ರಾಮಾಯಣ ಸರ್ವ ಸಂಪನ್ನ ಮಹಾಕಾವ್ಯ: ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅಭಿಮತ
ಮೈಸೂರು

ರಾಮಾಯಣ ಸರ್ವ ಸಂಪನ್ನ ಮಹಾಕಾವ್ಯ: ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್ ಅಭಿಮತ

January 14, 2020

ಮೈಸೂರು, ಜ.13(ಎಸ್‍ಪಿಎನ್)-ನಮ್ಮ ಪೂರ್ವಜರ ಕಾಲದಲ್ಲಿ ಚರ್ಚೆ ಯಾಗುತ್ತಿದ್ದಂತೆ. ಪ್ರಸ್ತುತ ಭಾರತದ ಪ್ರತಿ ಯೊಂದು ಹಳ್ಳಿಯಲ್ಲೂ ರಾಮಾಯಣ ಮಹಾಕಾವ್ಯ ಹಾಗೂ ಶ್ರೀರಾಮನ ವ್ಯಕ್ತಿತ್ವ ಕುರಿತು ಚರ್ಚೆಯಾಗಬೇಕು. ರಾಮ- ರಾಮಾಯಣ ಮಹಾಕಾವ್ಯ ಸರ್ವ ಸಂಪನ್ನ ಗುಣಗಳನ್ನು ಹೊಂದಿರುವ ಪರಿಪೂರ್ಣ ಕಾವ್ಯವಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಬಿ.ವಿ.ವಸಂತ ಕುಮಾರ್ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯ ನಾದಬ್ರಹ್ಮ ಸಭಾಂಗಣದಲ್ಲಿ ಸನಾತನ ಸಭಾ ವತಿ ಯಿಂದ ರಾಮಾಯಣ ಪ್ರವಚನ ಮಾಲಿಕೆ ಐದನೇ ಸರಣಿ ಆರಂಭೋತ್ಸವ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಲ್ಮೀಕಿ ರಾಮಾಯಣದಲ್ಲಿ ರಾಮನ ಪ್ರತಿಗುಣಗಳನ್ನು ಆಲೋಚಿಸಿ ರಚಿಸಿದ್ದಾರೆ. ಆದ್ದರಿಂದ ರಾಮ-ರಾಮಾಯಣ ಒಂದು ಜಾತಿಗೆ, ಸೀಮೆಗೆ, ಭಾಷಾ ಗಡಿಗೆ ಹೊಂದಿ ಕೊಳ್ಳುವ ಕಾವ್ಯವಲ್ಲ ಎಂದು ವಿಶ್ಲೇಷಿಸಿದರ ಲ್ಲದೆ, ಶ್ರೀರಾಮನ ಬಗ್ಗೆ ವಿದ್ಯಾರ್ಥಿಗಳು ಅಧ್ಯಯನ ಮಾಡಿದರೆ ಮೌಲ್ಯಯುತ ಗುಣಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.

`ಮಹರ್ಷಿ ವಾಲ್ಮೀಕಿ ರಾಮಾಯಣ’, ಕುವೆಂಪು ರಚಿತ `ಶ್ರೀರಾಮಾಯಣ ದರ್ಶನಂ’ ಹಾಗೂ ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ರಚಿಸಿರುವ `ಶ್ರೀ ರಾಮಾಯಣ ಅನ್ವೇಷಣಂ’ ಗ್ರಂಥದವ ರೆಗೂ ಸುಮಾರು 6 ಸಾವಿರ ರಾಮಾಯಣ ಗ್ರಂಥಗಳು ವಿವಿಧ ಸಾಹಿತಿಗಳಿಂದ ರಚನೆ ಯಾಗಿವೆ ಎಂದು ಹಿರಿಯ ವಿದ್ವಾಂಸರಾದ ಟಿ.ಎಲ್.ವೆಂಕಟಾಚಲ ಶಾಸ್ತ್ರಿ ಕಾರ್ಯ ಕ್ರಮವೊಂದರಲ್ಲಿ ಉಲ್ಲೇಖಿಸಿದ್ದಾರೆ ಎಂದರು.

