ಮೈಸೂರು, ಚಾ.ನಗರ ಧಾರ್ಮಿಕ ಕ್ಷೇತ್ರಗಳಿಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ದಂಪತಿ ಭೇಟಿ
ಮೈಸೂರು

ಮೈಸೂರು, ಚಾ.ನಗರ ಧಾರ್ಮಿಕ ಕ್ಷೇತ್ರಗಳಿಗೆ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ದಂಪತಿ ಭೇಟಿ

January 14, 2020

ಮೈಸೂರು, ಜ.13(ಪಿಎಂ/ಎಸ್‍ಎಸ್)- ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪಿನಿಂದ ಇಡೀ ದೇಶದಲ್ಲಿ ವಿಶೇಷ ಗಮನ ಸೆಳೆದಿದ್ದ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ದಂಪತಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ್ದರು.

ಭಾನುವಾರ ಬೆಳಿಗ್ಗೆ ಮೈಸೂರಿನ ಚಾಮುಂಡೇ ಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ದಂಪತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ಅವರ ಪತ್ನಿ ರೂಪಾಂಜಲಿ ಗೊಗೊಯ್ ಅವರನ್ನು ದೇವ ಸ್ಥಾನದ ಆಡಳಿತ ಮಂಡಳಿ ವತಿಯಿಂದ ಸಾಂಪ್ರ ದಾಯಿಕವಾಗಿ ಸ್ವಾಗತಿಸಲಾಯಿತು.

ನಂತರ ಚಾಮರಾಜನಗರ ಜಿಲ್ಲೆ ಬಿಳಿಗಿರಿ ರಂಗನ ಬೆಟ್ಟಕ್ಕೆ ತೆರಳಿದ ಈ ದಂಪತಿ ಅಲ್ಲಿನ ಕೆ.ಗುಡಿಯಲ್ಲಿ ರುವ ಜಂಗಲ್ ಲಾಡ್ಜ್‍ನಲ್ಲಿ ರಾತ್ರಿ ವಾಸ್ತವ್ಯ ಹೂಡಿ ದ್ದರು. ಸೋಮವಾರ ಬೆಳಿಗ್ಗೆ ಬಿಳಿಗಿರಿ ರಂಗನ ಬೆಟ್ಟ ದಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಆಗಮಿಸಿದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮತ್ತು ಅವರ ಪತ್ನಿಯನ್ನು ಮಂಗಳವಾದ್ಯ ಸಮೇತ ಪೂರ್ಣ ಕುಂಭ ಸ್ವಾಗತದೊಂದಿಗೆ ಮಠದಲ್ಲಿರುವ ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಬರಮಾಡಿಕೊಂಡರು.

ಶ್ರೀಮಠದ ಆವರಣದಲ್ಲಿ ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿ ಮಾಡಿದ ದಂಪತಿ, ಶ್ರೀಗಳ ಆಶೀರ್ವಾದ ಪಡೆದರು. ನಂತರ ಅಲ್ಲಿಯೇ ಉಪಾಹಾರ ಸೇವಿಸಿ, ಶ್ರೀಗಳ ಜೊತೆ ಕೆಲ ಸಮಯ ಮಾತುಕತೆ ನಡೆಸಿದರು. ಮಠದ ವಿದ್ಯಾರ್ಥಿನಿಯರು ನಿವೃತ್ತ ನ್ಯಾಯಮೂರ್ತಿ ಮತ್ತು ಅವರ ಪತ್ನಿಯೊಂದಿಗೆ ಗ್ರೂಪ್ ಫೋಟೋ ತೆಗೆಸಿ ಕೊಂಡರು. ಸುತ್ತೂರು ಶ್ರೀಗಳು ನಿವೃತ್ತ ನ್ಯಾಯ ಮೂರ್ತಿ ರಂಜನ್ ಗೊಗೊಯ್ ದಂಪತಿಗೆ ಮೈಸೂರು ಪೇಟ ತೊಡಿಸಿ, ಹಾರ ಹಾಕಿ, ಫಲ ತಾಂಬೂಲ ಹಾಗೂ ನೆನಪಿನ ಕಾಣಿಕೆ ನೀಡಿ ಬೀಳ್ಕೊ ಟ್ಟರು. ಇದಕ್ಕೂ ಮುನ್ನ ಭಾನುವಾರ ರಂಜನ್ ಗೊಗೊಯ್ ದಂಪತಿ ಚಾಮರಾಜನಗರದ ರಾಮ ಸಮುದ್ರ ಬಳಿ ಇರುವ ಅರಳುಕೋಟೆ ಆಂಜನೇಯ ಸ್ವಾಮಿ ದೇವಸ್ಥಾನಕ್ಕೂ ಭೇಟಿ ನೀಡಿದರಲ್ಲದೆ, ದೀನ ಬಂಧು ಆಶ್ರಮಕ್ಕೂ ಭೇಟಿ ನೀಡಿದ್ದರು.

Translate »