ಗುಂಡ್ಲುಪೇಟೆಯಲ್ಲಿ ಶಂಕಿತ ಉಗ್ರನ ವಶ
ಮೈಸೂರು

ಗುಂಡ್ಲುಪೇಟೆಯಲ್ಲಿ ಶಂಕಿತ ಉಗ್ರನ ವಶ

January 13, 2020

ಚಾಮರಾಜನಗರ, ಜ.12(ಎಸ್‍ಎಸ್, ಎಸಿಪಿ)-ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಉಗ್ರರ ಕರಿನೆರಳು ಕಾಣಿಸಿಕೊಂಡಿದ್ದು, ಗುಂಡ್ಲುಪೇಟೆಯ ಮದರಸಾವೊಂದರ ಮೇಲೆ ಶನಿವಾರ ಸಂಜೆ ಆಂತರಿಕ ಭದ್ರತಾ ವಿಭಾಗ (ಐಎಸ್‍ಡಿ), ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಜಿಲ್ಲಾ ಪೊಲೀಸರು ಜಂಟಿ ದಾಳಿ ನಡೆಸಿ ಶಂಕಿತ ಉಗ್ರನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ.

ಈ ದಾಳಿಯಲ್ಲಿ ಶಂಕಿತ ಉಗ್ರನಿಗೆ ಆಶ್ರಯ ನೀಡಿದ ಶಂಕೆ ಮೇರೆಗೆ ಮದರಸಾದ ಮೌಲ್ವಿ ಯನ್ನೂ ವಶಕ್ಕೆ ಪಡೆದಿದ್ದ ಐಎಸ್‍ಡಿ ತಂಡ ವಿಚಾರಣೆ ನಂತರ ಭಾನುವಾರ ಸಂಜೆ ಅವರನ್ನು ಬಿಡುಗಡೆ ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ದಕ್ಷಿಣ ಭಾರತದಲ್ಲಿ ಉಗ್ರರ ಕಾರ್ಯ ಚಟುವಟಿಕೆ ನಡೆಯುತ್ತಿದೆ ಎಂಬ ಕೇಂದ್ರ ಗುಪ್ತಚರ ವರದಿ ಆಧರಿಸಿ ರಾಜ್ಯದಲ್ಲಿ ಉಗ್ರರ ಚಟುವಟಿಕೆ ಬಗ್ಗೆ ತೀವ್ರ ನಿಗಾ ವಹಿಸಲಾಗಿತ್ತು. ಈ ಮಧ್ಯೆ ತಮಿಳುನಾಡಿನಲ್ಲಿ ಪಾಂಡಿ ಸುರೇಶ್ ಎಂಬ ಹಿಂದೂ ಸಂಘಟನೆ ಮುಖಂಡ ಹಾಗೂ ಓರ್ವ ಸಬ್ ಇನ್ಸ್ ಪೆಕ್ಟರ್‍ರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕ ರಣದಲ್ಲಿ ಬಂಧಿತರಾದ ಉಗ್ರವಾದಿ ಸಂಘ ಟನೆಯ ಸದಸ್ಯರು ನೀಡಿದ ಸುಳಿವಿನ ಮೇರೆಗೆ ಗುಂಡ್ಲುಪೇಟೆಯಲ್ಲಿ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಗುಂಡ್ಲುಪೇಟೆಯಲ್ಲಿ ಸಿಕ್ಕಿಬಿದ್ದಿರುವಾತ ಅಲ್ ಉಮರ್ ಉಗ್ರ ಸಂಘಟನೆಯ ಸದಸ್ಯ ಮೆಹಬೂಬ್ ಪಾಷಾ ಎಂದು ಹೇಳಲಾಗಿದ್ದು, ಈ ಉಗ್ರ ಸಂಘಟನೆಯು ಕರ್ನಾಟಕ, ತಮಿಳುನಾಡು ಹಾಗೂ ಕೇರಳಾದಲ್ಲಿ ಹಿಂದೂ ಸಂಘಟನೆಗಳ ಮುಖಂಡರನ್ನು ಕೊಲೆ ಮಾಡಲು ಸಂಚು ರೂಪಿಸಿತ್ತು ಎಂದು ಹೇಳಲಾಗಿದೆ. ಮೆಹಬೂಬ್ ಪಾಷಾ ಕಳೆದ ಹಲವು ದಿನಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುತ್ತಾಡಿದ್ದ. ಇತ್ತೀಚೆಗೆ ಕೋಲಾರದಲ್ಲಿ ಈತನ ಮೊಬೈಲ್ ಕಾರ್ಯ ನಿರ್ವಹಿಸಿರುವುದನ್ನು ಆಂತರಿಕ ಭದ್ರತಾ ವಿಭಾಗ ಪತ್ತೆ ಹಚ್ಚಿತ್ತು ಎನ್ನಲಾಗಿದೆ. ಕೊನೆಗೆ ಈತ ಗುಂಡ್ಲುಪೇಟೆಯಲ್ಲಿ ಅಡಗಿದ್ದಾನೆ ಎಂಬ ಮಾಹಿತಿಯು ಆಂತರಿಕ ಭದ್ರತಾ ವಿಭಾಗಕ್ಕೆ ದೊರೆತ್ತಿತ್ತು ಎನ್ನಲಾಗಿದೆ.

