತೃಭಾಷೆಯಲ್ಲಿ ಸೃಜನಶೀಲತೆ ಪಡೆಯುವವರು ಜಗತ್ತಿನ ಯಾವ ಭಾಷೆ ಯಲ್ಲಿಯಾದರೂ ಸೃಜನಶೀಲತೆ ಗಳಿಸ ಬಲ್ಲರು ಎಂಬ ಪ್ರಾಧ್ಯಾಪಕರ ಮಾತನ್ನು ಯುವಕ ಕುವೆಂಪು ಗಂಭೀರವಾಗಿ ಪರಿ ಗಣಿಸಿದರು ಎಂದು ತಿಳಿಸಿದರು.

ಉದ್ಘಾಟನೆ ನೆರವೇರಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಕೆ. ಒಂಟಿ ಗೋಡಿ ಮಾತನಾಡಿ, ಕುವೆಂಪು ಅವರ ಸಾಹಿತ್ಯ ಪ್ರಪಂಚದ ಗಮನ ಸೆಳೆದಿದೆ. ಅವರ ಸ್ವಂತ ಊರಾದ ಕುಪ್ಪಳ್ಳಿಗೆ ಭೇಟಿ ನೀಡಿದ್ದು, ಅವರ ಮನೆ ಹಾಗೂ ಆವರಣವನ್ನು ಸರ್ಕಾರ ಸ್ಮಾರಕವಾಗಿ ಅಭಿವೃದ್ಧಿಪಡಿಸಿದೆ. ಅಲ್ಲಿಗೆ ಭೇಟಿ ನೀಡಿದರೆ ಕುವೆಂಪು ಅವರ ಬದುಕು ಹಾಗೂ ಸಾಹಿತ್ಯದ ಮಾಹಿತಿ ಲಭ್ಯವಾಗಲಿದೆ. ಅವರು ಸಾಹಿತ್ಯದ ಮೂಲಕ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಸ್ಮರಿಸಿದರು. ಇದಕ್ಕೂ ಮುನ್ನ ಕುವೆಂಪು ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು. ಕರ್ನಾಟಕ ರಾಜ್ಯ ವಕೀಲರ ಪರಿಷತ್‍ನ ಸದಸ್ಯ ಬಿ.ಆರ್.ಚಂದ್ರಮೌಳಿ, ಮೈಸೂರು ವಕೀಲರ ಸಂಘದ ಅಧ್ಯಕ್ಷ ಎನ್.ಆನಂದಕುಮಾರ್, ಉಪಾಧ್ಯಕ್ಷ ಎಸ್.ಜಿ.ಶಿವಣ್ಣೇಗೌಡ, ಕಾರ್ಯದರ್ಶಿ ಬಿ.ಶಿವಣ್ಣ ಮತ್ತಿತರರು ಹಾಜರಿದ್ದರು.

Translate »