ವಾಲ್ಮೀಕಿ ರಾಮಾಯಣ ಪ್ರಪಂಚದ ಸುಮಾರು 10ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿದೆ. ಅದರಲ್ಲೂ ಮುಸ್ಲಿಂ ರಾಷ್ಟ್ರಗಳಾದ ಇಂಡೋನೇಷ್ಯಾ, ಸೌದಿ ಅರೆÀಬಿಯಾ, ಇರಾನ್, ಇರಾಕ್ ಹಾಗೂ ಜರ್ಮನಿ, ಯುರೋಪ್ ದೇಶ ಭಾಷೆ ಗಳಲ್ಲೂ ರಾಮಾಯಣ ಮಹಾಕಾವ್ಯ ಅನುವಾದಗೊಂಡು ಸಂಶೋಧನೆ ಕೈ ಗೊಂಡಿದ್ದಾರೆ ಎಂದು ಹೇಳಿದರು.

ವಾಲ್ಮೀಕಿ ರಾಮಾಯಣದಲ್ಲಿ ರಾಮ, ಸರ್ವೋತ್ತಮ ಗುಣಗಳನ್ನು ಹೊಂದಿರುವ ನಾಯಕನಾಗಿ ಚಿತ್ರಿತರಾಗಿದ್ದಾರೆ. ಆದ್ದರಿಂ ದಲೇ ಶ್ರೀರಾಮ ಸರ್ವ ಜನರೂ ಮೆಚ್ಚುವ ನಾಯಕ. ಆತನ ವ್ಯಕ್ತಿತ್ವವನ್ನು ಕೆಲವು ಚಿಂತಕರು ಸಾಂಸ್ಕøತಿಕ ರಾಜಕಾರಣಕ್ಕಾಗಿ ಕೆಟ್ಟದ್ದಾಗಿ ಬಿಂಬಿಸಲು ಹೊರಟಿದ್ದಾರೆ. ಇದು ಅತ್ಯಂತ ಹೇಯಕೃತ್ಯ ಎಂದು ಟೀಕಿಸಿದರು.

ರಾಮ-ರಾವಣ ವ್ಯಕ್ತಿತ್ವವನ್ನು ಇಂದಿನ ಯುವ ಪೀಳಿಗೆ ಪರಿಪೂರ್ಣವಾಗಿ ತಿಳಿದು ಕೊಳ್ಳಬೇಕು. ಎಲ್ಲರೂ ರಾಮನನ್ನು ಏಕೆ ಪ್ರೀತಿಸುತ್ತಾರೆ?. ರಾವಣನನ್ನು ಏಕೆ ದ್ವೇಷಿಸು ತ್ತಾರೆ? ಈ ಎರಡು ಗುಣಗಳ ಬಗ್ಗೆ ಇಂದಿನ ವಿದ್ಯಾರ್ಥಿಗಳಿಗೆ ಪರಿಚಯವಿರಬೇಕು. ರಾಮಾ ಯಣ ಕಾವ್ಯದಲ್ಲಿ ಬರುವ ಶಂಭುಕನ ಪಾತ್ರ ಧಾರಿಯನ್ನು ಶ್ರೀರಾಮ ಮೋಸದಿಂದ ಕೊಂದಿದ್ದು, ಅದಕ್ಕಾಗಿ ಆತ ದಲಿತರ ದ್ವೇಷಿ ಎಂದು ಕೆಲವರು ಬಿಂಬಿಸುತ್ತಿದ್ದಾರೆ.