ಎರಡು ದಿನಗಳ ಹಿಂದೆಯೇ ಎಸ್‍ಐಡಿ ಮತ್ತು ಎಟಿಎಸ್ ತಂಡಗಳು ಗುಂಡ್ಲುಪೇಟೆ ಯಲ್ಲಿ ಬೀಡು ಬಿಟ್ಟು ಮಾಹಿತಿ ಸಂಗ್ರಹದಲ್ಲಿ ತೊಡಗಿತ್ತು ಎಂದು ಮೂಲಗಳು ತಿಳಿಸಿವೆ. ಮದರಸಾದಲ್ಲಿ ಶಂಕಿತ ಉಗ್ರ ಇರುವುದು ಶನಿವಾರ ಮಧ್ಯಾಹ್ನ ಖಚಿತಪಡಿಸಿಕೊಂಡ ಈ ತಂಡಗಳು ದಕ್ಷಿಣ ವಲಯ ಐಜಿಪಿಯವರಿಗೆ ಮಾಹಿತಿ ರವಾನಿಸಿ ಜಿಲ್ಲಾ ಪೊಲೀಸರ ಸಹಕಾರವನ್ನು ಪಡೆಯಿತು ಎಂದು ಹೇಳಲಾಗಿದೆ. ಶನಿವಾರ ಮಧ್ಯಾಹ್ನದಿಂದಲೇ ಮದರಸಾ ಮೇಲೆ ದಾಳಿ ನಡೆಸಲು ಕಾರ್ಯತಂತ್ರ ರೂಪಿಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಮೂವರು ಎಸ್ಪಿಗಳು ಭಾಗವಹಿಸಿದ್ದರು ಎನ್ನಲಾಗಿದೆ. ಶನಿವಾರದಂದು ಗುಂಡ್ಲುಪೇಟೆ ಸರ್ಕಲ್ ಇನ್ಸ್‍ಪೆಕ್ಟರ್ ಚಿಕ್ಕಲ್ಲೂರು ಜಾತ್ರೆಯ ಬಂದೋಬಸ್ತ್‍ಗಾಗಿ ತೆರಳಿದ್ದರು. ಸಬ್ ಇನ್ಸ್‍ಪೆಕ್ಟರ್ ಮಂಗಳೂರಿನ ನ್ಯಾಯಾಲಯಕ್ಕೆ ತೆರಳಿದ್ದರು. ಗುಂಡ್ಲುಪೇಟೆಯಲ್ಲಿ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಅವರಿಬ್ಬರನ್ನೂ ಮಧ್ಯಾಹ್ನದ ವೇಳೆಗೆ ಗುಂಡ್ಲುಪೇಟೆಗೆ ವಾಪಸ್ ಕರೆಸಿಕೊಳ್ಳಲಾಯಿತು ಎನ್ನಲಾಗಿದೆ.