ಅದೇ ಶ್ರೀರಾಮ, ಶಬರಿ ಭೇಟಿ ಸಂದರ್ಭ ದಲ್ಲಿ ಆಕೆ ಕಚ್ಚಿಕೊಟ್ಟ ಹಣ್ಣು ತಿನ್ನುವ ಪ್ರಸಂಗವನ್ನು ಯಾರೂ ಹೇಳುವುದಿಲ್ಲ. ಅದರಂತೆ `ಗುಹಾ’ ಎಂಬ ಗುಡ್ಡಗಾಡಿನ ಸಾಮಾನ್ಯ ಮನುಷ್ಯನ ಮನೆಗೆ ಭೇಟಿ ನೀಡಿ, ಜೊತೆಯಲ್ಲಿ ಕುಳಿತು ಸಹಪಂಕ್ತಿ ಭೋಜನ ಮಾಡಿದ್ದ ಅಂಶವನ್ನು ವಿಮರ್ಶ ಕರು ಸಮಾಜಕ್ಕೆ ತಿಳಿಸುತ್ತಿಲ್ಲ. ಹೀಗೆ ರಾಮನ ವ್ಯಕ್ತಿತ್ವದ ಬಗ್ಗೆ ಹತ್ತು-ಹಲವು ವಿಸ್ಮಯ ಗಳಿದ್ದು, ಈ ಎಲ್ಲಾ ಅಂಶಗಳೂ ತಿಳಿಯ ಬೇಕು ಎಂದು ಪ್ರತಿಪಾದಿಸಿದರು.

ವಿದ್ವಾನ್ ಗ.ನಾ.ಭಟ್ಟ ಅವರು ಪ್ರವಚನ ನೀಡುತ್ತ, ಮಾರೀಚನೆಂಬ ರಾಕ್ಷಸ ಪಾತ್ರ ರಾಮಾಯಣದ ಅರಣ್ಯಕಾಂಡದಲ್ಲಿ ಬರುತ್ತದೆ. ಈತ ಋಷಿಮುನಿಗಳನ್ನು ಕೊಂದು ಅವರ ಮಾಂಸವನ್ನು ಭಕ್ಷಿಸಲು ತೊಡಗಿದ್ದ. ಈತ ಕೆಲವು ದಿನ ರಾವಣನ ಆಸ್ಥಾನದಲ್ಲೂ ಉಳಿದುಕೊಂಡು, ಪುನಃ ಮನ ಪರಿ ವರ್ತನೆಗಾಗಿ ಅರಣ್ಯಕ್ಕೆ ಬರುತ್ತಾನೆ. ಇಲ್ಲಿ ಬಂದು ಋಷಿಯಾಗಲು ಪ್ರಯತ್ನಿಸು ತ್ತಾನೆ. ಆದರೆ, ಅದು ಸಾಧ್ಯವಾಗುವುದಿಲ್ಲ ಎಂದು ಕೆಲವು ಪ್ರಸಂಗಗಳನ್ನು ಉದಾ ಹರಣೆ ನೀಡಿ, ವಿವರಿಸಿದರು.

ರಾಮಾಯಣದಲ್ಲಿ ಬರುವ ರಾಕ್ಷಸ ಗುಣಗಳನ್ನು ಬೆಳೆಸಿಕೊಂಡ ಅನೇಕ ಭಯೋ ತ್ಪಾದ(ರಾಕ್ಷಸರನ್ನು)ಕರನ್ನು ಶ್ರೀರಾಮ ಕೊಲ್ಲುತ್ತಾನೆ. ಅದರಲ್ಲಿ ರಾವಣನೂ ಒಬ್ಬ. ಆತ ಸರ್ವಶ್ರೇಷ್ಠ ರಾಜನೆಂದು ಜಗತ್ತಿನ ತುಂಬ ತನ್ನ ವ್ಯಕ್ತಿತ್ವವನ್ನು ತಾನೇ ಹೊಗಳಿ ಕೊಂಡು ತಿರುಗಾಡುತ್ತಿರುತ್ತಾನೆ. ಆದರೆ, ಸೀತಾಪಹರಣದಿಂದ ರಾವಣ ಹತನಾಗು ತ್ತಾನೆ. ಈ ನಡುವೆ ಬರುವ ರಾಮಾಯಣ ಕಥೆಯಲ್ಲಿ ಮಾರೀಚ ಪಾತ್ರವನ್ನು ವಿವರಿಸಿ ದರು. ಈ ವೇಳೆ ಸನಾತನ ಸಭಾದ ಅಧ್ಯಕ್ಷ ಎನ್.ಎಸ್.ದ್ವಾರಕನಾಥ ಇದ್ದರು.