ಗುಂಡ್ಲುಪೇಟೆ-ತೆರಕಣಾಂಬಿ ರಸ್ತೆಯಲ್ಲಿರುವ ಮದರಸಾ ಮೇಲೆ ದಾಳಿ ನಡೆಸುವ ಮುನ್ನ ಜಿಲ್ಲಾ ಪೊಲೀಸರನ್ನು ಈ ಮದರಸಾಗೆ ಅನತಿ ದೂರದಲ್ಲಿ ಶಸ್ತ್ರ ಸಜ್ಜಿತರಾಗಿ ಸಿದ್ಧರಾಗಿರು ವಂತೆ ಸೂಚಿಸಲಾಗಿತ್ತು. ಅದರಂತೆ ಗುಂಡ್ಲುಪೇಟೆ-ತೆರಕಣಾಂಬಿ ರಸ್ತೆಯಲ್ಲಿರುವ ಕೊಳದ ಬಳಿ ಒಂದು ಜಿಲ್ಲಾ ಪೊಲೀಸ್ ತಂಡ ಶಸ್ತ್ರ ಸಜ್ಜಿತವಾಗಿ ನಿಯೋಜಿಸಲಾಗಿತ್ತು. ಸಂಜೆ 5 ಗಂಟೆ ವೇಳೆಗೆ ಮದರಸಾ ಮೇಲೆ ದಾಳಿ ನಡೆಸಿದ ತಂಡ ಮೌಲ್ವಿ ಮತ್ತು ಶಂಕಿತ ಉಗ್ರ ಮೆಹಬೂಬ್ ಪಾಷಾನನ್ನು ವಶಕ್ಕೆ ಪಡೆಯಿತು. ಇವರಿಬ್ಬರನ್ನೂ ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಿದ ನಂತರ ಭಾನುವಾರ ಸಂಜೆ ವೇಳೆಗೆ ಮೌಲ್ವಿಯನ್ನು ಬಿಡುಗಡೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ. ಶಂಕಿತ ಉಗ್ರನನ್ನು ವಿಚಾರಣೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ಹೇಳಲಾಗಿದೆ.

ಈ ಸಂಬಂಧ `ಮೈಸೂರು ಮಿತ್ರ’ನ ಜೊತೆ ಮಾತನಾಡಿದ ಹೆಸರು ಹೇಳಲು ಇಚ್ಚಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗುಂಡ್ಲುಪೇಟೆಯಲ್ಲಿ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿರುವುದನ್ನು ಖಚಿತಪಡಿಸಿದರು. ಈತ ಸದ್ಯಕ್ಕೆ ಶಂಕಿತ ಉಗ್ರನಾಗಿದ್ದು, ವಿಚಾರಣೆಯ ನಂತರ ನಿಜಕ್ಕೂ ಈತ ಉಗ್ರ ಸಂಘಟನೆಯ ಸದಸ್ಯನೇ? ಎಂಬುದು ಖಚಿತವಾಗಲಿದೆ. ಈತನಿಗೆ ಆಶ್ರಯ ನೀಡಿದ ಮದರಸಾ ಮೌಲ್ವಿ ಅವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದರು. ರಾತ್ರಿ ವೇಳೆಗೆ ಮೌಲ್ವಿ ಅವರನ್ನು ಸಂಜೆಯೇ ವಿಚಾರಣೆ ನಡೆಸಿ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಖಚಿತ ಮೂಲಗಳಿಂದ ಲಭ್ಯವಾಗಿದೆ.

ಬೆಂಗಳೂರಲ್ಲಿ ಖಲಿಸ್ತಾನದ ಪ್ರತ್ಯೇಕತಾವಾದಿ ಬಂಧನ
ಬೆಂಗಳೂರು, ಜ.12- ಖಲಿಸ್ತಾನದ ಪ್ರತ್ಯೇಕತಾವಾದಿಯನ್ನು ಬೆಂಗಳೂರಿನಲ್ಲಿ ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಉತ್ತರ ಭಾರತ ಮೂಲದ ಖಲಿಸ್ತಾನದ ಪ್ರತ್ಯೇ ಕತಾವಾದಿ ಜರ್ನಲ್ ಸಿಂಗ್ ಸಿದ್ದು ಎಂಬಾತನನ್ನು ನಗರದ ಸಂಪಿಗೆಹಳ್ಳಿಯಲ್ಲಿ ಸಿಸಿಬಿ ಪೆÇಲೀಸರು ಬಂಧಿಸಿದ್ದಾರೆ. ಸಿದ್ದು ಕಳೆದ 6 ತಿಂಗಳಿಂದ ಬೆಂಗಳೂರಿನ ಸಂಪಿಗೆಹಳ್ಳಿ ರಾಧಾಕೃಷ್ಣ ಪಿಜಿಯಲ್ಲಿ ವಾಸವಿದ್ದ ಎಂದು ಪೆÇಲೀಸರು ತಿಳಿಸಿದ್ದಾರೆ. ಮೂಲತಃ ತೆಲಂಗಾಣದ ಹೈದರಾಬಾದ್ ನಿವಾಸಿಯಾಗಿರುವ ಈತ ಇಂಜಿನಿಯ ರಿಂಗ್ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ. ಇದರೊಡನೆಯೇ ಖಲಿಸ್ತಾನ್ ಪ್ರತ್ಯೇಕ ರಾಷ್ಟ್ರಕ್ಕೆ ಹೋರಾಟ ನಡೆಸಿದ್ದನೆಂದು

ಅಧಿಕಾರಿಗಳು ಹೇಳಿದ್ದಾರೆ. ಸಿಖ್ಖರ ವಿರುದ್ಧ ಕೆಲಸ ಮಾಡುವವರ ವಿರುದ್ಧ ಸಮರ ಸಾರಿದ್ದ ಜರ್ನಲ್ ಸಿಂಗ್ ಮೇಲೆ ಪಂಜಾಬಿನ ಮೊಹಾಲಿಯಲ್ಲಿ ಸಹ ಪ್ರಕರಣ ದಾಖಲಾಗಿತ್ತು. 2019ರ ಫೆಬ್ರವರಿಯಲ್ಲಿ ಮೊಹಾಲಿ ಐಎಸ್‍ಡಿ (ಆಂತರಿಕ ಭದ್ರತಾ ವಿಭಾಗ) ಪ್ರಕರಣ ದಾಖಲಿಸಿತ್ತು. ಆದರೆ ದೂರು ದಾಖಲಾಗುತ್ತಿದ್ದಂತೆ ಆತ ಪಂಜಾಬ್ ತೊರೆದು ಬೆಂಗಳೂರಿಗೆ ಬಂದಿದ್ದ. ಪಂಜಾಬ್ ಪೆÇೀಲೀಸರು ಈತನಿಗೆ ಶೋಧ ನಡೆಸಿದ್ದು ಈತ ಬೆಂಗಳೂರಿನಲ್ಲಿ ರುವ ವಿಚಾರ ತಿಳಿದು ಸಿಸಿಬಿ ಅವರ ನೆರವು ಕೋರಿದ್ದರು. ಸಿಸಿಬಿ ಡಿಸಿಪಿ ರವಿಕುಮಾರ್ ನೇತೃತ್ವದಲ್ಲಿ ಸಿಸಿಬಿಯ ಇನ್ಸ್ ಪೆಕ್ಟರ್ ಕೇಶವ್ ಮೂರ್ತಿ ಆರೋಪಿಯನ್ನು ಬಂಧಿಸಿದ್ದು ಸದ್ಯ ಆತನನ್ನು ಪಂಜಾಬ್ ಪೆÇೀಲೀಸರಿಗೆ ಒಪ್ಪಿಸಿದ್ದಾಗಿ ಮಾಹಿತಿ ಲಭಿಸಿದೆ.

Translate »